IPL 2022: ಸೂರ್ಯಕುಮಾರ್ ಯಾದವ್ ಬದಲು ಈ ಆಟಗಾರ ಮುಂಬೈಗೆ ಸೇರ್ಪಡೆ

ಎಡಗೈ ಮಣಿಕಟ್ಟಿನ ಸ್ನಾಯುವಿನ ಗಾಯದಿಂದಾಗಿ ಸೂರ್ಯಕುಮಾರ್ ಯಾದವ್ ಐಪಿಎಲ್ 2022 ರಿಂದ ಈಗಾಗಲೇ ಹೊರಗುಳಿದಿದ್ದು, ಆತನ ಬದಲಿಗೆ ಆಕಾಶ್ ಮದ್ವಾಲ್‌ರನ್ನು ತಂಡಕ್ಕೆ ಅಧಿಕೃತವಾಗಿ ಸೇರಿಸಿಕೊಂಡಿರುವುದಾಗಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತಿಳಿಸಿದೆ.

ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ವೇಳೆ ಸೂರ್ಯಕುಮಾರ್ ಯಾದವ್ ಗಾಯಗೊಂಡರು. ಕಳೆದ ಪಂದ್ಯ ಸೇರಿದಂತೆ ಒಟ್ಟು ಮೂರು ಪಂದ್ಯಗಳಿಗೆ ಸೂರ್ಯಕುಮಾರ್ ಯಾದವ್ ಅಲಭ್ಯರಾಗಿದ್ದಾರೆ. ಹೀಗಾಗಿ ಮುಂದಿನ ಎರಡು ಪಂದ್ಯಗಳಲ್ಲಿ ಆಕಾಶ್ ಮದ್ವಾಲ್‌ ಮುಂಬೈ ಇಂಡಿಯನ್ಸ್ ಜರ್ಸಿ ತೊಡಲಿದ್ದಾರೆ.

ಮಾಧ್ವಲ್ ಅವರು ತಮ್ಮ ಮೂಲ ಬೆಲೆ 20 ಲಕ್ಷ ರೂಪಾಯಿಗೆ ಸಹಿ ಹಾಕಿದ್ದಾರೆ ಎಂದು ಐಪಿಎಲ್‌ನ ಅಧಿಕೃತ ವೆಬ್‌ಸೈಟ್ ಸೋಮವಾರ ಸಂಜೆ ಹೇಳಿಕೆಯಲ್ಲಿ ದೃಢಪಡಿಸಿದೆ.

MI vs SRH: ಪಂದ್ಯದಲ್ಲಿ ನಿಮ್ಮ ಡ್ರೀಮ್ ಟೀಮ್ ಗೆಲ್ಲಲು ತಂಡವನ್ನು ಹೀಗೆ ರಚಿಸಿ, ಈತನಿಗೆ ನಾಯಕತ್ವ ನೀಡಿMI vs SRH: ಪಂದ್ಯದಲ್ಲಿ ನಿಮ್ಮ ಡ್ರೀಮ್ ಟೀಮ್ ಗೆಲ್ಲಲು ತಂಡವನ್ನು ಹೀಗೆ ರಚಿಸಿ, ಈತನಿಗೆ ನಾಯಕತ್ವ ನೀಡಿ

''ಉತ್ತರಾಖಂಡ್‌ನ 28 ವರ್ಷ ವಯಸ್ಸಿನ ಮಧ್ಯಮ ವೇಗಿ ಮಾಧ್ವಲ್ ಅವರು 15 ಟಿ20 ಪಂದ್ಯಗಳನ್ನು ಆಡಿದ್ದಾರೆ ಮತ್ತು 26.60 ರ ಸರಾಸರಿಯಲ್ಲಿ 15 ವಿಕೆಟ್ ಪಡೆದಿದ್ದಾರೆ. ಅವರು 20 ಲಕ್ಷ ರೂಪಾಯಿ ಬೆಲೆಯಲ್ಲಿ ಮುಂಬೈ ಇಂಡಿಯನ್ಸ್‌ಗೆ ಸೇರುತ್ತಾರೆ, "ಎಂದು ಐಪಿಎಲ್‌ ಆಡಳಿತ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ.

ಮಾಧ್ವಲ್ 2019 ರಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಸಮಯದಲ್ಲಿ ಉತ್ತರಾಖಂಡ್‌ಗೆ ಪಾದಾರ್ಪಣೆ ಮಾಡಿದರು. ಅವರು ಈಗಾಗಲೇ ಬೆಂಬಲ ತಂಡದ ಭಾಗವಾಗಿದ್ದರು ಮತ್ತು ಅವರು ಈಗ ಲೀಗ್‌ನಲ್ಲಿ ತಮ್ಮ ಅಂತಿಮ ಎರಡು ಪಂದ್ಯಗಳಿಗೆ ಮುಂಚಿತವಾಗಿ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಇನ್ನು ಐಪಿಎಲ್ 2022ರ ಸೀಸನ್‌ನಲ್ಲಿ 8 ಪಂದ್ಯಗಳನ್ನ ಆಡಿರುವ ಸೂರ್ಯಕುಮಾರ್ ಯಾದವ್‌ 43.29ರ ಬ್ಯಾಟಿಂಗ್ ಸರಾಸರಿ ಜೊತೆಗೆ 145.67 ಸ್ಟ್ರೈಕ್‌ರೇಟ್‌ನಲ್ಲಿ 303 ರನ್ ಕಲೆಹಾಕಿದ್ದಾರೆ. ಮೂರು ಅರ್ಧಶತಕ ದಾಖಲಿಸಿರುವ ಸೂರ್ಯಕುಮಾರ್ ಯಾದವ್ ಅಜೇಯ 68 ಗರಿಷ್ಠ ರನ್ ಸಿಡಿಸಿದ್ದಾರೆ. ಟೂರ್ನಿಯಲ್ಲಿ 16 ಸಿಕ್ಸರ್ ಕಲೆಹಾಕಿದ್ದಾರೆ.

ಪಂಜಾಬ್ ತಂಡಕ್ಕೆ ಲಕ್ಕಿ ಚಾರ್ಮ್ ಈತ !! | Oneindia Kannada

ಮುಂಬೈ ಇಂಡಿಯನ್ಸ್ ಸ್ಕ್ವಾಡ್‌
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಕೀರಾನ್ ಪೊಲಾರ್ಡ್, ಜಸ್ಪ್ರೀತ್ ಬುಮ್ರಾ, ಟಿಮ್ ಡೇವಿಡ್, ಜಯದೇವ್ ಉನದ್ಕತ್, ಜೋಫ್ರಾ ಆರ್ಚರ್ (ಲಭ್ಯವಿಲ್ಲ ), ರಿಲೆ ಮೆರೆಡಿತ್, ಡೇನಿಯಲ್ ಸಾಮ್ಸ್, ಫ್ಯಾಬಿಯನ್ ಅಲೆನ್, ಮಯಾಂಕ್ ಮಾರ್ಕಂಡೆ, ಮುರುಗನ್ ಅಶ್ವಿನ್, ಬೆಸಿಲ್ ಥಂಪಿ, ಅನ್ಮೋಲ್ಪ್ರೀತ್ ಸಿಂಗ್, ಡೆವಾಲ್ಡ್ ಬ್ರೆವಿಸ್, ತಿಲಕ್ ವರ್ಮಾ, ಆರ್ಯನ್ ಜುಯಲ್ (ವಿಕೆಟ್ ಕೀಪರ್), ಅರ್ಜುನ್ ತೆಂಡೂಲ್ಕರ್, ರಮಣದೀಪ್ ಸಿಂಗ್, ರಾಹುಲ್ ಬುದ್ಧಿ, ಹೃತಿಕ್ ಶೋಕೀನ್, ಸಂಜಯ್ ಯಾದವ್, ಅರ್ಷದ್ ಖಾನ್, ಆಕಾಶ್ ಮದ್ವಾಲ್‌

For Quick Alerts
ALLOW NOTIFICATIONS
For Daily Alerts
Story first published: Monday, May 16, 2022, 22:36 [IST]
Other articles published on May 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X