ಐಪಿಎಲ್ 2021: ಟೂರ್ನಿಯಲ್ಲಿ 4ನೇ ಸೋಲಿನ ನಂತರ ಕೆಎಲ್ ರಾಹುಲ್ ಬೇಸರದ ಪ್ರತಿಕ್ರಿಯೆ

ಐಪಿಎಲ್ 14ನೇ ಆವೃತ್ತಿಯಲ್ಲಿಯೂ ಪಂಜಾಬ್ ಕಿಂಗ್ಸ್ ನೀರಸ ಆರಂಭವನ್ನು ಪಡೆದುಕೊಂಡಿದೆ. ಆಡಿದ ಆರು ಪಂದ್ಯಗಳಲ್ಲಿ ಕೆಎಲ್ ರಾಹುಲ್ ಬಳಗ ನಾಲ್ಕನೇ ಸೋಲು ಕಂಡಿದೆ. ಇದು ಪಂಜಾಬ್ ಕಿಂಗ್ಸ್ ನಾಯಕ ಕೆಎಲ್ ರಾಹುಲ್ ಅವರನ್ನು ಕಂಗೆಡಿಸಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ಸೋಲು ಕಂಡ ಬಳಿಕ ಕೆಎಲ್ ರಾಹುಲ್ ಹತಾಶೆಯಿಂದ ಪ್ರತಿಕ್ರಿಯಿಸಿದ್ದಾರೆ.

"ಈ ಸೋಲಿಗೆ ಯಾವ ರೀತಿ ಪ್ರತಿಕ್ರಿಯಿಸಬೇಕೋ ತಿಳಿಯುತ್ತಿಲ್ಲ. ಇದು ನಮ್ಮ ಕೆಟ್ಟ ಪ್ರದರ್ಶನವಾಗಿದೆ. ಹೊಸ ಪಿಚ್‌ನಲ್ಲಿ ನಾವು ಉತ್ತಮ ರೀತಿಯಲ್ಲಿ ಹೊಂದಿಕೊಳ್ಳಬೇಕಿತ್ತು. ಬ್ಯಾಟಂಗ್‌ನಲ್ಲಿ ಇನ್ನಷ್ಟು ಉತ್ತಮ ಪ್ರದರ್ಶನ ನೀಡಿ 20-30 ಹೆಚ್ಚುವರಿ ರನ್‌ಗಳನ್ನು ಗಳಿಸಬೇಕಿತ್ತು. ಈ ಪಿಚ್ ಕೆಳಮಟ್ಟದಲ್ಲಿ ಮತ್ತು ನಿಧಾನಗತಿಯಲ್ಲಿ ಬರುತ್ತಿತ್ತು. ಆದರೆ 120-130 ರನ್‌ಗಳು ಸಾಕಾಗುವುದಿಲ್ಲ"

ಐಪಿಎಲ್ 2021: ಕೋಲ್ಕತ್ತಾ vs ಪಂಜಾಬ್ ಪಂದ್ಯದ ಹೈಲೈಟ್ಸ್

"ಅನವಶ್ಯಕವಾಗಿ ಕೆಲ ವಿಕೆಟ್‌ಗಳನ್ನು ನಾವು ಕಳೆದುಕೊಂಡೆವು. ಇದು ನಮ್ಮ ಆಟಕ್ಕೆ ಹಾನಿಯುಂಟು ಮಾಡಿತು. ಈ ಪಿಚ್‌ನಲ್ಲಿ ಮೊದಲ ಆರು ಓವರ್‌ಗಳಲ್ಲಿ ಉತ್ತಮ ಹೊಡೆತಗಳನ್ನು ಅರ್ಥೈಸಿಕೊಳ್ಳುವುದು ಕಠಿಣವಾಗಿತ್ತು. ಹೊಸ ತಾಣದಲ್ಲಿ ಪಿಚ್ ಅರ್ಥ ಮಾಡಿಕೊಳ್ಳುವುದು ಸಮಯ ತೆಗೆದುಕೊಳ್ಳುತ್ತದೆ ಎಂಬುದು ನಿರೀಕ್ಷಿತ. ಆದರೆ ನಾವು ಸಾಧ್ಯವಾದಷ್ಟು ವೇಗವಾಗಿ ಪಿಚ್‌ಅನ್ನು ಅರಿತುಕೊಳ್ಳಬೇಕಾಗಿತ್ತು" ಎಂದು ಕೆಎಲ್ ರಾಹುಲ್ ಪ್ರತಿಕ್ರಿಯಿಸಿದ್ದಾರೆ.

ಐಪಿಎಲ್ 2021: ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಡೆಲ್ಲಿ ಕ್ಯಾಪಿಟಲ್ಸ್ ಸವಾಲು

ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ನಡೆಸಿದ ಕೆಎಲ್ ರಾಹುಲ್ ಬಳಗ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 123 ರನ್‌ಗಳಿಸಲಷ್ಟೇ ಶಕ್ತವಾಯಿತು. ಇದನ್ನು ಬೆನ್ನಟ್ಟಿದ ಕೊಲ್ಕತ್ತಾ ನೈಟ್ ರೈಡರ್ಸ್ 16.4 ಓವರ್‌ಗಳಲ್ಲಿ ಈ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾಯಿತು.

ಈ ಗೆಲುವಿನ ಮೂಲಕ ಕೆಕೆಆರ್ ಸತತ ಸೋಲುಗಳ ಸರಪಳಿಯನ್ನು ತುಂಡರಿಸಿದೆ. ಅಂಕಪಟ್ಟಿಯಲ್ಲಿ ಇಯಾನ್ ಮಾರ್ಗನ್ ಬಳಗ ಈಗ ಐದನೇ ಸ್ಥಾನವನ್ನು ಪಡೆದುಕೊಂಡಿದೆ.

For Quick Alerts
ALLOW NOTIFICATIONS
For Daily Alerts
Story first published: Tuesday, April 27, 2021, 9:32 [IST]
Other articles published on Apr 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X