ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಬ್ಬರಿಸಿದ ಧೋನಿ ಹೊಗಳಿ ಮಾಡಿದ್ದ ಟ್ವೀಟ್‌ನ್ನು ಡಿಲೀಟ್ ಮಾಡಿದ್ದೇಕೆ ಕೊಹ್ಲಿ?

IPL 2021: Why Virat Kohli deleted his first tweet about MS Dhonis finishing against DC?

ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತ ಸಂಪೂರ್ಣವಾಗಿ ಮುಗಿದಿದ್ದು, ಕಳೆದ ಭಾನುವಾರದಿಂದ ಪ್ಲೇ ಆಫ್ ಸುತ್ತಿನ ಪಂದ್ಯಗಳು ಆರಂಭವಾಗಿವೆ. ಅಕ್ಟೋಬರ್ 10ರಂದು ದುಬೈ ಕ್ರೀಡಾಂಗಣದಲ್ಲಿ ನಡೆದ ಕ್ವಾಲಿಫೈಯರ್ 1 ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 4 ವಿಕೆಟ್‍ಗಳ ಜಯ ಸಾಧಿಸುವ ಮೂಲಕ ನೇರವಾಗಿ ಫೈನಲ್‌ಗೆ ಪ್ರವೇಶವನ್ನು ಪಡೆದುಕೊಂಡಿತು.

ಲಾಸ್ಟ್ ಬಾಲ್ ಸಿಕ್ಸ್‌ ಸಿಡಿಸಿ ಹೀರೋ ಆದ ಭರತ್ ಆ ಒಂದೇ ಒಂದು ಪಂದ್ಯದಲ್ಲಿ ಗಳಿಸಿದ ಹಣವೆಷ್ಟು ಗೊತ್ತಾ?ಲಾಸ್ಟ್ ಬಾಲ್ ಸಿಕ್ಸ್‌ ಸಿಡಿಸಿ ಹೀರೋ ಆದ ಭರತ್ ಆ ಒಂದೇ ಒಂದು ಪಂದ್ಯದಲ್ಲಿ ಗಳಿಸಿದ ಹಣವೆಷ್ಟು ಗೊತ್ತಾ?

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 172 ರನ್ ಕಲೆ ಹಾಕುವುದರ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗೆಲ್ಲಲು 173 ರನ್‌ಗಳ ಪೈಪೋಟಿಯುತ ಗುರಿಯನ್ನು ನೀಡಿತು. ಡೆಲ್ಲಿ ಕ್ಯಾಪಿಟಲ್ಸ್ ನೀಡಿದ ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ರುತುರಾಜ್ ಗಾಯಕ್ವಾಡ್ 50 ಎಸೆತಗಳಲ್ಲಿ 70 ರನ್ ಸಿಡಿಸುವುದರ ಮೂಲಕ ಅಬ್ಬರಿಸಿದರೆ ಮತ್ತೊಬ್ಬ ಆರಂಭಿಕ ಆಟಗಾರ ಫಾಫ್ ಡು ಪ್ಲೆಸಿಸ್ 1 ರನ್‌ಗೆ ಔಟ್ ಆಗಿ ನಿರಾಸೆ ಮೂಡಿಸಿದರು.

ಕೆಕೆಆರ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಕಣಕ್ಕಿಳಿಯಬಹುದಾದ ಬಲಿಷ್ಠ ಆರ್‌ಸಿಬಿ ತಂಡ ಹೀಗಿದೆಕೆಕೆಆರ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಕಣಕ್ಕಿಳಿಯಬಹುದಾದ ಬಲಿಷ್ಠ ಆರ್‌ಸಿಬಿ ತಂಡ ಹೀಗಿದೆ

ಆರಂಭದಲ್ಲಿಯೇ ಫಾಫ್ ಡು ಪ್ಲೆಸಿಸ್ ಔಟ್ ಆದಾಗ ಮೂರನೇ ಕ್ರಮಾಂಕದಲ್ಲಿ ರಾಬಿನ್ ಉತ್ತಪ್ಪ ಕಣಕ್ಕಿಳಿದರು. ಕಳೆದೆರಡು ಪಂದ್ಯಗಳಲ್ಲಿ ಅವಕಾಶ ಸಿಕ್ಕರೂ ಸರಿಯಾಗಿ ಪ್ರದರ್ಶನ ನೀಡದ ರಾಬಿನ್ ಉತ್ತಪ್ಪ ಈ ಬಾರಿ ತಮ್ಮ ಪ್ರತಿಭೆಯನ್ನು ನಿರೂಪಿಸಿಕೊಳ್ಳುವುದರಲ್ಲಿ ಎಡವಲಿಲ್ಲ. 44 ಎಸೆತಗಳನ್ನು ಎದುರಿಸಿದ ರಾಬಿನ್ ಉತ್ತಪ್ಪ 7 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿ 63 ರನ್ ಗಳಿಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ನಂತರ ಬಂದ ಶಾರ್ದೂಲ್ ಠಾಕೂರ್ 0, ಅಂಬಾಟಿ ರಾಯುಡು 1 ಮತ್ತು ಮೊಯಿನ್ ಅಲಿ 16 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಹಾಗೂ ಅಂತಿಮವಾಗಿ ಎಂಎಸ್ ಧೋನಿ 6 ಎಸೆತಗಳಲ್ಲಿ 18 ರನ್ ಚಚ್ಚುವುದರ ಮೂಲಕ ಇನ್ನೂ 2 ಎಸೆತಗಳು ಬಾಕಿ ಇರುವಾಗಲೇ ಪಂದ್ಯವನ್ನು ಮುಗಿಸಿದರು. ಹೀಗೆ ಎಂಎಸ್ ಧೋನಿ ಪಂದ್ಯದ ಕೊನೆಯಲ್ಲಿ ಅಬ್ಬರಿಸಿ ಫಿನಿಶ್ ಮಾಡಿದ ರೀತಿಯನ್ನು ಹಲವಾರು ಸೆಲೆಬ್ರಿಟಿಗಳು ಮತ್ತು ಕ್ರಿಕೆಟಿಗರು ಕೊಂಡಾಡಿದ್ದು ಟ್ವೀಟ್ ಮಾಡುವ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದರು. ಈ ಕುರಿತು ವಿರಾಟ್ ಕೊಹ್ಲಿ ಕೂಡ ಟ್ವೀಟ್ ಮಾಡಿದ್ದು ಎಂಎಸ್ ಧೋನಿ ಫಿನಿಶಿಂಗ್ ಶೈಲಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಈ ಕುರಿತಾಗಿ ವಿರಾಟ್ ಕೊಹ್ಲಿ ಮಾಡಿದ್ದ ಮೊದಲನೇ ಟ್ವೀಟ್ ಡಿಲೀಟ್ ಮಾಡಿ ನಂತರ ಮತ್ತೊಂದು ಟ್ವೀಟ್ ಮಾಡುವ ಮೂಲಕ ಎಂ ಎಸ್ ಧೋನಿಯನ್ನು ಹೊಗಳಿದ್ದಾರೆ. ಕೊಹ್ಲಿ ಈ ರೀತಿ ಟ್ವೀಟ್ ಮಾಡಿ ಯಾಕೆ ಡಿಲೀಟ್ ಮಾಡಿದರು ಎಂಬ ಗೊಂದಲ ಹಲವಾರು ಅಭಿಮಾನಿಗಳಲ್ಲಿತ್ತು. ಹೀಗೆ ವಿರಾಟ್ ಕೊಹ್ಲಿ ಎಂಎಸ್ ಧೋನಿ ಕುರಿತು ಮಾಡಿದ್ದ ಟ್ವೀಟನ್ನು ಯಾಕೆ ಡಿಲೀಟ್ ಮಾಡಿದರು ಎಂಬುದರ ಮಾಹಿತಿ ಮುಂದೆ ಇದೆ ಓದಿ..

ಕ್ರಿಕೆಟ್‍ನ ಗ್ರೇಟೆಸ್ಟ್ ಫಿನಿಷರ್ ಧೋನಿ ಎಂಬ ಟ್ವೀಟ್ ಡಿಲೀಟ್ ಮಾಡಿದ ಕೊಹ್ಲಿ

ಕ್ರಿಕೆಟ್‍ನ ಗ್ರೇಟೆಸ್ಟ್ ಫಿನಿಷರ್ ಧೋನಿ ಎಂಬ ಟ್ವೀಟ್ ಡಿಲೀಟ್ ಮಾಡಿದ ಕೊಹ್ಲಿ


ಎಂಎಸ್ ಧೋನಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಬ್ಬರಿಸಿದ ನಂತರ ಟ್ವೀಟ್ ಮಾಡಿದ ವಿರಾಟ್ ಕೊಹ್ಲಿ ಆ ಟ್ವೀಟನ್ನು ಕೆಲವೇ ನಿಮಿಷಗಳಲ್ಲಿ ಡಿಲೀಟ್ ಮಾಡಿಬಿಟ್ಟರು. ಆ ಕ್ಷಣದಲ್ಲಿ ಹಲವಾರು ಕ್ರಿಕೆಟ್ ಅಭಿಮಾನಿಗಳು ಗೊಂದಲಕ್ಕೊಳಗಾದದ್ದೂ ಕೂಡ ನಿಜ. ವಿರಾಟ್ ಕೊಹ್ಲಿ ತಾವು ಮಾಡಿದ್ದ ಟ್ವೀಟ್‌ನಲ್ಲಿ 'ದ ಕಿಂಗ್ ಈಸ್ ಬ್ಯಾಕ್, ಕ್ರಿಕೆಟ್‍ನ ಗ್ರೇಟೆಸ್ಟ್ ಫಿನಿಷರ್ ನನ್ನನ್ನು ಕುರ್ಚಿಯಿಂದ ಎದ್ದು ಕುಣಿಯುವಂತೆ ಮಾಡಿದ್ದಾರೆ' ಎಂದು ಬರೆದುಕೊಂಡಿದ್ದರು. ಆದರೆ ಈ ಟ್ವೀಟ್‌ನ್ನು ಕೆಲವೇ ನಿಮಿಷಗಳಲ್ಲಿ ಡಿಲೀಟ್ ಮಾಡಿದರು.

ಡಿಲೀಟ್ ಮಾಡಿದ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮಾಡಿದ ವಿರಾಟ್ ಕೊಹ್ಲಿ

ಡಿಲೀಟ್ ಮಾಡಿದ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮಾಡಿದ ವಿರಾಟ್ ಕೊಹ್ಲಿ

ಎಂಎಸ್ ಧೋನಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಿದ ಇನ್ನಿಂಗ್ಸ್ ಕುರಿತು ಪ್ರಶಂಸೆ ವ್ಯಕ್ತಪಡಿಸಿ ವಿರಾಟ್ ಕೊಹ್ಲಿ ಮಾಡಿದ್ದ 'ದ ಕಿಂಗ್ ಈಸ್ ಬ್ಯಾಕ್, ಕ್ರಿಕೆಟ್‍ನ ಗ್ರೇಟೆಸ್ಟ್ ಫಿನಿಷರ್ ನನ್ನನ್ನು ಕುರ್ಚಿಯಿಂದ ಎದ್ದು ಕುಣಿಯುವಂತೆ ಮಾಡಿದ್ದಾರೆ' ಎಂಬ ಟ್ವೀಟನ್ನು ಡಿಲೀಟ್ ಮಾಡಿದ ವಿರಾಟ್ ಕೊಹ್ಲಿ ಕೆಲವೇ ನಿಮಿಷಗಳಲ್ಲಿ ಮತ್ತೊಂದು ಟ್ವೀಟ್‌ನಲ್ಲಿ ಮತ್ತೊಂದು ಪದವನ್ನು ಸೇರಿಸಿ ಟ್ವೀಟ್ ಮಾಡಿದರು. ಈ ಹಿಂದೆ "ಕ್ರಿಕೆಟ್‌ನ ಗ್ರೇಟೆಸ್ಟ್ ಫಿನಿಷರ್" ಎಂದು ಬರೆದುಕೊಂಡಿದ್ದ ಕೊಹ್ಲಿ ಅದನ್ನು ಅಳಿಸಿ ಹಾಕಿ ತಾವು ಮಾಡಿದ ಹೊಸ ಟ್ವೀಟ್‌ನಲ್ಲಿ "ಕ್ರಿಕೆಟ್‍ನ ಸಾರ್ವಕಾಲಿಕ ಗ್ರೇಟೆಸ್ಟ್ ಫಿನಿಷರ್" ಎಂದು ಬರೆದುಕೊಂಡರು. ಹೀಗೆ ಫಿನಿಷಿಂಗ್ ಮಾಡುವುದರಲ್ಲಿ ಎಂಎಸ್ ಧೋನಿ ಮುಂದೆ ಯಾರೂ ಸಹ ಇಲ್ಲ ಎಂಬುದನ್ನು ವಿರಾಟ್ ಕೊಹ್ಲಿ ತಮ್ಮ ಟ್ವೀಟ್ ಮೂಲಕ ತಿಳಿಸಿದರು.

ಅಂತಿಮ ಓವರ್‌ನಲ್ಲಿ ಎಂಎಸ್ ಧೋನಿ ಅಬ್ಬರ

ಅಂತಿಮ ಓವರ್‌ನಲ್ಲಿ ಎಂಎಸ್ ಧೋನಿ ಅಬ್ಬರ

ಅಂತಿಮ ಓವರ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿಗೆ 13 ರನ್‌ಗಳ ಅಗತ್ಯವಿತ್ತು. ಈ ಪಂದ್ಯದಲ್ಲಿ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದ ಟಾನ್ ಕರನ್ ಅಂತಿಮ ಓವರ್ ಬೌಲಿಂಗ್ ಮಾಡಲು ಕಣಕ್ಕಿಳಿದಿದ್ದರು. ಈ ಓವರ್‌ನಲ್ಲಿ ಧೋನಿ ಮೂರು ಬೌಂಡರಿಗಳನ್ನು ಸಿಡಿಸುವ ಮೂಲಕ ಪಂದ್ಯದಲ್ಲಿ ಇನ್ನೂ ಎರಡು ಎಸೆತಗಳು ಬಾಕಿಯಿರುವಂತೆಯೇ ಗೆಲ್ಲಿಸಿ ಬೀಗಿದ್ದರು. ಈ ಮೂಲಕ ಚೆನ್ನೈ ಫೈನಲ್‌ಗೆ ಪ್ರವೇಶಿಸಿತ್ತು, ಇದಕ್ಕೂ ಹೊಂದಿನ ಓವರ್‌ನಲ್ಲಿ ಆವೇಶ್ ಖಾನ್ ಎಸೆತವನ್ನು ಭರ್ಜರಿಯಾಗಿ ಸಿಕ್ಸರ್‌ಗೆ ಅಟ್ಟುವ ಮೂಲಕ ಡೆಲ್ಲಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದರು ಅನುಭವಿ ಧೋನಿ. ಈ ಪಂದ್ಯದಲ್ಲಿ ಕೇವಲ 6 ಎಸೆತಗಳನ್ನು ಎದುರಿಸಿದ ಧೋನಿ ಒಂದು ಸಿಕ್ಸರ್ ಹಾಗೂ ಮೂರು ಬೌಂಡರಿಗಳ ಸಹಿತ 18 ರನ್ ಸಿಡಿಸಿದ್ದಾರೆ.

Story first published: Monday, October 11, 2021, 16:31 [IST]
Other articles published on Oct 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X