ಐಪಿಎಲ್ 2021: ಅಚ್ಚರಿ ಮೂಡಿಸಿದ ಆಟಗಾರನನ್ನು ಹೆಸರಿಸಿದ ಗ್ರೇಮ್ ಸ್ವಾನ್

ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಗ್ರೇಮ್ ಸ್ವಾನ್ ಆರ್‌ಸಿಬಿ ತಂಡದ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಪ್ರದರ್ಶನದ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ 49 ಎಸೆತಗಳಲ್ಲಿ 78 ರನ್‌ ಬಾರಿಸಿದ ಮ್ಯಾಕ್ಸ್‌ವೆಲ್ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದರು.

ಈ ಬಾರಿಯ ಐಪಿಎಲ್‌ನಲ್ಲಿ ಎಲ್ಲರಿಗಿಂತ ಹೆಚ್ಚಿನ ಅಚ್ಚರಿಯನ್ನು ಮೂಡಿಸಿದ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಎಂದು ಸ್ವಾನ್ ಹೇಳಿದ್ದಾರೆ. ಇನ್ನು ಹರಾಜಿನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ 14.25 ಕೋಟಿಗೆ ಹರಾಜಾದಾಗಲೂ ನನಗೆ ಅಚ್ಚರಿಯಾಗಿತ್ತು ಎಂದು ಗ್ಲೇಮ್ ಸ್ವಾನ್ ಹೇಳಿದ್ದಾರೆ.

ಐಪಿಎಲ್: ಚೆನ್ನೈ vs ರಾಜಸ್ಥಾನ್, ಆಗಲಿರುವ ದಾಖಲೆಗಳ ಇಣುಕು ನೋಟ

32ರ ಹರೆಯದ ಗ್ಲೆನ್ ಮ್ಯಾಕ್ಸ್‌ವೆಲ್ ಆರ್‌ಸಿಬಿ ಪರವಾಗಿ ಆಡಿದ ಮೂರು ಪಂದ್ಯಗಳಲ್ಲಿಯೂ ಅದ್ಭುತ ಪ್ರದರ್ಶನವನ್ನು ನೀಡಿದ್ದಾರೆ. ಭಾನುವಾರದ ಪಂದ್ಯದಲ್ಲಿ ಸತತ ಎರಡನೇ ಅರ್ಧ ಶತಕವನ್ನು ಸಿಡಿಸಿದರು. ಈ ಪ್ರದರ್ಶನದ ಕಾರಣದಿಂದ ಮೊದಲ ಎರಡು ಓವರ್‌ನಲ್ಲಿ ಎರಡು ವಿಕೆಟ್ ಕಳೆದುಕೊಂಡಿದ್ದ ಆರ್‌ಸಿಬಿ ಮತ್ತೆ ಚೇತರಿಕೆ ಕಾಣಲು ಸಾಧ್ಯವಾಗಿದ್ದು ಮಾತ್ರವಲ್ಲದೆ ಬೃಹತ್ ಮೊತ್ತಕ್ಕೂ ಕಾರಣರಾದರು.

"ಆತ ಎಲ್ಲರಿಗಿಂತ ಹೆಚ್ಚು ನನಗೆ ಅಚ್ಚರಿಗೊಳಿಸಿದ್ದಾನೆ. ಆತನ ಮೇಲೆ ಅಷ್ಟು ಮೊತ್ತವನ್ನು ಹೂಡಿದಾಗ ಅದು ವ್ಯರ್ಥವಾದ ಮೊತ್ತ ಎಂದು ನಾನು ಭಾವಿಸಿದ್ದೆ. ಆದರೆ ಅವರು ಆತ ಮಧ್ಯಮ ಓವರ್‌ಗಳಲ್ಲಿ ಸ್ಟ್ರೈಕ್‌ರೇಟ್ ಹೆಚ್ಚಿಸಬಲ್ಲ ಎಂದು ಬೆಂಬಲಕ್ಕೆ ನಿಂತಿದ್ದರು" ಎಂದು ಗ್ಲೇಮ್ ಸ್ವಾನ್ ಹೇಳಿದ್ದಾರೆ.

ಈ ಐಪಿಎಲ್‌ನ 'ಮ್ಯಾನ್ ಆಫ್‌ ದ ಟೂರ್ನಿ' ಹೆಸರಿಸಿದ ಮೈಕಲ್ ವಾನ್

ಇನ್ನು ತಂಡದಲ್ಲಿ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಅವರಂತಾ ಆಟಗಾರರ ಉಪಸ್ಥಿತಿ ಮ್ಯಾಕ್ಸ್‌ವೆಲ್‌ಗೆ ಹೆಚ್ಚು ಸೂಕ್ತವಾಗುತ್ತದೆ, ಅವರ ಕಾರಣದಿಂದಾಗಿ ತನ್ನ ಸ್ವಾಭಾವಿಕ ಆಟವನ್ನು ಪ್ರದರ್ಶಿಸಲು ಮ್ಯಾಕ್ಸ್‌ವೆಲ್‌ಗೆ ಸಾಧ್ಯವಾಗುತ್ತದೆ ಎಂದು ಸ್ವಾನ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Monday, April 19, 2021, 15:17 [IST]
Other articles published on Apr 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X