ಐಪಿಎಲ್ 2021: ಹೈದರಾಬಾದ್ ವಿರುದ್ಧ ಸೂಪರ್ ಓವರ್‌ನಲ್ಲಿ ಗೆದ್ದ ಡೆಲ್ಲಿ

ಐಪಿಎಲ್ 14ನೇ ಆವೃತ್ತಿಯ ಮೊದಲ ಸೂಪರ್ ಓವರ್ ಪಂದ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯ ಸಾಕ್ಷಿಯಾಯಿತು. ಈ ಸೂಪರ್ ಓವರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್‌ಗಳಲ್ಲಿ 159 ರನ್‌ಗಳಿಸಿತು. ಪೃಥ್ವಿ ಶಾ, ಸ್ಟೀವ್ ಸ್ಮಿತ್ ಹಾಗೂ ರಿಷಭ್ ಪಂತ್ ಬ್ಯಾಟಿಂಗ್ ಸಾಹಸದಿಂದ ಡೆಲ್ಲಿ ಈ ಸವಾಲಿನ ಗುರಿಯನ್ನು ನೀಡಿತು.

ಐಪಿಎಲ್ 2021: ವಾಂಖೆಡೆಯಲ್ಲಿ ರವೀಂದ್ರ ಜಡೇಜಾ ರೌದ್ರಾವತಾರ, ಆರ್‌ಸಿಬಿಗೆ ಸೋಲು

ಬೈರ್‌ಸ್ಟೋವ್ ಸ್ಪೋಟಕ ಆಟ

ಬೈರ್‌ಸ್ಟೋವ್ ಸ್ಪೋಟಕ ಆಟ

ಇದನ್ನು ಬೆನ್ನಟ್ಟಿದ ಹೈದರಾಬಾದ್ ತಂಡಕ್ಕೆ ನಾಯಕ ಶೀಘ್ರವಾಗಿ ಔಟ್ ಆಗುವ ಮೂಲಕ ಆಘಾತ ಅನುಭವಿಸಿತು. ಆದರೆ ಎರಡನೇ ವಿಕೆಟ್‌ಗೆ ಜಾನಿ ಬೈರ್‌ಸ್ಟೋವ್ ಹಾಗೂ ಕೇನ್ ವಿಲಿಯಮ್ಸನ್ ಉತ್ತಮ ಪ್ರದರ್ಶನ ನೀಡಿದರು. ಆದರೆ ಕೇವಲ 18 ಎಸೆತಗಳಲ್ಲಿ 38 ರನ್‌ಗಳಿಸಿದ ಬೈರ್‌ಸ್ಟೋವ್ ವಿಕೆಟ್ ಒಪ್ಪಿಸಿದರು.

ಕೇನ್ ವಿಲಿಯಮ್ಸನ್ ಏಕಾಂಗಿ ಹೋರಾಟ

ಕೇನ್ ವಿಲಿಯಮ್ಸನ್ ಏಕಾಂಗಿ ಹೋರಾಟ

ಆದರೆ ಬೈರ್‌ಸ್ಟೋವ್ ವಿಕೆಟ್ ಕಳೆದುಕೊಂಡ ನಂತರ ಕೇನ್ ವಿಲಿಯಮ್ಸನ್‌ಗೆ ಇನ್ನೊಂದು ತುದಿಯಲ್ಲಿ ಉತ್ತಮ ಸಾಥ್ ದೊರೆಯಲೇ ಇಲ್ಲ. ಆದರೆ ಕೇನ್ ತಮ್ಮ ಏಕಾಂಗಿ ಹೋರಾಟವನ್ನು ಮುಂದುವರಿಸಿದರು. ಆದರೆ ಅಂತಿಮ ಹಂತದಲ್ಲಿ ವಿಜಯ್ ಶಂಕರ್ ವಿಕೆಟ್ ಕಳೆದುಕೊಂಡ ನಂತರ ಜೊತೆಯಾದ ಜಗದೀಶ ಸುಚಿತ್ ಸಮಯೋಚಿತ ಬ್ಯಾಟಿಂಗ್ ಪ್ರದರ್ಶಿಸಿದರು.

ಜಗದೀಶ ಸುಚಿತ್ ಸಾಹಸ

ಜಗದೀಶ ಸುಚಿತ್ ಸಾಹಸ

ಜಗದೀಶ ಸುಚಿತ್ ಒಂದು ಸಿಕ್ಸರ್ ಹಾಗೂ ಎರಡು ಬೌಂಡರಿ ಸಹಿತ ಕೇವಲ 6 ಎಸೆತಗಳಲ್ಲಿ 14 ರನ್ ಬಾರಿಸಿದರು. ಈ ಪ್ರದರ್ಶನ ಹೈದರಾಬಾದ್ ತಂಡವನ್ನು ಗೆಲುವಿನ ಸನಿಹಕ್ಕೆ ತಂದು ನಿಲ್ಲಿಸಿತು. ಆದರೆ ಅಂತಿಮ ಹಂತದಲ್ಲಿ ಗೆಲುವು ಸಾಧ್ಯವಾಗದಿದ್ದರೂ ಪಂದ್ಯವನ್ನು ಟೈ ಮಾಡಿಕೊಳ್ಳುವಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಯಶಸ್ವಿಯಾಯಿತು. ಹೀಗಾಗಿ ಪಂದ್ಯ ಸೂಪರ್ ಓವರ್‌ನಲ್ಲಿ ಫಲಿತಾಂಶವನ್ನು ನಿರ್ಧರಿಸಲಾಯಿತು.

ಸೂಪರ್ ಓವರ್‌ನಲ್ಲಿ ಡೆಲ್ಲಿ ಗೆಲುವು

ಸೂಪರ್ ಓವರ್‌ನಲ್ಲಿ ಡೆಲ್ಲಿ ಗೆಲುವು

ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ಕೇವಲ 7 ರನ್‌ಗಳಿಸಿತು. ಅಕ್ಷರ್ ಪಟೇಲ್ ಎಸೆದ ಈ ಓವರ್‌ನಲ್ಲಿ ಸೊಡ್ಡ ಮೊತ್ತ ಗಳಿಸಲು ಹೈದರಾಬಾದ್ ವಿಫಲವಾಯಿತು. ಈ ಮೊತ್ತವನ್ನು ಬೆನ್ನಟ್ಟಲು ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಶಿಖರ್ ಧವನ್ ಹಾಗೂ ರಿಷಭ್ ಪಂತ್ ಕಣಕ್ಕಿಳಿದರು. ರಶೀದ್ ಖಾನ್ ಎಸೆದ ಓ ಓವರ್‌ನಲ್ಲಿ ಡೆಲ್ಲಿ ಕೂಡ ದೊಡ್ಡ ಯಶಸ್ಸು ಸಾಧಿಸಲು ಸಾಧ್ಯವಾಗದಿದ್ದರೂ ಅಂತಿಮ ಎಸೆತದಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು

For Quick Alerts
ALLOW NOTIFICATIONS
For Daily Alerts
Story first published: Sunday, April 25, 2021, 23:47 [IST]
Other articles published on Apr 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X