ಐಪಿಎಲ್ 2021ರಲ್ಲಿ ಪ್ರಮುಖ ಬದಲಾವಣೆ: ಏಕಕಾಲದಲ್ಲಿ ನಡೆಯಲಿದೆ ಲೀಗ್ ಹಂತದ 2 ಪಂದ್ಯಗಳು!

ಐಪಿಎಲ್ 14ನೇ ಆವೃತ್ತಿ ಈಗ ಯುಎಇನಲ್ಲಿ ಭರ್ಜರಿಯಾಗಿ ಸಾಗುತ್ತಿದೆ. ಸಾಕಷ್ಟು ರೋಚಕ ಪಂದ್ಯಗಳು ಅಭಿಮಾನಿಗಳನ್ನು ರೋಮಾಂಚನಗೊಳಿಸಿದೆ. ಈ ಸಂದರ್ಭದಲ್ಲಿ ಐಪಿಎಲ್ ಆಡಳಿತ ಮಂಡಳಿ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ಒಂದೇ ಸಮಯದಲ್ಲಿ ಎರಡು ಪಂದ್ಯಗಳನ್ನು ನಡೆದುವ ತೀರ್ಮಾನವನ್ನು ತೆಗೆದುಕೊಂಡಿದೆ.

ಈ ಬಾರಿಯ ಐಪಿಎಲ್‌ನ ಲೀಗ್ ಹಂತದ ಕೊನೆಯ ದಿನ ಎರಡು ಪಂದ್ಯಗಳನ್ನು ಒಂದೇ ಸಮಯದಲ್ಲಿ ನಡೆಸಲು ನಿರ್ಧರಿಸಲಾಗಿದೆ. ವೇಳಾಪಟ್ಟಿಯ ಪ್ರಕಾರ ಅಕ್ಟೋಬರ್ 8ರಂದು ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ಮಧ್ಯೆ ಅಬುಧಾಬಿಯಲ್ಲಿ ಮಧ್ಯಾಹ್ನ 3:30ಕ್ಕೆ ಪಂದ್ಯ ಆರಂಭವಾಗಬೇಕಿತ್ತು. ಅದಾದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ 7:30ಕ್ಕೆ ಆರಂಭವಾಗಬೇಕಿತ್ತು. ಆದರೆ ಈ ಎರಡು ಪಂದ್ಯಗಳು ಕೂಡ ಒಂದೇ ಸಮಯದಲ್ಲಿ ಸಂಜೆ 7:30ಕ್ಕೆ ಆರಂಭಿಸಲು ತೀರ್ಮಾನಿಸಲಾಗಿದೆ. ಸೆಪ್ಟೆಂಬರ್ 28ರಂದು ನಡೆದ ಐಪಿಎಲ್ ಆಡಳಿತ ಮಂಡಳಿಯ ಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.

ಐಪಿಎಲ್ 2021: ಮುಂಬೈ ಇಂಡಿಯನ್ಸ್ ಪರ ದಾಖಲೆ ಬರೆದ ಕೃನಾಲ್ ಪಾಂಡ್ಯಐಪಿಎಲ್ 2021: ಮುಂಬೈ ಇಂಡಿಯನ್ಸ್ ಪರ ದಾಖಲೆ ಬರೆದ ಕೃನಾಲ್ ಪಾಂಡ್ಯ

ಈ ಬಗ್ಗೆ ಬಿಸಿಸಿಐ ಮಾಧ್ಯಮ ಪ್ರಕಟಣೆಯನ್ನು ಹೊರಡಿಸಿದ್ದು ಈ ವಿಚಾರವನ್ನು ಅಧಿಕೃತವಾಗಿ ಮಾಹಿತಿ ನೀಡಿದೆ. "ಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ವಿವೋ ಐಪಿಎಲ್ 2021ರ ಪ್ಲೇ ಆಫ್‌ಗೂ ಮುನ್ನ ಲೀಗ್ ಹಂತದ ಕೊನೆಯ ಎರಡು ಪಂದ್ಯಗಳನ್ನು ಏಕಕಾಲದಲ್ಲಿ ನಡೆಸಲಾಗುತ್ತದೆ" ಎಂದು ಬಿಸಿಸಿಐ ತಿಳಿಸಿದೆ.

ಐಪಿಎಲ್ 2021: ಮೊದಲ ವಾರದ ಅತ್ಯುತ್ತಮ ತಂಡ ಪ್ರಕಟ; ಅತ್ಯುತ್ತಮ ನಾಯಕ ಧೋನಿಯಲ್ಲ!ಐಪಿಎಲ್ 2021: ಮೊದಲ ವಾರದ ಅತ್ಯುತ್ತಮ ತಂಡ ಪ್ರಕಟ; ಅತ್ಯುತ್ತಮ ನಾಯಕ ಧೋನಿಯಲ್ಲ!

"ಲೀಗ್ ಹಂತದ ಕೊನೆಯ ದಿನದಂದು(8/10/2021)ರಂದು ಒಂದು ಪಂದ್ಯ ಮರ್ಧಯಾಹ್ನ ಆರಂಭವಾಗಬೇಕಿತ್ತು ಮತ್ತು ಇನ್ನೊಂದು ಪಂದ್ಯ ಸಂಜೆ ಆರಂಭವಾಗಬೇಕಿತ್ತು. ಈಗ ತೆಗೆದುಕೊಂಡಿರುವ ನಿರ್ಧಾರದ ಪ್ರಕಾರ ಈ ಎರಡು ಪಂದ್ಯಗಳು(ಎಸ್‌ಆರ್‌ಹೆಚ್ v ಎಂಐ ಹಾಗೂ ಆರ್‌ಸಿಬಿ v ಡಿಸಿ) ಕೂಡ ಸಂಜೆ 7:30ಕ್ಕೆ ಏಕಕಾಲದಲ್ಲಿ ನಡೆಯಲಿದೆ" ಎಂದು ತಿಳಿಸಿದೆ.

ಐಪಿಎಲ್ 2021: ಎಂಐಯ ಕ್ವಿಂಟನ್ ಡಿ ಕಾಕ್ ಹೆಸರಿಗೆ ವಿಶಿಷ್ಠ ದಾಖಲೆಐಪಿಎಲ್ 2021: ಎಂಐಯ ಕ್ವಿಂಟನ್ ಡಿ ಕಾಕ್ ಹೆಸರಿಗೆ ವಿಶಿಷ್ಠ ದಾಖಲೆ

IPLನಲ್ಲಿ ಉತ್ತಮ ಆಟವಾಡಿ T20 ವಲ್ಡ್ ಕಪ್ ಗೆ ಸ್ಥಾನ ಗಿಟ್ಟಿಸಿಕೊಂಡ ಮೂರು ಆಟಗಾರರು | Oneindia Kannada

ಇನ್ನು ಐಪಿಎಲ್ ಆಡಳಿತ ಮಂಡಳಿ ಈ ನಿರ್ಧಾರವನ್ನು ತೆಗೆದುಕೊಂಡಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ಹೆಚ್ಚಿನ ಪಂದ್ಯಗಳು ಡಬಲ್ ಹೆಡ್ಡರ್ ಆಗಿರುವ ಹಿನ್ನೆಲೆಯಲ್ಲಿ ಅವುಗಳನ್ನು ಏಕಕಾಲದಲ್ಲಿ ನಡೆಸಿದರೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬ ಕಾರಣಕ್ಕಾಗಿ ಪ್ರಯೋಗಾರ್ಥವಾಗಿ ಈ ನಿರ್ಧಾರ ಮಾಡಲಾಗಿದೆ ಎನ್ನಲಾಗುತ್ತಿದೆ. ಐಪಿಎಲ್ ಪ್ರಸಾರಕರಾದ ಸ್ಟಾರ್ ಸ್ಪೋರ್ಟ್ಸ್ ಈ ಬಗ್ಗೆ ಬಿಸಿಸಿಐಗೆ ಮನವಿ ಮಾಡಿದ್ದ ಹಿನ್ನಲೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 14 - October 23 2021, 07:30 PM
ಇಂಗ್ಲೆಂಡ್
ವೆಸ್ಟ್ ಇಂಡೀಸ್
Predict Now

For Quick Alerts
ALLOW NOTIFICATIONS
For Daily Alerts
Story first published: Wednesday, September 29, 2021, 11:29 [IST]
Other articles published on Sep 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X