ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಹಿಂದಿಗಿಂತ ಹೇಗೆ ಭಿನ್ನ ಈ ಬಾರಿಯ ಆರ್‌ಸಿಬಿ? ಕುತೂಹಲಕಾರಿ ಸಂಗತಿ ಬಿಚ್ಚಿಟ್ಟ ಎಬಿಡಿ

Ipl 2020: Easy To Follow When You Have A Captain Like Virat Kohli: Ab De Villiers

ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ಎಬಿ ಡಿವಿಲಿಯರ್ಸ್ ತಂಡದೊಳಗಿನ ಕುತೂಹಲಕಾರಿ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಈ ಬಾರಿಯ ಆರ್‌ಸಿಬಿ ತಂಡ ಈ ವರೆಗಿನ ಶ್ರೇಷ್ಠ ತಂಡ ಎಂದು ಎಬಿಡಿ ವಿಲಿಯರ್ಸ್ ಹೇಳಿಕೊಳ್ಳಲು ಇಷ್ಟಪಡಲಿಲ್ಲ. ಆದರೆ ಈ ಬಾರಿಯ ತಂಡದಲ್ಲಿ ವಿವರಿಸಲಾಗದ ಹೊಸತನವಿದೆ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

ಆರ್‌ಸಿಬಿ ತಂಡದ 'ಆರ್‌ಸಿಬಿ ಬೋಲ್ಡ್ ಡೇರೀಸ್'ನ ಇತ್ತೀಚಿನ ವಿಡಿಯೋದಲ್ಲಿ ಎಬಿಡಿ ವಿಲಿಯರ್ಸ್ ಮಾತನಾಡಿದ್ದು ತಂಡದೊಳಗಿನ ಕೆಲ ಕುತೂಹಲಕಾರಿ ಸಂಗತಿಗಳ ಬಗ್ಗೆ ಹಂಚಿಕೊಂಡಿದ್ದಾರೆ. ಹಿಂದಿನ ಎಲ್ಲಾ ಆವೃತ್ತಿಗಳಿಗಿಂತ ಈ ಬಾರಿ ತಂಡದಲ್ಲಿ ಭಿನ್ನವಾದದ್ದೇನೋ ಇದೆ ಎಂದಿದ್ದಾರೆ ಎಬಿ ಡಿ. ಜೊತೆಗೆ ನಾಯಕನಾಗಿ ವಿರಾಟ್ ಕೊಹ್ಲಿ ಮುನ್ನಡೆಸುತ್ತಿರುವ ರೀತಿಯ ಬಗ್ಗೆ ಮುಕ್ತ ಕಂಠದಿಂದ ಹೊಗಳಿದ್ದಾರೆ.

2020ರ ಐಪಿಎಲ್‌ನಲ್ಲಿ ಗೆಲ್ಲುವ ತಂಡ ಹೆಸರಿಸಿದ ಕೆವಿನ್ ಪೀಟರ್ಸನ್2020ರ ಐಪಿಎಲ್‌ನಲ್ಲಿ ಗೆಲ್ಲುವ ತಂಡ ಹೆಸರಿಸಿದ ಕೆವಿನ್ ಪೀಟರ್ಸನ್

ತಂಡದ ವಾತಾವರಣದಲ್ಲಿ ಹೊಸತನ

ತಂಡದ ವಾತಾವರಣದಲ್ಲಿ ಹೊಸತನ

ಈ ಬಾರಿ ಶ್ರೇಷ್ಠ ತಂಡವನ್ನು ನಾವು ಹೊಂದಿದ್ದೇವೆ ಎಂದು ನಾನು ಹೇಳುವುದಿಲ್ಲ. ಆದರೆ ಈ ಬಾರಿಯ ತಂಡದ ವಾತಾವರಣದಲ್ಲಿ ಸಾಕಷ್ಟು ಹೊಸತನದ ಅನುಭವವಾಗುತ್ತಿದೆ. ಅದನ್ನು ನನಗೆ ವಿವರಿಸಲು ಸಾಧ್ಯವಾಗುತ್ತಿಲ್ಲ. ಆದರೆ ಅದು ತುಂಬಾ ರೋಮಾಂಚನಕಾರಿಯಾಗಿದೆ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

ಬ್ಯಾಕಪ್‌ ಆಯ್ಕೆಗಳು ಇವೆ

ಬ್ಯಾಕಪ್‌ ಆಯ್ಕೆಗಳು ಇವೆ

ನಾಯಕ ವಿರಾಟ್ ಕೊಹ್ಲಿ ನಿಸ್ಸಂಶಯವಾಗಿ ಕಾಂಬಿನೇಶನ್ ಅಯ್ಕೆ ಮಾಡಿಕೊಳ್ಳುವಾಗ ಅದಕ್ಕೆ ಪೂರಕ ಬ್ಯಾಕಪ್‌ಗಳನ್ನು ಮಾಡಿಕೊಳ್ಳುವಷ್ಟು ಆಯ್ಕೆಗಳು ತಂಡದಲ್ಲಿದೆ. ಹಾಗಾಗಿ ಕೋಚ್ ಹಾಗೂ ವಿರಾಟ್ ತಂಡದಲ್ಲಿ ಅತ್ಯುತ್ತಮ ಆಡುವ ಬಳಗವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶಗಳು ಇದೆ ಎಂದು ಎಬಿ ಡಿವಿಲಿಯರ್ಸ್ ತಿಳಿಸಿದ್ದಾರೆ.

ಪ್ರತಿ ವಿಭಾಗದಲ್ಲೂ ಆಯ್ಕೆಗಳಿವೆ

ಪ್ರತಿ ವಿಭಾಗದಲ್ಲೂ ಆಯ್ಕೆಗಳಿವೆ

ಇದು ಕೇವಲ ಪ್ರತಿ ಪಂದ್ಯದಲ್ಲೂ ಎಬಿ ಡಿ ಬ್ಯಾಟಿಂಗ್‌ಗೆ ಇಳಿಯುತ್ತಾನೆ, ಪಾರ್ಥೀವ್ ಅಥವಾ ಡೇಲ್ ಸ್ಟೇನ್ ಪ್ರತಿ ಪಂದ್ಯದಲ್ಲೂ ಆಡುತ್ತಾರೆ ಎಂಬುದು ವಿಚಾರವಲ್ಲ. ಪ್ರತಿ ವಿಭಾಗದಲ್ಲೂ ಇಲ್ಲಿ ಆಯ್ಕೆಗಳಿವೆ. ಬ್ಯಾಟಿಂಗ್, ಬೌಲಿಂಗ್ ಫೀಲ್ಡಿಂಗ್. ನೀವು ಅದನ್ನು ಹೆಸರಿಸಬಹುದು. ಹಾಗಾಗಿ ರೋಮಾಂಚನಕಾರಿಯಾಗಿದೆ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

ವಿರಾಟ್ ಬಗ್ಗೆ ಪ್ರಶಂಸೆ

ವಿರಾಟ್ ಬಗ್ಗೆ ಪ್ರಶಂಸೆ

ತಂಡದಲ್ಲಿ ಕಠಿಣ ಪರಿಶ್ರಮದ ವಾತಾವರಣವಿದೆ. ಅದಕ್ಕಾಗಿ ನಾಯಕ ವಿರಾಟ್ ಕೊಹ್ಲಿಗೆ ಪ್ರಶಂಸೆಯನ್ನು ವ್ಯಕ್ತಪಡಿಸಲೇಬೇಕು. ಕೊಹ್ಲಿ ಉದಾಹರಣೆಯಾಗಿ ಮುಂದಿರುತ್ತಾರೆ. ವಿರಾಟ್ ರೀತಿಯ ನಾಯಕ ಮುಂದೆ ಇದ್ದಾಗ ಆತನನ್ನು ಅನುಸರಿಸುವುದು ತುಂಬಾ ಸುಲಭ ಎಂದು ಎಬಿ ಡಿ ವಿಲಿಯರ್ಸ್ ನಾಯಕ ಕೊಹ್ಲಿ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.

Story first published: Monday, September 14, 2020, 15:19 [IST]
Other articles published on Sep 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X