ಐಪಿಎಲ್ 2021: ಈ ಬಾರಿಯ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿ ನೆಲಕಚ್ಚಿದ 11 ಆಟಗಾರರ ಪಟ್ಟಿ

ಜನಪ್ರಿಯ ಫ್ರಾಂಚೈಸಿ ಕ್ರಿಕೆಟ್ ಲೀಗ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ ಹದಿನಾಲ್ಕನೇ ಆವೃತ್ತಿಯ ಲೀಗ್ ಹಂತದ ಎಲ್ಲಾ ಪಂದ್ಯಗಳು ಮುಕ್ತಾಯಗೊಂಡಿದ್ದು, ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಯಶಸ್ವಿಯಾಗಿ ಪ್ಲೇ ಆಫ್ ಹಂತವನ್ನು ಪ್ರವೇಶಿಸಿವೆ.

ದೀಪಕ್ ಚಹರ್ ಪ್ರಪೋಸ್ ಮಾಡಿದ ಆ ಹುಡುಗಿ ಯಾರು? ಬಹಿರಂಗವಾಯ್ತು ಇದರ ಹಿಂದೆ ಇದ್ದ ಧೋನಿ ಪ್ಲಾನ್!ದೀಪಕ್ ಚಹರ್ ಪ್ರಪೋಸ್ ಮಾಡಿದ ಆ ಹುಡುಗಿ ಯಾರು? ಬಹಿರಂಗವಾಯ್ತು ಇದರ ಹಿಂದೆ ಇದ್ದ ಧೋನಿ ಪ್ಲಾನ್!

ಟೂರ್ನಿಯಲ್ಲಿ ಕೆಲ ಲೀಗ್ ಹಂತದ ಪಂದ್ಯಗಳು ಬಾಕಿ ಇರುವಾಗಲೇ ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಅಧಿಕೃತವಾಗಿ ಪ್ಲೇ ಆಫ್ ಪ್ರವೇಶವನ್ನು ಪಡೆದುಕೊಂಡವು. ನಂತರ ನಾಲ್ಕನೇ ತಂಡವಾಗಿ ಯಾವ ತಂಡ ಪ್ಲೇ ಆಫ್ ಪ್ರವೇಶಿಸಲು ಅರ್ಹತೆಯನ್ನು ಪಡೆದುಕೊಳ್ಳಲಿದೆ ಎಂಬ ಕುತೂಹಲ ಹೆಚ್ಚಾಗಿತ್ತು. ಅಂತಿಮ ಹಂತದಲ್ಲಿ ರೋಹಿತ್ ಶರ್ಮ ನೇತೃತ್ವದ ಮುಂಬೈ ಇಂಡಿಯನ್ಸ್ ಮತ್ತು ಇಯಾನ್ ಮಾರ್ಗನ್ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ಪ್ಲೇ ಆಫ್ ಸುತ್ತಿಗೆ ಪ್ರವೇಶಿಸಲಿರುವ ನಾಲ್ಕನೇ ತಂಡದ ಸ್ಥಾನಕ್ಕಾಗಿ ದೊಡ್ಡ ಮಟ್ಟದ ಪೈಪೋಟಿ ಏರ್ಪಟ್ಟಿತ್ತು.

ಬ್ಯಾಟಿಂಗ್ ನಿರಾಕರಿಸಿದರು ಮ್ಯಾಕ್ಸ್‌ವೆಲ್!; ಲಾಸ್ಟ್ ಬಾಲ್ ಸಿಕ್ಸ್‌ಗೂ ಮುನ್ನ ನಡೆದ ಘಟನೆ ಬಿಚ್ಚಿಟ್ಟ ಭರತ್ಬ್ಯಾಟಿಂಗ್ ನಿರಾಕರಿಸಿದರು ಮ್ಯಾಕ್ಸ್‌ವೆಲ್!; ಲಾಸ್ಟ್ ಬಾಲ್ ಸಿಕ್ಸ್‌ಗೂ ಮುನ್ನ ನಡೆದ ಘಟನೆ ಬಿಚ್ಚಿಟ್ಟ ಭರತ್

ಆದರೆ ಟೂರ್ನಿ ಮುಗಿದ ನಂತರ ಕೋಲ್ಕತಾ ನೈಟ್ ರೈಡರ್ಸ್ ತಂಡದಷ್ಟೇ ಪಂದ್ಯಗಳನ್ನು ಮುಂಬೈ ಇಂಡಿಯನ್ಸ್ ತಂಡ ಗೆದ್ದಿದ್ದರೂ ಕೂಡ ಕಡಿಮೆ ರನ್ ರೇಟ್ ಗಳಿಸಿದ ಕಾರಣ ಪ್ಲೇ ಆಫ್ ಸುತ್ತಿಗೆ ಪ್ರವೇಶಿಸುವಲ್ಲಿ ವಿಫಲವಾಗಿ ಟೂರ್ನಿಯಿಂದ ಹೊರಬಿದ್ದಿತು ಮತ್ತು ಹೆಚ್ಚಿನ ರನ್ ರೇಟ್ ಹೊಂದಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಯಶಸ್ವಿಯಾಗಿ ಪ್ಲೇ ಆಫ್ ಸುತ್ತಿಗೆ ಲಗ್ಗೆ ಇಟ್ಟಿತು. ಹೀಗೆ ಯಶಸ್ವಿಯಾಗಿ ಈ 4 ತಂಡಗಳು ಪ್ಲೇ ಆಫ್ ಸುತ್ತಿಗೆ ಪ್ರವೇಶಿಸಿವೆ. ಆದರೆ ವಿವಿಧ ತಂಡಗಳ 11 ಪ್ರಮುಖ ಆಟಗಾರರು ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಪಂದ್ಯಗಳಲ್ಲಿ ಕಳಪೆ ಪ್ರದರ್ಶನವನ್ನು ನೀಡುವುದರ ಮೂಲಕ ನೆಲಕಚ್ಚಿದ್ದಾರೆ. ಅಂತಹ ಕಳಪೆ ಪ್ರದರ್ಶನ ನೀಡಿರುವ ಆಟಗಾರರ ಪಟ್ಟಿ ಈ ಕೆಳಕಂಡಂತಿದೆ..

ಡೇವಿಡ್ ವಾರ್ನರ್ ಮತ್ತು ವೃದ್ಧಿಮಾನ್ ಸಹಾ

ಡೇವಿಡ್ ವಾರ್ನರ್ ಮತ್ತು ವೃದ್ಧಿಮಾನ್ ಸಹಾ

ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ಆರಂಭವಾದಾಗ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿದ್ದ ಡೇವಿಡ್ ವಾರ್ನರ್ ಕಳಪೆ ಪ್ರದರ್ಶನ ನೀಡಿದ ಕಾರಣದಿಂದಾಗಿ ಮತ್ತು ಅವರ ನಾಯಕತ್ವದಲ್ಲಿ ತಂಡ ಸಾಲುಸಾಲು ಪಂದ್ಯಗಳಲ್ಲಿ ಸೋತ ಕಾರಣದಿಂದಾಗಿ ನಾಯಕತ್ವ ಕಳೆದುಕೊಂಡರು. ಹೀಗೆ ಟೂರ್ನಿ ಮಧ್ಯದಲ್ಲಿ ನಾಯಕತ್ವವನ್ನು ಕಳೆದುಕೊಂಡಿದ್ದು ಮಾತ್ರವಲ್ಲದೇ ತಂಡದಲ್ಲಿ ತಮ್ಮ ಸ್ಥಾನವನ್ನು ಕೂಡ ಡೇವಿಡ್ ವಾರ್ನರ್ ಕಳೆದುಕೊಂಡರು. ಈ ಮೂಲಕ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಡೇವಿಡ್ ವಾರ್ನರ್ 8 ಪಂದ್ಯಗಳನ್ನಾಡಿ 195 ರನ್ ಗಳಿಸುವ ಮೂಲಕ ನಿರೀಕ್ಷಿಸಿದ ಪ್ರದರ್ಶನವನ್ನು ನೀಡುವಲ್ಲಿ ವಿಫಲರಾಗಿದ್ದಾರೆ.

ಇದೇ ತಂಡದ ಮತ್ತೋರ್ವ ಆಟಗಾರ ವೃದ್ಧಿಮಾನ್ ಸಹಾ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಒಂದೇ ಒಂದು ಅರ್ಧಶತಕವನ್ನು ಕೂಡ ಬಾರಿಸಲಿಲ್ಲ. ಟೂರ್ನಿಯಲ್ಲಿ ಒಟ್ಟು 9 ಪಂದ್ಯಗಳನ್ನಾಡಿರುವ ವೃದ್ದಿಮಾನ್ ಸಹಾ ಕೇವಲ 131 ರನ್ ಗಳಿಸಿದ್ದಾರೆ.

ನಿಕೋಲಸ್ ಪೂರನ್

ನಿಕೋಲಸ್ ಪೂರನ್

ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ಮೊದಲಾರ್ಧದಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಿಕೋಲಸ್ ಪೂರನ್ ಸಾಲುಸಾಲು ಪಂದ್ಯಗಳಲ್ಲಿ ಡಕ್ ಔಟ್ ಆಗುವುದರ ಮೂಲಕ ಅಕ್ಷರಶಃ ಕಳಪೆ ಪ್ರದರ್ಶನವನ್ನು ನೀಡಿದ್ದರು. ಆದರೂ ಸಹ ಈತನ ಮೇಲೆ ನಂಬಿಕೆಯನ್ನಿಟ್ಟು ದ್ವಿತೀಯ ಹಂತದಲ್ಲಿಯೂ ಆಡುವ ಅವಕಾಶವನ್ನು ನೀಡಲಾಯಿತು. ಆದರೆ ನಿಕೋಲಸ್ ಪೂರನ್ ಮಾತ್ರ ಕಳಪೆ ಫಾರ್ಮ್‌ನಿಂದ ಹೊರಬರುವಲ್ಲಿ ಯಶಸ್ವಿಯಾಗಲೇ ಇಲ್ಲ. ಈ ಬಾರಿಯ ಟೂರ್ನಿಯಲ್ಲಿ ಒಟ್ಟು 12 ಪಂದ್ಯಗಳನ್ನಾಡಿದ ನಿಕೋಲಸ್ ಪೂರನ್ 85 ರನ್ ಗಳಿಸಿ ನೆಲಕಚ್ಚಿದ್ದಾರೆ.

ಇಯಾನ್ ಮಾರ್ಗನ್

ಇಯಾನ್ ಮಾರ್ಗನ್

ಕೋಲ್ಕತಾ ನೈಟ್ ರೈಡರ್ಸ್ ತಂಡವೇನೋ ಪ್ಲೇ ಆಫ್ ಹಂತವನ್ನು ಪ್ರವೇಶಿಸಿದೆ ಆದರೆ ಈ ತಂಡದ ನಾಯಕ ಇಯಾನ್ ಮಾರ್ಗನ್ ಮಾತ್ರ ಟೂರ್ನಿಯಲ್ಲಿ ಕಳಪೆ ಪ್ರದರ್ಶನವನ್ನು ನೀಡಿದ್ದಾರೆ. ಟೂರ್ನಿಯಲ್ಲಿ ಇದುವರೆಗೂ 14 ಪಂದ್ಯಗಳನ್ನಾಡಿರುವ ಇಯಾನ್ ಮಾರ್ಗನ್ 124 ರನ್ ಗಳಿಸಿದ್ದು ಒಂದೇ ಒಂದು ಅರ್ಧಶತಕವನ್ನು ಬಾರಿಸಿಲ್ಲ.

ಹಾರ್ದಿಕ್ ಪಾಂಡ್ಯ

ಹಾರ್ದಿಕ್ ಪಾಂಡ್ಯ

ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಅಕ್ಷರಶಃ ವಿಫಲರಾಗಿದ್ದಾರೆ. ಆಲ್ ರೌಂಡರ್ ಆಟಗಾರ ಎಂದೇ ಕರೆಸಿಕೊಳ್ಳುವ ಹಾರ್ದಿಕ್ ಪಾಂಡ್ಯ ಪ್ರಸಕ್ತ ಸಾಲಿನ ಟೂರ್ನಿಯಲ್ಲಿ ಒಂದೇ ಒಂದು ಬಾಲ್ ಬೌಲಿಂಗ್ ಕೂಡ ಮಾಡಲಿಲ್ಲ. ಅಷ್ಟೇ ಅಲ್ಲದೆ ಬ್ಯಾಟಿಂಗ್ ವಿಭಾಗದಲ್ಲಿಯೂ ಹಾರ್ದಿಕ್ ಪಾಂಡ್ಯ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡಲಿಲ್ಲ. ಈ ಕುರಿತಾಗಿ ಸಾಕಷ್ಟು ಟೀಕೆಗಳಿಗೂ ಕೂಡ ಹಾರ್ದಿಕ್ ಪಾಂಡ್ಯ ಒಳಗಾಗಿದ್ದು ಟೂರ್ನಿಯಲ್ಲಿ ಒಟ್ಟು 12 ಪಂದ್ಯಗಳನ್ನಾಡಿ 127 ರನ್ ಗಳಿಸಿದ್ದಾರಷ್ಟೇ.

ಎಂಎಸ್ ಧೋನಿ

ಎಂಎಸ್ ಧೋನಿ

ಎಂ ಎಸ್ ಧೋನಿಯವರ ಅತ್ಯದ್ಬುತ ನಾಯಕತ್ವದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ಲೇಆಫ್ ಸುತ್ತನ್ನು ಪ್ರವೇಶಿಸಿತು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ, ಆದರೆ ಓರ್ವ ಆಟಗಾರನಾಗಿ ಧೋನಿ ಕಳಪೆಯಾಗಿರುವುದು ನಿಜ. ಟೂರ್ನಿಯಲ್ಲಿ ಒಟ್ಟು 14 ಪಂದ್ಯಗಳನ್ನಾಡಿರುವ ಎಂಎಸ್ ಧೋನಿ ಕೇವಲ 96 ರನ್ ಗಳಿಸಿದ್ದಾರೆ ಮತ್ತು ಎಂಎಸ್ ಧೋನಿ ಟೂರ್ನಿಯಲ್ಲಿ ಗಳಿಸಿದ ಗರಿಷ್ಠ ಮೊತ್ತವೆಂದರೆ 18 ರನ್ ಮಾತ್ರ!

ಡೇನಿಯಲ್ ಕ್ರಿಸ್ಟಿಯನ್

ಡೇನಿಯಲ್ ಕ್ರಿಸ್ಟಿಯನ್

ಕ್ರಿಕೆಟ್ ಜಗತ್ತಿನ ಹಲವಾರು ಫ್ರಾಂಚೈಸಿ ಕ್ರಿಕೆಟ್ ಟೂರ್ನಿಗಳಲ್ಲಿ ಮಿಂಚಿದ್ದ ಡೇನಿಯಲ್ ಕ್ರಿಸ್ಟಿಯನ್ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ದೊಡ್ಡ ಮೊತ್ತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿದ್ದರು. ಆದರೆ ಈ ಮೊತ್ತಕ್ಕೆ ನ್ಯಾಯ ಒದಗಿಸುವಂತಹ ಆಟವನ್ನು ಡೇನಿಯಲ್ ಕ್ರಿಸ್ಟಿಯನ್ ಆಡುವ ಯಾವುದೇ ಪ್ರಯತ್ನವನ್ನೂ ಮಾಡಲಿಲ್ಲ. ಟೂರ್ನಿಯಲ್ಲಿ ಒಟ್ಟು 8 ಪಂದ್ಯಗಳನ್ನಾಡಿದ ಡೇನಿಯಲ್ ಕ್ರಿಸ್ಟಿಯನ್ 5 ರನ್ ಗಳಿಸಿದ್ದಾರೆ ಮತ್ತು ಕೇವಲ 4 ವಿಕೆಟ್ ಪಡೆದು ಹುಟ್ಟುಹಾಕಿದ್ದ ನಿರೀಕ್ಷೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ರಾಹುಲ್ ತೆವಾಟಿಯ

ರಾಹುಲ್ ತೆವಾಟಿಯ

ಕಳೆದ ಬಾರಿಯ ಐಪಿಎಲ್ ಟೂರ್ನಿಯ ಕೆಲವೊಂದಿಷ್ಟು ಪಂದ್ಯಗಳಲ್ಲಿ ಮಿಂಚಿ ಸಾಕಷ್ಟು ಪ್ರಶಂಸೆಗೆ ವ್ಯಕ್ತವಾಗಿದ್ದ ರಾಹುಲ್ ತೆವಾಟಿಯಾ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಅಕ್ಷರಶಃ ಮಂಕಾಗಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡದ ಈ ಆಟಗಾರ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 14 ಪಂದ್ಯಗಳನ್ನಾಡಿ 155 ರನ್ ಗಳಿಸಿ, ಕೇವಲ 8 ವಿಕೆಟ್ ಪಡೆದಿದ್ದಾರೆ ಅಷ್ಟೇ.

ರವಿಚಂದ್ರನ್ ಅಶ್ವಿನ್

ರವಿಚಂದ್ರನ್ ಅಶ್ವಿನ್

ಮುಂಬರಲಿರುವ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಿರುವ ರವಿಚಂದ್ರನ್ ಅಶ್ವಿನ್ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಈ ಆಟಗಾರ ಪ್ರಸಕ್ತ ಸಾಲಿನ ಟೂರ್ನಿಯಲ್ಲಿ 11 ಪಂದ್ಯಗಳನ್ನಾಡಿದ್ದು ಕೇವಲ 5 ವಿಕೆಟ್ ಪಡೆದಿದ್ದಾರಷ್ಟೇ.

ಭುವನೇಶ್ವರ್ ಕುಮಾರ್ ಮತ್ತು ಸಂದೀಪ್ ಶರ್ಮಾ

ಭುವನೇಶ್ವರ್ ಕುಮಾರ್ ಮತ್ತು ಸಂದೀಪ್ ಶರ್ಮಾ

ಭುವನೇಶ್ವರ್ ಕುಮಾರ್ ಕೂಡ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಿದ್ದಾರೆ. ಆದರೆ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುವಲ್ಲಿ ಇವರು ಸಫಲರಾಗಿಲ್ಲ. 11 ಪಂದ್ಯಗಳನ್ನಾಡಿರುವ ಭುವನೇಶ್ವರ್ ಕುಮಾರ್ 6 ವಿಕೆಟ್ ಪಡೆಯುವಲ್ಲಿ ಮಾತ್ರ ಶಕ್ತರಾಗಿದ್ದಾರೆ.

ಕಳೆದ ಐಪಿಎಲ್ ಆವೃತ್ತಿಗಳಲ್ಲಿ ದಿಗ್ಗಜ ಬ್ಯಾಟ್ಸ್‌ಮನ್‌ಗಳಿಗೆ ತಲೆನೋವಾಗಿ ಪರಿಣಮಿಸಿದ್ದ ಸಂದೀಪ್ ಶರ್ಮಾ ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಅಕ್ಷರಶಃ ಮಂಕಾಗಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ತಂಡದ ಈ ಬೌಲರ್ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ 7 ಪಂದ್ಯಗಳನ್ನಾಡಿ ಕೇವಲ 3 ವಿಕೆಟ್ ಮಾತ್ರ ಪಡೆದಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Saturday, October 9, 2021, 22:35 [IST]
Other articles published on Oct 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X