ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೆನ್ನೈ ಗೆಲುವಿನ ಓಟಕ್ಕೆ ಬ್ರೇಕ್ ಹಾಕಬಲ್ಲ ಮುಂಬೈ ಸಂಭಾವ್ಯ XI

IPL 2019, MI vs CSK: Probable XIs, Match Prediction

ಜೈಪುರ, ಏಪ್ರಿಲ್ 03: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) 2019ರ 15ನೇ ಪಂದ್ಯದಲ್ಲಿಂದು ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಎದುರಿಸಲಿದೆ.

ವಾಂಖೆಡೆ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ, ಚೆನ್ನೈ ಸೂಪರ್ ಕಿಂಗ್ಸ್ ನ ಗೆಲುವಿನ ನಾಗಲೋಟಕ್ಕೆ ಬ್ರೇಕ್ ಹಾಕಲು ರೋಹಿತ್ ಪಡೆ ಸಜ್ಜಾಗಿದೆ. ಒಂದು ಗೆಲುವು ನಂತರ ಎರಡು ಸೋಲು ಕಂಡಿರುವ ಮುಂಬೈ ಪಡೆ ಹಾಗೂ ಸತತ ಮೂರು ಗೆಲುವು ಸಾಧಿಸಿರುವ ಧೋನಿ ಪಡೆಗೆ ಸರಿಯಾದ ಸವಾಲು ಎಸೆಯಬಲ್ಲ ತಂಡಕ್ಕಾಗಿ ಕಾಯುತ್ತಿದೆ.

ಐಪಿಎಲ್: ರಾಜಸ್ಥಾನ್‌ಗೆ 8 ರನ್ ಸೋಲು, ಚೆನ್ನೈ ಸತತ 3ನೇ ಗೆಲುವು ಐಪಿಎಲ್: ರಾಜಸ್ಥಾನ್‌ಗೆ 8 ರನ್ ಸೋಲು, ಚೆನ್ನೈ ಸತತ 3ನೇ ಗೆಲುವು

ಉಭಯ ತಂಡಗಳ ಬ್ಯಾಟಿಂಗ್ ಶಕ್ತಿ ಚೆನ್ನಾಗಿದೆ. ಆದರೆ, ಪ್ರಮುಖ ಆಟಗಾರರು ಉತ್ತಮ ಲಯದಲ್ಲಿಲ್ಲ. ಮುಂಬೈ ನಾಯಕ ರೋಹಿತ್ ಶರ್ಮ ಅವರಿಂದ ಹೆಚ್ಚಿನ ಕೊಡುಗೆ ನಿರೀಕ್ಷಿಸಲಾಗಿದೆ. ಮುಂಬೈ ತಂಡದಲ್ಲಿ ಬದಲಾವಣೆ ಸಾಧ್ಯತೆ ಇದೆ, ಲಸಿತ್ ಮಾಲಿಂಗ ಈ ಪಂದ್ಯ ಅಲಭ್ಯರಾಗಿದ್ದಾರೆ. ಸತತ ಗೆಲುವು ಕಂಡ ತಂಡವನ್ನು ಧೋನಿ ಬದಲಾಯಿಸುವುದು ಕಡಿಮೆ, ಹೀಗಾಗಿ, ತಂಡದಲ್ಲಿ ಬದಲಾವಣೆ ಇಲ್ಲದೆ ಕಣಕ್ಕಿಳಿಯಬಹುದು.

ಚೆನ್ನೈ ಸೂಪರ್ ಕಿಂಗ್ಸ್ ಸಂಭಾವ್ಯ ತಂಡ
ಆರಂಭಿಕರು: ಅಂಬಟಿ ರಾಯುಡು, ಶೇನ್ ವಾಟ್ಸನ್
ಮಧ್ಯಮ ಕ್ರಮಾಂಕ : ಸುರೇಶ್ ರೈನಾ, ಎಂಎಸ್ ಧೋನಿ (ನಾಯಕ, ವಿಕೆಟ್ ಕೀಪರ್), ಕೇದಾ ಜಾಧವ್
ಆಲ್ ರೌಂಡರ್: ಡ್ವಾಯ್ನೆ ಬ್ರಾವೋ, ರವೀಂದ್ರ ಜಡೇಜ
ಬೌಲರ್ಸ್: ಹರ್ಭಜನ್ ಸಿಂಗ್, ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ಇಮ್ರಾನ್ ತಾಹೀರ್

1
45771

ಮುಂಬೈ ಇಂಡಿಯನ್ಸ್ ಸಂಭಾವ್ಯ ತಂಡ
ಆರಂಭಿಕರು : ರೋಹಿತ್ ಶರ್ಮ (ನಾಯಕ), ಕ್ವಿಂಟಾನ್ ಡಿ ಕಾಕ್ (ವಿಕೆಟ್ ಕೀಪರ್)
ಮಧ್ಯಮ ಕ್ರಮಾಂಕ : ಸೂರ್ಯ ಕುಮಾರ್ ಯಾದವ್, ಯುವರಾಜ್ ಸಿಂಗ್,
ಆಲ್ ರೌಂಡರ್ಸ್: ಕಿರಾನ್ ಪೊಲ್ಲಾರ್ಡ್, ಕೃನಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ
ಬೌಲರ್ಸ್ : ಮಾಯಾಂಕ್ ಮಾರ್ಕಂಡೆ, ಜಾಸನ್ ಬೆಹ್ರೆಂಡೊರ್ಸ್, ಮಿಚೆಲ್ ಮೆಗ್ಲೆಗನ್, ಜಸ್ಪ್ರಿತ್ ಬೂಮ್ರಾ

ಐಪಿಎಲ್ 2019: ಹ್ಯಾಟ್ರಿಕ್ ಸಿಕ್ಸ್‌ ಸಿಡಿಸಿದ ಯುವಿಗೆ ಟ್ವಿಟರ್‌ನಲ್ಲಿ ಮೆಚ್ಚುಗೆ ಐಪಿಎಲ್ 2019: ಹ್ಯಾಟ್ರಿಕ್ ಸಿಕ್ಸ್‌ ಸಿಡಿಸಿದ ಯುವಿಗೆ ಟ್ವಿಟರ್‌ನಲ್ಲಿ ಮೆಚ್ಚುಗೆ

ನಿರೀಕ್ಷೆ: ಚೆನ್ನೈ ಮೊದಲು ಬ್ಯಾಟಿಂಗ್ ಮಾಡಿದರೆ 175 ರಿಂದ 190ರನ್ ಗಳಿಸಬಹುದು. ಮುಂಬೈ ಮೊದಲು ಬ್ಯಾಟಿಂಗ್ ಮಾಡಿದರೆ 180 ರಿಂದ 200 ರನ್ ಸ್ಕೋರ್ ಮಾಡಬಹುದು. ಮುಂಬೈ ತಂಡಕ್ಕೆ ತವರು ನೆಲದ ಪಿಚ್ ನೆರವಿದ್ದು, ಪಂದ್ಯ ಗೆಲ್ಲುವ ಸಾಧ್ಯತೆ ಹೆಚ್ಚು. ಇಲ್ಲಿ ತನಕ 26 ಬಾರಿ ಉಭಯ ತಂಡಗಳು ಮುಖಾಮುಖಿಯಾಗಿದ್ದು ಚೆನ್ನೈ 14 ಹಾಗೂ ಮುಂಬೈ 12 ಬಾರಿ ಗೆಲುವು ಸಾಧಿಸಿವೆ. ಹೆಚ್ಚು ಸ್ಕೋರ್ ಮಾಡಬಲ್ಲ ಪಿಚ್ ಹೊಂದಿರುವ ವಾಂಖೆಡೆಯಲ್ಲಿ ರನ್ ಹೊಳೆ ಹರಿಯುವ ಸಾಧ್ಯತೆಯಿದೆ.

Story first published: Wednesday, April 3, 2019, 14:48 [IST]
Other articles published on Apr 3, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X