ಕೆಕೆಆರ್ ಈ ಬಾರಿ ಫೈನಲ್‌ಗೆ ಪ್ರವೇಶಿಸಲಿದೆ: ಆಕಾಶ್ ಚೋಪ್ರ ಭವಿಷ್ಯ

ಐಪಿಎಲ್ 14ನೇ ಆವೃತ್ತಿಯ ಭಾರತದಲ್ಲಿ ನಡೆದ ಮೊದಲಾರ್ಧದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿ ಸೋಲಿನ ಮೇಲೆ ಸೋಲು ಕಂಡ ತಂಡ ಕೊಲ್ಕತ್ತಾ ನೈಟ್ ರೈಡರ್ಸ್. ಆಡಿದ 7 ಪಂದ್ಯಗಳ ಪೈಕಿ 5 ಪಂದ್ಯಗಳಲ್ಲಿ ಸೋಲು ಕಂಡ ಕೆಕೆಆರ್ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರವೇ ಗೆದ್ದಿಕೊಂಡಿತ್ತು. ಯುಎಇ ಚರಣದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲೇಬೇಕಾದ ಅನಿವಾರ್ಯತೆ ಕೆಕೆಆರ್‌ಗೆ ಇತ್ತು. ಅದರಲ್ಲೂ ಮೊದಲ ಮೂರು ಪಂದ್ಯಗಳು ಟೂರ್ನಿಯ ಬಲಿಷ್ಠ ತಂಡಗಳು ಎದುರು ಮಾರ್ಗನ್ ಬಳಗ ಸೆಣೆಸಬೇಕಿತ್ತು. ಹೀಗಾಗಿ ಕೆಕೆಆರ್‌ಗೆ ಈ ಬಾರಿ ಪ್ಲೇಆಫ್ ಹಾದಿ ಬಹಳ ಕಠಿಣವಿದೆ ಎಂಬ ಭಾವನೆ ಐಪಿಎಲ್ ಅಭಿಮಾನಿಗಳಲ್ಲಿ ಮೂಡಿತ್ತು.

ಆದರೆ ಕೆಕೆಆರ್ ಯುಎಇ ಚರಣದಲ್ಲಿ ಊಹಿಸಲೂ ಸಾಧ್ಯವಾಗದಂತಾ ಪ್ರದರ್ಶನ ನೀಡುತ್ತಿದೆ. ಮೊದಲ ಎರಡು ಪಂದ್ಯಗಳಲ್ಲಿ ಟೂರ್ನಿಯ ಬಲಿಷ್ಠ ತಂಡಗಳಿಗೆ ಸೋಲಿನ ರುಚಿ ತೋರಿಸಿದೆ. ಸರ್ವಾಂಗೀಣ ಪ್ರದರ್ಶನ ನೀಡುವ ಮೂಲಕ ಎದುರಾಳಿಗಳ ವಿರುದ್ಧ ಭಾರೀ ಅಂತರದಿಂದ ಗೆಲುವು ಸಾಧಿಸಿದೆ. ಈ ಪ್ರದರ್ಶನದಿಂದಾಗಿ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದ ಕೆಕೆಆರ್ ಈಗ ಅಗ್ರ ನಾಲ್ಕರಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಮೊದಲೆರಡು ಪಂದ್ಯದಗಳಲ್ಲಿ ನೀಡಿದ ಒಟ್ಟಾರೆ ಪ್ರದರ್ಶನ ಗಮನಿಸಿದರೆ ಈ ಪ್ರದರ್ಶನ ಮುಂದುವರಿಯುವ ಲಕ್ಷಣಗಳು ಕಂಡು ಬಂದಿದೆ.

ಕೊಹ್ಲಿ, ಗೇಲ್, ಎಬಿಡಿಗಿಂತ ಈತ ಐಪಿಎಲ್‌ನಲ್ಲಿ ಡೇಂಜರಸ್ ಆಟಗಾರ ಎಂದ ಗೌತಮ್ ಗಂಭೀರ್ಕೊಹ್ಲಿ, ಗೇಲ್, ಎಬಿಡಿಗಿಂತ ಈತ ಐಪಿಎಲ್‌ನಲ್ಲಿ ಡೇಂಜರಸ್ ಆಟಗಾರ ಎಂದ ಗೌತಮ್ ಗಂಭೀರ್

ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಈ ಪ್ರದರ್ಶನ ಕಂಡ ಆಕಾಶ್ ಚೋಪ್ರ ತಂಡದ ಮೇಲೆ ಭಾರೀ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಕೊಲ್ಕತ್ತಾ ಖಂಡಿತಾ ಫೈನಲ್‌ಗೆ ಪ್ರವೇಶ ಪಡೆದುಕೊಳ್ಳಲಿದೆ ಎಂದಿದ್ದಾರೆ ಚೋಪ್ರ. ಅಲ್ಲದೆ ಮುಂಬೈ ತಂಡದ ಬಗ್ಗೆಯೂ ಭವಿಷ್ಯ ನುಡಿದಿರುವ ಆಕಾಶ್ ಚೋಪ್ರ ಈ ಬಾರಿಯ ಐಪಿಎಲ್‌ನಲ್ಲಿ ಮುಂಬೈ ತಂಡ ಪ್ಲೇಆಫ್‌ಗೆ ಕೂಡ ಪ್ರವೇಶ್ ಪಡೆಯುವುದಿಲ್ಲ ಎಂದಿದ್ದಾರೆ.

ಯುಎಇ ಚರನದ ಐಪಿಎಲ್ ಟೂರ್ನಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮೊದಲಿಗೆ ಆರ್‌ಸಿಬಿ ವಿರುದ್ಧ ಕಣಕ್ಕಿಳಿದಿತ್ತು. ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ನಡೆಸಿದ್ದ ಆರ್‌ಸಿಬಿ ತಂಡವನ್ನು ಕೇವಲ 92 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಕೆಕೆಆರ್ ಯಶಸ್ವಿಯಾಗಿತ್ತು. ಆರ್‌ಸಿಬಿ ಬಲಿಷ್ಠ ಬ್ಯಾಟಿಂಗ್ ಪಡೆಗೆ ಆಘಾತ ನೀಡುವಲ್ಲಿ ಕೆಕೆಆರ್ ಬೌಲರ್‌ಗಳು ಯಶಸ್ವಿಯಾಗಿದ್ದರು. ನಂತರ ಬ್ಯಾಟಿಂಗ್‌ನಲ್ಲಿಯೂ ಕೆಕೆಆರ್ ಆಟಗಾರರು ಅದ್ಭಿತ ಪ್ರದರ್ಶನ ನೀಡಿದ್ದು ಆರ್‌ಸಿಬಿ ನೀಡಿದ 93 ರನ್‌ಗಳ ಗುರಿಯನ್ನು ಕೇವಲ 10 ಓವರ್‌ಗಳಲ್ಲಿಯೇ ತಲುಪಿತ್ತು. ಅದು ಕೂಡ ಕೇವಲ ಒಂದು ವಿಕೆಟ್ ಕಳೆದುಕೊಂಡು. ಕೊನೆಯ ಹಂತದಲ್ಲಿ ಔಟಾದ ಶುಬ್ಮನ್ ಗಿಲ್ 48 ರನ್‌ಗಳಿಸಿದರೆ ವೆಂಕಟೇಶ್ ಐಯ್ಯರ್ 41 ರನ್‌ಗಳಿಸಿದ್ದರು.

ಐಪಿಎಲ್: ಮಹೇಂದ್ರ ಸಿಂಗ್ ಧೋನಿ ದಾಖಲೆ ಮುರಿದ ದಿನೇಶ್ ಕಾರ್ತಿಕ್ಐಪಿಎಲ್: ಮಹೇಂದ್ರ ಸಿಂಗ್ ಧೋನಿ ದಾಖಲೆ ಮುರಿದ ದಿನೇಶ್ ಕಾರ್ತಿಕ್

ನಂತರ ಮುಂಬೈ ವಿರುದ್ಧವೂ ಇದೇ ರೀತಿಯ ಸರ್ವಾಂಗೀಣ ಪ್ರದರ್ಶನ ಮುಂದುವರಿದಿದ್ದು. ಮುಂಬೈ ಪರವಾಗಿ ಆರಂಭಿಕ ಆಟಗಾರರು ಮಿಂಚಿದ್ದರೂ ರನ್‌ನಿಯಂತ್ರಣ ಮಾಡುವಲ್ಲಿ ಕೆಕೆಆರ್ ಬೌಲರ್‌ಗಳು ಯಶಸ್ವಿಯಾಗಿದ್ದರು. ನಂತರ ಆರಂಭಿಕ ಜೋಡಿ ಬೇರ್ಪಟ್ಟ ನಂತರ ಬೌಲರ್‌ಗಳು ಮತ್ತಷ್ಟು ಮೇಲುಗೈ ಸಾಧಿಸಿದರು. ಅಂತಿಮವಾಗಿ ಮುಂಬೈ ಕೆಕೆಆರ್‌ಗೆ 157 ರನ್‌ಗಳ ಗುರಿ ನೀಡಿತ್ತು. ಈ ಮೊತ್ತವನ್ನು ಕೂಡ ಕೆಕೆಆರ್ ಭರ್ಜರಿಯಾಗಿ ಬೆನ್ನಟ್ಟಲು ಆರಂಭಿಸಿತ್ತು. ಆರಂಭಿಕ ಆಟಗಾರ ವೆಂಕಟೇಶ್ ಐಯ್ಯರ್ ಹಾಗೂ ರಾಹುಲ್ ತ್ರಿಪಾಠಿ ಸ್ಪೋಟಕ ಪ್ರದರ್ಶನ ನೀಡಿದರು. ಈ ಜೊಡಿಯ ಪ್ರದರ್ಶನದಿಂದಾಗಿ ಕೆಕೆಆರ್ ಇನ್ನೂ 29 ಎಸೆತಗಳು ಬಾಕಿಯಿರುವಂತೆಯೇ ಗೆದ್ದು ಬೀಗಿತ್ತು. ಹೀಗಾಗಿ ಎರಡು ಅಮೋಘ ಗೆಲುವು ಸಾಧಿಸಿರುವ ಕೆಕೆಆರ್ ಈಗ ಉಳಿದ ತಂಡಗಳಿಗೂ ಭೀತಿ ಹೆಚ್ಚಿಸಿದೆ.

For Quick Alerts
ALLOW NOTIFICATIONS
For Daily Alerts
Story first published: Friday, September 24, 2021, 19:21 [IST]
Other articles published on Sep 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X