ಕೋಡ್ ಮೂಲಕ ಪಂಜಾಬ್‌ಗೆ ಕೋಲ್ಕತ್ತಾದಿಂದ ಮೋಸ?: ಏನಿದು ವಿವಾದ?!

ಅಹ್ಮದಾಬಾದ್: ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 21ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 5 ವಿಕೆಟ್‌ಗಳ ಸುಲಭ ಗೆಲುವನ್ನಾಚರಿಸಿತ್ತು. ಇದು ಕೆಕೆಆರ್‌ಗೆ ಟೂರ್ನಿಯಲ್ಲಿ ಲಭಿಸಿದ ಎರಡನೇ ಗೆಲುವು. ಪಂದ್ಯದಲ್ಲಿ ಇಯಾನ್ ಮಾರ್ಗನ್ ಪಡೆ ಗೆದ್ದ ಬಳಿಕ ವಿವಾದವೊಂದು ಚರ್ಚೆಯಾಗತೊಡಗಿದೆ.

ತಮ್ಮ ನೆಚ್ಚಿನ ಐಪಿಎಲ್ ತಂಡದ ಹೆಸರನ್ನು ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ

ಪಂದ್ಯದ ವೇಳೆ ಅಂದರೆ ಪಂದ್ಯದ ಮಧ್ಯದಲ್ಲಿ ನಾಯಕ ಇಯಾನ್ ಮಾರ್ಗನ್ ಬ್ಯಾಟಿಂಗ್‌ ಮಾಡುತ್ತಿದ್ದಾಗ ಕೋಲ್ಕತ್ತಾದ ಡಗೌಟ್‌ನಲ್ಲಿ '54' ಸಂಖ್ಯೆಯ ಬೋರ್ಡ್ ಕಾಣಿಸಿತ್ತು. ಈ ಬೋರ್ಡ್ ಮೂಲಕ ಕೆಕೆಆರ್‌ಗೆ ಎಂಥದ್ದೋ ಕೋಡ್ ರವಾನಿಸಲಾಗಿತ್ತು. ಪಂದ್ಯ ಗೆಲ್ಲಲು ಈ ಕೋಡ್‌ ಕಾರಣ ಎಂಬ ಮಾತುಗಳು ಕೇಳಿಬರತೊಡಗಿವೆ.

ವೀರೇಂದ್ರ ಸೆಹ್ವಾಗ್ ಮಾತು

ವೀರೇಂದ್ರ ಸೆಹ್ವಾಗ್ ಮಾತು

ಈ ವಿವಾದಕ್ಕೆ ಸಂಬಂಧಿಸಿ ಭಾರತದ ಮಾಜಿ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಪ್ರತಿಕ್ರಿಯಿಸಿದ್ದಾರೆ. 'ನಾವು ಸೇನೆಯಲ್ಲಿ ಮಾತ್ರ ಇಂಥ ಸಂಖ್ಯಾ ಕೋಡ್‌ಗಳನ್ನು ನೋಡಬಹುದು. ಬಹುಶಃ ಒಂದು ನಿಗದಿತ ಸಮಯದಲ್ಲಿ ನಿಗದಿತ ಬೌಲರ್‌ ಅನ್ನು ಆಡಿಸಬೇಕು ಅನ್ನೋ ಯೋಜನೆ 54 ಕೋಡ್‌ನ ಹಿಂದಿರಬಹುದು. ನನ್ನ ಪ್ರಕಾರ ತಂಡದ ಕೋಚ್ ಮತ್ತು ಆಡಳಿತ ಮಂಡಳಿ ಡಗೌಟ್‌ನಲ್ಲಿ ಕೂತು ನಾಯಕ ಇಯಾನ್ ಮಾರ್ಗನ್‌ಗೆ ಸಹಾಯ ಮಾಡಿರಬಹುದು,' ಎಂದು ಕ್ರಿಕ್‌ಬಝ್‌ ಜೊತೆ ಸೆಹ್ವಾಗ್ ಹೇಳಿದ್ದಾರೆ.

ಯಾರಾದರೂ ಕ್ಯಾಪ್ಟನ್ ಆಗಬಹುದು

'ಅವರು ಹಾಗೆ ಹೊರಗಿನಿಂದ ಆಟದ ಬಗ್ಗೆ ಸೂಚನೆಗಳನ್ನು ನೀಡುವುದಾದರೆ ತಂಡವೊಂದಕ್ಕೆ ಇಂಥದ್ದೇ ಕ್ಯಾಪ್ಟನ್ ಬೇಕು ಅಂತೇನೂ ಇಲ್ಲ. ಯಾರಾದರೂ ಕ್ಯಾಪ್ಟನ್ ಆಗಬಹುದಲ್ಲವೆ?,' ಎಂದು ಸೆಹ್ವಾಗ್ ಪ್ರಶ್ನಿಸಿದ್ದಾರೆ. ಪಂಜಾಬ್ ವಿರುದ್ಧ ಗೆದ್ದ ಕೆಕೆಆರ್‌ ಅಂಕಪಟ್ಟಿಯಲ್ಲಿ ಸದ್ಯ ಐದನೇ ಸ್ಥಾನದಲ್ಲಿದೆ.

ಅಸಲಿಗೆ ಏನಿದು ಕೋಡ್?

ಅಸಲಿಗೆ ಏನಿದು ಕೋಡ್?

ಕೋಲ್ಕತ್ತಾ ನೈಟ್ ರೈಡರ್ಸ್‌ನ ಕೋಚ್ ಬ್ರೆಂಡನ್ ಮೆಕಲಮ್ ಹಿಂದೆಯೂ ಒಮ್ಮೆ ಪಂದ್ಯ ವೇಳೆ ರೈಟಿಂಗ್‌ ಪ್ಯಾಡ್‌ ಮೇಲೆ ಏನೋ ಗೀಚಿದ್ದು ಕಾಣಿಸಿತ್ತು. ಆ ಬಗ್ಗೆ ಅವರಲ್ಲಿ ಪ್ರಶ್ನಿಸಿದಾಗ, 'ತಂಡದ ನಿರ್ವಹಣಾ ಮಂಡಳಿಯಿಂದ ನಮಗೆ ಕೆಲವೊಂದು ಟಾಸ್ಕ್‌ಗಳಿರುತ್ತವೆ. ಅದನ್ನು ಮಾಡುತ್ತಿದ್ದೆ,' ಎಂದು ಮೆಕಲಮ್ ಉತ್ತರಿಸಿದ್ದರು. ಅಂದರೆ ಆಟಗಾರರ ರನ್, ವಿಕೆಟ್‌, ತಂಡದ ಮೊತ್ತ, ಯಾವ ಓವರ್‌ನಲ್ಲಿ ಎಷ್ಟು ಸ್ಕೋರ್ ಇತ್ಯಾದಿ ಸಂಗತಿಗಳತ್ತ ಮೆಕಲಮ್‌ ಕೂಡ ಆಗಿಂದಾಗೇ ಗಮನಿಸುತ್ತಿರುತ್ತಾರೆ ಅನ್ನಿಸುತ್ತೆ. ಅಲ್ಲದೆ ಇನ್ನಿಂಗ್ಸ್‌ ಒಂದರ ವೇಳೆ ಇಷ್ಟು ರನ್‌ ಆಗಿದೆ ಅನ್ನೋದನ್ನು ತಂಡದ ಸದಸ್ಯರಿಗೆ ಎಚ್ಚರಿಕೆ ಮಾಡಲು ಕೆಕೆಆರ್ ಡಗೌಟ್‌ನಲ್ಲಿ ಹೀಗೆ ನಂಬರ್ಸ್ ಬೋರ್ಡ್ ಇಟ್ಟಿರಬಹುದಾ ಅನ್ನೋ ಅನುಮಾನವೂ ಇದೆ (ಸ್ಟೋರಿಯ ಡಿಸ್‌ಪ್ಲೇ ಚಿತ್ರ ನೀವು ಗಮನಿಸಬಹುದು. ಅದರಲ್ಲಿ ಪಂಜಾಬ್ ಸ್ಕೋರ್‌ 54 ಆಗಿದ್ದಾಗ ಬೋರ್ಡ್‌ನಲ್ಲೂ 54 ಸಂಖ್ಯೆ ಕಾಣಿಸುತ್ತಿದೆ). ಆದರೆ ಈ ಬಗ್ಗೆ ಸ್ಪಷ್ಟನೆ ದೊರೆತಿಲ್ಲ.

ಪಂದ್ಯ ಗೆಲ್ಲಲು ಇನ್ನೊಂದು ಅಂಶವೂ ಇದೆ

ಪಂದ್ಯ ಗೆಲ್ಲಲು ಇನ್ನೊಂದು ಅಂಶವೂ ಇದೆ

ಅಂದ್ಹಾಗೆ, ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಂಜಾಬ್ 20 ಓವರ್‌ಗೆ 9 ವಿಕೆಟ್ ಕಳೆದು 123 ರನ್ ಗಳಿಸಿತ್ತು. ಹೀಗಾಗಿ ಕೆಕೆಆರ್‌ ಸುಲಭವಾಗಿ ಗೆಲ್ಲಲು ಸಾಧ್ಯವಾಯ್ತು ಅನ್ನೋದೂ ನಾವಿಲ್ಲಿ ಗಮನಿಸಬೇಕು. ಪಂಜಾಬ್ ನೀಡಿದ್ದ 124 ರನ್ ಗುರಿ ಬೆನ್ನಟ್ಟಿದ ಕೋಲ್ಕತ್ತಾ, 16.4 ಓವರ್‌ಗೆ 5 ವಿಕೆಟ್ ಕಳೆದು 126 ರನ್ ಗಳಿಸಿ ವಿಜಯವನ್ನಾಚರಿಸಿತ್ತು.

For Quick Alerts
ALLOW NOTIFICATIONS
For Daily Alerts
Story first published: Tuesday, April 27, 2021, 15:56 [IST]
Other articles published on Apr 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X