ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ರನ್ ದಾಖಲೆಯ 5 ವಿದೇಶಿ ಆಟಗಾರರಿವರು

IPL 2020: Five highest overseas run-getters in IPL history

ಬೆಂಗಳೂರು, ಮಾರ್ಚ್ 21: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವಿಶ್ವದಲ್ಲೇ ದೊಡ್ಡ ಮಟ್ಟದ ಫ್ರಾಂಚೈಸಿ ಕ್ರಿಕೆಟ್‌ ಟೂರ್ನಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಐಪಿಎಲ್ ವೀಕ್ಷಿಸಲು ವರ್ಷಂಪ್ರತಿ ವಿಶ್ವದಗಲದ ಕ್ರಿಕೆಟ್‌ ಪ್ರೇಮಿಗಳು ಕಾದು ಕುಳಿತುಕೊಳ್ಳುತ್ತಾರೆ ಕೂಡ. ಐಪಿಎಲ್ 13ರ ಆವೃತ್ತಿ ಇದೇ ಮಾರ್ಚ್‌ 29ರಂದು ಆರಂಭವಾಗಿ ಕ್ರೀಡಾಪ್ರೇಮಿಗಳ ಮನರಂಜಿಸಲಿದೆ ಎಂದುಕೊಳ್ಳುವಷ್ಟರಲ್ಲಿ ಕೊರೊನಾವೈರಸ್‌ನಿಂದಾಗಿ ಐಪಿಎಲ್, ಏಪ್ರಿಲ್ 15ರ ಬಳಿಕ ಮುಂದೂಡಲ್ಪಟ್ಟಿದೆ.

 'ಆತ ಅದ್ಭುತ ಬ್ಯಾಟ್ಸ್‌ಮನ್': ತನ್ನ ನೆಚ್ಚಿನ ಕ್ರಿಕೆಟಿಗನ ಹೆಸರಿಸಿದ ಡೇಲ್ ಸ್ಟೇನ್ 'ಆತ ಅದ್ಭುತ ಬ್ಯಾಟ್ಸ್‌ಮನ್': ತನ್ನ ನೆಚ್ಚಿನ ಕ್ರಿಕೆಟಿಗನ ಹೆಸರಿಸಿದ ಡೇಲ್ ಸ್ಟೇನ್

2008ರಿಂದ ಆರಂಭಗೊಂಡಿರುವ ಈ 20 ಓವರ್‌ಗಳ ಟಿ20 ಟೂರ್ನಿ ವಿಶ್ವದಗಲ ಅಪಾರ ಅಭಿಮಾನಿಗಳನ್ನು ಹೊಂದಿದೆ. ಕಾರಣ ವಿಶ್ವದ ಶ್ರೇಷ್ಠ ತಂಡಗಳ ಪ್ರತಿಭಾನ್ವಿತ ಆಟಗಾರರು ಟೂರ್ನಿಯಲ್ಲಿ ಆಡುತ್ತಿರುವುದು. ಬರೀ ವಿದೇಶಿ ಆಟಗಾರರನ್ನಷ್ಟೇ ಪರಿಗಣಿಸಿದರೆ ಐಪಿಎಲ್‌ನಲ್ಲಿ ದಾಖಲೆಗಳನ್ನು ಬರೆದ ಸಾಕಷ್ಟು ಆಟಗಾರರಿದ್ದಾರೆ.

ಏಕದಿನದಲ್ಲಿ 264 : ರೋಹಿತ್ ಶರ್ಮಾ ದಾಖಲೆ ಮುರಿಯುವ ಸಾಧ್ಯತೆಯಿರುವ 5 ಆಟಗಾರರುಏಕದಿನದಲ್ಲಿ 264 : ರೋಹಿತ್ ಶರ್ಮಾ ದಾಖಲೆ ಮುರಿಯುವ ಸಾಧ್ಯತೆಯಿರುವ 5 ಆಟಗಾರರು

ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ರನ್ ದಾಖಲೆ ಬರೆದಿರುವ ಟಾಪ್ ಐವರು ವಿದೇಶಿ ಬ್ಯಾಟ್ಸ್‌ಮನ್‌ಗಳ ವಿವರ ಇಲ್ಲಿದೆ.

1. ಡೇವಿಡ್ ವಾರ್ನರ್

1. ಡೇವಿಡ್ ವಾರ್ನರ್

ಐಪಿಎಲ್‌ನಲ್ಲಿ ಸುಮಾರು 10 ವರ್ಷಗಳಿಂದಲೂ ಪಾಲ್ಗೊಳ್ಳುತ್ತಿರುವ, ಸದ್ಯ ಸನ್ ರೈಸರ್ಸ್ ಹೈದರಾಬಾದ್‌ನಲ್ಲಿರುವ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ರನ್ ಗಳಿಸಿದವರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ವಾರ್ನರ್, 126 ಪಂದ್ಯಗಳಲ್ಲಿ 43.17ರ ಸರಾಸರಿಯಂತೆ ಒಟ್ಟು 4706 ರನ್ ಬಾರಿಸಿದ್ದಾರೆ. ಡೇವಿಡ್ ಒಟ್ಟಿಗೆ 4 ಶತಕ, 50 ಅರ್ಧಶತಕಗಳ ದಾಖಲೆ ಹೊಂದಿದ್ದಾರೆ.

2. ಕ್ರಿಸ್‌ ಗೇಲ್

2. ಕ್ರಿಸ್‌ ಗೇಲ್

ಬಿರುಸಿನ ಬ್ಯಾಟಿಂಗ್‌ಗೆಂದೇ ಖ್ಯಾತರಾಗಿರುವ ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್‌ ಗೇಲ್ ಐಪಿಎಲ್‌ನಲ್ಲಿ ಅತ್ಯಧಿಕ ರನ್ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಗೇಲ್, ಒಟ್ಟು 125 ಪಂದ್ಯಗಳಲ್ಲಿ 41.13ರ ಸರಾಸರಿಯಲ್ಲಿ 4484 ರನ್ ಬಾರಿಸಿದ್ದಾರೆ. ಇದರಲ್ಲಿ 6 ಶತಕಗಳು, 28 ಅರ್ಧ ಶತಕಗಳು ಸೇರಿವೆ.

3. ಎಬಿ ಡಿವಿಲಿಯರ್ಸ್

3. ಎಬಿ ಡಿವಿಲಿಯರ್ಸ್

ಮಿಸ್ಟರ್ 360 ಎಂದು ಕರೆಯಲ್ಪಡುವ ದಕ್ಷಿಣ ಆಫ್ರಿಕಾ ತಂಡ ಸ್ಫೋಟಕ ಬ್ಯಾಟ್ಸ್‌ಮನ್, ಸದ್ಯ ಆಕರ್ಷಣೀಯ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರತಿನಿಧಿಸುವ ಎಬಿ ಡಿವಿಲಿಯರ್ಸ್, 154 ಐಪಿಎಲ್ ಪಂದ್ಯಗಳಲ್ಲಿ 4395 ರನ್ ಬಾರಿಸಿದ್ದಾರೆ. ಒಟ್ಟು 3 ಶತಕಗಳು ಮತ್ತು 33 ಅರ್ಧ ಶತಕಗಳು ಎಬಿಡಿ ಹೆಸರಿನಲ್ಲಿದೆ.

4. ಶೇನ್ ವಾಟ್ಸನ್

4. ಶೇನ್ ವಾಟ್ಸನ್

ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಮಾಜಿ ಬ್ಯಾಟ್ಸ್‌ಮನ್, ಸದ್ಯ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿರುವ ಶೇನ್ ವಾಟ್ಸನ್ 134 ಐಪಿಎಲ್ ಪಂದ್ಯಗಳಲ್ಲಿ 3575 ರನ್ ದಾಖಲೆ ಹೊಂದಿದ್ದಾರೆ. ಇದರಲ್ಲಿ 4 ಶತಕಗಳು, 19 ಅರ್ಧ ಶತಕಗಳೂ ಸೇರಿವೆ. ಚೆಂಡು ಕೂಡ ಎಸೆಯಬಲ್ಲ ವಾಟ್ಸನ್ ಐಪಿಎಲ್ ವೃತ್ತಿ ಬದುಕಿನಲ್ಲಿ 92 ವಿಕೆಟ್‌ಗಳನ್ನು ಮುರಿದಿದ್ದಾರೆ.

5. ಬ್ರೆಂಡನ್ ಮೆಕಲಮ್

5. ಬ್ರೆಂಡನ್ ಮೆಕಲಮ್

ನ್ಯೂಜಿಲೆಂಡ್‌ನ ಅಪಾಯಕಾರಿ ಬ್ಯಾಟ್ಸ್‌ಮನ್ ಬ್ರೆಂಡನ್ ಮೆಕಲಮ್ 109 ಐಪಿಎಲ್ ಪಂದ್ಯಗಳಲ್ಲಿ 2880 ರನ್‌ಗಳನ್ನು ಬಾರಿಸಿದ್ದಾರೆ. ಇದರಲ್ಲಿ 2 ಶತಕಗಳು ಮತ್ತು 13 ಅರ್ಧಶತಕಗಳೂ ಸೇರಿವೆ. ನ್ಯೂಜಿಲೆಂಡ್‌ ತಂಡದ ಮಾಜಿ ನಾಯಕರಾಗಿರುವ ಮೆಕಲಮ್, 2008ರಲ್ಲಿ ಆರ್‌ಸಿಬಿ ಪರ 158 ಇನ್ನಿಂಗ್ಸ್‌ನ ಅತ್ಯಧಿಕ ವೈಯಕ್ತಿಕ ರನ್ ಬಾರಿಸಿದ್ದರು.

Story first published: Saturday, March 21, 2020, 16:40 [IST]
Other articles published on Mar 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X