ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಸೋಲಿನ ಬೆನ್ನಲ್ಲೆ ದಂಡ ಕಟ್ಟಬೇಕಾದ ಪರಿಸ್ಥಿತಿ ಎದುರಿಸಿದ ಕೆ.ಎಲ್ ರಾಹುಲ್

kl rahul 3

ಐಪಿಎಲ್ 15 ನೇ ಆವೃತ್ತಿಯಲ್ಲಿ ನೂತನವಾಗಿ ಸೇರಿಕೊಂಡಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಸೋಲಿನ ಕಹಿ ಅನುಭವದ ಬೆನ್ನಲ್ಲೆ ನೀತಿ ಸಂಹಿತೆ ಉಲ್ಲಂಘಿಸಿಕ್ಕಾಗಿ ದಂಡವನ್ನು ಪಾವತಿಸುವಂತಾಗಿದೆ.

ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ 18 ರನ್‌ಗಳ ಸೋಲಿನ ನಂತರ ಲಕ್ನೋ ಸೂಪರ್ ಜೈಂಟ್ಸ್ ತಂಡ ನೀತಿ ಸಂಹಿತೆ ಉಲ್ಲಂಘಿಸಿದೆ. ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಎಲ್‌ಎಸ್‌ಜಿ ತಂಡದ ನಾಯಕ ಕೆ.ಎಲ್ ರಾಹುಲ್ ಮತ್ತು ಆಲ್ ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಐಪಿಎಲ್ ಆಯೋಜಕರು ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ ಎಲ್‌ಎಸ್‌ಜಿ ನಾಯಕ ಕೆ.ಎಲ್ ರಾಹುಲ್ ಅವರಿಗೆ ಪಂದ್ಯ ಶುಲ್ಕದ ಮೇಲೆ ಶೇಕಡಾ 20 ರಷ್ಟು ದಂಡ ವಿಧಿಸಲಾಯಿತು. ಆದ್ರೆ ಈ ಬಾರಿ ಮತ್ತೊಮ್ಮೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಓವರ್‌ ಮಾಡಿದ್ದರಿಂದ ಕೆ.ಎಲ್ ರಾಹುಲ್ ಅವರ ಪಂದ್ಯದ ಶುಲ್ಕದ ಶೇಕಡಾ 20 ರಷ್ಟು ದಂಡವನ್ನು ವಿಧಿಸಲಾಗಿದೆ. ರಾಹುಲ್ ಅವರು ಐಪಿಎಲ್ ನೀತಿ ಸಂಹಿತೆಯ ಲೆವೆಲ್ 1 ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಐಪಿಎಲ್ ಆಯೋಜಕರು ತಿಳಿಸಿದ್ದಾರೆ.

ಇನ್ನೂ ಎಲ್‌ಎಸ್‌ಜಿ ತಂಡದ ಮಾರ್ಕಸ್ ಸ್ಟೋಯ್ನಿಸ್ ಅವರು ಸಹ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವ ಆರೋಪಕ್ಕೆ ಗುರಿಯಾಗಿದ್ದು ಅವರಿಗೆ ವಾಗ್ದಂಡನೆ ಮಾಡಲಾಗಿದೆ. ಈ ಆವೃತ್ತಿಯಲ್ಲಿ ಎರಡು ಬಾರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವ ಕೆ.ಎಲ್ ರಾಹುಲ್ ನಾಯಕತ್ವದ ತಂಡವು ಪುನಃ ಈ ತಪ್ಪು ಮರುಕಳಿಸದಂತೆ ಏಚ್ಚರ ವಹಿಸಬೇಕಿದೆ, ಇಲ್ಲವಾದಲ್ಲಿ ನಾಯಕ ಕೆ.ಎಲ್ ರಾಹುಲ್ ಒಂದು ಪಂದ್ಯದಿಂದ ನಿಷೇಧವನ್ನು ಅನುಭವಿಸಬೇಕಾಗುತ್ತದೆ.

ಕ್ರಿಕೆಟ್ ಸ್ಟೇಡಿಯಂನಲ್ಲೂ KGF ಹವಾ: RCB ಗೆ ಚಿಯರ್ಸ್ ಮಾಡಿದ ಸಂಜಯ್ ದತ್ ಮತ್ತು ರವೀನಾ | Oneindia Kannada

ಒಟ್ಟು 7 ಪಂದ್ಯಗಳನ್ನಾಡಿರುವ ಎಲ್ಎಸ್‌ಜಿ 4 ಪಂದ್ಯಗಳಲ್ಲಿ ಜಯಶಾಲಿಯಾಗುವ ಮೂಲಕ 8 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ 18 ರನ್‌ಗಳ ಸೋಲು ಅನುಭವಿಸಿರುವ ಲಕ್ನೋ ನಮಗೂ ನೋವು ಆಗಿದೆ ಜನಾಬ್, ಇದು ಅಂತ್ಯವಲ್ಲ ಕತ್ತಲು ಕಳೆದ ನಂತರದಲ್ಲಿ ಬೆಳಕು ಬರಲಿದೆ ಎಂಬ ಪೋಸ್ಟ್‌ ವೊಂದನ್ನು ಟ್ವೀಟ್ ಮಾಡಿದೆ.

Story first published: Wednesday, April 20, 2022, 13:46 [IST]
Other articles published on Apr 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X