ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೋಚಕ ಪಂದ್ಯದಲ್ಲಿ ಗೆದ್ದ ಲಕ್ನೋ: ಡಗೌಟ್‌ನಲ್ಲಿ ಗಂಭೀರ್ ಘರ್ಜನೆಗೆ ದಂಗಾದ ಅಭಿಮಾನಿಗಳು: ವಿಡಿಯೋ

IPL 2022: Fans react to Gautam Gambhirs wild celebration after LSG qualified for the IPL 2022 playoffs
Photo Credit: BCCI/IPL

ಇಂಡಿಯನ್ ಪ್ರೀಮಿಯರ್ ಲೀಗ್‌ನ 15ನೇ ಆವೃತ್ತಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯಕ್ಕೆ ಸನಿಹದಲ್ಲಿದೆ. ಹೀಗಾಗಿ ಸೆಣೆಸಾಟ ಮತ್ತಷ್ಟು ರೋಚಕವಾಗಿ ನಡೆಯುತ್ತಿದ್ದು ಅಭಿಮಾನಿಗಳಿಗೆ ರೋಮಾಂಚನಕಾರಿ ಅನುಭವ ದೊರೆಯುತ್ತಿದೆ. ಅದರಲ್ಲೂ ಬುಧವಾರ ನಡೆದ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವಿನ ಪಂದ್ಯ ಈ ಆವೃತ್ತಿಯ ಅತ್ಯಂತ ರೋಚಕ ಪಂದ್ಯಗಳಲ್ಲಿ ಒಂದಾಗಿದೆ. ಕಡೆಯ ಹಂತದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಊಹಿಸಲು ಸಾಧ್ಯವಾಗದ ರೀತಿಯಲ್ಲಿ ತಿರುಗಿ ಬಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ಗೆಲುವು ಸಾಧಿಸಿ ಬಿಟ್ಟಿತು ಎಂಬಂತಾ ಸಂದರ್ಭದಲ್ಲಿ ಎಡವಿ ಸೋಲು ಕಾಣ ಬೇಕಾಯಿತು.

ಈ ರೋಮಾಂಚನಕಾರಿ ಗೆಲುವಿನೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಈ ಬಾರಿಯ ಆವೃತ್ತಿಯಲ್ಲಿ ಪ್ಲೇಆಫ್‌ಗೆ ಎಂಟ್ರಿಕೊಟ್ಟ ಎರಡನೇ ತಂಡವಾಗಿದೆ. ಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ಸ್ಪರ್ಧಿಸುತ್ತಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡ ಟೂರ್ನಿಯ ಆರಂಭದಿಂದಲೂ ಅದ್ಭುತ ಪ್ರದರ್ಶನ ನೀಡಿಕೊಂಡು ಬಂದಿತ್ತು. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿದ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ಸಂಭ್ರಮಾಚರಣೆ ಕಂಡು ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

RCB vs GT: ಆರ್‌ಸಿಬಿಗೆ ಮಾಡು ಇಲ್ಲವೇ ಮಡಿ ಪಂದ್ಯ; ಈ ಆಟಗಾರನದ್ದೇ ದೊಡ್ಡ ಚಿಂತೆ!RCB vs GT: ಆರ್‌ಸಿಬಿಗೆ ಮಾಡು ಇಲ್ಲವೇ ಮಡಿ ಪಂದ್ಯ; ಈ ಆಟಗಾರನದ್ದೇ ದೊಡ್ಡ ಚಿಂತೆ!

ಅಂತಿಮ ಓವರ್‌ ಥ್ರಿಲ್ಲರ್

ಅಂತಿಮ ಓವರ್‌ ಥ್ರಿಲ್ಲರ್

ಲಕ್ನೋ ಸೂಪರ್ ಜೈಂಟ್ಸ್ ತಂಡ ನೀಡಿದ್ದ 211 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಕೆಕೆಆರ್ ಅಂತಿಮ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿತು. ಅದರಲ್ಲೂ ರಿಂಕು ಸಿಂಗ್ ಹಾಗೂ ಸುನಿಲ್ ನರೈನ್ ಕೆಕೆಆರ್ ತಂಡವನ್ನು ಬಹುತೇಕ ಗೆಲುವಿನ ಸನಿಹಕ್ಕೆ ತಂದು ನಿಲ್ಲಿಸಿದ್ದರು. ಅಂತಿಮ ಓವರ್‌ನಲ್ಲಿ ಕೆಕೆಆರ್ 21 ರನ್‌ಗಳಿಸುವ ಕಠಿಣ ಸವಾಲು ಇತ್ತು. ಸ್ಟೋಯ್ನಿಸ್ ಎಸೆದ ಈ ಅಂತಿಮ ಓವರ್‌ನ ಮೊದಲ ಎಸೆತವನ್ನು ಸ್ಟ್ರೈಕ್‌ನಲ್ಲಿದ್ದ ರಿಂಕು ಸಿಂಗ್ ಬೌಂಡರಿಗಟ್ಟಿದ್ದರು. ನಂತರದ ಎರಡು ಎಸೆತಗಳು ಸಿಕ್ಸರ್‌ಗೆ ಅಟ್ಟಲ್ಪಟ್ಟವು. ಈ ಮೂಲಕ ಮೊದಲ ಮೂರು ಎಸೆತಗಳಲ್ಲಿಯೇ 16 ರನ್‌ಗಳನ್ನು ಗಳಿಸಿತು ಕೆಕೆಆರ್. ಈಗ ಕೆಕೆಆರ್‌ಗೆ ಅಗತ್ಯವಿದ್ದ ರನ್ ಮೂರು ಎಸೆತಗಳಲ್ಲಿ ಕೇವಲ 5. ನಾಲ್ಕನೇ ಎಸೆತದಲ್ಲಿ ಮತ್ತೆರಡು ರನ್‌ಗಳು ಕೆಕೆಆರ್‌ಗೆ ಸೇರ್ಪಡೆಯಾಗಿತ್ತು. ಹೀಗಾಗಿ ಗೆಲ್ಲಲು ಕೆಕೆಆರ್ ಎರಡು ಎಸೆತಗಳಲ್ಲಿ ಮೂರು ರನ್‌ಗಳನ್ನು ಗಳಿಸಬೇಕಿತ್ತು.

ಆಘಾತ ಅನುಭವಿಸಿದ ಕೆಕೆಆರ್

ಆಘಾತ ಅನುಭವಿಸಿದ ಕೆಕೆಆರ್

ಈಗ ಪಂದ್ಯಕ್ಕೆ ಮತ್ತೊಂದು ರೋಚಕ ತಿರುವು ದೊರೆಯಿತು. ಸ್ಪೋಟಕ ಬ್ಯಾಟಿಂಗ್ ಮಾಡುತ್ತೊಇದ್ದ ರಿಂಕು ಸಿಂಗ್ ದೊಡ್ಡ ಹೊಡೆತವನ್ನು ಬಾರಿಸುವ ಯತ್ನದಲ್ಲಿ ವಿಫಲವಾದರು. ಎವಿನ್ ಲೂಯಿಸ್ ಹಿಡಿದ ಅದ್ಭುತ ಕ್ಯಾಚ್‌ಗೆ ರಿಂಕು ವಿಕೆಟ್ ಒಪ್ಪಿಸಬೇಕಾಯಿತು. ಕೊನೆಯ ಎಸೆತದಲ್ಲಿ ಮೂರು ರನ್‌ಗಳಿಸುವ ಸವಾಲು ಇದ್ದಾಗ ಉಮೇಶ್ ಯಾದವ್ ಕ್ರೀಸ್‌ಗೆ ಇಳಿದಿದ್ದರು. ಈ ಎಸೆತದಲ್ಲಿ ಉಮೇಶ್ ಯಾದವ್ ಕ್ಲೀನ್ ಬೌಲ್ಡ್ ಆದರು. ಈ ಮೂಲಕ ಕೆಕೆಆರ್ ಆಘಾತಕಾರಿ ಸೋಲು ಅನುಭವಿಸಿತು. ಗೆಲುವಿನ ಸನಿಹಕ್ಕೆ ತಲುಪಿದ್ದರೂ ಕೆಕೆಆರ್‌ಗೆ ಗೆಲುವಿನ ರುಚಿ ಅನುಭವಿಸಲು ಸಾಧ್ಯವಾಗಲಿಲ್ಲ.

ಡಗೌಟ್‌ನಲ್ಲಿ ಗಂಭೀರ್ ಸಂಭ್ರಮ

ಸೋಲುವ ಹಂತಕ್ಕೆ ತಲುಪಿದ್ದ ಪಂದ್ಯದಲ್ಲಿ ಗೆಲುವು ಸಾಧಿಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಪ್ಲೇಆಫ್‌ಗೆ ಈ ಮೂಲಕ ಎಂಟ್ರಿ ಪಡೆಯಿತು. ಈ ಸಂದರ್ಭದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ಆಕ್ರಮಣಕಾರಿಯಾಗಿ ಸಂಭ್ರಮಿಸುವ ಮೂಲಕ ಆಟದಲ್ಲಿ ತಮ್ಮ ತಲ್ಲೀನತೆಯನ್ನು ವ್ಯಕ್ತಪಡಿಸಿದರು. ಗಂಭೀರ್ ಸಂಭ್ರಮಿಸಿದ ರೀತಿ ಕಂಡು ಅಭಿಮಾನಿಗಳಿಗೂ ಅಚ್ಚರಿಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ನಾನಾ ರೀತಿಯಲ್ಲಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

ಕಣಕ್ಕಿಳಿದ ಆಡುವ ಬಳಗ

ಕಣಕ್ಕಿಳಿದ ಆಡುವ ಬಳಗ

ಕೆಕೆಆರ್: ವೆಂಕಟೇಶ್ ಅಯ್ಯರ್, ಅಭಿಜೀತ್ ತೋಮರ್, ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್), ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಉಮೇಶ್ ಯಾದವ್, ಟಿಮ್ ಸೌಥಿ, ವರುಣ್ ಚಕ್ರವರ್ತಿ
ಬೆಂಚ್: ಶೆಲ್ಡನ್ ಜಾಕ್ಸನ್, ಬಾಬಾ ಇಂದ್ರಜಿತ್, ಆರೋನ್ ಫಿಂಚ್, ಮೊಹಮ್ಮದ್ ನಬಿ, ಚಾಮಿಕಾ ಕರುಣಾರತ್ನೆ, ಅನುಕುಲ್ ರಾಯ್, ಶಿವಂ ಮಾವಿ, ಪ್ರಥಮ್ ಸಿಂಗ್, ಅಮನ್ ಹಕೀಮ್ ಖಾನ್, ಅಶೋಕ್ ಶರ್ಮಾ, ರಮೇಶ್ ಕುಮಾರ್, ಹರ್ಷಿತ್ ರಾಣಾ

ಎಲ್‌ಎಸ್‌ಜಿ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಕೆಎಲ್ ರಾಹುಲ್ (ನಾಯಕ), ಎವಿನ್ ಲೂಯಿಸ್, ದೀಪಕ್ ಹೂಡಾ, ಮನನ್ ವೋಹ್ರಾ, ಮಾರ್ಕಸ್ ಸ್ಟೊಯಿನಿಸ್, ಜೇಸನ್ ಹೋಲ್ಡರ್, ಕೃಷ್ಣಪ್ಪ ಗೌತಮ್, ಮೊಹ್ಸಿನ್ ಖಾನ್, ಅವೇಶ್ ಖಾನ್, ರವಿ ಬಿಷ್ಣೋಯ್
ಬೆಂಚ್: ಆಯುಷ್ ಬದೋನಿ, ಕೃನಾಲ್ ಪಾಂಡ್ಯ, ದುಷ್ಮಂತ ಚಮೀರಾ, ಮನೀಶ್ ಪಾಂಡೆ, ಶಹಬಾಜ್ ನದೀಮ್, ಕೈಲ್ ಮೇಯರ್ಸ್, ಅಂಕಿತ್ ರಾಜ್‌ಪೂತ್, ಆಂಡ್ರ್ಯೂ ಟೈ, ಕರಣ್ ಶರ್ಮಾ, ಮಯಾಂಕ್ ಯಾದವ್

RCB vs GT ಗೆಲ್ಲೋದು ಯಾರು? | Oneindia Kannada

Story first published: Thursday, May 19, 2022, 19:11 [IST]
Other articles published on May 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X