ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಕೆಟ್ಟ ದಾಖಲೆ ನಿರ್ಮಿಸಿದ ಹೈದರಾಬಾದ್‌ನ ಡೇವಿಡ್ ವಾರ್ನರ್

IPl 2021: First time since April 2016 David Warner has been dismissed for a duck in IPL

ದುಬೈ: ಸನ್ ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಬ್ಯಾಟ್ಸ್‌ಮನ್‌, ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಇತಿಹಾಸದಲ್ಲಿ ಕೆಟ್ಟ ದಾಖಲೆ ನಿರ್ಮಿಸಿದ್ದಾರೆ. ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಬುಧವಾರ (ಸೆಪ್ಟೆಂಬರ್ 22) ನಡೆದ 33ನೇ ಪಂದ್ಯದಲ್ಲಿ ವಾರ್ನರ್ ಈ ಬೇಡದ ದಾಖಲೆ ಬರೆದಿದ್ದಾರೆ.

ಐಪಿಎಲ್ 2021: ಪ್ರಮುಖ ಆಟಗಾರನ ಹೊರಗಿಟ್ಟಿದ್ದಕ್ಕೆ ಅನಿಲ್ ಕುಂಬ್ಳೆ ಟ್ರೋಲ್ಐಪಿಎಲ್ 2021: ಪ್ರಮುಖ ಆಟಗಾರನ ಹೊರಗಿಟ್ಟಿದ್ದಕ್ಕೆ ಅನಿಲ್ ಕುಂಬ್ಳೆ ಟ್ರೋಲ್

ಐಪಿಎಲ್‌ನಲ್ಲಿ ಸುದೀರ್ಘ ಸಮಯದ ಬಳಿಕ ಡಕ್‌ ಔಟ್ ಆದ ಕೆಟ್ಟ ದಾಖಲೆಗೆ ವಾರ್ನರ್ ಗುರುತಿಸಿಕೊಂಡಿದ್ದಾರೆ. ಬುಧವಾರ ಸನ್ ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ವಾರ್ನರ್ ಅನ್ರಿಕ್ ನೋರ್ಕಿಯಾ ಅವರ ಆರಂಭಿಕ ಓವರ್‌ನಲ್ಲಿ 0.3ನೇ ಎಸೆತಕ್ಕೆ ಅಕ್ಷರ್ ಪಟೇಲ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.

ಮೂರು ಎಸೆತಗಳಲ್ಲಿ 0 ರನ್‌ ಬಾರಿಸಿ ವಾರ್ನರ್ ನಿರ್ಗಮಿಸಿದರು. ಇದಕ್ಕೂ ಮುನ್ನ ಐಪಿಎಲ್‌ನಲ್ಲಿ ವಾರ್ನರ್ ಡಕ್‌ ಔಟ್ ಆಗಿದ್ದು 2016ರಲ್ಲಿ. ಅದಾಗಿ ಇದೇ ಮೊದಲ ಬಾರಿಗೆ ವಾರ್ನರ್ 0 ರನ್‌ಗೆ ಔಟ್ ಆಗಿದ್ದಾರೆ. ಐಪಿಎಲ್‌ನಲ್ಲಿ ವಾರ್ನರ್ 149 ಪಂದ್ಯಗಳಲ್ಲಿ 5447 ರನ್ ಗಳಿಸಿದ್ದಾರೆ.

ಪಂಜಾಬ್ ಆಲ್ ರೌಂಡರ್ ದೀಪಕ್ ಹೂಡ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ!ಪಂಜಾಬ್ ಆಲ್ ರೌಂಡರ್ ದೀಪಕ್ ಹೂಡ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ!

ಟೀಮ್ ಇಂಡಿಯಾದಲ್ಲಿ ರಿಷಬ್ ಪಂತ್ ಜವಾಬ್ದಾರಿ ಬಗ್ಗೆ ಹೇಳಿದ ರಿಕಿ ಪಾಂಟಿಂಗ್ | Oneindia Kannada

34ರ ಹರೆಯದ ವಾರ್ನರ್, 86 ಟೆಸ್ಟ್‌ ಪಂದ್ಯಗಳಲ್ಲಿ 7311 ರನ್, 128 ಏಕದಿನ ಪಂದ್ಯಗಳಲ್ಲಿ 5455 ರನ್, 81 ಟಿ20ಐ ಪಂದ್ಯಗಳಲ್ಲಿ 2265 ರನ್ ದಾಖಲೆ ಹೊಂದಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ತಂಡ ಸದ್ಯ ಐಪಿಎಲ್ ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿದೆ. ಡೆಲ್ಲಿ ವಿರುದ್ಧದ ಪಂದ್ಯದಲ್ಲೂ ಎಸ್‌ಆರ್‌ಎಚ್ ಅಂಥ ಉತ್ತಮ ಪ್ರದರ್ಶನ ನೀಡಿರಲಿಲ್ಲ.

Story first published: Thursday, September 23, 2021, 9:56 [IST]
Other articles published on Sep 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X