ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ನೂತನ ಫ್ರಾಂಚೈಸಿಗಲ್ಲ, ಈ ತಂಡಕ್ಕೆ ನಾಯಕನಾಗಲಿದ್ದಾರೆ ಶ್ರೇಯಸ್ ಐಯ್ಯರ್

IPL 2022: According to reports Shreyas Iyer likely to lead Kolkata Knight Riders Team

ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಹಲವಾರು ವಿಶೇಷತೆಗಳಿಂದ ಕೂಡಿರಲಿದ್ದು ಟ್ರೋಫಿಗಾಗಿ ಹತ್ತು ತಂಡಗಳ ನಡುವೆ ಸೆಣಸಾಟ ಏರ್ಪಡಲಿದೆ. ಈಗಾಗಲೇ 8 ತಂಡಗಳು ಅಸ್ತಿತ್ವದಲ್ಲಿದ್ದು ಈ ವರ್ಷ ನಡೆಯಲಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 2 ನೂತನ ತಂಡಗಳ ಸೇರ್ಪಡೆಯಾಗಲಿದೆ.

ಭಾರತ vs ದ.ಆಫ್ರಿಕಾ: ಕೊಹ್ಲಿ ಪೆವಿಲಿಯನ್‌ನಲ್ಲಿ ಬ್ಯಾಟ್ ಬೀಸಿದ ಕೂಡಲೇ ವಿಕೆಟ್ ಒಪ್ಪಿಸಿದ ಅಗರ್ವಾಲ್, ವಿಡಿಯೋ ವೈರಲ್ಭಾರತ vs ದ.ಆಫ್ರಿಕಾ: ಕೊಹ್ಲಿ ಪೆವಿಲಿಯನ್‌ನಲ್ಲಿ ಬ್ಯಾಟ್ ಬೀಸಿದ ಕೂಡಲೇ ವಿಕೆಟ್ ಒಪ್ಪಿಸಿದ ಅಗರ್ವಾಲ್, ವಿಡಿಯೋ ವೈರಲ್

ಕಳೆದ ವರ್ಷ ನಡೆದ ಫ್ರಾಂಚೈಸಿಗಳ ಹರಾಜು ಪ್ರಕ್ರಿಯೆಯಲ್ಲಿ ಲಕ್ನೋ ಮತ್ತು ಅಹ್ಮದಾಬಾದ್ ನಗರಗಳು ನೂತನ ಫ್ರಾಂಚೈಸಿಗಳಾಗಿ ಹೊರಹೊಮ್ಮಿದವು. ಹೀಗೆ ಹೊಸತಂಡಗಳ ಸೇರ್ಪಡೆಯಾಗುತ್ತಿರುವುದರಿಂದ ಟೂರ್ನಿ ಆರಂಭಕ್ಕೂ ಮುನ್ನ ಆಟಗಾರರ ಹರಾಜು ಪ್ರಕ್ರಿಯೆ ನಡೆಸಬೇಕಾಗಿದ್ದು ಇದಕ್ಕೂ ಮುನ್ನ ರಿಟೆನ್ಷನ್ ಪ್ರಕ್ರಿಯೆ ನಡೆಯಿತು. ಈ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಅಸ್ತಿತ್ವದಲ್ಲಿರುವ 8 ತಂಡಗಳು ತಮಗೆ ಬೇಕಾದ ಆಟಗಾರರನ್ನು ( ಗರಿಷ್ಠ 4 ಆಟಗಾರರು ) ರಿಟೈನ್ ಮಾಡಿಕೊಂಡವು. ಹೀಗೆ ಅಸ್ತಿತ್ವದಲ್ಲಿರುವ ಫ್ರಾಂಚೈಸಿಗಳು ತಮ್ಮ ತಂಡದ ಪ್ರಮುಖ ಆಟಗಾರರನ್ನೇ ರಿಟೈನ್ ಮಾಡಿಕೊಳ್ಳದೇ ಕೈಬಿಟ್ಟವು.

ಸದ್ಯ ಈತನ ರೀತಿಯ ನತದೃಷ್ಟ ಕ್ರಿಕೆಟಿಗ ಮತ್ತೊಬ್ಬನಿಲ್ಲ: ಹನುಮ ವಿಹಾರಿ ಪರಿಸ್ಥಿತಿಗೆ ನೆಟ್ಟಿಗರ ಬೇಸರಸದ್ಯ ಈತನ ರೀತಿಯ ನತದೃಷ್ಟ ಕ್ರಿಕೆಟಿಗ ಮತ್ತೊಬ್ಬನಿಲ್ಲ: ಹನುಮ ವಿಹಾರಿ ಪರಿಸ್ಥಿತಿಗೆ ನೆಟ್ಟಿಗರ ಬೇಸರ

ಇನ್ನು ತಮ್ಮ ತಂಡಗಳಿಂದ ರಿಟೈನ್ ಆಗದ ಹಲವಾರು ಆಟಗಾರರ ಪೈಕಿ ನಾಯಕತ್ವ ನಿರ್ವಹಿಸಬಲ್ಲ ಸಾಮರ್ಥ್ಯವಿರುವ ಬಲಿಷ್ಠ ಆಟಗಾರರೂ ಕೂಡ ಇದ್ದರು. ಅದರಲ್ಲಿ ಪ್ರಮುಖವಾಗಿ ಪಂಜಾಬ್ ಕಿಂಗ್ಸ್ ತಂಡದಿಂದ ಹೊರಬಿದ್ದಿದ್ದ ಕೆಎಲ್ ರಾಹುಲ್ ಅವರನ್ನು ನೂತನವಾಗಿ ಆಯ್ಕೆಯಾಗಿರುವ ಲಕ್ನೋ ಫ್ರಾಂಚೈಸಿ ತನ್ನ ತೆಕ್ಕೆಗೆ ಹಾಕಿಕೊಂಡಿದ್ದು ನಾಯಕನ ಪಟ್ಟವನ್ನು ನೀಡಲಾಗಿದೆ ಎಂದು ವರದಿಯೊಂದು ತಿಳಿಸಿತ್ತು. ಹಾಗೂ ಅಹ್ಮದಾಬಾದ್ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಹೊರಬಿದ್ದಿರುವ ಶ್ರೇಯಸ್ ಅಯ್ಯರ್ ಅವರನ್ನು ಖರೀದಿಸಲಿದ್ದು ನಾಯಕನ ಸ್ಥಾನವನ್ನು ನೀಡಲಿದೆ ಎಂಬ ಸುದ್ದಿ ಕೂಡ ಹರಿದಾಡಿತ್ತು. ಆದರೆ ಇತ್ತೀಚಿಗಷ್ಟೆ ಹೊರಬಿದ್ದ ವರದಿಯೊಂದರ ಪ್ರಕಾರ ಅಹ್ಮದಾಬಾದ್ ಫ್ರಾಂಚೈಸಿ ಹಾರ್ದಿಕ್ ಪಾಂಡ್ಯರನ್ನು ಖರೀದಿಸಲಿದ್ದು ಆತನಿಗೆ ನಾಯಕನ ಸ್ಥಾನವನ್ನು ನೀಡುವುದು ಖಚಿತ ಎಂದು ಹೇಳಿದೆ. ಹೀಗಾಗಿ ಶ್ರೇಯಸ್ ಅಯ್ಯರ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಯಾವ ತಂಡವನ್ನು ಸೇರಲಿದ್ದಾರೆ ಎಂಬ ಪ್ರಶ್ನೆ ಎದ್ದಿತ್ತು. ಈ ಪ್ರಶ್ನೆಗೆ ಇದೀಗ ಟೈಮ್ಸ್ ಆಫ್ ಇಂಡಿಯಾದ ವರದಿ ಉತ್ತರಿಸಿದ್ದು ಶ್ರೇಯಸ್ ಅಯ್ಯರ್ ಈಗಾಗಲೇ ಅಸ್ತಿತ್ವದಲ್ಲಿರುವ ತಂಡವೊಂದರ ನಾಯಕನಾಗಲಿದ್ದಾರೆ ಎಂದು ಈ ಕೆಳಕಂಡಂತೆ ಮಾಹಿತಿಗಳನ್ನು ನೀಡಿದೆ.

ಶ್ರೇಯಸ್ ಅಯ್ಯರ್‌ಗೆ ನಾಯಕ ಪಟ್ಟ ನೀಡಲು ಆಸಕ್ತಿ ತೋರಿಸಿದ ಅಸ್ತಿತ್ವದಲ್ಲಿರುವ ಫ್ರಾಂಚೈಸಿ

ಶ್ರೇಯಸ್ ಅಯ್ಯರ್‌ಗೆ ನಾಯಕ ಪಟ್ಟ ನೀಡಲು ಆಸಕ್ತಿ ತೋರಿಸಿದ ಅಸ್ತಿತ್ವದಲ್ಲಿರುವ ಫ್ರಾಂಚೈಸಿ

ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ ಈಗಾಗಲೇ ಅಸ್ತಿತ್ವದಲ್ಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಶ್ರೇಯಸ್ ಅಯ್ಯರ್ ಅವರನ್ನು ಖರೀದಿಸಿ ಆತನಿಗೆ ನಾಯಕ ಸ್ಥಾನವನ್ನು ನೀಡುವಲ್ಲಿ ಆಸಕ್ತಿಯನ್ನು ತೋರಿಸುತ್ತಿದೆ ಎನ್ನಲಾಗಿದೆ. ಈಗಾಗಲೇ ನಾಯಕತ್ವದ ಗೊಂದಲದಲ್ಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಕಳೆದ ಆವೃತ್ತಿಯಲ್ಲಿ ಹೇಳಿಕೊಳ್ಳುವಂತಹ ಉತ್ತಮ ಪ್ರದರ್ಶನವನ್ನು ನೀಡದ ಇಯಾನ್ ಮಾರ್ಗನ್ ಅವರಿಗೆ ಮತ್ತೊಮ್ಮೆ ನಾಯಕನ ಸ್ಥಾನ ನೀಡುವುದು ಅನುಮಾನ ಎನ್ನಲಾಗುತ್ತಿದೆ.

ನಾಯಕತ್ವದ ಅನುಭವವನ್ನು ಹೊಂದಿದ್ದಾರೆ ಶ್ರೇಯಸ್ ಅಯ್ಯರ್

ನಾಯಕತ್ವದ ಅನುಭವವನ್ನು ಹೊಂದಿದ್ದಾರೆ ಶ್ರೇಯಸ್ ಅಯ್ಯರ್

ಇನ್ನು 2020ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದ ಶ್ರೇಯಸ್ ಅಯ್ಯರ್ ತಂಡವನ್ನು ಯಶಸ್ವಿಯಾಗಿ ಫೈನಲ್ ಹಂತದವರೆಗೂ ಮುನ್ನಡೆಸಿದ್ದರು. ಆದರೆ ಬಲಿಷ್ಠ ಮುಂಬೈ ಇಂಡಿಯನ್ಸ್ ಎದುರು ಫೈನಲ್ ಪಂದ್ಯದಲ್ಲಿ ಸೋಲನ್ನು ಕಂಡ ಡೆಲ್ಲಿ ಕ್ಯಾಪಿಟಲ್ಸ್ ಶ್ರೇಯಸ್ ಅಯ್ಯರ್ ನಾಯಕತ್ವದಡಿಯಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿತ್ತು.

South Africa ವಿರುದ್ಧ ಮಿಂಚಿನ ಪ್ರದರ್ಶನ ತೋರಿದ Virat Kohli | Oneindia Kannada
ಶ್ರೇಯಸ್ ಅಯ್ಯರ್ ಐಪಿಎಲ್ ಅಂಕಿ ಅಂಶ

ಶ್ರೇಯಸ್ ಅಯ್ಯರ್ ಐಪಿಎಲ್ ಅಂಕಿ ಅಂಶ

ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಶ್ರೇಯಸ್ ಅಯ್ಯರ್ ಇದುವರೆಗೂ ಒಟ್ಟು 87 ಪಂದ್ಯಗಳನ್ನಾಡಿದ್ದು 2375 ರನ್ ಕಲೆಹಾಕಿದ್ದಾರೆ. ಈ ಪೈಕಿ 12 ಪಂದ್ಯಗಳಲ್ಲಿ ಅಜೇಯನಾಗಿ ಉಳಿದಿರುವ ಶ್ರೇಯಸ್ ಅಯ್ಯರ್ ಇನ್ನಿಂಗ್ ಒಂದರಲ್ಲಿ ಗರಿಷ್ಠ 96 ರನ್ ಗಳಿಸಿದ್ದು, 16 ಅರ್ಧಶತಕಗಳನ್ನು ಬಾರಿಸಿದ್ದಾರೆ.

Story first published: Wednesday, January 12, 2022, 16:30 [IST]
Other articles published on Jan 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X