ಐಪಿಎಲ್: ಆಡಿದ ಮೊದಲ ಪಂದ್ಯದಲ್ಲಿಯೇ ದಾಖಲೆ ಬರೆದ ಸನ್ ರೈಸರ್ಸ್ ಹೈದರಾಬಾದ್‌ನ ಉಮ್ರಾನ್ ಮಲಿಕ್

ಭಾನುವಾರ ( ಅಕ್ಟೋಬರ್ 3 ) ನಡೆದ ದ್ವಿತೀಯ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಸೆಣಸಾಟ ನಡೆಸಿದವು. ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ 6 ವಿಕೆಟ್‍ಗಳ ಜಯವನ್ನು ಸಾಧಿಸುವುದರ ಮೂಲಕ ತನ್ನ ಪ್ಲೇ ಆಫ್ ಸುತ್ತಿನ ಕನಸನ್ನು ಮತ್ತಷ್ಟು ಭದ್ರಪಡಿಸಿಕೊಂಡಿತು. ಅತ್ತ ಸನ್ ರೈಸರ್ಸ್ ಹೈದರಾಬಾದ್ ತಂಡ ಟೂರ್ನಿಯಲ್ಲಿ ತನ್ನ ಹತ್ತನೇ ಸೋಲನ್ನು ಕಂಡಿತು.

KKR vs SRH ಪಂದ್ಯದ ಬಳಿಕ ಅಂಕಪಟ್ಟಿ, ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ಆಟಗಾರರ ಪಟ್ಟಿ ಹೀಗಿದೆKKR vs SRH ಪಂದ್ಯದ ಬಳಿಕ ಅಂಕಪಟ್ಟಿ, ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ಆಟಗಾರರ ಪಟ್ಟಿ ಹೀಗಿದೆ

ಸನ್ ರೈಸರ್ಸ್ ಹೈದರಾಬಾದ್ ತಂಡ ಈ ಪಂದ್ಯದಲ್ಲಿ ಸೋತರೂ ಸಹ ಈ ಪಂದ್ಯದ ಮೂಲಕ ತನ್ನ ಚೊಚ್ಚಲ ಐಪಿಎಲ್ ಪಂದ್ಯವನ್ನಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡದ ಅನನುಭವಿ ಬೌಲರ್ ಉಮ್ರಾನ್ ಮಲಿಕ್ ಭಾರತದ ಯಾವುದೇ ವೇಗಿಯೂ ಮಾಡಿರದ ದಾಖಲೆಯನ್ನು ಮಾಡಿದ್ದಾರೆ.

ಸನ್ ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ವೇಗಿ ತಂಗರಸು ನಟರಾಜನ್ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಯುಎಇ ಚರಣ ಆರಂಭವಾದ ಬಳಿಕ ಕೊರೋನಾ ಸೋಂಕಿಗೆ ಒಳಗಾಗಿದ್ದರು. ಹೀಗಾಗಿ ತಂಗರಸು ನಟರಾಜನ್ ಅವರು ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಿಂದ ಹೊರಗುಳಿಯಬೇಕಾದ ಅನಿವಾರ್ಯತೆ ಎದುರಾದಾಗ ನಟರಾಜನ್ ಬದಲಾಗಿ ಜಮ್ಮು ಮತ್ತು ಕಾಶ್ಮೀರದ 21 ವರ್ಷ ಹರೆಯದ ಯುವ ವೇಗಿ ಉಮ್ರಾನ್ ಮಲಿಕ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ ಆಯ್ಕೆ ಮಾಡಿಕೊಂಡಿತು.

ಉಮ್ರಾನ್ ಮಲಿಕ್ ಅವರನ್ನು ತಾತ್ಕಾಲಿಕ ಬದಲಿ ಆಟಗಾರನನ್ನಾಗಿ ಆಯ್ಕೆ ಮಾಡಿಕೊಂಡಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ಭಾನುವಾರ ( ಅಕ್ಟೋಬರ್ 3 ) ದುಬೈ ಕ್ರೀಡಾಂಗಣದಲ್ಲಿ ನಡೆದ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಸುವ ಮೂಲಕ ಅಚ್ಚರಿ ಮೂಡಿಸಿತ್ತು. ಹೀಗೆ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಕಣಕ್ಕಿಳಿಯುವ ಮೂಲಕ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಗೆ ಪದಾರ್ಪಣೆ ಮಾಡಿದ ಉಮ್ರಾನ್ ಮಲಿಕ್ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅತಿವೇಗದ ಎಸೆತವನ್ನು ಎಸೆದ ಭಾರತೀಯ ಬೌಲರ್ ಎಂಬ ಸಾಧನೆಯನ್ನು ಮಾಡಿದ್ದಾರೆ.

ಈ ಪಂದ್ಯದಲ್ಲಿ ತಾನು ಮಾಡಿದ ಮೊದಲನೇ ಓವರ್‌ನಲ್ಲಿಯೇ ಗಂಟೆಗೆ 146 ಕಿಲೋ ಮೀಟರ್ ವೇಗದ ಎಸೆತವನ್ನು ಎಸೆದಿದ್ದ ಉಮ್ರಾನ್ ಮಲಿಕ್ ನಂತರದ ಓವರ್‌ಗಳಲ್ಲಿ ಎರಡು ಬಾರಿ ಗಂಟೆಗೆ 150 ಕಿಲೋ ಮೀಟರ್‌ಗೂ ಹೆಚ್ಚಿನ ವೇಗದ ಎಸೆತಗಳನ್ನು ಎಸೆದರು. ಗಂಟೆಗೆ 151.03 ಕಿಲೋ ಮೀಟರ್ ವೇಗದ ಎಸೆತವನ್ನು ಎಸೆದ ಉಮ್ರಾನ್ ಮಲಿಕ್ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅತೀ ವೇಗದ ಎಸೆತಗಳನ್ನು ಎಸೆದಿರುವ ಟಾಪ್ 10 ಬೌಲರ್‌ಗಳ ಪಟ್ಟಿಗೆ ಸೇರಿಕೊಂಡರು ಮತ್ತು ಈ ಪಟ್ಟಿಯಲ್ಲಿ ಪ್ರವೇಶವನ್ನು ಪಡೆದ ಮೊದಲ ಭಾರತೀಯ ವೇಗಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಹೀಗೆ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಉಮ್ರಾನ್ ಮಲಿಕ್ ಎಸೆದ ಅತಿ ವೇಗದ ಎಸೆತದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪ್ರಶಂಸೆಗಳು ವ್ಯಕ್ತವಾಗುತ್ತಿದ್ದು ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾ ಪರ ಪ್ರಮುಖ ಬೌಲರ್ ಆಗಿ ಮಿಂಚುವ ಅವಕಾಶಗಳನ್ನು ಪಡೆಯಲಿ ಎಂದು ಆಶಿಸುತ್ತಿದ್ದಾರೆ.

ತಂಡದಿಂದ ಹೊರಗಿಟ್ಟರೂ ಕ್ರೀಡಾಂಗಣಕ್ಕೆ ಬಂದು ಡೇವಿಡ್ ವಾರ್ನರ್ ಮಾಡಿದ ಕೆಲಸಕ್ಕೆ ಸಿಕ್ತು ಗೌರವತಂಡದಿಂದ ಹೊರಗಿಟ್ಟರೂ ಕ್ರೀಡಾಂಗಣಕ್ಕೆ ಬಂದು ಡೇವಿಡ್ ವಾರ್ನರ್ ಮಾಡಿದ ಕೆಲಸಕ್ಕೆ ಸಿಕ್ತು ಗೌರವ

ಇನ್ನು ಉಮ್ರಾನ್ ಮಲಿಕ್ ಈ ಪಂದ್ಯದಲ್ಲಿ 4 ಓವರ್‌ಗಳನ್ನು ಮಾಡಿ 27 ರನ್ ನೀಡಿದ್ದು ಯಾವುದೇ ವಿಕೆಟ್ ಪಡೆಯದೇ ಇದ್ದರೂ ಸಹ ತಾವು ಎಸೆದ ವೇಗದ ಎಸೆತದಿಂದ ಎಲ್ಲರ ಗಮನವನ್ನು ತಮ್ಮತ್ತ ಸೆಳೆದಿದ್ದಾರೆ.

RCB ತಂಡದಲ್ಲಿ ಮ್ಯಾಕ್ಸ್​ವೆಲ್ ಚೆನ್ನಾಗಿ ಆಡ್ತಾ ಇರೋದು ಯಾಕೆ ಗೊತ್ತಾ? | Oneindia Kannada

ಪಂದ್ಯದ ಫಲಿತಾಂಶ: ಸನ್ ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಿತು. ಈ ಸುಲಭ ಗುರಿಯನ್ನು ಬೆನ್ನತ್ತಿದ ಕೋಲ್ಕತ್ತ ನೈಟ್ ರೈಡರ್ಸ್ ತಂಡ ನಿಧಾನಗತಿಯ ಬ್ಯಾಟಿಂಗ್ ನಡೆಸಿ ಅಂತಿಮವಾಗಿ 19.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 119 ರನ್ ಕಲೆ ಹಾಕುವುದರ ಮೂಲಕ 6 ವಿಕೆಟ್‍ಗಳ ಜಯಗಳಿಸಿ ತನ್ನ ಪ್ಲೇ ಆಫ್ ಪ್ರವೇಶಿಸುವ ಕನಸನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ 51 ಎಸೆತಗಳಲ್ಲಿ 57 ರನ್ ಬಾರಿಸಿದ ಶುಬ್ಮನ್ ಗಿಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 22 - October 28 2021, 07:30 PM
ಆಸ್ಟ್ರೇಲಿಯಾ
ಶ್ರೀಲಂಕಾ
Predict Now

For Quick Alerts
ALLOW NOTIFICATIONS
For Daily Alerts
Story first published: Monday, October 4, 2021, 14:35 [IST]
Other articles published on Oct 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X