ಐಪಿಎಲ್ 2020: ಡಿವಿಲಿಯರ್ಸ್‌ಗೆ ಸೆಹ್ವಾಗ್ ತ್ರಿಶತಕದ ಟೆಸ್ಟ್ ಪಂದ್ಯ ನೆನಪಿಸಿದ ಯುಎಇ ಬಿಸಿಲು

ಐಪಿಎಲ್ ಆರಂಭಕ್ಕೆ ಈಗ ಕ್ಷಣಗಣನೆ ಆರಂಭವಾಗಿದೆ. ಆಟಗಾರರು ಸಾಕಷ್ಟು ಮೈದಾನದಲ್ಲಿ ಸಾಕಷ್ಟು ಕಸರತ್ತನ್ನು ನಡೆಸುತ್ತಿದ್ದಾರೆ. ಈ ಮಧ್ಯೆ ಆರ್‌ಸಿಬಿ ತಂಡದ ಪ್ರಮುಖ ಆಟಗಾರ ಎಬಿ ಡಿವಿಲಿಯರ್ಸ್ ಯುಎಇನಲ್ಲಿನ ಪ್ರಮುಖ ಸವಾಲು ಏನೆಂಬ ವಿಚಾರವನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

ಯುಇಎನಲ್ಲಿರುವ ಶುಷ್ಕ ವಾತಾವರಣ ಹಾಗೂ ಬಿಸಿಲಿನ ಉರಿಗೆ ಹೊಂದಿಕೊಳ್ಳುವುದು ಕಷ್ಟ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ. ಹೆಚ್ಚಿನ ಪಂದ್ಯಗಳು ರಾತ್ರಿ ನಡೆದರೂ ಪರಿಸ್ಥಿತಿ ಆಟಗಾರರಿಗೆ ಸವಾಲಾಗಿಯೇ ಇರಲಿದೆ ಎಂದು ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಯುಎಇನ ಉರಿ ಬಿಸಿಲು ಟೆಸ್ಟ್‌ ಕ್ರಿಕೆಟ್‌ನಲ್ಲಿ ಸೆಹ್ವಾಗ್ ಇನ್ನಿಂಗ್ಸ್‌ವೊಂದನ್ನು ನೆನಪಿಸುತ್ತಿದೆ ಎಂದು ಡಿವಿಲಿಯರ್ಸ್ ವಿವರಿಸಿದ್ದಾರೆ!

ಜಿಯೋ ಧನ್ ಧನಾ ಧನ್: ಉಚಿತವಾಗಿ ಐಪಿಎಲ್‌ ಲೈವ್ ನೋಡಿ

ಸೆಹ್ವಾಗ್ ಟೆಸ್ಟ್ ಇನ್ನಿಂಗ್ಸ್‌ಗೂ ಯುಎಇ ಬಿಸಿಲಿಗೂ ಯಾವ ರೀತಿಯ ಸಂಬಂಧ? ಅದನ್ನು ಸ್ವತಃ ಎಬಿಡಿವಿಲಿಯರ್ಸ್ ವಿವರಿಸಿದ್ದಾರೆ ಮುಂದೆ ಓದಿ

ಯುಎಇ ಬಿಸಿಲಿಗೆ ಬೆದರಿಸಿದ ಎಬಿಡಿ

ಯುಎಇ ಬಿಸಿಲಿಗೆ ಬೆದರಿಸಿದ ಎಬಿಡಿ

ಕೊರೊನಾ ವೈರಸ್‌ನ ಕಾರಣದಿಂದಾಗಿ ಈ ಬಾರಿಯ ಐಪಿಎಲ್ ಸಂಪೂರ್ಣವಾಗಿ ಯುಎಇನ 3 ಕ್ರೀಡಾಂಗಣಗಳಲ್ಲಿ ನಡೆಯಲಿದೆ. ದುಬೈ, ಅಬುದಾಬಿ ಹಾಗೂ ಶಾರ್ಜಾ ಕ್ರೀಡಾಂಗಣಗಳಲ್ಲಿ ಈ ಬಾರಿಯ ಐಪಿಎಲ್ ನಡೆಯಲಿದೆ. ಸುಸಜ್ಜಿನ ವ್ಯವಸ್ಥೆಗಳ ಮಧ್ಯೆಯೂ ಮರಳುಗಾಡಿನ ಬಿಸಿಲಿಗೆ ಹೊಂದಿಕೊಳ್ಳುವುದು ಸವಾಲು ಎಂದು ಎಬಿ ಡಿವಿಲಿಯರ್ಸ್ ತಿಳಿಸಿದ್ದಾರೆ.

ಸೆಹ್ವಾಗ್ 300 ರನ್ ಇನ್ನಿಂಗ್ಸ್ ನೆನಪು

ಸೆಹ್ವಾಗ್ 300 ರನ್ ಇನ್ನಿಂಗ್ಸ್ ನೆನಪು

ಪ್ರಾಮಾಣಿಕವಾಗಿ ಹೇಳಬೇಕೆಂದರೆ ಈ ರೀತಿಯ ವಾತಾವರಣದಲ್ಲಿದ್ದು ಅಭ್ಯಾಸವಿಲ್ಲ. ಜುಲೈ ತಿಂಗಳಿನಲ್ಲಿ ಚೆನ್ನೈನಲ್ಲಿ ಟೆಸ್ಟ್ ಪಂದ್ಯವನ್ನು ಇದು ನೆನಪಿಸಿದೆ. ಆ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ 300 ರನ್ ಬಾರಿಸಿದ್ದರು. ನನ್ನ ಜೀವನದಲ್ಲಿ ಅನುಭವಿಸಿದ ಅತ್ಯಂತ ಬಿಸಿ ವಾತಾವರಣ ಅದಾಗಿತ್ತು ಎಂದು ಎಬಿ ಡಿವಿಲಿಯರ್ಸ್ ಆರ್‌ಸಿಬಿ ಟ್ವಿಟ್ಟರ್‌ ವಿಡಿಯೋದಲ್ಲಿ ಹೇಳಿದ್ದಾರೆ.

ಸೆಹ್ವಾಗ್ 300 ರನ್ ಇನ್ನಿಂಗ್ಸ್ ನೆನಪು

ಸೆಹ್ವಾಗ್ 300 ರನ್ ಇನ್ನಿಂಗ್ಸ್ ನೆನಪು

ಪ್ರಾಮಾಣಿಕವಾಗಿ ಹೇಳಬೇಕೆಂದರೆ ಈ ರೀತಿಯ ವಾತಾವರಣದಲ್ಲಿದ್ದು ಅಭ್ಯಾಸವಿಲ್ಲ. ಜುಲೈ ತಿಂಗಳಿನಲ್ಲಿ ಚೆನ್ನೈನಲ್ಲಿ ಟೆಸ್ಟ್ ಪಂದ್ಯವನ್ನು ಇದು ನೆನಪಿಸಿದೆ. ಆ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ 300 ರನ್ ಬಾರಿಸಿದ್ದರು. ನನ್ನ ಜೀವನದಲ್ಲಿ ಅನುಭವಿಸಿದ ಅತ್ಯಂತ ಬಿಸಿ ವಾತಾವರಣ ಅದಾಗಿತ್ತು ಎಂದು ಎಬಿ ಡಿವಿಲಿಯರ್ಸ್ ಆರ್‌ಸಿಬಿ ಟ್ವಿಟ್ಟರ್‌ ವಿಡಿಯೋದಲ್ಲಿ ಹೇಳಿದ್ದಾರೆ.

ಆಫ್ರಿಕನ್ನರ ಬೆವರಿಳಿಸಿದ್ದರು ಸೆಹ್ವಾಗ್

ಆಫ್ರಿಕನ್ನರ ಬೆವರಿಳಿಸಿದ್ದರು ಸೆಹ್ವಾಗ್

ಟೆಸ್ಟ್ ಕ್ರಿಕೆಟ್‌ನಲ್ಲಿ ವಿರೇಂದ್ರ ಸೆಹ್ವಾಗ್ ಭಾರತದ ಪರ ಎರಡು ತ್ರಿಶತಕವನ್ನು ಸಿಡಿಸಿದ ಏಕೈಕ ಆಟಗಾರನಾಗಿದ್ದಾರೆ. ಪಾಕಿಸ್ತಾನದ ವಿರುದ್ಧ ಮೊದಲ ತ್ರಿಶತಕ 2004ರಲ್ಲಿ ಸೆಹ್ವಾಗ್ ಸಿಡಿಸಿದ್ದರು. ಅದಾಗಿ ನಾಲ್ಕು ವರ್ಷಗಳ ಬಳಿಕ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಸೆಹ್ವಾಗ್ 319 ರನ್‌ಗಳನ್ನು ಬಾರಿಸಿದ್ದರು. ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ಸಿಡಿಸಿದ 540 ರನ್‌ಗಳಿಗೆ ಪ್ರತಿಯಾಗಿ ಭಾರತ 627 ರನ್ ಗಳಿಸಿತ್ತು. ರಾಹುಲ್ ದ್ರಾವಿಡ್ 111 ರನ್ ಸಿಡಿಸಿ ಮಿಂಚಿದ್ದರು.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, September 16, 2020, 17:13 [IST]
Other articles published on Sep 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X