MI vs DC: ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡುವ ಸಾಧ್ಯತೆ ಇರುವ ಮೂವರು ಆಟಗಾರರಿವರು!

ಕಳೆದ ಮಾರ್ಚ್ ತಿಂಗಳ ಅಂತ್ಯದಲ್ಲಿ ಆರಂಭವಾದ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಇದೀಗ ಮುಕ್ತಾಯದ ಸನಿಹಕ್ಕೆ ಬಂದಿವೆ. ಲೀಗ್ ಹಂತದ ಅಂತಿಮ ಪಂದ್ಯ ನಾಳೆ ( ಮೇ 22 ) ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ನಡೆಯಲಿದ್ದು, ಲೀಗ್ ಹಂತಕ್ಕೆ ತೆರೆಬೀಳಲಿದೆ.

DC vs MI: ಮುಂಬೈ ಮೊದಲು ಬ್ಯಾಟಿಂಗ್ ಮಾಡಿದರೆ ಆರ್‌ಸಿಬಿ ಪ್ಲೇಆಫ್ ಕನಸು ಭಗ್ನವಾಗುವುದು ಖಚಿತ! ಕಾರಣವಿದುDC vs MI: ಮುಂಬೈ ಮೊದಲು ಬ್ಯಾಟಿಂಗ್ ಮಾಡಿದರೆ ಆರ್‌ಸಿಬಿ ಪ್ಲೇಆಫ್ ಕನಸು ಭಗ್ನವಾಗುವುದು ಖಚಿತ! ಕಾರಣವಿದು

ಇನ್ನು ಪ್ಲೇ ಆಫ್ ಹಂತಕ್ಕೆ ಈಗಾಗಲೇ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್, ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಮತ್ತು ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ಲಗ್ಗೆ ಇಟ್ಟಿದ್ದು, ನಾಲ್ಕನೇ ತಂಡವಾಗಿ ಪ್ರವೇಶ ಪಡೆದುಕೊಳ್ಳಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ.

IPL 2022: ಚೆನ್ನೈ ವಿರುದ್ಧ ಗೆದ್ದದ್ದು ರಾಜಸ್ಥಾನ್; ದೊಡ್ಡ ಹೊಡೆತ ಬಿದ್ದದ್ದು ಕೆಎಲ್ ರಾಹುಲ್ ಪಡೆಗೆ!IPL 2022: ಚೆನ್ನೈ ವಿರುದ್ಧ ಗೆದ್ದದ್ದು ರಾಜಸ್ಥಾನ್; ದೊಡ್ಡ ಹೊಡೆತ ಬಿದ್ದದ್ದು ಕೆಎಲ್ ರಾಹುಲ್ ಪಡೆಗೆ!

ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಇದ್ದರೂ ಸಹ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಆಡಲಿರುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐದನೇ ಸ್ಥಾನಕ್ಕೆ ಕುಸಿಯಲಿದ್ದು ಡೆಲ್ಲಿ ಕ್ಯಾಪಿಟಲ್ಸ್ ನಾಲ್ಕನೇ ಸ್ಥಾನವನ್ನು ಪಡೆದುಕೊಂಡು ಯಶಸ್ವಿಯಾಗಿ ಪ್ಲೇಆಫ್ ತಲುಪಲಿದೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ಇಂದು ( ಮೇ 21 ) ನಡೆಯಲಿರುವ ಪಂದ್ಯ ಸಾಕಷ್ಟು ಕುತೂಹಲ ಹಾಗೂ ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲುವತ್ತ ಚಿತ್ತ ನೆಟ್ಟಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಮುಂಬೈ ಇಂಡಿಯನ್ಸ್ ತಂಡ ಗೆಲ್ಲಲಿ ಎಂದು ಆಶಿಸುತ್ತಿದ್ದಾರೆ. ಹಾಗೂ ಇನ್ನೂ ಕೆಲ ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯಕ್ಕಾಗಿ ಡ್ರೀಮ್ ಟೀಮ್‌ಗಳನ್ನು ರಚಿಸುತ್ತಿದ್ದು ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಬಲ್ಲ ಆಟಗಾರರನ್ನು ಆಯ್ಕೆ ಮಾಡುವಲ್ಲಿ ನಿರತರಾಗಿದ್ದಾರೆ. ಹೀಗೆ ಡ್ರೀಮ್ ಟೀಮ್ ರಚಿಸುತ್ತಿರುವ ಕ್ರಿಕೆಟ್ ಅಭಿಮಾನಿಗಳು ಇಂದಿನ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡುವ ಸಾಧ್ಯತೆ ಇರುವ ಈ ಕೆಳಕಂಡ ಮೂವರು ಆಟಗಾರರನ್ನು ಕೈಬಿಡುವುದು ಸೂಕ್ತ ಎನ್ನಬಹುದು.

1. ಟ್ರಿಸ್ಟಾನ್ ಸ್ಟಬ್ಸ್

1. ಟ್ರಿಸ್ಟಾನ್ ಸ್ಟಬ್ಸ್

ಟ್ರಿಸ್ಟಾನ್ ಸ್ಟಬ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪದಾರ್ಪಣೆ ಮಾಡಿದ ಪಂದ್ಯದಲ್ಲಿಯೇ ಡಕ್ ಔಟ್ ಆಗುವ ಮೂಲಕ ಕಳಪೆ ಆರಂಭವನ್ನು ಪಡೆದುಕೊಂಡರು. ಇನ್ನು ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಆಡಿದ ತನ್ನ ಕೊನೆಯ ಪಂದ್ಯದಲ್ಲಿ 2 ರನ್ ಗಳಿಸಿ ಔಟ್ ಆದ ಟ್ರಿಸ್ಟಾನ್ ಸ್ಟಬ್ಸ್ ಇಂದಿನ ಪಂದ್ಯದಲ್ಲಿಯೂ ತನ್ನ ಕಳಪೆ ಫಾರ್ಮ್ ಮುಂದುವರಿಸುವ ಸಾಧ್ಯತೆಗಳು ಹೆಚ್ಚಿವೆ. ಅಷ್ಟು ಮಾತ್ರವಲ್ಲದೇ ಮುಂಬೈ ಇಂಡಿಯನ್ಸ್ ತಂಡದ ಆಡುವ ಬಳಗದಲ್ಲಿ ಹಲವಾರು ಬದಲಾವಣೆಗಳನ್ನು ತರುವ ಸಾಧ್ಯತೆಗಳಿದ್ದು, ಟ್ರಿಸ್ಟಾನ್ ಸ್ಟಬ್ಸ್ ತಂಡದಿಂದ ಹೊರಬೀಳುವ ಸಾಧ್ಯತೆಗಳು ಇವೆ. ಹೀಗಾಗಿ ಈತನನ್ನು ಇಂದಿನ ಪಂದ್ಯದ ನಿಮ್ಮ ಡ್ರೀಮ್ ತಂಡದಿಂದ ಹೊರಗಿಡುವುದು ಉತ್ತಮ.

2. ಲಲಿತ್ ಯಾದವ್

2. ಲಲಿತ್ ಯಾದವ್

ಡೆಲ್ಲಿ ಕ್ಯಾಪಿಟಲ್ಸ್ ಪರ ತಾನಾಡಿರುವ ಕೊನೆಯ 6 ಪಂದ್ಯಗಳ ಪೈಕಿ ಯಾವುದೇ ಪಂದ್ಯದಲ್ಲಿಯೂ ಸಹ ಲಲಿತ್ ಯಾದವ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿಲ್ಲ. ಹಾಗೂ ಕೊನೆಯ 2 ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡುವ ಅವಕಾಶವನ್ನು ಕೂಡ ಪಡೆದುಕೊಂಡಿಲ್ಲ. ಹೀಗಾಗಿ ಲಲಿತ್ ಯಾದವ್ ಬದಲು ಬೇರೆ ಆಲ್ ರೌಂಡರ್ ಆಟಗಾರನನ್ನು ನಿಮ್ಮ ಡ್ರೀಮ್ ತಂಡಕ್ಕೆ ಆಯ್ಕೆ ಮಾಡಿಕೊಳ್ಳುವುದು ಉತ್ತಮ.

3. ಸರ್ಫರಾಜ್ ಖಾನ್

3. ಸರ್ಫರಾಜ್ ಖಾನ್

ಕಳೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ಮೂಲಕ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ತನ್ನ ಐದನೇ ಪಂದ್ಯವನ್ನಾಡಿದ ಸರ್ಫರಾಜ್ ಖಾನ್ 16 ಎಸೆತಗಳಲ್ಲಿ 32 ರನ್ ಕಲೆ ಹಾಕಿದರು. ಆದರೆ ಇಂದಿನ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಅತ್ಯಮೂಲ್ಯವಾಗಿದ್ದು ತಂಡದ ಪ್ರಮುಖ ಆಟಗಾರ ಪೃಥ್ವಿ ಶಾ ಆಡುವ ಬಳಗಕ್ಕೆ ಮರಳಿದರೆ ಸರ್ಫರಾಜ್ ಖಾನ್ ಹೊರಬೀಳುವ ಸಾಧ್ಯತೆಗಳಿವೆ. ಹೀಗಾಗಿ ಈತನನ್ನು ನಿಮ್ಮ ಡ್ರೀಮ್ ತಂಡದಿಂದ ಆದಷ್ಟೂ ಹೊರಗಿಡಿ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Saturday, May 21, 2022, 16:53 [IST]
Other articles published on May 21, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X