ಐಪಿಎಲ್ 2021: ಐಪಿಎಲ್‌ನಲ್ಲಿ ಎಂಐಯ ಇಶಾನ್ ಕಿಶನ್ ದಾಖಲೆ

ಶಾರ್ಜಾ: ಮುಂಬೈ ಇಂಡಿಯನ್ಸ್ ಆರಂಭಿಕ ಬ್ಯಾಟ್ಸ್‌ಮನ್‌ ಇಶಾನ್ ಕಿಶನ್ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಮುಂಬೈ ಪರ ಐಪಿಎಲ್‌ನಲ್ಲಿ 1000 ರನ್ ಮೈಲಿಗಲ್ಲು ಕಿಶನ್ ನಿರ್ಮಿಸಿದ್ದಾರೆ. ಮಂಗಳವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಿಶನ್ ಈ ದಾಖಲೆ ಬರೆದರು.

ಐಪಿಎಲ್ 2021: ದಶಕದ ಬಳಿಕ ಶತಕ ದಾಟಲು ವಿಫಲವಾದ ರಾಜಸ್ಥಾನ್ ರಾಯಲ್ಸ್ಐಪಿಎಲ್ 2021: ದಶಕದ ಬಳಿಕ ಶತಕ ದಾಟಲು ವಿಫಲವಾದ ರಾಜಸ್ಥಾನ್ ರಾಯಲ್ಸ್

ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ (ಅಕ್ಟೋಬರ್ 5) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 51ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಲ್ಲಿ ಇಶಾನ್ ಕಿಶನ್ ಈ ಸಾಧನೆ ಮಾಡಿದ್ದಾರೆ. ಈ ಪಂದ್ಯದಲ್ಲಿ ಕಿಶನ್ ಸ್ಫೋಟಕ ಅರ್ಧ ಶತಕ ಬಾರಿಸಿದ್ದಾರೆ. 60 ಐಪಿಎಲ್ ಪಂದ್ಯಗಳಲ್ಲಿ ಕಿಶನ್ 27.36ರ ಸರಾಸರಿಯಲ್ಲಿ 1368 ರನ್ ದಾಖಲೆ ಹೊಂದಿದ್ದಾರೆ.

ಎರಡನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದ ಕಿಶನ್, 25 ಎಸೆತಗಳಲ್ಲಿ 50 ರನ್ ಪೂರೈಸಿದ್ದಾರೆ. ಇದರಲ್ಲಿ 5 ಫೋರ್ಸ್, 3 ಸಿಕ್ಸರ್ ಕೂಡ ಸೇರಿತ್ತು. ಕಿಶನ್ ಅದ್ಭುತ ಬ್ಯಾಟಿಂಗ್ ಮತ್ತು ನೇಥನ್ ಕೌಲ್ಟರ್ ನೈಲ್ ಮತ್ತು ಜೇಮ್ಸ್ ನೀಶನ್ ಮಾರಕ ಬೌಲಿಂಗ್ ನೆರವಿನೊಂದಿಗೆ ಮುಂಬೈ 8 ವಿಕೆಟ್ ಜಯ ಗಳಿಸಿತಲ್ಲದೆ ಪ್ಲೇ ಆಫ್ಸ್‌ ಆಸೆ ಜೀವಂತವಾಗಿರಿಸಿಕೊಂಡಿದೆ.

ಪ್ರೊ ಕಬಡ್ಡಿ ಲೀಗ್ 2021 ಆರಂಭದ ದಿನಾಂಕ, ತಾಣ ಅಧಿಕೃತ ಘೋಷಣೆಪ್ರೊ ಕಬಡ್ಡಿ ಲೀಗ್ 2021 ಆರಂಭದ ದಿನಾಂಕ, ತಾಣ ಅಧಿಕೃತ ಘೋಷಣೆ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಜಸ್ಥಾನ್ ರಾಯಲ್ಸ್, ಎವಿನ್ ಲೂಯಿಸ್ 24, ಯಶಸ್ವಿ ಜೈಸ್ವಾಲ್ 12, ಸಂಜು ಸ್ಯಾಮ್ಸನ್ 3, ಶಿವಂ ದೂಬೆ 3, ಗ್ಲೆನ್ ಫಿಲಿಪ್ಸ್ 4, ಡೇವಿಡ್ ಮಿಲ್ಲರ್ 15, ರಾಹುಲ್ ತೆವಾಟಿಯಾ 12, ಕುಲದೀಪ್ ಯಾದವ್ 0, ಚೇತನ್ ಸಕಾರಿಯಾ 6, ಮುಸ್ತಫಿಜುರ್ ರೆಹಮಾನ್ 8 ರನ್‌ನೊಂದಿಗೆ 20 ಓವರ್‌ಗೆ 9 ವಿಕೆಟ್‌ ಕಳೆದು 90 ರನ್ ಗಳಿಸಿತ್ತು.

ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್, ರೋಹಿತ್ ಶರ್ಮಾ 22 (13), ಇಶಾನ್ ಕಿಶನ್ ಅಜೇಯ 50 (25), ಸೂರ್ಯಕುಮಾರ್ ಯಾದವ್ 13, ಹಾರ್ದಿಕ್ ಪಾಂಡ್ಯ ಅಜೇಯ 5 ರನ್‌ನೊಂದಿಗೆ 8.2 ಓವರ್‌ಗೆ 2 ವಿಕೆಟ್ ಕಳೆದು 94 ರನ್ ಗಳಿಸಿ ಗೆಲುವಿನ ನಗು ಬೀರಿತು.

ಟಿ20 ವಿಶ್ವಕಪ್‌ಗೆ ಮುನ್ನ ಬಿಸಿಸಿಐಗೆ ತಲೆನೋವಾದ ವರುಣ್ ಚಕ್ರವರ್ತಿ ಮೊಣಕಾಲು ಸಮಸ್ಯೆ!ಟಿ20 ವಿಶ್ವಕಪ್‌ಗೆ ಮುನ್ನ ಬಿಸಿಸಿಐಗೆ ತಲೆನೋವಾದ ವರುಣ್ ಚಕ್ರವರ್ತಿ ಮೊಣಕಾಲು ಸಮಸ್ಯೆ!

ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ XI
ರೋಹಿತ್ ಶರ್ಮಾ (ಸಿ), ಇಶಾನ್ ಕಿಶನ್ (ವಿಕೆ), ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಜೇಮ್ಸ್ ನೀಶಮ್, ನಾಥನ್ ಕೌಲ್ಟರ್-ನೈಲ್, ಜಯಂತ್ ಯಾದವ್, ಜಸ್ಪ್ರೀತ್ ಬೂಮ್ರಾ, ಟ್ರೆಂಟ್ ಬೌಲ್ಟ್.
ಬೆಂಚ್: ಅನುಕೂಲ್ ರಾಯ್, ಕ್ರಿಸ್ ಲಿನ್, ಆಡಮ್ ಮಿಲ್ನೆ, ಆದಿತ್ಯ ತಾರೆ, ಪಿಯೂಷ್ ಚಾವ್ಲಾ, ಧವಳ್ ಕುಲಕರ್ಣಿ, ರೋಶ್ ಕಲರಿಯಾ, ಅನ್ಮೋಲ್ಪ್ರೀತ್ ಸಿಂಗ್, ರಾಹುಲ್ ಚಾಹರ್, ಮಾರ್ಕೊ ಜಾನ್ಸನ್, ಯುದ್ಧವೀರ್ ಸಿಂಗ್, ಕೃನಾಲ್ ಪಾಂಡ್ಯ, ಕ್ವಿಂಟನ್ ಡಿ ಕಾಕ್

Dhoni ಆಟದ ಬಗ್ಗೆ ಪಂದ್ಯ ಮುಗಿದ ನಂತರ Fleming ಹೇಳಿದ್ದೇನು | Oneindia Kannada

ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ XI
ಎವಿನ್ ಲೂಯಿಸ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (c & wk), ಶಿವಂ ದೂಬೆ, ಗ್ಲೆನ್ ಫಿಲಿಪ್ಸ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಕುಲದೀಪ್ ಯಾದವ್, ಚೇತನ್ ಸಕಾರಿಯಾ, ಶ್ರೇಯಸ್ ಗೋಪಾಲ್, ಮುಸ್ತಫಿಜುರ್ ರೆಹಮಾನ್.
ಬೆಂಚ್: ಜಯದೇವ್ ಉನದ್ಕತ್, ಕ್ರಿಸ್ ಮೋರಿಸ್, ಮನನ್ ವೊಹ್ರಾ, ಲಿಯಾಮ್ ಲಿವಿಂಗ್ಸ್ಟೋನ್, ತಬ್ರೇಜ್ ಶಮ್ಸಿ, ಕೆಸಿ ಕರಿಯಪ್ಪ, ಮಹಿಪಾಲ್ ಲೊಮರ್, ಓಶಾನೆ ಥಾಮಸ್, ರಿಯಾನ್ ಪರಾಗ್, ಅನುಜ್ ರಾವತ್, ಕಾರ್ತಿಕ್ ತ್ಯಾಗಿ, ಜೆರಾಲ್ಡ್ ಕೋಟ್ಜಿ, ಮಯಾಂಕ್ ಮಾರ್ಕಂಡೆ, ಆಕಾಶ್ ಸಿಂಗ್.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 22 - October 28 2021, 07:30 PM
ಆಸ್ಟ್ರೇಲಿಯಾ
ಶ್ರೀಲಂಕಾ
Predict Now

For Quick Alerts
ALLOW NOTIFICATIONS
For Daily Alerts
Story first published: Tuesday, October 5, 2021, 23:58 [IST]
Other articles published on Oct 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X