ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡು ಪ್ಲೆಸಿಸ್ ಮಾಡುತ್ತಿರುವ ಈ ತಪ್ಪು ಆರ್‌ಸಿಬಿಯ ಟ್ರೋಫಿ ಕನಸನ್ನು ಭಗ್ನಗೊಳಿಸಬಹುದು; ಕೊಹ್ಲಿಗೂ ಹಿಂಸೆ!

IPL 2022: Du Plessis poor strike rate during powerplay is putting Kohli on pressure says Brad Hogg

ಈ ಬಾರಿಯ ಐಪಿಎಲ್ ಟೂರ್ನಿಯ ಲೀಗ್ ಹಂತದಲ್ಲಿ 14 ಪಂದ್ಯಗಳನ್ನಾಡಿ 8 ಪಂದ್ಯಗಳಲ್ಲಿ ಜಯ ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 16 ಅಂಕಗಳನ್ನು ಗಳಿಸುವುದರ ಮೂಲಕ ಪ್ಲೇ ಆಫ್ ಸುತ್ತಿಗೆ ಪ್ರವೇಶವನ್ನು ಪಡೆದುಕೊಂಡು, ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಇಂದು ( ಮೇ 25 ) ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದೆ.

RCB vs LSG: ಎಲಿಮಿನೇಟರ್ ಪಂದ್ಯಕ್ಕೆ ಮಳೆ ಕಾಟ? ಇಲ್ಲಿದೆ ಹವಾಮಾನ ವರದಿ ಮತ್ತು ಸಂಭಾವ್ಯ ಆಡುವ ಬಳಗRCB vs LSG: ಎಲಿಮಿನೇಟರ್ ಪಂದ್ಯಕ್ಕೆ ಮಳೆ ಕಾಟ? ಇಲ್ಲಿದೆ ಹವಾಮಾನ ವರದಿ ಮತ್ತು ಸಂಭಾವ್ಯ ಆಡುವ ಬಳಗ

ಇತ್ತಂಡಗಳ ನಡುವಿನ ಈ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಪಂದ್ಯದಲ್ಲಿ ಜಯ ಸಾಧಿಸುವ ತಂಡ ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಪ್ರವೇಶವನ್ನು ಪಡೆದುಕೊಂಡು ಫೈನಲ್ ಪ್ರವೇಶಿಸುವುದಕ್ಕಾಗಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಾಟವನ್ನು ನಡೆಸಲಿದ್ದರೆ, ಪಂದ್ಯದಲ್ಲಿ ಸೋಲುವ ತಂಡ ಟೂರ್ನಿಯಿಂದ ಹೊರಬೀಳಲಿದೆ.

GT vs RR: ಫೈನಲ್ ಆಸೆ ಛಿದ್ರಗೊಳಿಸಿ ಎದುರಾಳಿ ರಾಜಸ್ಥಾನ್ ಬಳಿ ಕ್ಷಮೆ ಕೇಳಿದ ಮಿಲ್ಲರ್! ಕಾರಣವೇನು?GT vs RR: ಫೈನಲ್ ಆಸೆ ಛಿದ್ರಗೊಳಿಸಿ ಎದುರಾಳಿ ರಾಜಸ್ಥಾನ್ ಬಳಿ ಕ್ಷಮೆ ಕೇಳಿದ ಮಿಲ್ಲರ್! ಕಾರಣವೇನು?

ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಈ ಎಲಿಮಿನೇಟರ್ ಪಂದ್ಯ ಬಹುಮುಖ್ಯದ್ದಾಗಿದೆ. ಇನ್ನು ತನ್ನ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರಾಟ್ ಕೊಹ್ಲಿ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಭರ್ಜರಿ ಜಯವನ್ನು ಸಾಧಿಸಿತ್ತು. ಅದೇ ರೀತಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧವೂ ಕೂಡ ಪ್ರದರ್ಶನ ನೀಡಿ ವಿಜಯಲಕ್ಷ್ಮಿಯನ್ನು ಒಲಿಸಿಕೊಳ್ಳುವತ್ತ ಚಿತ್ತ ನೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇದೀಗ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್ ಗಂಭೀರವಾದ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ತಂಡದ ಆಟಗಾರನೋರ್ವನ ಸ್ಟ್ರೈಕ್ ರೇಟ್ ಕುರಿತು ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್ ಮೂಲಕ ಮಾಹಿತಿ ನೀಡಿರುವ ಬ್ರಾಡ್ ಹಾಗ್ ಈ ಕೆಳಕಂಡಂತೆ ಎಚ್ಚರಿಸಿದ್ದಾರೆ.

ಪವರ್ ಪ್ಲೇನಲ್ಲಿ ಈತನ ಸ್ಟ್ರೈಕ್ ರೇಟ್ ಉತ್ತಮವಾಗಿಲ್ಲ

ಪವರ್ ಪ್ಲೇನಲ್ಲಿ ಈತನ ಸ್ಟ್ರೈಕ್ ರೇಟ್ ಉತ್ತಮವಾಗಿಲ್ಲ

ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಸ್ಟ್ರೈಕ್ ರೇಟ್ ಕುರಿತು ಆತಂಕ ಹೊರಹಾಕಿದ್ದಾರೆ. ಫಾಫ್ ಡು ಪ್ಲೆಸಿಸ್ ಟೂರ್ನಿಯಲ್ಲಿ ಉತ್ತಮವಾಗಿ ರನ್ ಕಲೆಹಾಕಿದ್ದರೂ ಸಹ ಪವರ್ ಪ್ಲೇ ಓವರ್‌ಗಳಲ್ಲಿ ಅವರ ಸ್ಟ್ರೈಕ್ ರೇಟ್ ಕೇವಲ 104 ಮಾತ್ರ ಇದೆ ಎಂದು ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಇದರಿಂದ ಕೊಹ್ಲಿ ಮೇಲೆ ಒತ್ತಡ ಹೆಚ್ಚಾಗುತ್ತಿದೆ

ಇದರಿಂದ ಕೊಹ್ಲಿ ಮೇಲೆ ಒತ್ತಡ ಹೆಚ್ಚಾಗುತ್ತಿದೆ

ಫಾಫ್ ಡು ಪ್ಲೆಸಿಸ್ ಪವರ್ ಪ್ಲೇ ಸ್ಟ್ರೈಕ್ ರೇಟ್ ಉತ್ತಮವಾಗಿಲ್ಲ ಎಂದಿರುವ ಬ್ರಾಡ್ ಹಾಗ್, ಡು ಪ್ಲೆಸಿಸ್ ಸ್ಪೋಟಕ ಆಟ ಆಡದೇ ಇರುವುದರಿಂದ ಮತ್ತೊಂದು ತುದಿಯಲ್ಲಿ ಬ್ಯಾಟಿಂಗ್ ನಡೆಸುವ ವಿರಾಟ್ ಕೊಹ್ಲಿ ಮೇಲೆ ಒತ್ತಡ ಹೆಚ್ಚಾಗುತ್ತಿದೆ ಎಂದು ಹೇಳಿಕೆಯನ್ನು ನೀಡಿದ್ದಾರೆ.

ಫಾಫ್ ಡು ಪ್ಲೆಸಿಸ್ ಈ ಆಟವಾಡಿದರೆ ಲಕ್ನೋಗೆ ಸುಲಭ ತುತ್ತಾಗಲಿದ್ದಾರೆ

ಫಾಫ್ ಡು ಪ್ಲೆಸಿಸ್ ಈ ಆಟವಾಡಿದರೆ ಲಕ್ನೋಗೆ ಸುಲಭ ತುತ್ತಾಗಲಿದ್ದಾರೆ

ಇನ್ನೂ ಮುಂದುವರಿದು ಮಾತನಾಡಿರುವ ಬ್ರಾಡ್ ಹಾಗ್ ಪವರ್ ಪ್ಲೇ ಸಮಯದಲ್ಲಿ ಅಬ್ಬರಿಸದ ಫಾಫ್ ಡು ಪ್ಲೆಸಿಸ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡದ ವೇಗಿಗಳಾದ ದುಷ್ಮಂತ ಚಮೀರ ಮತ್ತು ಆವೇಶ್ ಖಾನ್ ಸುಲಭವಾಗಿ ಕಟ್ಟಿ ಹಾಕಲಿದ್ದಾರೆ ಎಂದು ಎಚ್ಚರಿಸಿದ್ದಾರೆ. ಈ ಮೂಲಕ ನಿರ್ಣಾಯಕ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯ ಸಾಧಿಸಬೇಕೆಂದರೆ ಫಾಫ್ ಡು ಪ್ಲೆಸಿಸ್ ಪವರ್ ಪ್ಲೇ ಓವರ್‌ಗಳಲ್ಲಿ ಅಬ್ಬರಿಸಬೇಕಾಗಿದೆ.

Story first published: Wednesday, May 25, 2022, 16:26 [IST]
Other articles published on May 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X