ಡೆಲ್ಲಿ ವಿರುದ್ಧ ಕಣಕ್ಕಿಳಿಯಲಿದೆ ಈ ಬಲಿಷ್ಠ ಆರ್‌ಸಿಬಿ ತಂಡ; ಪಂದ್ಯದ ನಂತರ ಆರ್‌ಸಿಬಿಗೆ ಯಾವ ಸ್ಥಾನ ಸಿಗಲಿದೆ?

ಭಾರತದಲ್ಲಿ ಆರಂಭವಾಗಿದ್ದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೊರೋನಾವೈರಸ್ ಕಾರಣದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡು ಮುಂದೂಡಲ್ಪಟ್ಟಿತ್ತು. ಹೀಗೆ ಮುಂದೂಡಲ್ಪಟ್ಟಿದ್ದ ಈ ಬಾರಿಯ ಐಪಿಎಲ್ ಟೂರ್ನಿ ಸದ್ಯ ಯುಎಇಯಲ್ಲಿ ಮುಂದುವರಿದಿದ್ದು ಯಾವುದೇ ಅಡಚಣೆಗಳಿಲ್ಲದೆ ಟೂರ್ನಿಯ ಎಲ್ಲಾ ಲೀಗ್ ಹಂತದ ಪಂದ್ಯಗಳು ಇಂದಿಗೆ ( ಅಕ್ಟೋಬರ್ 8 ) ಮುಕ್ತಾಯಗೊಳ್ಳಲಿವೆ.

ಧೋನಿ, ಜಡೇಜಾ, ರೈನಾ, ಬ್ರಾವೋ ಅಲ್ಲ; ಈತ ಸಿಎಸ್‌ಕೆ ತಂಡದ ಅತ್ಯುತ್ತಮ ಆಟಗಾರ ಎಂದ ಗಂಭೀರ್!ಧೋನಿ, ಜಡೇಜಾ, ರೈನಾ, ಬ್ರಾವೋ ಅಲ್ಲ; ಈತ ಸಿಎಸ್‌ಕೆ ತಂಡದ ಅತ್ಯುತ್ತಮ ಆಟಗಾರ ಎಂದ ಗಂಭೀರ್!

ಹೌದು, ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತವು ಅಕ್ಟೋಬರ್ 8ರ ಶುಕ್ರವಾರದಂದು ಕೊನೆಗೊಳ್ಳಲಿದ್ದು, ಈ ದಿನದಂದು ಐಪಿಎಲ್ ಇತಿಹಾಸದಲ್ಲಿಯೇ ನಡೆಯದ ರೀತಿ ಏಕಕಾಲಕ್ಕೆ ಎರಡು ಪಂದ್ಯಗಳು ನಡೆಯಲಿವೆ. ಸಂಜೆ 7.30ಕ್ಕೆ ಅಬುಧಾಬಿಯ ಶೈಖ್ ಜಾಯೆದ್ ಕ್ರೀಡಾಂಗಣದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಡಲಿವೆ ಮತ್ತು ಅದೇ ಸಮಯಕ್ಕೆ ದುಬೈ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಅಂತಿಮ ಓವರ್‌ನಲ್ಲಿ ಎಬಿಡಿ ರನ್ ಗಳಿಸಲು ಪರದಾಡುವ ರೀತಿ ತಾನು ಮಾಡಿದ ಪ್ಲಾನ್ ಬಹಿರಂಗಪಡಿಸಿದ ಭುವಿಅಂತಿಮ ಓವರ್‌ನಲ್ಲಿ ಎಬಿಡಿ ರನ್ ಗಳಿಸಲು ಪರದಾಡುವ ರೀತಿ ತಾನು ಮಾಡಿದ ಪ್ಲಾನ್ ಬಹಿರಂಗಪಡಿಸಿದ ಭುವಿ

ಟೂರ್ನಿಯಲ್ಲಿ ಈಗಾಗಲೇ ಪ್ಲೇ ಆಫ್ ಹಂತವನ್ನು ಪ್ರವೇಶಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ದುಬೈ ಕ್ರೀಡಾಂಗಣದಲ್ಲಿ ಸೆಣಸಾಟ ನಡೆಸಲಿದ್ದು, ಈ ಪಂದ್ಯದ ಕುರಿತಾದ ವಿವರ, ಪಿಚ್ ರಿಪೋರ್ಟ್, ನೇರಪ್ರಸಾರ, ಸಂಭಾವ್ಯ ಆಡುವ ಬಳಗಗಳ ಮಾಹಿತಿ ಹಾಗೂ ಪಂದ್ಯ ಮುಗಿದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯಾವ ಸ್ಥಾನವನ್ನು ಪಡೆದುಕೊಳ್ಳಲಿದೆ ಎನ್ನುವುದರ ಮಾಹಿತಿ ಈ ಕೆಳಕಂಡಂತಿದೆ ನೋಡಿ.

ಪಂದ್ಯದ ವಿವರ, ಪಿಚ್ ರಿಪೋರ್ಟ್ ಮತ್ತು ನೇರ ಪ್ರಸಾರದ ಮಾಹಿತಿ

ಪಂದ್ಯದ ವಿವರ, ಪಿಚ್ ರಿಪೋರ್ಟ್ ಮತ್ತು ನೇರ ಪ್ರಸಾರದ ಮಾಹಿತಿ

ಪಂದ್ಯದ ವಿವರ:

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಈ ಪಂದ್ಯ ಟೂರ್ನಿಯ 56ನೇ ಮತ್ತು ಲೀಗ್ ಹಂತದ ಅಂತಿಮ ಪಂದ್ಯವಾಗಿದೆ. ಈ ಪಂದ್ಯ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅಕ್ಟೋಬರ್ 8ರ ಶುಕ್ರವಾರದಂದು ಸಂಜೆ 7.30ಕ್ಕೆ ಆರಂಭವಾಗಲಿದೆ.

ಪಿಚ್ ರಿಪೋರ್ಟ್:

ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ಪಿಚ್‌ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ಸಹಕಾರಿ ಎಂದೇ ಹೇಳಬಹುದು. ಆದರೆ ಇತ್ತೀಚಿನ ಪಂದ್ಯಗಳಲ್ಲಿ ಈ ಪಿಚ್ ವೇಗಿಗಳು ಮತ್ತು ಸ್ಪಿನ್ನರ್ ಬೌಲರ್‌ಗಳಿಗೂ ಸಹಕರಿಸುತ್ತಿದ್ದು ಎರಡೂ ವಿಭಾಗದ ಆಟಗಾರರೂ ಸಹ ಉತ್ತಮ ಪ್ರದರ್ಶನ ನೀಡುವಂತಹ ಪಿಚ್ ಆಗಿದೆ. ಈ ಪಿಚ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡುವ ತಂಡ ಗಳಿಸಬಹುದಾದ ಸರಾಸರಿ ಸಾಮಾನ್ಯ ಮೊತ್ತ 146 ರನ್‌ಗಳಾಗಿವೆ. ಹಾಗೂ ಈ ಪಿಚ್‌ನಲ್ಲಿ ರನ್ ಚೇಸ್ ಮಾಡುವ ತಂಡಗಳೇ ಅನೇಕ ಬಾರಿ ಗೆದ್ದಿದ್ದು, ಗುರಿಯನ್ನು ಬೆನ್ನತ್ತಿರುವ ತಂಡಗಳು ಶೇ.80ರಷ್ಟು ಪಂದ್ಯಗಳನ್ನು ಗೆದ್ದುಕೊಂಡಿವೆ.

ನೇರಪ್ರಸಾರ:

ಈ ಪಂದ್ಯ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ನೇರ ಪ್ರಸಾರವಾಗಲಿದ್ದು, ಸೋನಿ ಲಿವ್ ಅಪ್ಲಿಕೇಶನ್‌ನಲ್ಲಿಯೂ ಪಂದ್ಯದ ಲೈವ್ ವೀಕ್ಷಿಸಬಹುದಾಗಿದೆ. ಜೊತೆಗೆ ನಮ್ಮ ಮೈಖೇಲ್ ಕನ್ನಡ ವೆಬ್‌ಸೈಟ್‌ನಲ್ಲಿಯೂ ಪಂದ್ಯದ ಲೈವ್ ಸ್ಕೋರ್ ಅಪ್ ಡೇಟ್ ಇರಲಿದ್ದು ಲೈವ್ ಸ್ಕೋರ್ ತಿಳಿಯಲು ನೀವು ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಕಣಕ್ಕಿಳಿಯಲಿರುವ ಬಲಿಷ್ಠ ಸಂಭಾವ್ಯ ತಂಡಗಳು

ಕಣಕ್ಕಿಳಿಯಲಿರುವ ಬಲಿಷ್ಠ ಸಂಭಾವ್ಯ ತಂಡಗಳು

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಶ್ರೀಕರ್ ಭರತ್, ಎಬಿ ಡಿವಿಲಿಯರ್ಸ್, ಗ್ಲೆನ್ ಮ್ಯಾಕ್ಸ್‌ವೆಲ್, ಡೇನಿಯಲ್ ಕ್ರಿಶ್ಚಿಯನ್, ಶಹಬಾಜ್ ಅಹ್ಮದ್, ಜಾರ್ಜ್ ಗಾರ್ಟನ್, ಹರ್ಷಲ್ ಪಟೇಲ್ ಯುಜುವೇಂದ್ರ ಚಹಾಲ್ ಮತ್ತು ಮೊಹಮ್ಮದ್ ಸಿರಾಜ್.

ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ತಂಡ: ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಐಯ್ಯರ್, ರಿಪಾಲ್ ಪಟೇಲ್, ರಿಷಭ್ ಪಂತ್ (ವಿಕೆಟ್ ಕೀಪರ್ / ನಾಯಕ ), ಶಿಮ್ರಾನ್ ಹೆಟ್ಮೇರ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡಾ, ಅವೇಶ್ ಖಾನ್, ಅನ್ರಿಚ್ ನಾರ್ಕಿಯಾ

ಇವತ್ತು RCB ಮೇಲಿರೋ ಜವಾಬ್ದಾರಿಯ ಕಂಪ್ಲೀಟ್ ಡೀಟೇಲ್ಸ್ | Oneindia Kannada
ಪಂದ್ಯ ಮುಗಿದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯಾವ ಸ್ಥಾನ ಪಡೆದುಕೊಳ್ಳಲಿದೆ?

ಪಂದ್ಯ ಮುಗಿದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯಾವ ಸ್ಥಾನ ಪಡೆದುಕೊಳ್ಳಲಿದೆ?

ಸದ್ಯ ಅಂಕಪಟ್ಟಿಯಲ್ಲಿ ತೃತೀಯ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ದ್ವಿತೀಯ ಸ್ಥಾನಕ್ಕೆ ಏರಬೇಕೆಂದರೆ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಬರೋಬ್ಬರಿ 163 ರನ್‌ಗಳ ಅಂತರದಿಂದ ಗೆಲ್ಲಲೇಬೇಕಾಗಿದೆ. ಇಷ್ಟು ದೊಡ್ಡ ಮಟ್ಟದ ಅಂತರದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲ್ಲುವುದು ಅಸಾಧ್ಯವಾದ ಮಾತು. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದರೂ ಅಥವಾ ಸೋತರೂ ತೃತೀಯ ಸ್ಥಾನದಲ್ಲಿಯೇ ಉಳಿಯಲಿದ್ದು, ಅಕ್ಟೋಬರ್ 11ರ ಸೋಮವಾರದಂದು ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಸೆಣಸಾಟ ನಡೆಸಲಿದೆ.

For Quick Alerts
ALLOW NOTIFICATIONS
For Daily Alerts
Story first published: Friday, October 8, 2021, 11:39 [IST]
Other articles published on Oct 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X