ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈತನಂತಾ ಆಟಗಾರನನ್ನು ನನ್ನ ತಂಡದಲ್ಲಿ ಇಟ್ಟುಕೊಳ್ಳಲ್ಲ: ಭಾರತದ ಸ್ಟಾರ್ ಕ್ರಿಕೆಟಿಗನ ಬಗ್ಗೆ ಮಂಜ್ರೇಜರ್ ಹೇಳಿಕೆ

IPL 2021: Sanjay Manjrekar criticized R Ashwin said I would never have somebody like Him

ಭಾರತದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಸದಾ ಒಂದಿಲ್ಲೊಂದು ಹೇಳಿಕೆಯ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ವಿಮರ್ಶೆಯ ಹೆಸರಿನಲ್ಲಿ ಆಟಗಾರರ ವಿರುದ್ಧ ಕಟುವಾದ ಮಾತುಗಳಿಂದ ಟೀಕೆ ಮಾಡುವುದು ಸಂಜಯ್ ಮಂಜ್ರೇಕರ್‌ಗೆ ಅಭ್ಯಾಸವಾಗಿದೆ. ಇಂಥಾ ಹೇಳಿಕೆಗಳ ಕಾರಣದಿಂದಾಲೇ ಸದಾ ವಿವಾದದ ಕೇಂದ್ರವಾಗಿದ್ದಾರೆ ಸಂಜಯ್ ಮಂಜ್ರೇಕರ್. ಇದೀಗ ಟೀಮ್ ಇಂಡಿಯಾದ ಅನುಭವಿ ಆಟಗಾರನ ಬಗ್ಗೆ ಕಟು ಮಾತುಗಳಿಂದ ಟೀಕೆಯನ್ನು ಮಾಡಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಈತನೇ ಟೀಮ್ ಇಂಡಿಯಾಗೆ ಆಧಾರ: ಕನ್ನಡಿಗನ ಬಗ್ಗೆ ಬ್ರೇಟ್ ಲೀಗೆ ಭರವಸೆಟಿ20 ವಿಶ್ವಕಪ್‌ನಲ್ಲಿ ಈತನೇ ಟೀಮ್ ಇಂಡಿಯಾಗೆ ಆಧಾರ: ಕನ್ನಡಿಗನ ಬಗ್ಗೆ ಬ್ರೇಟ್ ಲೀಗೆ ಭರವಸೆ

ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಈ ಬಾರಿ ಟೀಕಾಪ್ರಹಾರವನ್ನು ನಡೆಸಿರುವುದು ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ವಿರುದ್ಧ. ಸಂಜಯ್ ಮಂಜ್ರೇಕರ್ ಇಲ್ಲಿ ಆರ್ ಅಶ್ವಿನ್ ಅವರ ಟಿ20 ಬೌಲಿಂಗ್ ಕೌಶಲ್ಯದ ಬಗ್ಗೆ ಜನರು ಅತಿಯಾಗಿ ವಿಶ್ವಾಸವಿಟ್ಟುಕೊಂಡಿದ್ದಾರೆ ಎಂಬ ಅಭಿಪ್ರಾಯಪಟ್ಟಿದ್ದಾರೆ. ಆದರೆ ವರುಣ್ ಚಕ್ರವರ್ತಿ, ಸುನಿಲ್ ನರೈನ್ ಅವರಂತಾ ಆಟಗಾರರ ಮಧ್ಯೆ ಆರ್ ಅಶ್ವಿನ್ ಅವರಂತಾ ಆಟಗಾರನನ್ನು ನನ್ನ ಟಿ20 ತಂಡದಲ್ಲಿ ಸೇರಸಿಕೊಳ್ಳಲು ಬಯಸುವುದಿಲ್ಲ ಎಂದಿದ್ದಾರೆ.

ಐಪಿಎಲ್ 2021: ಕೆಕೆಆರ್‌ ಬ್ಯಾಟ್ಸ್‌ಮನ್‌ ದಿನೇಶ್ ಕಾರ್ತಿಕ್‌ಗೆ ದಂಡಐಪಿಎಲ್ 2021: ಕೆಕೆಆರ್‌ ಬ್ಯಾಟ್ಸ್‌ಮನ್‌ ದಿನೇಶ್ ಕಾರ್ತಿಕ್‌ಗೆ ದಂಡ

ಐಪಿಎಲ್‌ನ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 7 ವಿಕೆಟ್‌ಗಳ ಅಂತರದಿಂದ ಶರಣಾಯಿತು. ಈ ಪಂದ್ಯದ ಬಳಿಕ ಸಂಜಯ್ ಮಂಜೇಕರ್ ಆರ್ ಅಶ್ವಿನ್ ವಿರುದ್ಧ ಈ ರೀತಿಯ ಟೀಕೆ ಮಾಡಿದ್ದಾರೆ. ಈ ಪಂದ್ಯದಲ್ಲಿ ಆರಂಭದಲ್ಲಿಯೇ ಬೌಲಿಂಗ್ ದಾಳಿ ನಡೆಸಿದ ಆರ್ ಅಶ್ವಿನ್ ಮೊದಲ ಮೂರು ಓವರ್‌ಗಳಲ್ಲಿ ಅದ್ಭುತವಾದ ಬೌಲಿಂಗ್ ಪ್ರದರ್ಶನ ನಿಡಿದ್ದರು. ಗೆಲುವಿಗೆ ನಿರ್ಣಾಯಕವಾಗಿದ್ದ 20ನೇ ಓವರ್‌ನಲ್ಲಿಯೂ ಆರ್ಅಶ್ವಿನ್ 2 ವಿಕೆಟ್ ಕಿತ್ತು ಕೆಕೆಆರ್ ತಂಡಕ್ಕೆ ಆಘಾತ ಮೂಡಿಸಿದ್ದರು. ಆದರೆ ಐದನೇ ಎಸೆತದಲ್ಲಿ ಅಗತ್ಯವಿದ್ದು 6 ರನ್‌ಗಳನ್ನು ಸಿಕ್ಸರ್ ಬಾರಿಸುವ ಮೂಲಕ ಕೆಕೆಆರ್ ತಂಡವನ್ನು ರಾಹುಲ್ ತ್ರಿಪಾಠಿ ಗೆಲ್ಲಿಸಿದರು. ಈ ಮೂಲಕ ಡೆಲ್ಲಿ ತಂಡ ಫೈನಲ್‌ಗೇರುವ ಅವಕಾಶವನ್ನು ಕಳೆದುಕೊಂಡಿತು.

ಐಪಿಎಲ್‌ 2021: ಕೆಟ್ಟ ದಾಖಲೆ ನಿರ್ಮಿಸಿದ ಡೆಲ್ಲಿ ಕ್ಯಾಪಿಟಲ್ಸ್ಐಪಿಎಲ್‌ 2021: ಕೆಟ್ಟ ದಾಖಲೆ ನಿರ್ಮಿಸಿದ ಡೆಲ್ಲಿ ಕ್ಯಾಪಿಟಲ್ಸ್

ಪಂದ್ಯದ ಬಳಿಕ ಸ್ಟಾರ್ ಸ್ಪೋರ್ಟ್ಸ್ ಜೊತೆಗೆ ಮಾತನಾಡಿದ ಮಂಜ್ರೇಕರ್ "ನಾವು ಆರ್ ಅಶ್ವಿನ್ ವಿಚಾರವಾಗಿ ಮಾತನಾಡುತ್ತಾ ಬಹಳ ಕಾಲವನ್ನು ವ್ಯರ್ಥ ಮಾಡುತ್ತಿದ್ದೇವೆ. ಟಿ20 ಬೌಲರ್ ಆಗಿ ಆರ್ ಅಶ್ವಿನ್ ಯಾವ ತಂಡಕ್ಕೆ ಹೆಚ್ಚಿನ ಬಲ ತಂದುಕೊಡಲಾರರು. ಆರ್ ಅಶ್ವಿನ್ ಪರಿಸ್ಥಿತಿಯನ್ನು ಬದಲಾಯಿಸುತ್ತಾರೆ ಎಂದು ನೀವು ನಂಬುವಿರಾದರೆ ಅದು ಸಾಧ್ಯವಾಗುತ್ತದೆ ಎಂದು ನನಗೆ ಅನಿಸುವುದಿಲ್ಲ. ಕಳೆದ ಆರೇಳು ವರ್ಷಗಳಿಂದ ಅವರು ಇದೇ ರೀತಿಯಿದ್ದಾರೆ" ಎಂದು ಆಕಾಶ್ ಚೋಪ್ರ ಆರ್ ಅಶ್ವಿನ್ ಪ್ರದರ್ಶನದ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.

ಟಿ20 ವಿಶ್ವಕಪ್‌ ಇತಿಹಾಸದಲ್ಲಿ 6 ಮರೆಯಲಾಗದ ಘಟನೆಗಳಿವು!ಟಿ20 ವಿಶ್ವಕಪ್‌ ಇತಿಹಾಸದಲ್ಲಿ 6 ಮರೆಯಲಾಗದ ಘಟನೆಗಳಿವು!

ಆರ್ ಅಶ್ವಿನ್ ವಿಕೆಟ್ ಪಡೆಯುವ ಬೌಲರ್ ಅಲ್ಲ: ಮುಂದುವರಿದು ಸಂಜಯ್ ಮಂಜ್ರೇಕರ್ "ಸುದೀರ್ಘ ಕಾಲವನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡಿದರೆ ಆರ್ ಅಶ್ವಿನ್ ಟಿ20 ಕ್ರಿಕೆಟ್‌ನಲ್ಲಿ ವಿಕೆಟ್ ಪಡೆಯುವಂತಾ ಬೌಲರ್ ಅಲ್ಲ. ಕೆಳ ಕ್ರಮಾಂಕದಲ್ಲಿ ರನ್‌ಗಳಿಸದ ಹೊರತಾಗಿ ಆರ್ ಅಶ್ವಿನ್ ಅವರನ್ನು ಯಾವುದೇ ಫ್ರಾಂಚೈಸಿಗಳು ಪಡೆಯಲು ಬಯಸುತ್ತಾರೆ ಎನಿಸುತ್ತಿಲ್ಲ" ಎಂದು ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.

ಕ್ವಾಲಿಫೈಯರ್ 2 ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್, ಪೃಥ್ವಿ ಶಾ 18, ಶಿಖರ್ ಧವನ್ 36, ಶ್ರೇಯಸ್ ಅಯ್ಯರ್ 30, ರಿಷಭ್ ಪಂತ್ 6, ಮಾರ್ಕಸ್ ಸ್ಟೋಯಿನಿಸ್ 18, ಶಿಮ್ರಾನ್ ಹೆಟ್ಮೈರ್ 17, ಅಕ್ಸರ್ ಪಟೇಲ್ 4 ರನ್‌ನೊಂದಿಗೆ 20 ಓವರ್‌ಗೆ 5 ವಿಕೆಟ್ ಕಳೆದು 135 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್, ಶುಬ್ಮನ್ ಗಿಲ್ 46, ವೆಂಕಟೇಶ್ ಅಯ್ಯರ್ 55, ರಾಹುಲ್ ತ್ರಿಪಾಠಿ 12, ನಿತೀಶ್ ರಾಣಾ 13 ರನ್‌ನೊಂದಿಗೆ 19.5 ಓವರ್‌ಗೆ 7 ವಿಕೆಟ್ ಕಳೆದು 136 ರನ್ ಗಳಿಸಿ ರೋಚಕ ಗೆಲುವು ಸಾಧಿಸಿತು. ಈ ಮೂಲಕ ಮೂರನೇ ಟ್ರೋಫಿಯನ್ನು ಮುಡಿಗೇರಸಿಕೊಳ್ಳಲು ಕೆಕೆಆರ್‌ಗೆ ಒಂದು ಗೆಲುವಿನ ಅಗತ್ಯವಿದೆ.

Story first published: Thursday, October 14, 2021, 17:45 [IST]
Other articles published on Oct 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X