ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಹಿರಂಗವಾಯ್ತು ಕಣ್ಣೀರಿಟ್ಟಿದ್ದ ಇಶಾನ್ ಕಿಶನ್ ಬಳಿ ಬಂದು ಟಿ20 ವಿಶ್ವಕಪ್ ಬಗ್ಗೆ ಕೊಹ್ಲಿ ಹೇಳಿದ್ದ ರಹಸ್ಯ!

IPL 2021: Virat Kohli told me Im selected as opener for Team India in T20 Worldcup says Ishan Kishan

ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತ ಸಂಪೂರ್ಣವಾಗಿ ಮುಕ್ತಾಯವಾಗಿದ್ದು, ಅಂತಿಮವಾಗಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಪ್ಲೇ ಆಫ್ ಹಂತವನ್ನು ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಮೊದಲಿಗೆ ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಪ್ಲೇ ಆಫ್ ಹಂತವನ್ನು ಅಧಿಕೃತವಾಗಿ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದವು. ಆದರೆ ಪ್ಲೇ ಆಫ್ ಸುತ್ತಿಗೆ ಪ್ರವೇಶ ಪಡೆಯಲಿರುವ ನಾಲ್ಕನೇ ತಂಡ ಯಾವುದು ಎಂಬ ಕುತೂಹಲ ಲೀಗ್ ಹಂತದ ಕೊನೆಯಲ್ಲಿ ಹೆಚ್ಚಾಗಿತ್ತು. ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳ ನಡುವೆ ಪ್ಲೇ ಆಫ್ ಸುತ್ತಿಗೆ ಪ್ರವೇಶ ಪಡೆಯುವ ಪೈಪೋಟಿ ಏರ್ಪಟ್ಟಿತ್ತು. ಕೊನೆಗೆ ಅಧಿಕ ರನ್ ರೇಟ್ ಹೊಂದಿರುವ ಕಾರಣದಿಂದಾಗಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಪ್ಲೇ ಆಫ್ ಪ್ರವೇಶವನ್ನು ಪಡೆದುಕೊಂಡಿದೆ.

ಲಾಸ್ಟ್ ಬಾಲ್ ಥ್ರಿಲ್ಲರ್ ಗೆದ್ದ ಆರ್‌ಸಿಬಿ: ಡೆಲ್ಲಿ ಆವೇಶ ಇಳಿಸಿದ ಭರತ್, ಮ್ಯಾಕ್ಸ್‌ವೆಲ್ಲಾಸ್ಟ್ ಬಾಲ್ ಥ್ರಿಲ್ಲರ್ ಗೆದ್ದ ಆರ್‌ಸಿಬಿ: ಡೆಲ್ಲಿ ಆವೇಶ ಇಳಿಸಿದ ಭರತ್, ಮ್ಯಾಕ್ಸ್‌ವೆಲ್

ಅತ್ತ ಟೂರ್ನಿಯ ಕೊನೆಯಲ್ಲಿ ಉತ್ತಮ ಪ್ರದರ್ಶನವನ್ನು ನೀಡಲು ಆರಂಭಿಸಿದ ಮುಂಬೈ ಇಂಡಿಯನ್ಸ್ ಟೂರ್ನಿಯ ಮಧ್ಯದ ಪಂದ್ಯಗಳಲ್ಲಿ ಅಕ್ಷರಶಃ ಮಂಕಾಗಿತ್ತು. ಸಾಲು ಸಾಲು ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದ್ದ ಮುಂಬೈ ಇಂಡಿಯನ್ಸ್ ಸೆಪ್ಟೆಂಬರ್ 26ರಂದು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿಯೂ ಹೀನಾಯವಾಗಿ ಸೋತಿತ್ತು. ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೊಹ್ಲಿ ಪಡೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಗೆಲ್ಲಲು 166 ರನ್‌ಗಳ ಗುರಿಯನ್ನು ನೀಡಿತ್ತು. ಆದರೆ ಮುಂಬೈ ಇಂಡಿಯನ್ಸ್ ತಂಡ 18.1 ಓವರ್‌ಗಳಲ್ಲಿ 111 ರನ್‌ಗಳಿಗೆ ಆಲ್ ಔಟ್ ಆಗುವುದರ ಮೂಲಕ 54 ರನ್‌ಗಳ ಸೋಲನ್ನು ಕಂಡಿತ್ತು. ಹಾಗೂ ಇದೇ ಪಂದ್ಯದಲ್ಲಿ ಇಶಾನ್ ಕಿಶನ್ 12 ಎಸೆತಗಳಲ್ಲಿ ಕೇವಲ 9 ರನ್ ಬಾರಿಸಿ ಕಳಪೆ ಪ್ರದರ್ಶನ ನೀಡಿದ್ದರಿಂದ ಪಂದ್ಯ ಮುಗಿದ ನಂತರ ಮಂಕಾಗಿ ಕುಳಿತಿದ್ದರು.

ಲಾಸ್ಟ್ ಬಾಲ್ ಥ್ರಿಲ್ಲರ್ ಗೆದ್ದ ಆರ್‌ಸಿಬಿ: ಡೆಲ್ಲಿ ಆವೇಶ ಇಳಿಸಿದ ಭರತ್, ಮ್ಯಾಕ್ಸ್‌ವೆಲ್ಲಾಸ್ಟ್ ಬಾಲ್ ಥ್ರಿಲ್ಲರ್ ಗೆದ್ದ ಆರ್‌ಸಿಬಿ: ಡೆಲ್ಲಿ ಆವೇಶ ಇಳಿಸಿದ ಭರತ್, ಮ್ಯಾಕ್ಸ್‌ವೆಲ್

ಹೀಗೆ ಮಂಕಾಗಿ ಕುಳಿತಿದ್ದ ಇಶಾನ್ ಕಿಶಾನ್ ಬಳಿ ತೆರಳಿದ್ದ ವಿರಾಟ್ ಕೊಹ್ಲಿ ಆತನ ಬಳಿ ಮಾತನಾಡಿ ಸಮಾಧಾನಪಡಿಸಿದ್ದರು. ವಿರಾಟ್ ಕೊಹ್ಲಿ ಇಶಾನ್ ಕಿಶನ್ ಅವರನ್ನು ಸಮಾಧಾನ ಪಡಿಸಿದ ರೀತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಅಂದು ವಿರಾಟ್ ಕೊಹ್ಲಿ ಇಶಾನ್ ಕಿಶಾನ್ ಬಳಿ ಮಾತನಾಡಿದ್ದೇನು ಎಂಬ ವಿಚಾರವನ್ನು ಮಾತ್ರ ಇಶಾನ್ ಕಿಶನ್ ಬಹಿರಂಗಪಡಿಸಿರಲಿಲ್ಲ. ಆದರೆ ಇದೀಗ ಲೀಗ್ ಹಂತದ ಪಂದ್ಯಗಳೆಲ್ಲ ಮುಗಿದ ನಂತರ ಮಾತನಾಡಿರುವ ಇಶಾನ್ ಕಿಶನ್ ಅಂದು ವಿರಾಟ್ ಕೊಹ್ಲಿ ತಮ್ಮ ಬಳಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಕುರಿತಾಗಿ ತಿಳಿಸಿದ ಮಹತ್ವದ ವಿಷಯವೊಂದನ್ನು ಹಂಚಿಕೊಂಡಿದ್ದು, ಇಬ್ಬರ ನಡುವೆ ನಡೆದಿದ್ದ ರಹಸ್ಯ ಮಾತುಕತೆ ಬಹಿರಂಗವಾಗಿದೆ. ಅಷ್ಟಕ್ಕೂ ಕೊಹ್ಲಿ ಇಶಾನ್ ಕಿಶನ್ ಬಳಿ ತೆರಳಿ ತಿಳಿಸಿದ್ದ ಟಿ ಟ್ವೆಂಟಿ ವಿಶ್ವಕಪ್ ಕುರಿತಾದ ವಿಷಯವೇನೆಂಬುದರ ಮಾಹಿತಿ ಮುಂದೆ ಇದೆ ಓದಿ..

ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ನೀನೇ ಭಾರತ ತಂಡದ ಓಪನರ್ ಎಂದಿದ್ದ ಕೊಹ್ಲಿ

ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ನೀನೇ ಭಾರತ ತಂಡದ ಓಪನರ್ ಎಂದಿದ್ದ ಕೊಹ್ಲಿ

ಇಶಾನ್ ಕಿಶನ್ ಬಳಿ ತೆರಳಿದ್ದ ವಿರಾಟ್ ಕೊಹ್ಲಿ 'ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಪಂದ್ಯಗಳಲ್ಲಿ ಭಾರತ ತಂಡದ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವ ಆಟಗಾರ ನೀನೇ, ಹೀಗಾಗಿ ಮುಂಬರಲಿರುವ ಐಪಿಎಲ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯಲು ಸಿದ್ಧವಾಗಬೇಕಿದೆ' ಎಂದು ಇಶಾನ್ ಕಿಶನ್ ಅವರಿಗೆ ವಿರಾಟ್ ಕೊಹ್ಲಿ ತಿಳಿಸಿದ್ದರು.

ನಂತರ ನಡೆದ 2 ಪಂದ್ಯಗಳಿಂದ ಹೊರಬಿದ್ದಿದ್ದ ಇಶಾನ್ ಕಿಶನ್

ನಂತರ ನಡೆದ 2 ಪಂದ್ಯಗಳಿಂದ ಹೊರಬಿದ್ದಿದ್ದ ಇಶಾನ್ ಕಿಶನ್

ಹೀಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಮುಂಬೈ ಇಂಡಿಯನ್ಸ್ ಪಂದ್ಯ ಮುಗಿದ ಬಳಿಕ ನಡೆದ 2 ಪಂದ್ಯಗಳಿಂದ ಇಶಾನ್ ಕಿಶನ್ ತಂಡದಿಂದ ಹೊರಬಿದ್ದಿದ್ದರು. ಹೌದು, ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ವಿರುದ್ಧ ನಡೆದ ಮುಂಬೈ ಇಂಡಿಯನ್ಸ್ ತಂಡದ 2 ಪಂದ್ಯಗಳಲ್ಲಿ ಇಶಾನ್ ಕಿಶನ್ ಕಣಕ್ಕಿಳಿದಿರಲಿಲ್ಲ. ಇಶಾನ್ ಕಿಶನ್ ಮೇಲೆ ಒತ್ತಡ ಹೇರಲು ಇಚ್ಛಿಸುವುದಿಲ್ಲ, ಆತ ಮಾನಸಿಕ ಒತ್ತಡದಿಂದ ಆಚೆ ಬರಲಿ ಎಂಬ ಕಾರಣಕ್ಕೆ ತಂಡದಿಂದ ಹೊರಗಿಟ್ಟಿದ್ದೇವೆ ಎಂಬ ವಿಷಯವನ್ನು ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಈ ವೇಳೆ ತಿಳಿಸಿದ್ದರು.

ನಂತರದ ಪಂದ್ಯಗಳಲ್ಲಿ ಇಶಾನ್ ಕಿಶನ್ ಮಿಂಚು

ನಂತರದ ಪಂದ್ಯಗಳಲ್ಲಿ ಇಶಾನ್ ಕಿಶನ್ ಮಿಂಚು

ಹೀಗೆ 2 ಪಂದ್ಯಗಳಿಂದ ಅವಕಾಶವಂಚಿತರಾಗಿ ಹೊರಗುಳಿದಿದ್ದ ಇಶಾನ್ ಕಿಶನ್ ನಂತರ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 25 ಎಸೆತಗಳಿಗೆ 50 ರನ್ ಬಾರಿಸಿ ಮಿಂಚಿದರು. ಹಾಗೂ ನಿನ್ನೆ ( ಅಕ್ಟೋಬರ್ 8 ) ನಡೆದ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧದ ಪಂದ್ಯದಲ್ಲಿ 32 ಎಸೆತಗಳಿಗೆ 11 ಬೌಂಡರಿ ಮತ್ತು 4 ಸಿಕ್ಸರ್ ಸಹಿತ 84 ರನ್ ಚಚ್ಚಿದರು. ಹೀಗೆ ವಿರಾಟ್ ಕೊಹ್ಲಿ ನೀಡಿದ ಸಲಹೆಯಂತೆ ಇಶಾನ್ ಕಿಶನ್ ತಾವು ಕಣಕ್ಕಿಳಿದ ನಂತರದ ಪಂದ್ಯಗಳಲ್ಲಿ ಅಬ್ಬರಿಸಿದ್ದಾರೆ.

Story first published: Saturday, October 9, 2021, 12:28 [IST]
Other articles published on Oct 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X