ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬೆನ್ ಸ್ಟೋಕ್ಸ್‌ಗೆ ಸೋಮವಾರ ಶಸ್ತ್ರ ಚಿಕಿತ್ಸೆ, 3 ತಿಂಗಳು ವಿಶ್ರಾಂತಿ

IPL 2021: Ben Stokes will be out of competitive action for at up to 3 months

ರಾಜಸ್ಥಾನ್ ರಾಯಲ್ಸ್ ತಂಡದ ಪರವಾಗಿ ಈ ಬಾರಿಯ ಆವೃತ್ತಿಯ ಮೊದಲ ಪಂದ್ಯದಲ್ಲಿ ಆಡಿದ ಬೆನ್ ಸ್ಟೋಕ್ಸ್ ಕೈ ಬೆರಳಿಗೆ ಗಾಯಮಾಡಿಕೊಂಡಿದ್ದು ಐಪಿಎಲ್‌ನಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ. ಶುಕ್ರವಾರ ಈ ಬಗ್ಗೆ ಮಾಹಿತಿ ನೀಡಿರುವ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ ಮುಂದಿನ ಮೂರು ತಿಂಗಳು ಬೆನ್ ಸ್ಟೋಕ್ಸ್ ವಿಶ್ರಾಂತಿಯನ್ನು ಪಡೆಯಲಿದ್ದಾರೆ ಎಂದಿದೆ.

ಸೋಮವಾರ ಇಂಗ್ಲೆಂಡ್‌ನ ಲೀಡ್ಸ್‌ನಲ್ಲಿ ಬೆನ್ ಸ್ಟೋಕ್ಸ್ ಅವರ ಬೆರಳಿನ ಶಸ್ತ್ರ ಚಿಕಿತ್ಸೆ ನಡೆಯಲಿದ್ದು ಸದ್ಯ ಮುಂಬೈನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಜೊತೆಗೆ ಉಳಿದುಕೊಂಡಿರುವ ಸ್ಟೋಕ್ಸ್ ಶನಿವಾರ ಇಂಗ್ಲೆಂಡ್‌ಗೆ ಹಾರಲಿದ್ದಾರೆ ಎಂದು ಮಾಹಿತಿ ದೊರೆತಿದೆ.

ಐಪಿಎಲ್: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಹೈಲೈಟ್ಸ್‌ಐಪಿಎಲ್: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಹೈಲೈಟ್ಸ್‌

ಬೆನ್ ಸ್ಟೋಕ್ಸ್ ಅವರ ಮತ್ತೊಂದು ಎಕ್ಸ್‌ರೇ ಹಾಗೂ ಸಿಟಿ ಸ್ಕ್ಯಾನ್ ನಡೆಸಲಾಗಿದ್ದು ಎಡ ತೋರು ಬೆರಳಿನ ಮೂಳೆ ಮುರಿತಕ್ಕೊಳಗಾಗಿರುವುದು ಸ್ಪಷ್ಟವಾಗಿದೆ. ಹೀಗಾಗಿ ಬೆನ್ ಸ್ಟೋಕ್ಸ್ ಇಂಗ್ಲೆಂಡ್‌ಗೆ ಮರಳಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಈ ಬಗ್ಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ ಅಧಿಕೃತ ಮಾಹಿತಿ ನೀಡಿದೆ.

"ಸದ್ಯ ಭಾರತದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಜೊತೆಗೆ ಇರುವ ಬೆನ್ ಸ್ಟೋಕ್ಸ್ ನಾಳೆ(ಶನಿವಾರ) ತವರಿಗೆ ಮರಳಲಿದ್ದಾರೆ. ಸೋಮವಾರ ಲೀಡ್ಸ್‌ನಲ್ಲಿ ಅವರ ಶಸ್ತ್ರಚಿಕಿತ್ಸೆ ನಡೆಯಲಿದೆ" ಎಂದು ಇಸಿಬಿ ತನ್ನ ಅಧಿಕೃತ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.

ಕಳೆದ ಸೋಮವಾರ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕ್ರಿಸ್ ಗೇಲ್ ಬಾರಿಸಿದ ಚೆಂಡನ್ನು ಬೆನ್ ಸ್ಟೋಕ್ಸ್ ಹಾರಿ ಕ್ಯಾಚ್ ಹಿಡಿದಿದ್ದರು. ಚೆಂಡನ್ನು ಹಿಡಿದ ಬಳಿಕ ಬೆನ್ ಸ್ಟೋಕ್ಸ್ ನೋವು ಅನುಭವಿಸುತ್ತಿರುವುದು ಕಂಡು ಬಂದಿತ್ತು. ವೈದ್ಯಕೀಯ ತಪಾಸಣೆಯಲ್ಲಿ ಸ್ಟೋಕ್ಸ್ ಕೈ ಬೆರಳಿನ ಮೂಳೆ ಮುರಿತವಾಗಿರುವುದು ಕಂಡು ಬಂದಿದೆ.

Story first published: Sunday, April 18, 2021, 1:43 [IST]
Other articles published on Apr 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X