ಐಪಿಎಲ್ 2021: ಉಳಿದ ಪಂದ್ಯಗಳನ್ನು ಸಪ್ಟೆಂಬರ್‌ನಲ್ಲಿ ನಡೆಸಲು ಚಿಂತನೆ

14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಮುಂದೂಡುವ ನಿರ್ಧಾರವನ್ನು ಬಿಸಿಸಿಐ ಪ್ರಕಟಿಸಿದ್ದು ಸದ್ಯ ಭಾರತದಲ್ಲಿ ಇರುವ ಆಟಗಾರರನ್ನು ಆಯಾಯ ದೇಶಗಳಿಗೆ ಕಳುಹಿಸಿಕೊಡುವತ್ತ ಬಿಸಿಸಿಐ ಪ್ರಯತ್ನ ನಡೆಸುತ್ತಿದೆ. ಈ ಮಧ್ಯೆ ಟೂರ್ನಿಯ ಉಳಿದ ಪಂದ್ಯಗಳನ್ನು ಆಯೋಜಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು ಸಪ್ಟೆಂಬರ್ ತಿಂಗಳಲ್ಲಿ ನಡೆಸುವ ಸುಳಿವು ದೊರೆತಿದೆ.

ಈ ಬಾರಿಯ ಆವೃತ್ತಿಯಲ್ಲಿ 29 ಲೀಗ್ ಪಂದ್ಯಗಳನ್ನು ಆಡಿದ ನಂತರ ಕೊರೊನಾ ವೈರಸ್‌ನ ಕಾರಣದಿಂದಾಗಿ ಟೂರ್ನಿಯನ್ನು ಮುಂದೂಡಲಾಗಿದೆ. ಹೀಗಾಗಿ ಲೀಗ್‌ ಹಂತದ 31 ಪಂದ್ಯಗಳು ಹಾಗೂ ಪ್ಲೇಆಫ್ ಮತ್ತು ಫೈನಲ್ ಪಂದ್ಯಗಳನ್ನು ಮರು ಆಯೋಜಿಸಬೇಕಿದೆ.

ಕೊರೊನಾ ಕಂಟಕ, 2021ರ ಐಪಿಎಲ್ ರದ್ದುಗೊಳಿಸಿದ ಬಿಸಿಸಿಐ!

ಈ ಸಂದರ್ಭದಲ್ಲಿ ಐಪಿಎಲ್ ಆಯೋಜನೆಗೆ ಸಮಯವನ್ನು ಹೊಂದಿಸಿಕೊಳ್ಳುವ ಜೊತೆಗೆ ಎಲ್ಲಿ ಆಯೋಜನೆ ಮಾಡಬೇಕು ಎಂಬುದು ಕೂಡ ಸದ್ಯಕ್ಕೆ ಬಿಸಿಸಿಐ ಮುಂದಿರುವ ಸವಾಲುಗಳಲ್ಲಿ ಒಂದಾಗಿದೆ. ಅದಕ್ಕೆ ಪೂರಕವಾಗಿರುವ ಅವಕಾಶಗಳ ಮೇಲೆ ಬಿಸಿಸಿಐ ಚಿತ್ತ ನೆಟ್ಟಿದೆ.

ಈ ವಿಚಾರವಾಗಿ ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಕ್ರಿಕ್‌ಬಜ್‌ಗೆ ಪ್ರತಿಕ್ರಿಯಿಸಿದ್ದು ಐಪಿಎಲ್ ಆಯೋಜನೆಗೆ ಸಾಧ್ಯವಿರುವ ಅವಕಾಶದ ಬಗ್ಗೆ ಮಾತನಾಡಿದ್ದಾರೆ. "ಐಪಿಎಲ್ ಮುಂದುವರಿಸಲು ಇರುವ ಅವಕಾಶದತ್ತ ನಾವೀಗ ಚಿತ್ತ ನೆಟ್ಟಿದ್ದೇವೆ. ಸೆಪ್ಟೆಂಬರ್ ತಿಂಗಳಿನಲ್ಲಿ ಆಯೋಜಿಸಲು ಸಾಧ್ಯವಿದೆಯೇ ಎಂಬುದರತ್ತ ನಾವು ಗಮನಹರಿಸಲಿದ್ದೇವೆ. ಈ ವಿಚಾರವಾಗಿ ಐಸಿಸಿ ಹಾಗು ಇತರ ಮಂಡಳಿಗಳ ಜೊತೆಗೆ ಚರ್ಚೆಗಳನ್ನು ನಡೆಸಬೇಕಿದೆ" ಎಂದು ಬ್ರಿಜೇಶ್ ಪಟೇಲ್ ಮಾಹಿತಿ ನೀಡಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Tuesday, May 4, 2021, 22:08 [IST]
Other articles published on May 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X