SRH vs MI Preview: ಹೈದರಾಬಾದ್ vs ಮುಂಬೈ, ಪಿಚ್ ವರದಿ, ಡ್ರೀಮ್ XI ಟಿಪ್ಸ್

ನವದೆಹಲಿ: ಮೇ 4ರ ಮಂಗಳವಾರ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 31ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡಗಳು ಕಾದಾಡಲಿವೆ. ಮುಂಬೈ ತಂಡ ಮತ್ತೆ ಗೆಲುವಿನ ಲಯಕ್ಕೆ ಬಂದಿದ್ದು, ಹೈದರಾಬಾದ್ ತಂಡ ಸೋಲಿನ ಸುಳಿಯಲ್ಲಿದೆ. ಇಂದಿನ ಪಂದ್ಯ ಗೆಲ್ಲಲೇಬೇಕಾದ ಒತ್ತಡದಲ್ಲಿ ಎಸ್‌ಆರ್‌ಎಚ್ ಇದೆ.

ಐಪಿಎಲ್ 2021: ಚೆನ್ನೈ vs ರಾಜಸ್ಥಾನ್ ಪಂದ್ಯ ಕೂಡ ಮುಂದೂಡಿಕೆ?!

ಮುಂಬೈ ಇಂಡಿಯನ್ಸ್ ಆಡಿರುವ 7 ಪಂದ್ಯಗಳಲ್ಲಿ 4ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಸನ್ ರೈಸರ್ಸ್ ಹೈದರಾಬಾದ್ ತಂಡ ಆಡಿರುವ 7 ಪಂದ್ಯಗಳಲ್ಲಿ 6ರಲ್ಲಿ ಸೋತು ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿದೆ. ಎಸ್‌ಆರ್‌ಎಚ್ ನಾಯಕತ್ವದಲ್ಲಿ ಬದಲಾವಣೆಯಾಗಿದೆ. ಡೇವಿಡ್ ವಾರ್ನರ್ ಬದಲು ಕೇನ್ ವಿಲಿಯಮ್ಸನ್ ನಾಯಕತ್ವ ವಹಿಸಿಕೊಂಡಿದ್ದಾರೆ. ಆದರೂ ತಂಡದಲ್ಲಿ ಸುಧಾರಣೆ ಕಾಣಿಸಿಲ್ಲ.

ಪಿಚ್ ಮತ್ತು ಹವಾಮಾನ ವರದಿ

ಪಿಚ್ ಮತ್ತು ಹವಾಮಾನ ವರದಿ

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ ಬ್ಯಾಟಿಂಗ್ ಫ್ರೆಂಡ್ಲಿ ಪಿಚ್. ಬೌಂಡರಿ ಲೈನ್ ಚಿಕ್ಕದಾದ್ದರಿಂದ ಬೌಂಡರಿಗಳು ಬೇಗ ಸಿಗುತ್ತವೆ. ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಪಂದ್ಯ ಹೈ ಸ್ಕೋರಿಂಗ್ ಪಂದ್ಯವೆನಿಸಲಿದೆ. ಪಂದ್ಯ ನಡೆಯುವ ದಿನ ದೆಹಲಿಯಲ್ಲಿ ಬಿಸಿ ಮತ್ತು ತೇವಾಂಶದ ಪ್ರಮಾಣ ಇರಲಿದೆ. ಅಂದು 37 ಡಿಗ್ರೀ ಸೆಲ್ಶಿಯಸ್ ತಾಪಮಾನ ಇರಲಿದೆ.

ಮುಂಬೈ ಸಂಭಾವ್ಯ ತಂಡ

ಮುಂಬೈ ಸಂಭಾವ್ಯ ತಂಡ

ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ (ಸಿ), ಸೂರ್ಯಕುಮಾರ್ ಯಾದವ್, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ಜೇಮ್ಸ್ ನೀಶಮ್, ರಾಹುಲ್ ಚಾಹರ್, ಧವಲ್ ಕುಲಕರ್ಣಿ, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬೂಮ್ರಾ.

ಸನ್ ರೈಸರ್ಸ್ ಸಂಭಾವ್ಯ ತಂಡ

ಸನ್ ರೈಸರ್ಸ್ ಸಂಭಾವ್ಯ ತಂಡ

ಜಾನಿ ಬೈರ್‌ಸ್ಟೋವ್ (ವಿಕೆ), ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್ (ಸಿ), ವಿಜಯ್ ಶಂಕರ್, ಕೇದಾರ್ ಜಾಧವ್, ಜೇಸನ್ ಹೋಲ್ಡರ್, ಅಬ್ದುಲ್ ಸಮದ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ಸಂದೀಪ್ ಶರ್ಮಾ/ಬೆಸಿಲ್ ಥಂಪಿ.

ಡ್ರೀಮ್ 11/ಫ್ಯಾಂಟಸಿ ಟಿಪ್ಸ್

ಡ್ರೀಮ್ 11/ಫ್ಯಾಂಟಸಿ ಟಿಪ್ಸ್

* ಬ್ಯಾಟ್ಸ್‌ಮನ್‌: ಜಾನಿ ಬೈರ್‌ಸ್ಟೋವ್ (ನಾಯಕ), ಕ್ವಿಂಟನ್ ಡಿ ಕಾಕ್, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ (ಉಪನಾಯಕ), ಕೇನ್ ವಿಲಿಯಮ್ಸನ್

* ಆಲ್ ರೌಂಡರ್: ಕೃನಾಲ್ ಪಾಂಡ್ಯ, ಮೊಹಮ್ಮದ್ ನಬಿ.

* ಬೌಲರ್: ರಶೀದ್ ಖಾನ್, ರಾಹುಲ್ ಚಾಹರ್, ಜಸ್ಪ್ರೀತ್ ಬೂಮ್ರಾ ಮತ್ತು ಖಲೀಲ್ ಅಹ್ಮದ್.

For Quick Alerts
ALLOW NOTIFICATIONS
For Daily Alerts
Story first published: Tuesday, May 4, 2021, 11:08 [IST]
Other articles published on May 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X