ಧೋನಿ ಬ್ಯಾಟ್‌ನಿಂದ ಮತ್ತಷ್ಟು ಸಿಕ್ಸರ್‌ಗಳು ಬರಲಿದೆ: ಸುನಿಲ್ ಗವಾಸ್ಕರ್ ವಿಶ್ವಾಸ

ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಚೆನ್ನೈ ನಾಯಕ ಧೋನಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದು ನೋಡಲು ತುಂಬಾ ಸಂತೋಷವಾಯಿತು ಎಂದಿದ್ದಾರೆ. ಇದೇ ರೀತಿ ಬ್ಯಾಟಿಂಗ್‌ನಲ್ಲಿ ಹೆಚ್ಚಿನ ಸಮಯವನ್ನು ಪಡೆದರೆ ಟೂರ್ನಿಯ ಮಧ್ಯ ಭಾಗದಲ್ಲಿ ಧೋನಿ ಬ್ಯಾಟ್‌ನಿಂದ ಮತ್ತಷ್ಟು ಉತ್ತಮ ಪ್ರದರ್ಶನ ನಿರೀಕ್ಷಿಸಬಹುದು ಎಂದಿದ್ದಾರೆ.

ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಹಲವಾರು ಸಂದರ್ಭಗಳಲ್ಲಿ ಎಂಎಸ್ ಧೋನಿ ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಎಂಎಸ್ ಧೋನಿ ಬ್ಯಾಟಿಂಗ್ ನೋಡಲು ಅಭಿಮಾನಿಗಳು ಕಾಯುತ್ತಿರುತ್ತಾರೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಐಪಿಎಲ್ 2021: ಬೆಂಗಳೂರು vs ರಾಜಸ್ಥಾನ್ ಮುಖಾಮುಖಿಯಲ್ಲಿ ಯಾರದ್ದು ಮೇಲುಗೈ?

ಈ ಬಾರಿಯ ಆವೃತ್ತಿಯ ಆರಂಭದಲ್ಲಿ ಧೋನಿ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಆದರೆ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯವಲ್ಲಿ ಅವರು ನಾಲ್ಕನೇ ಕ್ರಮಾಂಕದಲ್ಲಿ ಆಡಲು ಇಳಿದು 8 ಎಸೆತಗಳನ್ನು ಎದುರಿಸಿ 17 ರನ್ ಬಾರಿಸಿದರು. ಇದರಲ್ಲಿ ಎರಡು ಬೌಂಡರು ಹಾಗೂ ಒಂದು ಸಿಕ್ಸರ್ ಒಳಗೊಂಡಿತ್ತು.

"ಧೋನಿಯ ಬ್ಯಾಟಿಂಗ್ ವಿಶೇಷವಾದದ್ದು. ಆತ ಬ್ಯಾಟಿಂಗ್ ಮಾಡುವುದನ್ನು ನೋಡಲು ಇಡೀ ಭಾರತವೇ ಇಷ್ಟಪಡುತ್ತದೆ. ಆತನಲ್ಲಿ ಅಂತಾ ವಿಶೇಷತೆಯಿದೆ. ಈ ಟೂರ್ನಮೆಂಟ್ ಮುಂದುವರಿಯುತ್ತಿದ್ದಂತೆಯೇ ಧೋನಿ ಬ್ಯಾಟ್‌ನಿಂದ ಮತ್ತಷ್ಟು ರನ್‌ಗಳು ಹರಿದುಬರಲಿದೆ. ಮುಂಬರುವ ಪಂದ್ಯಗಳಲ್ಲಿ ಧೋನಿ ನಾಲ್ಕು ಅಥವಾ ಐದನೇ ಕ್ರಮಾಂಕದಲ್ಲಿ ಇಳಿದು ಸಾಕಷ್ಟು ಬೌಂಡರಿ ಹಾಗೂ ಸಿಕ್ಸರ್‌ಗಳನ್ನು ಸಿಡಿಸಲಿದ್ದಾರೆ" ಎಂದು ಸುನಿಲ್ ಗವಾಸ್ಕರ್ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಐಪಿಎಲ್ 2021 : ಚೆನ್ನೈ - ಕೊಲ್ಕತ್ತಾ ಪಂದ್ಯದ ಪ್ರಮುಖ ಅಂಕಿ ಅಂಶ ಮತ್ತು ನಿರ್ಮಾಣವಾದ ದಾಖಲೆಗಳು

ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮೊದಲು ಬ್ಯಾಟಿಂಗ್ ನಡೆಸಿ ಕೇವಲ 3 ವಿಕೆಟ್ ಕಳಡದುಕೊಂಡು 220 ರನ್‌ಗಳಿಸಿತು. ಇದನ್ನು ಬೆನ್ನಟ್ಟಿದ ಕೆಕೆಆರ್ ತಂಡ 202 ರನ್‌ಗಳಿಸಿ ಆಲೌಟ್ ಆಗುವ ಮೂಲಕ ಶರಣಾಯಿತು. ಈ ಗೆಲುವಿನೊಂದಿಗೆ ಧೋನಿ ಪಡೆ ಸದ್ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

For Quick Alerts
ALLOW NOTIFICATIONS
For Daily Alerts
Story first published: Thursday, April 22, 2021, 15:31 [IST]
Other articles published on Apr 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X