ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೆನ್ನೈ ಸೂಪರ್ ಕಿಂಗ್ಸ್ ಆಲ್‌ರೌಂಡರ್ ರವೀಂದ್ರ ಜಡೇಜಾ IPL 2022ಯಿಂದ ಔಟ್?

IPL 2022: Chennai Super Kings All-rounder Ravindra Jadeja May Be Ruled-out Due To Injury

ಕಳೆದು ಒಂದು ತಿಂಗಳಿನಲ್ಲಿ ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಚೆನ್ನೈ ಸೂಪರ್ ಕಿಂಗ್ಸ್ ನಾಯಕರಾಗುವುದರಿಂದ ಹಿಡಿದು ಹುದ್ದೆಯನ್ನು ತೊರೆಯುವವರೆಗೆ ಅವರ ಎಲ್ಲ ಯೋಜನೆಗಳು ತಲೆಕೆಳಗಾಗಿವೆ. ಇದೀಗ ಸೌರಾಷ್ಟ್ರ ಆಲ್‌ರೌಂಡರ್ ಐಪಿಎಲ್ ಪಂದ್ಯಾವಳಿಯ ಉಳಿದ ಭಾಗದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಆಡಿದ ಸೋಲಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ರವೀಂದ್ರ ಜಡೇಜಾ ಅವರ ಹೊಟ್ಟೆಯ ಮೇಲ್ಭಾಗದಲ್ಲಿ ಗಾಯಗೊಂಡಿದ್ದಾರೆ. ಇದರ ಪರಿಣಾಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಿಂದ ಹೊರಗುಳಿಬೇಕಾಯಿತು. ಆದರೆ ಆ ಮಹತ್ವದ ಪಂದ್ಯವನ್ನು ಸಿಎಸ್‌ಕೆ ಭರ್ಜರಿಯಾಗಿ ಗೆದ್ದಿತು.

ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವ ಆಸೆಯಲ್ಲಿರುವ ಚಹಲ್‌ಗೆ ಈ ನಾಲ್ವರದ್ದೇ ತಲೆನೋವು!ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವ ಆಸೆಯಲ್ಲಿರುವ ಚಹಲ್‌ಗೆ ಈ ನಾಲ್ವರದ್ದೇ ತಲೆನೋವು!

ಸಿಎಸ್‌ಕೆ ಶಿಬಿರವು ಕಳೆದ ಎರಡು ದಿನಗಳಿಂದ ಜಡೇಜಾರ ಗಾಯವನ್ನು ಮೌಲ್ಯಮಾಪನ ಮಾಡಿದ್ದು, ಇನ್ನೂ ಗುಣವಾಗಿಲ್ಲ ಎನ್ನುವುದು ಖಾತರಿಯಾಗಿದೆ. ಈಗ ಐಪಿಎಲ್ ಪಂದ್ಯಾವಳಿಯು ಅಂತ್ಯ ಭಾಗವನ್ನು ತಲುಪಿದೆ. ಇದೇ ವೇಳೆ ಸಿಎಸ್‌ಕೆ ಗುರುವಾರ ಮುಂಬೈ ಇಂಡಿಯನ್ಸ್ ಅನ್ನು ಎದುರಿಸಲಿದೆ.

IPL 2022: Chennai Super Kings All-rounder Ravindra Jadeja May Be Ruled-out Due To Injury

ಸಿಎಸ್‌ಕೆ ತಂಡದ ಮ್ಯಾನೇಜ್ಮೆಂಟ್ ಜಡೇಜಾಗೆ ಯಾವುದೇ ತೊಂದರೆ ನೀಡದೇ, ಆರ್‌ಸಿಬಿ ಅಥವಾ ರಾಜಸ್ಥಾನ ರಾಯಲ್ಸ್ ಇನ್ನೂ ಒಂದು ಪಂದ್ಯವನ್ನು ಗೆದ್ದು 16 ಅಂಕಗಳನ್ನು ತಲುಪುವಲ್ಲಿ ಯಶಸ್ವಿಯಾದರೆ, ಇಲ್ಲ ಒಂದು ವೇಳೆ ಸಿಎಸ್‌ಕೆ ಇನ್ನೊಂದು ಪಂದ್ಯವನ್ನು ಸೋಲನುಭವಿಸಿದರೆ ತಂಡಕ್ಕೆ ಪ್ಲೇಆಫ್‌ನ ಹೆಚ್ಚಿನ ಭರವಸೆ ಉಳಿಯುವುದಿಲ್ಲ.

ಸಿಎಸ್‌ಕೆ ತಮ್ಮ ಮುಂದಿನ ಮೂರು ಪಂದ್ಯಗಳನ್ನು ಗೆದ್ದರೆ, ಗರಿಷ್ಠ 14 ಅಂಕಗಳನ್ನು ತಲುಪಬಹುದಷ್ಟೆ. ಈಗಾಗಲೇ ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಈಗಾಗಲೇ ಕ್ರಮವಾಗಿ 18 ಮತ್ತು 16 ಅಂಕಗಳನ್ನು ಗಳಿಸಿವೆ.

ರವೀಂದ್ರ ಜಡೇಜಾಗೆ ಈ ಬಾರಿಯ ಐಪಿಎಲ್ ಅತ್ಯಂತ ಕಳಪೆ ಪ್ರದರ್ಶನದ ಋತುವಾಗಿದೆ. 10 ಪಂದ್ಯಗಳಲ್ಲಿ ಅವರು ಕೇವಲ 116 ರನ್ ಗಳಿಸಿದ್ದಾರೆ ಮತ್ತು 5 ವಿಕೆಟ್‌ಗಳನ್ನು ಪಡೆದಿದ್ದಾರೆ. ಯಾವುದೂ ಪಂದ್ಯ ಗೆಲ್ಲುವ ಅಂಕಿಅಂಶಗಳನ್ನು ನೀಡಿಲ್ಲ. ಜಡೇಜಾಗೆ ಸ್ವಲ್ಪ ವಿಶ್ರಾಂತಿ ಬೇಕಾಗಬಹುದು ಮತ್ತು ಅಕ್ಟೋಬರ್-ನವೆಂಬರ್‌ನಲ್ಲಿ ಟಿ20 ವಿಶ್ವಕಪ್‌ಗೆ ಭಾರತ ತಂಡಕ್ಕೆ ಆಯ್ಕೆಯಾಗಲು ಕಷ್ಟಪಟ್ಟು ಹಿಂತಿರುಗಬಹುದು.

Story first published: Wednesday, May 11, 2022, 15:05 [IST]
Other articles published on May 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X