ಐಪಿಎಲ್‌ನಲ್ಲಿ ತನ್ನ ಆಟಗಾರರು ಆಡುವ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಹಾಗೂ ಇಸಿಬಿ ಅಧಿಕೃತ ಘೋಷಣೆ

ಕ್ರಿಕೆಟ್ ಆಸ್ಟ್ರೇಲಿಯಾ(ಸಿಎ) ಹಾಗೂ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ) ಈ ಬಾರಿಯ ಐಪಿಎಲ್‌ನಲ್ಲಿ ತನ್ನ ಆಟಗಾರರು ಆಡುವ ಬಗ್ಗೆ ಅಧಿಕೃತವಾದ ಘೋಷಣೆ ಮಾಡಿದೆ. ಐಪಿಎಲ್‌ನ ಎರಡನೇ ಚರಣದ ಪಂದ್ಯಗಳಿಗೆ ಈ ಎರಡು ದೇಶಗಳ ಆಟಗಾರರು ಕೂಡ ಲಭ್ಯವಾಗಲಿದ್ದಾರೆ ಎಂದು ಆಯಾ ದೇಶಗಳ ಕ್ರಿಕೆಟ್ ಮಂಡಳಿಗಳು ಈ ಅಧಿಕೃತ ಮಾಹಿತಿಯಲ್ಲಿ ತಿಳಿಸಿದೆ. ಶನಿವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಶನಿವಾರ ಈ ಬಗ್ಗೆ ಮಾಹಿತಿಯನ್ನು ನೀಡಿದ್ದು ಐಪಿಎಲ್‌ನಲ್ಲಿ ಆಡಲು ತಮ್ಮ ಆಟಗಾರರಿಗೆ ಒಪ್ಪಿಗೆಯನ್ನು ಸೂಚಿಸಿದೆ.

ಈಗ ಈ ಬಾರಿಯ ಐಪಿಎಲ್‌ನಲ್ಲಿ ಭಾಗವಹಿಸುವುದು ಅಥವಾ ಬಿಡುವುದು ಆಟಗಾರರ ವೈಯಕ್ತಿಕ ನಿರ್ಧಾರವಾಗಲಿದೆ. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಪ್ರಮುಖ ಆಟಗಾರರಾದ ಡೇವಿಡ್ ವಾರ್ನರ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಐಪಿಎಲ್‌ನಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಈಗಾಗಲೇ ಅಂತಾರಾಷ್ಟ್ರೀಯ ಪ್ರವಾಸದಿಂದ ಹೊರಗುಳಿಯುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ಮಧ್ಯೆ ಇಸಿಬಿ ಕೂಡ ಬಾಂಗ್ಲಾದೇಶದ ವಿರುದ್ಧದ ಸರಣಿಯನ್ನು ಮುಂದೂಡುವ ಮೂಲಕ ಐಪಿಎಲ್ ಟೂರ್ನಿಗೆ ಅವಕಾಶ ಮಾಡಿಕೊಟ್ಟಿದೆ.

ಭಾರತ vs ಇಂಗ್ಲೆಂಡ್: ವಿರಾಟ್ ಕೊಹ್ಲಿಯ ಈ ತಪ್ಪು ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ವಿವಿಎಸ್ ಲಕ್ಷ್ಮಣ್ಭಾರತ vs ಇಂಗ್ಲೆಂಡ್: ವಿರಾಟ್ ಕೊಹ್ಲಿಯ ಈ ತಪ್ಪು ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ವಿವಿಎಸ್ ಲಕ್ಷ್ಮಣ್

ಈ ವಿಚಾರವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ ಕಾಸಿ ವಿಶ್ವನಾಥನ್ ಬಿಸಿಸಿಐನಿಂದ ಬಂದಿರುವ ಖಚಿತ ಮಾಹಿತಿಯನ್ನು ಕ್ರಿಕ್ ಬಜ್ ಜೊತೆಗೆ ಹಂಚಿಕೊಂಡಿದ್ದಾರೆ. "ನಾವು ಐಪಿಎಲ್ ಕಛೇರಿಯಿಂದ ಕರೆಯನ್ನು ಸ್ವೀಕರಿಸಿದ್ದು ಆಯಾ ದೇಶಗಳ ಮಂಡಳಿಗಳು ಆಟಗಾರರ ಪಾಲ್ಗೊಳ್ಳುವಿಕೆಗೆ ಒಪ್ಪಿಗೆಯನ್ನು ಸೂಚಿಸಿದೆ. ಈಗ ಇದು ಆಟಗಾರರ ನಿರ್ಧಾರವಾಗಿರಲಿದೆ. ನಮ್ಮ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ಆಟಗಾರರು(ಜೇಸನ್ ಬೆಹ್ರೈನ್‌ಡ್ರಾಫ್, ಸ್ಯಾಮ್ ಕರನ್ ಹಾಗೂ ಮೊಯೀನ್ ಅಲಿ) ಲಭ್ಯವಾಗಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡ ಈಗಾಗಲೇ ಯುಎಇಗೆ ತಲುಪಿದ್ದು ಐಪಿಎಲ್ ಎರಡನೇ ಚರಣದಲ್ಲಿ ಭಾಗಿಯಾಗಲು ದುಬೈಗೆ ತೆರಳಿದ ಎರಡನೇ ತಂಡ ಎನಿಸಿಕೊಂಡಿದೆ. ಮುಂಬೈ ಇಂಡಿಯನ್ಸ್ ತಂಡ ಇದಕ್ಕೂ ಮುನ್ನವೇ ದುಬೈಗೆ ತೆರಳಿದೆ. ಆಟಗಾರರು ಹಾಗೂ ಸಿಬ್ಬಂದಿಗಳು ಈಗ ಕ್ವಾರಂಟೈನ್ ಅವಧಿಯನ್ನು ಪೂರೈಸುತ್ತಿದ್ದು ಬಳಿಕ ಅಭ್ಯಾಸವನ್ನು ಆರಂಭಿಸಲಿದ್ದಾರೆ.

ಇನ್ನು ಆಸ್ಟ್ರೇಲಿಯಾ ಕ್ರಿಕೆಟಿಗರು ಅಂತಾರಾಷ್ಟ್ರೀಯ ಕ್ರಿಕೆಟ್‌ ಬಿಟ್ಟು ಐಪಿಎಲ್‌ನಲ್ಲಿ ಭಾಗವಹಿಸುವ ಬಗ್ಗೆ ಸಾರ್ವಜನಿಕ ವಲಯದಿಂದ ಸಾಕಷ್ಟು ಭಿನ್ನಾಭಿಪ್ರಾಯಗಳು ಕೇಳಿ ಬಂದಿದೆ. ಆದರೆ ಆಸ್ಟ್ರೇಲಿಯಾ ಕ್ರಿಕೆಟ್ ತಮಡದ ಮಾಜಿ ಆಟಗಾರ ನಾಯಕ ರಿಕಿ ಪಾಂಟಿಂಗ್ ಐಪಿಎಲ್‌ನಲ್ಲಿ ಆಡುವ ಆಸ್ಟ್ರೇಲಿಯಾದ ಕ್ರಿಕೆಟಿಗರಿಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ವಿಶ್ವಕಪ್‌ನ ದೃಷ್ಟಿಯಿಂದ ಐಪಿಎಲ್‌ನಂತಾ ಮಹತ್ವದ ಟೂರ್ನಿಯಲ್ಲಿ ಭಾಗಿಯಾಗುವುದು ಆಟಗಾರರಿಗೆ ಅತ್ಯುತ್ತಮ ಸಿದ್ಧತೆಯಾಗಲಿದೆ ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ.

'ಸೆನ್' ರೋಡಿಯೋ ಕಾರ್ಯಕ್ರಮದಲ್ಲಿ ಟಿಮ್ ಪೈನ್ ಅವರೊಂದಿಗಿನ ಸಂವಾದದಲ್ಲಿ ರಿಕಿ ಪಾಂಟಿಂಗ್ ಈ ವಿಚಾರವಾಗಿ ಹೇಳಿಕೆಯನ್ನು ನೀಡಿದ್ದಾರೆ ಎಂದು ಕ್ರಿಕೆಟ್.ಕಾಮ್.ಎಯು ಉಲ್ಲೇಖ ಮಾಡಿದೆ. "ಕೆಲ ಆಟಗಾರರು ಕಳೆದ ಮೂರ್ನಾಲ್ಕು ತಿಂಗಳಿನಿಂದ ಕ್ರಿಕೆಟ್‌ನಿಂದ ದೂರವಿದ್ದಾರೆ. ಈಗ ಅವರು ಮತ್ತೆ ಕ್ರಿಕೆಟ್‌ಗೆ ಮರಳಬೇಕಾದರೆ ಅತ್ಯುನ್ನತ ಮಟ್ಟದ ಸ್ಪರ್ಧೆಯಲ್ಲಿ, ಉತ್ಕೃಷ್ಟಮಟ್ಟದ ಎದುರಾಳಿಗಳನ್ನು ಎದುರಿಸಬೇಕಾಗಿದೆ" ಎಂದಿದ್ದಾರೆ.

"ಇದು ಟಿ20 ವಿಶ್ವಕಪ್‌ಗೆ ಅವರಿಗೆ ಅತ್ಯುತ್ತಮ ಸಿದ್ಧತೆಯಾಗಿರಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದರೆ ಒಂದೇ ಸ್ಥಳದಲ್ಲಿ ಎರಡು ಟೂರ್ನಿಗಳು ಕೂಡ ನಡೆಯುತ್ತಿದೆ. ಐಪಿಎಲ್ ವಿಶ್ವದ ಅತ್ಯಂತ ಬಲಿಷ್ಠ ಡೊಮೆಸ್ಟಿಕ್ ಕ್ರಿಕೆಟ್ ಆಗಿರುವ ಕಾರಣ ಅತ್ಯುತ್ತಮ ನಿರ್ಧಾರವಾಗಲಿದೆ" ಎಂದಿದ್ದಾರೆ ರಿಕಿ ಪಾಂಟಿಂಗ್. ಈ ಮೂಲಕ ಆಸ್ಟ್ರೇಲಿಯಾ ಕ್ರಿಕೆಟಿಗರು ಐಪಿಎಲ್‌ನಲ್ಲಿ ಭಾಗಿಯಾಗುವ ವಿಚಾರವಾಗಿ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Saturday, August 14, 2021, 17:21 [IST]
Other articles published on Aug 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X