ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ನೋಡಿ ರೋಹಿತ್ ನಾಯಕತ್ವ ಕಲಿಯಲಿ ಎಂದು ಕಿಡಿಕಾರಿದ ಮುಂಬೈ ಫ್ಯಾನ್ಸ್!

 IPL 2021 : MI fans slam Rohit Sharma for dropping Ishan Kishan

ಸಾಮಾಜಿಕ ಜಾಲತಾಣದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ವಿರುದ್ಧ ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳೇ ತಿರುಗಿಬಿದ್ದಿದ್ದಾರೆ. ಅರೇ ಮುಂಬೈ ಇಂಡಿಯನ್ಸ್ ತಂಡದ ಪರ 5 ಐಪಿಎಲ್ ಟ್ರೋಫಿಗಳನ್ನು ನಾಯಕನಾಗಿ ಗೆಲ್ಲಿಸಿಕೊಟ್ಟಿರುವ ರೋಹಿತ್ ಶರ್ಮಾ ವಿರುದ್ಧ ಇದ್ದಕ್ಕಿದ್ದ ಹಾಗೆ ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳು ತಿರುಗಿಬಿದ್ದಿರುವುದೇಕೆ ಎಂದು ಆಶ್ಚರ್ಯವಾಗುತ್ತಿದೆಯಾ? ಹೌದು ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳು ರೋಹಿತ್ ಶರ್ಮಾ ವಿರುದ್ಧ ತಿರುಗಿ ಬೀಳುವುದಕ್ಕೆ ಪ್ರಮುಖ ಕಾರಣವಿದೆ. ಆ ಒಂದು ಕಾರಣ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಟಗಾರ, ಬೆಳೆಯುತ್ತಿರುವ ಪ್ರತಿಭೆ ಇಶಾನ್ ಕಿಶನ್.

ಇಶಾನ್ ಕಿಶನ್ ಕಳೆದ ಐಪಿಎಲ್ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಅತಿ ಹೆಚ್ಚು ರನ್ (516) ಗಳಿಸಿದ್ದ ಆಟಗಾರ. ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ 5 ಪಂದ್ಯಗಳನ್ನಾಡಿ 73 ರನ್ ಗಳಿಸಿರುವ ಇಶಾನ್ ಕಿಶನ್ ಕೊಂಚ ಮಂಕಾಗಿದ್ದಾರೆ. ಟೂರ್ನಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡದ ಕಾರಣ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯಕ್ಕೆ ಇಶಾನ್ ಕಿಶನ್ ಅವರನ್ನು ಮುಂಬೈ ತಂಡದಿಂದ ಕೈಬಿಡಲಾಗಿದೆ. ಇಶಾನ್ ಕಿಶನ್ ಬದಲಿಗೆ ಕೌಲ್ಟರ್ ನೈಲ್ ಅವರನ್ನು ಮುಂಬೈ ಇಂಡಿಯನ್ಸ್ ಆಡುವ ಬಳಗಕ್ಕೆ ಸೇರಿಸಿಕೊಳ್ಳಲಾಗಿದೆ. ಮುಂಬೈ ಇಂಡಿಯನ್ಸ್ ತಂಡದ ಈ ನಡೆಯಿಂದ ಬೇಸತ್ತ ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ರೋಹಿತ್ ಶರ್ಮಾ ಅವರ ನಾಯಕತ್ವವನ್ನು ಟ್ರೋಲ್ ಮಾಡಿದ್ದಾರೆ.

ಕೇವಲ ಒಂದೆರಡು ಇನ್ನಿಂಗ್ಸ್‌ನಲ್ಲಿ ಕಳಪೆ ಪ್ರದರ್ಶನ ತೋರಿದ ಮಾತ್ರಕ್ಕೆ ಕಳೆದ ಬಾರಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರನನ್ನು ತಂಡದಿಂದ ಕೈ ಬಿಡುವುದು ಎಷ್ಟು ಸರಿ ಎಂದು ರೋಹಿತ್ ಶರ್ಮಾ ಅವರನ್ನು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ದೇವದತ್ ಪಡಿಕ್ಕಲ್ ಕೆಲ ಇನ್ನಿಂಗ್ಸ್‌ನಲ್ಲಿ ಕಳಪೆ ಪ್ರದರ್ಶನ ತೋರಿದಾಗ ವಿರಾಟ್ ಕೊಹ್ಲಿ ಇದೇ ರೀತಿ ನಡೆದುಕೊಂಡ್ರಾ? ಯುವ ಆಟಗಾರನಿಗೆ ಬೆನ್ನುತಟ್ಟಿ ಪದೇಪದೆ ಅವಕಾಶ ಕೊಟ್ಟು ದೇವದತ್ ಪಡಿಕ್ಕಲ್ ಬೆನ್ನಿಗೆ ವಿರಾಟ್ ಕೊಹ್ಲಿ ನಿಂತಿದ್ದಾರೆ. ಆದರೆ ರೋಹಿತ್ ಶರ್ಮಾ ಕೆಲ ಇನ್ನಿಂಗ್ಸ್‌ನಲ್ಲಿ ಕಳಪೆ ಪ್ರದರ್ಶನ ತೋರಿದ ಇಶಾನ್ ಕಿಶನ್ ಅವರನ್ನು ತಂಡದಿಂದ ಕೈ ಬಿಟ್ಟಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವವನ್ನು ನೋಡಿ ರೋಹಿತ್ ಶರ್ಮಾ ಕಲಿಯಬೇಕಾದದ್ದು ಸಾಕಷ್ಟಿದೆ ಎಂದು ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳು ಕಾಲೆಳೆದಿದ್ದಾರೆ. ಅಷ್ಟೇ ಅಲ್ಲದೆ ಇಂಗ್ಲೆಂಡ್ ವಿರುದ್ಧದ ಮೂರನೇ ಟಿ ಟ್ವೆಂಟಿ ಪಂದ್ಯದಲ್ಲಿ ಇಶಾನ್ ಕಿಶನ್ ಉತ್ತಮ ಆಟ ಆಡಲೆಂದು ವಿರಾಟ್ ಕೊಹ್ಲಿ ತನ್ನ ನೆಚ್ಚಿನ ಮೂರನೇ ಕ್ರಮಾಂಕವನ್ನು ಬಿಟ್ಟುಕೊಟ್ಟಿದ್ದರು. ಯುವ ಆಟಗಾರರನ್ನು ವಿರಾಟ್ ಕೊಹ್ಲಿ ಬೆಂಬಲಿಸುವಷ್ಟು ರೋಹಿತ್ ಶರ್ಮಾ ಬೆಂಬಲಿಸುವುದಿಲ್ಲ ಎಂದು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಡುವೆ ಹೋಲಿಕೆಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ರೋಹಿತ್ ಶರ್ಮಾ ಅವರ ಕಾಲೆಳೆಯಲಾಗುತ್ತಿದೆ.

Story first published: Thursday, April 29, 2021, 18:20 [IST]
Other articles published on Apr 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X