ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2021ರ ಇಂಡಿಯನ್ ಪ್ರೀಮಿಯರ್ ಲೀಗ್‌ ರದ್ದಿಗೆ ಅಸಲಿ ಕಾರಣಗಳಿವು!

IPL 2021 Suspended: Faulty GPS, no bio-bubble for ground staff, random hotel bookings and multiples lapses in SOPs

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 2021ರ ಆವೃತ್ತಿ ರದ್ದಾಗಿದೆ. ಐಪಿಎಲ್‌ನ ನಾಲ್ಕು ಫ್ರಾಂಚೈಸಿಗಳಲ್ಲಿ ಕೋವಿಡ್-19 ಪ್ರಕರಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ 14ನೇ ವೃತ್ತಿಯ ಐಪಿಎಲ್ ಅನ್ನು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಮಂಗಳವಾರ (ಮೇ 4) ರದ್ದುಗೊಳಿಸಿದೆ.

ಐಪಿಎಲ್ 2021: ಟೂರ್ನಿ ರದ್ದುಗೊಳಿಸಿದಕ್ಕೆ ಟ್ವಿಟ್ಟರ್‌ನಲ್ಲಿ ಆರ್‌ಸಿಬಿ ಫ್ಯಾನ್ಸ್ ಪ್ರತಿಕ್ರಿಯೆ ನೋಡಿ!ಐಪಿಎಲ್ 2021: ಟೂರ್ನಿ ರದ್ದುಗೊಳಿಸಿದಕ್ಕೆ ಟ್ವಿಟ್ಟರ್‌ನಲ್ಲಿ ಆರ್‌ಸಿಬಿ ಫ್ಯಾನ್ಸ್ ಪ್ರತಿಕ್ರಿಯೆ ನೋಡಿ!

ಕೋಲ್ಕತ್ತಾ ನೈಟ್ ರೈಡರ್ಸ್‌ನ ವರುಣ್ ಚಕ್ರವರ್ತಿ, ಸಂದೀಪ್ ವಾರಿಯರ್‌, ಚೆನ್ನೈ ಸೂಪರ್ ಕಿಂಗ್ಸ್‌ನ ಬೌಲಿಂಗ್‌ ಕೋಚ್ ಲಕ್ಷ್ಮೀಪತಿ ಬಾಲಾಜಿ, ಡೆಲ್ಲಿ ಕ್ಯಾಪಿಟಲ್ಸ್‌ನ ಪ್ರಮುಖ ಸ್ಪಿನ್ನರ್ ಅಮಿತ್ ಮಿಶ್ರಾ ಮತ್ತು ಸನ್ ರೈಸರ್ಸ್ ಹೈದರಾಬಾದ್‌ನ ವೃದ್ಧಿಮಾನ್ ಸಾಹಗೆ ಕೊರೊನಾ ಪಾಸಿಟಿವ್ ಬಂದಿತ್ತು. ಹೀಗಾಗಿ 14ನೇ ಆವೃತ್ತಿಯನ್ನು ಸದ್ಯದ ಮಟ್ಟಿಗೆ ರದ್ದುಗೊಳಿಸಲಾಗಿದೆ.

ಐಪಿಎಲ್ 2021ರ ಆವೃತ್ತಿ ರದ್ದಿಗೆ ಕಾರಣಗಳಿವೆ. ಆಟಗಾರರಿಗೆ ಕೊರೊನಾ ಬಂದಿದ್ದರಿಂದ ಐಪಿಎಲ್ ನಿಲ್ಲಿಸಬೇಕಾಗಿ ಬಂದಿದೆಯಾದರೂ ಭಾರತದಲ್ಲಿ ಮಿತಿ ಮೀರುತ್ತಿರುವ ಕೊರೊನಾ ಸೋಂಕಿನ ಪ್ರಕರಣ, ಬಯೋ ಬಬಲ್ ನಿಯಮಗಳ ಉಲ್ಲಂಘನೆ ಪ್ರತಿಷ್ಠಿತ ಟೂರ್ನಿ ರದ್ದಿಗೆ ಕಾರಣವಾಗಿದೆ.

ಧೋನಿ ವಿದಾಯ? ; ಅಭಿಮಾನಿಗಳಲ್ಲಿ ಶುರುವಾಯ್ತು ಚಿಂತೆ!ಧೋನಿ ವಿದಾಯ? ; ಅಭಿಮಾನಿಗಳಲ್ಲಿ ಶುರುವಾಯ್ತು ಚಿಂತೆ!

ಮುಖ್ಯವಾಗಿ ಬಯೋ ಬಬಲ್ ಒಳಗೆ ಜಿಪಿಎಸ್ ವ್ಯವಸ್ಥೆ ಸರಿಯಿರಲಿಲ್ಲ. ಮೈದಾನ ಸಿಬ್ಬಂದಿಗಳಿಗೆ ಪ್ರತ್ಯೇಕ ಬಯೋ ಬಬಲ್ ಇರಲಿಲ್ಲ. ಆಗಾಗ ಹೋಟೆಲ್ ಬುಕ್ಕಿಂಗ್‌ಗಳು ನಡೆಯುತ್ತಿದ್ದವು. ಬಯೋಬಬಲ್ ಒಳಗಿದ್ದವರು ಬಹಳಷ್ಟು ಸಾರಿ ಕೋವಿಡ್-19 ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದರು. ಈ ಎಲ್ಲಾ ಕಾರಣಗಳಿಂದಲೇ ಇವತ್ತು ಐಪಿಎಲ್ ರದ್ದಾಗಿದೆ. ಟೂರ್ನಿಯಲ್ಲಿ ಜಾಗತಿಕ ಮಟ್ಟದ ಕ್ರೀಡಟಾಪಟುಗಳು ಭಾಗವಹಿಸುತ್ತಿದ್ದರೂ ಆಯೋಜಕರು ನಿರ್ಲಕ್ಷ್ಯತನ ಒಂದೊಳ್ಳೆ ಟೂರ್ನಿ ನಿಲ್ಲಿಸಬೇಕಾದ ಅನಿವಾರ್ಯತೆ ತಂದಿದೆ.

Story first published: Tuesday, May 4, 2021, 18:34 [IST]
Other articles published on May 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X