ಧೋನಿಯನ್ನು ರೀಟೈನ್ ಮಾಡಿದ ಸಿಎಸ್‌ಕೆ: ರೈನಾಗೆ ಕೈಕೊಟ್ಟ ಫ್ರಾಂಚೈಸಿ, ಜಡ್ಡು, ಗಾಯಕ್ವಾಡ್‌ಗೆ ಮಣೆ

ಐಪಿಎಲ್‌ನ ಮಹಾ ಹರಾಜಿಗೆ ಸಿದ್ಧತೆಗಳು ಭರದಿಂದ ಸಾಗಿದೆ. ಈ ಮಧ್ಯೆ ಎಲ್ಲಾ ತಂಡಗಳು ಕೂಡ ಮುಂದಿನ ಹರಾಜಿಗೂ ಮುನ್ನ ರೀಟೈನ್ ಮಾಡಿಕೊಳ್ಳಬೇಕಾದ ಆಟಗಾರರು ಯಾರು ಎಂಬ ಬಗ್ಗೆ ಲೆಕ್ಕಾಚಾರಗಳನ್ನು ಮಾಡಿಕೊಳ್ಳುತ್ತಿದೆ.. ಭವಿಷ್ಯದ ಆವೃತ್ತಿಗಳನ್ನು ಗಮನದಲ್ಲಿಟ್ಟುಕೊಂಡು ಪ್ರಮುಖ ಆಟಗಾರರನ್ನು ತಂಡಗಳು ಉಳಿಸಿಕೊಳ್ಳಲು ಯೋಜನೆಗಳನ್ನು ರೂಪಿಸುತ್ತಿದೆ.

ಇನ್ನು ಟೀಟೆನ್ಶನ್ ವಿಚಾರವಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯನ್ನು ಮಾಡಿದೆ. ಈ ವರದಿಯ ಪ್ರಕಾರ ಚೆನ್ನೈ ಸೂಪರ್ ಕಿಂಗ್ಸ್ ಮುಂದಿನ ಮೂರು ಐಪಿಎಲ್ ಆವೃತ್ತಿಗೆ ಎಂಎಸ್ ಧೋನಿಯನ್ನು ರೀಟೈನ್ ಮಾಡಿಕೊಳ್ಳಲಿದೆ. ಎಂಎಸ್ ಧೋನಿಯನ್ನು ಹೊರತುಪಡಿಸಿ ಆಲ್‌ರೌಂಡರ್ ರವೀಂದ್ರ ಜಡೇಜಾ ಹಾಗೂ ಯುವ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಕೂಡ ಚೆನ್ನೈ ಸೂಪರ್ ಕಿಂಗ್ಸ್ ತಮಂಡದಲ್ಲಿಯೇ ಮುಂದುವರಿಯಲಿದ್ದಾರೆ ಎನ್ನಲಾಗಿದೆ.

ಆಟಗಾರರು ಏನು ತಿನ್ನಬೇಕು, ಏನು ತಿನ್ನಬಾರದು ಎಂಬುದನ್ನ ಬಿಸಿಸಿಐ ತಿಳಿಸಲ್ಲ: ಅರುಣ್ ಧುಮಾಲ್ಆಟಗಾರರು ಏನು ತಿನ್ನಬೇಕು, ಏನು ತಿನ್ನಬಾರದು ಎಂಬುದನ್ನ ಬಿಸಿಸಿಐ ತಿಳಿಸಲ್ಲ: ಅರುಣ್ ಧುಮಾಲ್

ಇನ್ನು ಬಿಸಿಸಿಐ ನಿಯಮದ ಪ್ರಕಾರ ನಾಲ್ವರು ಆಟಗಾರರನ್ನು ಒಂದು ತಂಡ ರೀಟೈನ್ ಮಾಡಿಕೊಳ್ಳಲು ಅವಕಾಶವಿದೆ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಇಂಗ್ಲೆಂಡ್‌ನ ಆಲ್‌ರೌಂಡರ್ ಮೊಯೀನ್ ಅವರನ್ನು ರೀಟೈನ್ ಮಾಡಿಕೊಳ್ಳುವ ಪ್ರಯತ್ನದಲ್ಲಿದೆ ಎನ್ನಲಾಗಿದೆ. ಈಗಾಗಲೇ ಬಿಸಿಸಿಐ ಕಾರ್ಯದರ್ಶಿ ಜೈ ಶಾ ಹೇಳಿದ ಪ್ರಕಾರ ಮುಂದಿನ ಆವೃತ್ತಿಯ ಐಪಿಎಲ್ ಭಾರತದಲ್ಲಿಯೇ ನಡೆಯಲಿದ್ದು ಚೆನ್ನೈನ ನಿಧಾನಗತಿಯ ಹಾಗೂ ಸ್ಪಿನ್ ಪಿಚ್‌ನಲ್ಲಿ ತಂಡಕ್ಕೆ ಹೆಚ್ಚು ಅನುಕೂಲವಾಗಬಲ್ಲ ಬೌಲರ್ ಎಂಬ ಲೆಕ್ಕಾಚಾರದಲ್ಲಿ ಮೊಯೀನ್ ಅಲಿ ಮೇಲೆ ಸಿಎಸ್‌ಕೆ ಫ್ರಾಂಚೈಸಿ ಕಣ್ಣಿಟ್ಟಿದೆ. ಮೊಯೀನ್ ಅಲಿ ಇದಕ್ಕೆ ಒಪ್ಪದಿದ್ದಲ್ಲಿ ಎಡಗೈ ಮಧ್ಯಮ ವೇಗಿ ಆಲ್‌ರೌಂಡರ್ ಸ್ಯಾಮ್ ಕರನ್ ಅವರನ್ನು ಸಿಎಸ್‌ಕೆ ಫ್ರಾಂಚೈಸಿ ತಂಡದಲ್ಲಿ ಉಳಿಸಿಕೊಳ್ಳಲಿದೆ ಎನ್ನಲಾಗಿದೆ.

ಎಂಎಸ್ ಧೋನಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ರೀಟೈನ್ ಮಾಡುವುದು ಅಚ್ಚರಿಯ ಸಂಗತಿಯೇನೂ ಅಲ್ಲ. ಸಿಎಸ್‌ಕೆ ಫ್ರಾಂಚೈಸಿಗೆ ಎಂಎಸ್ ಧೋನಿಯಿಂದಾಗಿ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚುತ್ತದೆ. ಈ ಮಧ್ಯೆ ಇತ್ತೀಚೆಗಷ್ಟೇ ಚೆನ್ನೈನಲ್ಲಿ ನಡೆದ ಚೆನ್ನ್ಐ ಸೂಪರ್ ಕಿಂಗ್ಸ್ ತಂಡದ ಕಾರ್ಯಕ್ರಮದಲ್ಲಿ ಧೋನಿ ಚೆನ್ನೈನಲ್ಲಿಯೇ ತನ್ನ ಟಿ20 ಕ್ರಿಕೆಟ್‌ನ ಅಂತಿಮ ಪಂದ್ಯ ನಡೆಯುತ್ತದೆ ಎಂದಿದ್ದರು. ಇದು ಧೋನಿ ನಿವೃತ್ತಿಯ ಬಗ್ಗೆ ಮತ್ತೆ ಚರ್ಚೆಗೆ ಕಾರಣವಾಗಿದೆ.

ಭಾರತ-ನ್ಯೂಜಿಲೆಂಡ್ ಮೊದಲ ಟೆಸ್ಟ್‌: ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11ಭಾರತ-ನ್ಯೂಜಿಲೆಂಡ್ ಮೊದಲ ಟೆಸ್ಟ್‌: ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11

"ನಾನು ಯಾವಾಗಲೂ ನನ್ನ ಕ್ರಿಕೆಟ್‌ ಬಗ್ಗೆ ಯೋಜನೆಗಳನ್ನು ಹಾಕಿಕೊಂಡಿರುತ್ತೇನೆ. ನನ್ನ ಕೊನೆಯ ಏಕದಿನ ಪಂದ್ಯ ಭಾರತದಲ್ಲಿ ರಾಂಚಿಯಲ್ಲಿ ಆಡಿದ್ದೆ. ಬಹುಶಃ ನನ್ನ ಅಂತಿಮ ಟಿ20 ಪಂದ್ಯ ಚೆನ್ನೈನಲ್ಲಿ ನಡೆಯಲಿದೆ. ಅದು ಮುಂದಿನ ವರ್ಷ ಆಗಬಹುದು ಅಥವಾ ಐದು ವರ್ಷಗಳಲ್ಲಿ ಆಗಬಹುದು. ಅದು ನನಗೆ ತಿಳಿದಿಲ್ಲ" ಎಂದು ಧೋನಿ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದರು.

'ಆತ ಪಾಪದ ಹುಡುಗ'; ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ಗೆ ಆತನನ್ನು ಆಯ್ಕೆ ಮಾಡದಿರುವುದಕ್ಕೆ ಜಡೇಜಾ ಬೇಸರ'ಆತ ಪಾಪದ ಹುಡುಗ'; ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ಗೆ ಆತನನ್ನು ಆಯ್ಕೆ ಮಾಡದಿರುವುದಕ್ಕೆ ಜಡೇಜಾ ಬೇಸರ

ಇನ್ನು ಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಸುರೇಶ್ ರೈನಾ ಅವರನ್ನು ರೀಟೈನ್ ಮಾಡಿಕೊಳ್ಳದಿರಲು ತೀರ್ಮಾನಿಸಿದೆ. ಭಾರತೀಯ ಕ್ರಿಕೆಟ್‌ನ ಈ ಮಾಜಿ ಆಟಗಾರ ಈ ಬಾರಿಯ ಆವೃತ್ತಿಯಲ್ಲಿ ಫಾರ್ಮ್ ಕಳೆದುಕೊಂಡಿದ್ದರು. ಅಲ್ಲದೆ ನಿರ್ಣಾಯಕ ನಾಕ್‌ಔಟ್ ಪಂದ್ಯಗಳಲ್ಲಿ ಆಡುವ ಬಳಗದಿಂದ ಹೊರಗುಳಿದಿದ್ದರು.

ಧೋನಿ ಸಿಎಸ್‌ಕೆ ತಂಡದಲ್ಲೇ ಇರ್ತಾರೆ ಆದರೆ ರೈನಾ ಮಾತ್ರ ಆಚೆ | Oneindia Kannada

ಮುಂದಿನ ಐಪಿಎಲ್ ಆವೃತ್ತಿಯ ಕುರಿತಾಗಿ ಮತ್ತೊಂದು ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಟೂರ್ನಿಯ ಉದ್ಘಾಟನಾ ಪಂದ್ಯ ಮುಂದಿನ ವರ್ಷದ ಏಪ್ರಿಲ್ 2ರಂದು ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯಲಿದ್ದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಈ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ ಎನ್ನಲಾಗಿದೆ.

For Quick Alerts
ALLOW NOTIFICATIONS
For Daily Alerts
Story first published: Wednesday, November 24, 2021, 22:29 [IST]
Other articles published on Nov 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X