ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯುಕೆಯಿಂದ ಬರುವ ಇಂಗ್ಲೆಂಡ್-ಆಸೀಸ್ ಪ್ಲೇಯರ್ಸ್‌ಗೆ 36 ಗಂಟೆ ಕ್ವಾರಂಟೈನ್

IPL 2020: England-Australia players arriving from England will undergo 36-hour quarantine

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ಗಾಗಿ ಯುನೈಟೆಡ್ ಕಿಂಗ್ಡಮ್‌ನಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಬಂದಿಳಿಯುವ ಇಂಗ್ಲೆಂಡ್-ಆಸ್ಟ್ರೇಲಿಯಾ ಆಟಗಾರರು ಕೇವಲ 36 ಗಂಟೆಗಳ ಕ್ವಾರಂಟೈನ್ ನಿಯಮ ಪಾಲಿಸಲಿದ್ದಾರೆ. ಇದಕ್ಕೂ ಮೊದಲು ಇಂಗ್ಲೆಂಡ್-ಆಸ್ಟ್ರೇಲಿಯಾ ಆಟಗಾರರಿಗೆ 6 ದಿನಗಳ ಕ್ವಾರಂಟೈನ್ ಸೂಚಿಸಲಾಗಿತ್ತು.

ಐಪಿಎಲ್ 2020: ಕೋವಿಡ್-19 ಹೀರೋಗಳಿಗೆ ಗೌರವ ಸಲ್ಲಿಸಲಿದೆ ಆರ್‌ಸಿಬಿಐಪಿಎಲ್ 2020: ಕೋವಿಡ್-19 ಹೀರೋಗಳಿಗೆ ಗೌರವ ಸಲ್ಲಿಸಲಿದೆ ಆರ್‌ಸಿಬಿ

ಇಂಗ್ಲೆಂಡ್‌ಗೆ ಪ್ರವಾಸ ಹೋಗಿದ್ದ ಆಸ್ಟ್ರೇಲಿಯಾ ತಂಡಲ್ಲಿ ಅಲ್ಲಿ ಮೂರು ಪಂದ್ಯಗಳ ಟಿ20ಐ ಮತ್ತು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಲ್ಗೊಂಡಿತ್ತು. ಸರಣಿ ಮುಗಿಸಿರುವ ಇತ್ತಂಡಗಳ ಒಟ್ಟು 21 ಆಟಗಾರರು ಈಗ ಐಪಿಎಲ್‌ಗೋಸ್ಕರ ಯುಎಇಯತ್ತ ಬರಲಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಪಾಯಕಾರಿ ಆಟಗಾರರು, ವೇಳಾಪಟ್ಟಿ, ಮಾಹಿತಿಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಪಾಯಕಾರಿ ಆಟಗಾರರು, ವೇಳಾಪಟ್ಟಿ, ಮಾಹಿತಿ

ಕ್ವಾರಂಟೈನ್ ದಿನವನ್ನು ಕಡಿತಗೊಳಿಸುವಂತೆ ಐಪಿಎಲ್‌ನಲ್ಲಿ ಆಡಲಿರುವ ಆಸ್ಟ್ರೇಲಿಯಾ-ಇಂಗ್ಲೆಂಡ್ ಆಟಗಾರರು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನು ವಿನಂತಿಸಿಕೊಂಡಿದ್ದರು. ಇತ್ತಂಡಗಳ ಆಟಗಾರರು ಈವರೆಗೂ ಜೈವಿಕ ಸುರಕ್ಷಾ ತಾಣದಲ್ಲೇ ಇದ್ದಿದ್ದರಿಂದ ಕ್ವಾರಂಟೈನ್ ಅವಧಿಯನ್ನು ಬಿಸಿಸಿಐ ಕಡಿತಗೊಳಿಸಿದೆ.

ಕನ್ನಡಿಗರ ತಂಡ ಕಿಂಗ್ಸ್ XI ಪಂಜಾಬ್‌ನ ಬಲ-ದೌರ್ಬಲ್ಯ, ವೇಳಾಪಟ್ಟಿ, ವಿಶೇಷತೆಕನ್ನಡಿಗರ ತಂಡ ಕಿಂಗ್ಸ್ XI ಪಂಜಾಬ್‌ನ ಬಲ-ದೌರ್ಬಲ್ಯ, ವೇಳಾಪಟ್ಟಿ, ವಿಶೇಷತೆ

'ಹೌದು, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಆಟಗಾರರು 6 ದಿನಗಳ ಕ್ವಾರಂಟೈನ್‌ಗೆ ಬದಲಾಗಿ 36 ಗಂಟೆಗಳ ಕ್ವಾರಂಟೈನ್‌ ಪಾಲಿಸಲಿದ್ದಾರೆ ಅನ್ನೋದನ್ನು ನಾನು ಖಾತರಿಪಡಿಸುತ್ತಿದ್ದೇನೆ. ಈ ಬಗೆಗಿನ ಗೊಂದಲ ಈಗ ಸರಿ ಹೋಗಿದೆ. ಈಗ ಎಲ್ಲಾ ತಂಡಗಳ ಇಂಗ್ಲೆಂಡ್-ಆಸ್ಟ್ರೇಲಿಯಾ ಸ್ಟಾರ್‌ಗಳು ಟೂರ್ನಿ ಆರಂಭದಿಂದಲೇ ಆಡಬಹುದಾಗಿದೆ,' ಎಂದು ಬಿಸಿಸಿಐ ಮೂಲವೊಂದು ಪಿಟಿಐಗೆ ಮಾಹಿತಿ ನೀಡಿದೆ.

Story first published: Friday, September 18, 2020, 10:02 [IST]
Other articles published on Sep 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X