ಕಳೆದ ಐಪಿಎಲ್‌ಗಿಂತ ಈ ಬಾರಿಯ ಐಪಿಎಲ್ ಕಳೆಗುಂದಿದೆ ಎಂದವರಿಗೆ ಅಂಕಿಅಂಶದ ಚಾಟಿ ಬೀಸಿದ ಬಿಸಿಸಿಐ

ಇಂಡಿಯನ್ ಪ್ರೀಮಿಯರ್ ಲೀಗ್ ಜಗತ್ತಿನ ಅತಿ ದೊಡ್ಡ ಮತ್ತು ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಲೀಗ್ ಎಂಬ ಖ್ಯಾತಿಯನ್ನು ತನ್ನದಾಗಿಸಿಕೊಂಡಿರುವ ಕ್ರಿಕೆಟ್ ಲೀಗ್ ಆಗಿದೆ. ವಿಶ್ವ ಕ್ರಿಕೆಟ್‍ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಸ್ಫೂರ್ತಿಯನ್ನು ಪಡೆದು ಹಲವಾರು ಫ್ರಾಂಚೈಸಿ ಕ್ರಿಕೆಟ್ ಲೀಗ್‌ಗಳನ್ನು ನಡೆಸಲಾಯಿತು. ಆದರೂ ಸಹ ಆ ವಿವಿಧ ಫ್ರಾಂಚೈಸಿ ಕ್ರಿಕೆಟ್ ಲೀಗ್‌ಗಳ ಪೈಕಿ ಯಾವೊಂದು ಫ್ರಾಂಚೈಸಿ ಕ್ರಿಕೆಟ್ ಲೀಗ್ ಕೂಡ ಇಂಡಿಯನ್ ಪ್ರೀಮಿಯರ್ ಲೀಗ್‌ನಷ್ಟು ಜನಪ್ರಿಯತೆ, ಆದಾಯ ಮತ್ತು ವೀಕ್ಷಕ ಬಳಗವನ್ನು ಹೊಂದಲು ಸಾಧ್ಯವಾಗಲೇ ಇಲ್ಲ.

ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿ, ಶಾಸ್ತ್ರಿಗೆ ಎಲ್ಲರಿಗಿಂತ ಸಿಎಸ್‌ಕೆಯ ಈ ಆಟಗಾರನೇ ಫೇವರಿಟ್ ಎಂದ ನೆಹ್ರಾಟಿ20 ವಿಶ್ವಕಪ್‌ನಲ್ಲಿ ಕೊಹ್ಲಿ, ಶಾಸ್ತ್ರಿಗೆ ಎಲ್ಲರಿಗಿಂತ ಸಿಎಸ್‌ಕೆಯ ಈ ಆಟಗಾರನೇ ಫೇವರಿಟ್ ಎಂದ ನೆಹ್ರಾ

ಆದರೆ ಇಂಡಿಯನ್ ಪ್ರೀಮಿಯರ್ ಲೀಗ್ ಮಾತ್ರ ಆವೃತ್ತಿಯಿಂದ ಆವೃತ್ತಿಗೆ ಅಭಿವೃದ್ದಿ ಹೊಂದುತ್ತಾ ಜಗತ್ತಿನಲ್ಲಿರುವ ಎಲ್ಲಾ ಕ್ರಿಕೆಟ್ ಅಭಿಮಾನಿಗಳಿಗೂ ತಲುಪಿಬಿಟ್ಟಿದೆ. ಕೇವಲ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮತ್ತು ಕ್ರಿಕೆಟ್ ಪಂಡಿತರೂ ಮಾತ್ರವಲ್ಲದೇ ಇತರೆ ದೇಶಗಳ ಕ್ರಿಕೆಟ್ ಅಭಿಮಾನಿಗಳು, ಕ್ರೀಡಾ ಪಂಡಿತರು ಮತ್ತು ಮಾಜಿ ಕ್ರಿಕೆಟಿಗರೂ ಕೂಡ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯಗಳ ಕುರಿತಾಗಿ ಮತ್ತು ಇದರಲ್ಲಿ ಭಾಗವಹಿಸುವ ಆಟಗಾರರ ಕುರಿತಾಗಿ ಚರ್ಚೆಗಳನ್ನು ಪ್ರತಿವರ್ಷವೂ ನಡೆಸುತ್ತಿರುತ್ತಾರೆ.

ಧೋನಿಯನ್ನು ಮೆಂಟರ್ ಆಗಿ ಆಯ್ಕೆ ಮಾಡಿದ್ದು ತಂಡದ ಇತರರನ್ನು ತುಳಿಯುವುದಕ್ಕಾ?; ಬಿಸಿಸಿಐ ಹೇಳಿದ್ದಿಷ್ಟುಧೋನಿಯನ್ನು ಮೆಂಟರ್ ಆಗಿ ಆಯ್ಕೆ ಮಾಡಿದ್ದು ತಂಡದ ಇತರರನ್ನು ತುಳಿಯುವುದಕ್ಕಾ?; ಬಿಸಿಸಿಐ ಹೇಳಿದ್ದಿಷ್ಟು

ಇನ್ನು ಪ್ರಪಂಚದ ಬೇರೆ ಯಾವುದೇ ಫ್ರಾಂಚೈಸಿ ಕ್ರಿಕೆಟ್ ಲೀಗ್‌ಗಳಿಗೂ ತೋರದಷ್ಟು ಆಸಕ್ತಿಯನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯತ್ತ ವಿದೇಶಿ ಆಟಗಾರರು ತೋರಿಸುತ್ತಾರೆ. ತಮ್ಮ ಅಂತರರಾಷ್ಟ್ರೀಯ ತಂಡದಲ್ಲಿಯೂ ಸಿಗದಷ್ಟು ಮನ್ನಣೆ ಮತ್ತು ಜನಪ್ರಿಯತೆ ಹಲವಾರು ವಿದೇಶಿ ಆಟಗಾರರಿಗೆ ಇದೇ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಡಿದ ನಂತರ ಸಿಕ್ಕಿದ ಹಲವಾರು ಉದಾಹರಣೆಗಳಿವೆ. ಹೀಗಾಗಿಯೇ ವಿದೇಶಿ ಕ್ರಿಕೆಟಿಗರಿಗೂ ಇಂಡಿಯನ್ ಪ್ರೀಮಿಯರ್ ಲೀಗ್ ಎಂದರೆ ಅಪಾರವಾದ ಪ್ರೀತಿ ಮತ್ತು ಗೌರವವಿದೆ.

ಇಂತಹ ದೊಡ್ಡ ಮಟ್ಟದ ಗೌರವ ಮತ್ತು ಹೆಸರನ್ನು ಹೊಂದಿರುವಂತಹ ಇಂಡಿಯನ್ ಪ್ರೀಮಿಯರ್ ಲೀಗ್ ಕುರಿತಾಗಿ ಸಾಕಷ್ಟು ಆರೋಪ ಮತ್ತು ವ್ಯಂಗ್ಯವಾಡುವಂತಹ ಜನರು ಕೂಡ ಇದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಿಂದ ಆವೃತ್ತಿಗೆ ತನ್ನ ಜನಪ್ರಿಯತೆಯನ್ನು ಕಳೆದುಕೊಂಡು ಕುಗ್ಗಲಾರಂಭಿಸಿದೆ, ಮುಂಚೆ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಇದ್ದಷ್ಟು ಕ್ರೇಜ್ ಮತ್ತು ವೀಕ್ಷಕರ ಬಳಗ ಈಗಿಲ್ಲ ಎಂದೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಅಪಾರವಾದ ಟೀಕೆಗಳನ್ನು ಕೂಡ ಕೆಲ ಐಪಿಎಲ್ ದ್ವೇಷಿಗಳು ಮಾಡಿದ್ದರು.

ಮುಂಬೈ ಇಂಡಿಯನ್ಸ್‌ನ ಈ ಆಟಗಾರರನ್ನು ಆಯ್ಕೆ ಮಾಡಿದ್ದು ಭಾರತಕ್ಕೆ ತಲೆನೋವಾಗಿದೆ ಎಂದ ಅಗರ್ಕರ್ಮುಂಬೈ ಇಂಡಿಯನ್ಸ್‌ನ ಈ ಆಟಗಾರರನ್ನು ಆಯ್ಕೆ ಮಾಡಿದ್ದು ಭಾರತಕ್ಕೆ ತಲೆನೋವಾಗಿದೆ ಎಂದ ಅಗರ್ಕರ್

ಅದರಲ್ಲಿಯೂ ಪ್ರಸ್ತುತ ನಡೆಯುತ್ತಿರುವ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಕುರಿತಾಗಿ ದೊಡ್ಡ ಮಟ್ಟದಲ್ಲಿಯೇ ಟೀಕೆಗಳು ವ್ಯಕ್ತವಾಗುತ್ತಿದ್ದವು. ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಭಾರತ ನೆಲದಲ್ಲಿ ಆರಂಭವಾಗಿ ಕೊರೋನಾವೈರಸ್ ಹೊಡೆತಕ್ಕೆ ಸಿಲುಕಿ ಯುಎಇಗೆ ಸ್ಥಳಾಂತರಿಸಲ್ಪಟ್ಟ ನಂತರ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿದೆ, ಈ ಹಿಂದೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ವೀಕ್ಷಿಸುತ್ತಿದ್ದ ರೀತಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯನ್ನು ವೀಕ್ಷಕರು ವೀಕ್ಷಿಸುತ್ತಿಲ್ಲ ಎಂದು ಕಾಲೆಳೆದಿದ್ದರು.

ಐಪಿಎಲ್ ದ್ವೇಷಿಗಳಿಗೆ ಜಯ್ ಶಾ ಚಾಟಿ

ಐಪಿಎಲ್ ದ್ವೇಷಿಗಳಿಗೆ ಜಯ್ ಶಾ ಚಾಟಿ

ಹೀಗೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಕುರಿತಾಗಿ ಅಪಾರವಾದ ಟೀಕೆಗಳನ್ನು ವ್ಯಕ್ತಪಡಿಸುತ್ತಿದ್ದ ಟೀಕಾಕಾರರ ಗುಂಪಿಗೆ ಇದೀಗ ಬಿಸಿಸಿಐನ ಕಾರ್ಯಾಧ್ಯಕ್ಷ ಜಯ್ ಶಾ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್‌ವೊಂದನ್ನು ಮಾಡುವುದರ ಮೂಲಕ ಚಾಟಿ ಬೀಸಿದ್ದಾರೆ. ಈ ಟ್ವೀಟ್ ಮೂಲಕ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಕಳೆದ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಿಂತ ಅತಿ ಹೆಚ್ಚು ಜನರು ವೀಕ್ಷಿಸಿದ್ದಾರೆ ಎಂಬ ಅಂಕಿಅಂಶವನ್ನು ಜಯ್ ಶಾ ಹಂಚಿಕೊಂಡಿದ್ದು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಜನಪ್ರಿಯತೆ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ ಎಂಬುದನ್ನು ಐಪಿಎಲ್ ದ್ವೇಷಿಗಳಿಗೆ ಮನದಟ್ಟು ಮಾಡಿದ್ದಾರೆ.

ಪ್ರಸಕ್ತ ಸಾಲಿನ ಐಪಿಎಲ್ ವೀಕ್ಷಕರ ಸಂಖ್ಯೆ ಇಷ್ಟು

ಪ್ರಸಕ್ತ ಸಾಲಿನ ಐಪಿಎಲ್ ವೀಕ್ಷಕರ ಸಂಖ್ಯೆ ಇಷ್ಟು

ಸೆಪ್ಟೆಂಬರ್ 30ರ ಗುರುವಾರದ ಮಧ್ಯಾಹ್ನದಂದು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ವೀಕ್ಷಿಸಿರುವ ವೀಕ್ಷಕರ ಸಂಖ್ಯೆಯನ್ನು ಪ್ರಕಟಿಸಿರುವ ಜಯ್ ಶಾ ಈ ರೀತಿಯಾಗಿ ಬರೆದುಕೊಂಡಿದ್ದಾರೆ: 'ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ವೀಕ್ಷಕರ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಬೆಳವಣಿಗೆಯನ್ನು ಹೊಂದಿದೆ ಎಂಬುದನ್ನು ತಿಳಿಸಲು ಸಂತಸಪಡುತ್ತೇನೆ. ಇಂಡಿಯನ್ ಪ್ರೀಮಿಯರ್ ಲೀಗ್ 2021ರ 35ನೇ ಪಂದ್ಯದವರೆಗೂ 380 ಮಿಲಿಯನ್ ವೀಕ್ಷಕರು ಟಿವಿಯಲ್ಲಿ ಪಂದ್ಯಗಳನ್ನು ವೀಕ್ಷಿಸಿದ್ದಾರೆ ಹಾಗೂ ಕಳೆದ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಇದೇ ಹಂತದಲ್ಲಿ ಪಡೆದುಕೊಂಡಿದ್ದ ವೀಕ್ಷಕರ ಸಂಖ್ಯೆಗಿಂತ 12 ಮಿಲಿಯನ್ ಹೆಚ್ಚಿನ ವೀಕ್ಷಕರನ್ನು ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಪಡೆದುಕೊಂಡಿದೆ' ಎಂದು ಜಯ್ ಶಾ ಟ್ವೀಟ್ ಮಾಡಿದ್ದಾರೆ.

35 ಪಂದ್ಯಗಳು ಮುಗಿದ ನಂತರ ವೀಕ್ಷಕರ ಸಂಖ್ಯೆ:

35 ಪಂದ್ಯಗಳು ಮುಗಿದ ನಂತರ ವೀಕ್ಷಕರ ಸಂಖ್ಯೆ:

2020ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ: 368 ಮಿಲಿಯನ್ ವೀಕ್ಷಕರು

2021ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ: 380 ಮಿಲಿಯನ್ ವೀಕ್ಷಕರು

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 20 - October 27 2021, 03:30 PM
ಇಂಗ್ಲೆಂಡ್
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, September 30, 2021, 16:11 [IST]
Other articles published on Sep 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X