ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂಬೈ ಗೆ ಹೈದರಾಬಾದ್ ವಿರುದ್ಧದ ಸೋಲು ಎಚ್ಚರಿಕೆಯ ಕರೆಗಂಟೆ: ಆಕಾಶ್ ಚೋಪ್ರ

IPL 2020: The last loss will be like a slight wake-up call for the Mumbai Indians - Aakash Chopra

ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನದ ಮೂಲಕ ಮೊದಲಿಗೆ ಪ್ಲೇಆಫ್‌ಗೆ ಟಿಕೆಟ್ ಪಡೆದುಕೊಂಡ ಮೊದಲ ತಂಡ ಎನಿಸಿದೆ. ಟೂರ್ನಿಯುದ್ದಕ್ಕೂ ಮುಂಬೈ ಶ್ರೇಷ್ಠ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ. ಆದರೆ ಅಂತಿಮ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ಗೆ ಶರಣಾಗಿರುವುದು ತಂಡಕ್ಕೆ ಎಚ್ಚರಿಕೆಯ ಕರೆಗಂಟೆ ಎಮದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ಎಚ್ಚರಿಸಿದ್ದಾರೆ.

ಆಕಾಶ್ ಚೋಪ್ರ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡದ ಬಲ ಹಾಗೂ ದೌರ್ಬಲ್ಯದ ಬಗ್ಗೆ ವಿಶ್ಲೇಷಣೆಯನ್ನು ಮಾಡಿ ತಮ್ಮ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಈ ಸಂದರ್ಬದಲ್ಲಿ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಆಕಾಶ್ ಚೋಪ್ರ ತಮ್ಮ ಅಭಿಪ್ರಾಯವನ್ನು ವಿವರಿಸಿದ್ದಾರೆ.

ಐಪಿಎಲ್ ಪ್ಲೇಆಫ್‌: ಮುಂಬೈ vs ಡೆಲ್ಲಿ, ಗೆಲ್ಲುವ ಅವಕಾಶ ಹೆಚ್ಚಿರುವ ತಂಡವನ್ನು ಹೆಸರಿಸಿದ ಓಝಾಐಪಿಎಲ್ ಪ್ಲೇಆಫ್‌: ಮುಂಬೈ vs ಡೆಲ್ಲಿ, ಗೆಲ್ಲುವ ಅವಕಾಶ ಹೆಚ್ಚಿರುವ ತಂಡವನ್ನು ಹೆಸರಿಸಿದ ಓಝಾ

ಆಕಾಶ್ ಚೋಪ್ರ ಈ ವಿಡಿಯೋದಲ್ಲಿ ಮುಂಬೈ ಇಮಡಿಯನ್ಸ್ ತಮಡದ ಬಲದ ಬಗ್ಗೆ ವಿವರಿಸಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಸ್ಕ್ವಾಡ್ ಡೆಪ್ತ್ ಅದರ ದೊಡ್ಡ ಬಲವಾಗಿದೆ ಎಂದಿದ್ದಾರೆ. ಇದಕ್ಕೆ ಇಶಾನ್ ಕಿಶನ್ ಹಾಗೂ ನಥನ್ ಕೌಲ್ಟರ್‌ನೈಲ್ ಅವರನ್ನು ಉದಾಹರಿಸಿದ್ದಾರೆ. ರೋಹಿತ್ ಸರ್ಮಾ ಹಾಗೂ ಜೇಮ್ಸ್ ಪ್ಯಾಟಿನ್ಸ್‌ನ್ ಅಲಭ್ಯತೆಯಲ್ಲಿ ಈ ಇಬ್ಬರು ಆಡಿದ ರಿತಿ ನಿಜಕ್ಕೂ ಅದ್ಭುತವಾದದ್ದು ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಚೋಪ್ರ ಮುಂಬೈ ಇಂಡಿಯನ್ಸ್ ತಂಡದಲ್ಲಿ ಜಸ್ಪ್ರೀತ್ ಬೂಮ್ರಾ ಹಾಗೂ ಪ್ಯಾಟಿನ್ಸನ್‌ಗೆ ಖಂಡಿತವಾಗಿಯೂ ಬದಲಿ ಆಟಗಾರರು ಇಲ್ಲ ಎಂದಿದ್ದಾರೆ. ಇದರ ಜೊತೆಗೆ ಹಾರ್ದಿಕ್ ಪಾಮಡ್ಯ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುತ್ತಾರೋ ಇಲ್ಲವೋ ಎಂಬುದು ತಂಡದಲ್ಲಿ ದೊಡ್ಡ ವ್ಯತ್ಯಾಸ ಮಾಡುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಐಪಿಎಲ್, ಕ್ವಾಲಿಫೈಯರ್ 1: ಮುಂಬೈ vs ಡೆಲ್ಲಿ, ಸಂಭಾವ್ಯ ತಂಡಗಳುಐಪಿಎಲ್, ಕ್ವಾಲಿಫೈಯರ್ 1: ಮುಂಬೈ vs ಡೆಲ್ಲಿ, ಸಂಭಾವ್ಯ ತಂಡಗಳು

ಗುರುವಾರ ನಡೆಯುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪ್ಲೇ ಆಫ್‌ನ ಕ್ವಾಲಿಫೈಯರ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ. ಗೆಲ್ಲುವ ತಂಡ ನೆರವಾಗಿ ಫೈನಲ್ ಪ್ರವೇಶಿಸಿದರೆ ಸೋತ ತಂಡ ಇನ್ನೊಂದು ಅವಕಾಶವನ್ನು ಪಡೆಯಲಿದೆ.

Story first published: Thursday, November 5, 2020, 16:45 [IST]
Other articles published on Nov 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X