ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ರಾಜಸ್ಥಾನ್ ಬೌಲಿಂಗ್ ವಿಭಾಗದ ಬಗ್ಗೆ ಸೆಹ್ವಾಗ್ ಖಡಕ್ ಹೇಳಿಕೆ

IPL 2020: Jofra Archer only bowler doing well for Rajasthan Royals, says Sehwag

ರಾಜಸ್ಥಾನ್ ರಾಯಲ್ಸ್ ತಂಡ ಈ ಬಾರಿಯ ಟೂರ್ನಿ ಆರಂಭದಲ್ಲಿ ಸಾಕಷ್ಟು ನಿರೀಕ್ಷೆ ಹಿಟ್ಟಿಸಿದ್ದರೂ ಬಳಿಕ ನೀರಸ ಪ್ರದರ್ಶನದಿಂದಾಗಿ ಅಂಕಪಟ್ಟಿಯಲ್ಲಿ ಕೆಳಕ್ಕೆ ಜಾರಿದೆ. ಅಂತಿಮ ಹಂತದಲ್ಲಿ ಮತ್ತೆ ತಿರುಗಿ ಬೀಳುವ ಸೂಚನೆ ನೀಡಿದೆಯಾದರೂ ಪ್ಲೇಆಫ್ ಹಂತಕ್ಕೇರಲು ಹಾದಿ ಕಠಿಣವಿದೆ. ಇಂತಾ ಸಂದರ್ಭದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಬೌಲಿಂಗ್ ವಿಭಾಗದ ಬಗ್ಗೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾನ್ ವಿಮರ್ಶೆ ಮಾಡಿದ್ದಾರೆ.

ರಾಜಸ್ಥಾನ್ ರಾಯಲ್ಸ್ ತಂಡದ ಬೌಲಿಂಗ್ ವಿಭಾಗ ಅತ್ಯಂತ ದುರ್ಬಲವಾಗಿದೆ ಎಂಬುದು ಮಾಜಿ ಸ್ಪೋಟಕ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಅಭಿಪ್ರಾಯವಾಗಿದೆ. ಜೋಫ್ರ ಆರ್ಚರ್ ಬೌಲಿಂಗ್ ಅದ್ಭುತವಾಗಿದೆ. ಆದರೆ ತಂಡದಲ್ಲಿ ಈತನಿಂದ ಮಾತ್ರವೇ ಬೌಲಿಂಗ್ ವಿಭಾಗದಿಂದ ಹೋರಾಟ ಕಂಡುಬರುತ್ತಿದೆ. ಆತನಿಗೆ ಉಳಿದ ಬೌಲರ್‌ಗಳು ಬೆಂಬಲವನ್ನು ನೀಡಬೇಕಿದೆ ಎಂದಿದ್ದಾರೆ.

ರವೀಂದ್ರ ಜಡೇಜಾ 'ಅನ್‌ಫಿಟ್' ಎಂದು ಮತ್ತೆ ಟ್ರೋಲ್ ಆದ ಸಂಜಯ್ ಮಂಜ್ರೇಕರ್ರವೀಂದ್ರ ಜಡೇಜಾ 'ಅನ್‌ಫಿಟ್' ಎಂದು ಮತ್ತೆ ಟ್ರೋಲ್ ಆದ ಸಂಜಯ್ ಮಂಜ್ರೇಕರ್

"ರಾಜಸ್ಥಾನ್ ರಾಯಲ್ಸ್ ತಂಡದ ಬೌಲರ್‌ಗಳು ಹೆಣಗಾಟವನ್ನು ನಡೆಸುತ್ತಿದ್ದಾರೆ. ಜೋಫ್ರಾ ಆರ್ಚರ್ ಕಡೆಯಿಂದ ಮಾತ್ರವೇ ಹೋರಾಟ ಕಂಡುಬರುತ್ತಿದೆ. ಡಾಟ್ ಬಾಲ್, ವಿಕೆಟ್ ತಗೆಯಲು ಆರ್ಷರ್ ಮಾತ್ರವೇ ಪ್ರಯತ್ನಿಸುತ್ತಿದ್ದಾರೆ. ಆದರೆ ಅಂಕಿತ್ ರಜಪೂತ್, ಕಾರ್ತಿಕ್ ತ್ಯಾಗಿ ಅಸಡ್ಡೆಯಿಂದಲೇ ಬೌಂಡರಿಗಳನ್ನು ನೀಡುತ್ತಿದ್ದಾರೆ" ಎಂದು ಸೆಹ್ವಾಗ್ ಹೇಳಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ವರುಣ್ ಅರೋನ್‌ಗೆ ಅವಕಾಶವನ್ನು ನೀಡದ ಬಗ್ಗೆ ತಮ್ಮ ಟಿಪಿಕಲ್ ಶೈಲಿಯಲ್ಲಿ ತಮಾಷೆಯಾಗಿ ಚಾಟಿ ಬೀಸಿದರು. "ರಾಜಸ್ಥಾನ್ ತಂಡ ವರುಣ್ ಅರೋನ್ ಅವರನ್ನು ಕೂಡ ಯುಎಇಗೆ ಕರೆದುಕೊಂಡು ಹೋಗಿದೆಯಲ್ವಾ? ಮ್ಯೂಚುವಲ್ ಪಂಡ್‌ನಲ್ಲಿ ಸೇವಿಂಗ್ಸ್ ಮಾಡಲು ಅವರನ್ನು ಉಳಿಸಿಕೊಂಡಿದ್ದೀರಾ? ಅಬುಧಾಬಿ ವೇಗದ ಪಿಚ್ ಆಗಿರುವ ಕಾರಣ ಅವರು ಅಲ್ಲಿ ಉತ್ತಮವಾಗಿ ಬಳಕೆಯಾಗುತ್ತಾರೆ" ಎಂದಿದ್ದಾರೆ

Story first published: Saturday, October 31, 2020, 9:48 [IST]
Other articles published on Oct 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X