ಲಾಸ್ಟ್ ಬಾಲ್ ಸಿಕ್ಸ್‌ ಸಿಡಿಸಿ ಹೀರೋ ಆದ ಭರತ್ ಆ ಒಂದೇ ಒಂದು ಪಂದ್ಯದಲ್ಲಿ ಗಳಿಸಿದ ಹಣವೆಷ್ಟು ಗೊತ್ತಾ?

ಇಂಡಿಯನ್ ಪ್ರೀಮಿಯರ್ ಲೀಗ್, ಇದೊಂದು ಕೇವಲ ಫ್ರಾಂಚೈಸಿ ಕ್ರಿಕೆಟ್ ಟೂರ್ನಮೆಂಟ್ ಮಾತ್ರವಲ್ಲ. ಅದೆಷ್ಟೋ ಪ್ರತಿಭಾವಂತ ಯುವ ಕ್ರಿಕೆಟಿಗರನ್ನು ಜಗತ್ತಿಗೆ ಪರಿಚಯಿಸುವಂತಹ ಮಹಾ ವೇದಿಕೆಯೂ ಹೌದು. ಇದೇ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ಮಿಂಚುವುದರ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಆಯ್ಕೆಯಾಗಿರುವ ಆಟಗಾರರ ಹಲವಾರು ಉದಾಹರಣೆಗಳು ನಮ್ಮ ನಿಮ್ಮ ಕಣ್ಣಮುಂದೆಯೇ ಇವೆ. ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಿರುವ ಹಲವಾರು ಯುವ ಕ್ರಿಕೆಟಿಗರು ತಮ್ಮೊಳಗಿನ ಪ್ರತಿಭೆಯನ್ನು ಹೊರಹಾಕಿದ್ದು ಕೂಡ ಇದೇ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ವೇದಿಕೆಯಲ್ಲಿ.

ಐಪಿಎಲ್ 2021 ಪ್ಲೇಆಫ್: ಎಲ್ಲಾ ಪಂದ್ಯಗಳ ವಿವರ, ಸ್ಥಳ, ದಿನಾಂಕ ಮತ್ತು ಸಮಯದ ಸಂಪೂರ್ಣ ಮಾಹಿತಿಐಪಿಎಲ್ 2021 ಪ್ಲೇಆಫ್: ಎಲ್ಲಾ ಪಂದ್ಯಗಳ ವಿವರ, ಸ್ಥಳ, ದಿನಾಂಕ ಮತ್ತು ಸಮಯದ ಸಂಪೂರ್ಣ ಮಾಹಿತಿ

ಹೀಗೆ ಹಲವಾರು ಪ್ರತಿಭಾವಂತ ಕ್ರಿಕೆಟಿಗರಿಗೆ ವೇದಿಕೆಯನ್ನು ಕಲ್ಪಿಸರುವ ಹೆಗ್ಗಳಿಕೆಗೆ ಪಾತ್ರವಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಇದೀಗ ಮತ್ತೊಬ್ಬ ಪ್ರತಿಭಾವಂತ ಕ್ರಿಕೆಟಿಗನನ್ನು ಕ್ರಿಕೆಟ್ ಜಗತ್ತಿಗೆ ನೀಡಿದೆ. ಹೌದು ಅದು ಬೇರೆ ಯಾರೂ ಅಲ್ಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಪ್ರಸಕ್ತ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಿಂಚು ಹರಿಸುತ್ತಿರುವ ಆಂಧ್ರಪ್ರದೇಶದ ಮೂಲದ ಯುವ ಕ್ರಿಕೆಟಿಗನಾದ ಕೆ ಎಸ್ ಭರತ್.

ದೀಪಕ್ ಚಹರ್ ಪ್ರಪೋಸ್ ಮಾಡಿದ ಆ ಹುಡುಗಿ ಯಾರು? ಬಹಿರಂಗವಾಯ್ತು ಇದರ ಹಿಂದೆ ಇದ್ದ ಧೋನಿ ಪ್ಲಾನ್!ದೀಪಕ್ ಚಹರ್ ಪ್ರಪೋಸ್ ಮಾಡಿದ ಆ ಹುಡುಗಿ ಯಾರು? ಬಹಿರಂಗವಾಯ್ತು ಇದರ ಹಿಂದೆ ಇದ್ದ ಧೋನಿ ಪ್ಲಾನ್!

ಇದೇ ವರ್ಷದ ಫೆಬ್ರವರಿ ತಿಂಗಳಿನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾಗಿದ್ದ ಶ್ರೀಕರ್ ಭರತ್ ಸದ್ಯ ಯುಎಇ ಚರಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕಣಕ್ಕಿಳಿದು ಉತ್ತಮ ಪ್ರದರ್ಶನವನ್ನು ನೀಡಿ ಕ್ರಿಕೆಟ್ ಅಭಿಮಾನಿಗಳ ಮನವನ್ನು ಗೆದ್ದಿದ್ದಾರೆ. ಅಕ್ಟೋಬರ್ 8ರ ಶುಕ್ರವಾರದಂದು ನಡೆದ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಂತಿಮ ಎಸೆತದಲ್ಲಿ ಸಿಕ್ಸ್ ಬಾರಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗೆಲುವನ್ನು ತಂದು ಕೊಟ್ಟಿರುವ ಶ್ರೀಕರ್ ಭರತ್ ತಾವು ಬಾರಿಸಿದ ಆ ಒಂದು ಸಿಕ್ಸ್‌ನಿಂದ ಇಂದು ಸ್ಟಾರ್ ಆಗಿ ನಿಂತಿದ್ದಾರೆ. ಹೀಗೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ ಶ್ರೀಕರ್ ಭರತ್ ಆ ಒಂದು ಪಂದ್ಯದಿಂದ ಗಳಿಸಿದ ಹಣವೆಷ್ಟು ಎಂಬುದರ ಮಾಹಿತಿ ಮುಂದೆ ಇದೆ ಓದಿ.

 ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಬ್ಬರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿ ಲಕ್ಷಾಂತರ ಮೊತ್ತ ಪಡೆದುಕೊಂಡ ಕೆಎಸ್ ಭರತ್

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಬ್ಬರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿ ಲಕ್ಷಾಂತರ ಮೊತ್ತ ಪಡೆದುಕೊಂಡ ಕೆಎಸ್ ಭರತ್

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಕೆಎಸ್ ಭರತ್ ಪಂದ್ಯದಲ್ಲಿ 52 ಎಸೆತಗಳಿಗೆ ಅಜೇಯ 78 ರನ್ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಶ್ರೀಕರ್ ಭರತ್ ಅವರ ಈ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ ಕೂಡ ಸೇರಿತ್ತು. ಹೀಗೆ ಉತ್ತಮ ಆಟವನ್ನು ಆಡುವ ಮೂಲಕ ಜಯ ತಂದುಕೊಟ್ಟ ಶ್ರೀಕರ್ ಭರತ್ ಅವರಿಗೆ ಈ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಮಾತ್ರವಲ್ಲದೇ ಡ್ರೀಮ್ ಇಲೆವೆನ್ ಗೇಮ್ ಚೇಂಜರ್ ಆಫ್ ದಿ ಮ್ಯಾಚ್ ಆಗಿದ್ದಕ್ಕೆ 1 ಲಕ್ಷ, ಮೋಸ್ಟ್ ವ್ಯಾಲ್ಯುಯೆಬಲ್ ಪ್ಲೇಯರ್ ಆಫ್ ದ ಮ್ಯಾಚ್ 1 ಲಕ್ಷ ಮತ್ತು ಅನ್ ಅಕಾಡೆಮಿ ಕ್ರ್ಯಾಕಿಂಗ್ ಸಿಕ್ಸರ್ ಬಾರಿಸಿದ್ದಕ್ಕೆ 1 ಲಕ್ಷ ರೂಪಾಯಿಗಳನ್ನು ಕೆ ಎಸ್ ಭರತ್ ಬಾಚಿಕೊಂಡಿದ್ದಾರೆ.

ಕೇವಲ 20 ಲಕ್ಷಕ್ಕೆ ಕೆಎಸ್ ಭರತ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಾಗಿದ್ದರು

ಕೇವಲ 20 ಲಕ್ಷಕ್ಕೆ ಕೆಎಸ್ ಭರತ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಾಗಿದ್ದರು

ಇದೇ ವರ್ಷದ ಆರಂಭದಲ್ಲಿ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ ಆಂಧ್ರಪ್ರದೇಶದ ವೈಜಾಗ್ ಮೂಲದ ಕೆ ಎಸ್ ಭರತ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಲಕ್ಷ ರೂಪಾಯಿಗಳನ್ನು ನೀಡಿ ಖರೀದಿಸಿತ್ತು. ಹೀಗೆ ಅಲ್ಪ ಮೊತ್ತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾಗಿದ್ದ ಈ ಯುವ ಕ್ರಿಕೆಟಿಗ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದೊಡ್ಡ ಬ್ಯಾಟಿಂಗ್ ಆಸ್ತಿಯಾಗಿ ನಿಂತಿದ್ದಾರೆ.

ಮೂರನೇ ಕ್ರಮಾಂಕದ ಸಮಸ್ಯೆ ನೀಗಿಸಿದ ಕೆಎಸ್ ಭರತ್

ಮೂರನೇ ಕ್ರಮಾಂಕದ ಸಮಸ್ಯೆ ನೀಗಿಸಿದ ಕೆಎಸ್ ಭರತ್

ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಯುಎಇ ಚರಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೂರನೇ ಕ್ರಮಾಂಕದಲ್ಲಿ ಯಾವ ಬ್ಯಾಟ್ಸ್‌ಮನ್‌ನ್ನು ಕಣಕ್ಕಿಳಿಸಬೇಕು ಎಂಬ ಸಮಸ್ಯೆಯಿಂದ ಬಳಲುತ್ತಿತ್ತು. ಹೀಗಾಗಿಯೇ ಕೆಲ ಪಂದ್ಯಗಳಲ್ಲಿ ಡೇನಿಯಲ್ ಕ್ರಿಸ್ಟಿಯನ್ ಅವರನ್ನು ಕಣಕ್ಕಿಳಿಸಿ ಪ್ರಯೋಗ ಮಾಡಿ ಕೈಯನ್ನು ಕೂಡ ಸುಟ್ಟಿಕೊಂಡಿತ್ತು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಈ ಪಂದ್ಯದಲ್ಲಿ ಕೆ ಎಸ್ ಭರತ್ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಉತ್ತಮ ಆಟವನ್ನು ಆಡುವುದರ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎದುರಿಸುತ್ತಿದ್ದ ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಕೊರತೆಗೆ ಪೂರ್ಣವಿರಾಮ ಇಟ್ಟಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 22 - October 28 2021, 07:30 PM
ಆಸ್ಟ್ರೇಲಿಯಾ
ಶ್ರೀಲಂಕಾ
Predict Now

For Quick Alerts
ALLOW NOTIFICATIONS
For Daily Alerts
Story first published: Saturday, October 9, 2021, 15:02 [IST]
Other articles published on Oct 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X