ಐಪಿಎಲ್ 2022 ರಿಟೆನ್ಷನ್: ನಿಯಮ, ನೇರಪ್ರಸಾರ ಮತ್ತು ಎಲ್ಲಾ ತಂಡ ಉಳಿಸಿಕೊಳ್ಳುವ ಆಟಗಾರರ ಪಟ್ಟಿ

ಈ ವರ್ಷ ಏಪ್ರಿಲ್ ತಿಂಗಳಿನಲ್ಲಿ ಭಾರತದ ನೆಲದಲ್ಲಿ ಆರಂಭವಾಗಿದ್ದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೊರೋನಾವೈರಸ್ ಕಾರಣದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡ ನಂತರ ಯುಎಇಯಲ್ಲಿ ಮುಂದುವರೆಯಿತು. ಹೀಗೆ ಈ ಬಾರಿ ಸಾಕಷ್ಟು ಅಡ್ಡಿಗಳನ್ನು ಎದುರಿಸಿದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಫೈನಲ್ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಭರ್ಜರಿ ಜಯ ಸಾಧಿಸುವುದರ ಮೂಲಕ ನಾಲ್ಕನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.

ಐಎಸ್‌ಎಲ್ 2021: ಒಡಿಶಾ ಎಫ್‌ಸಿ ವಿರುದ್ಧ ಸೋಲು ಕಂಡ ಬೆಂಗಳೂರು ಎಫ್‌ಸಿಐಎಸ್‌ಎಲ್ 2021: ಒಡಿಶಾ ಎಫ್‌ಸಿ ವಿರುದ್ಧ ಸೋಲು ಕಂಡ ಬೆಂಗಳೂರು ಎಫ್‌ಸಿ

ಈ ಮೂಲಕ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ತೆರೆ ಬಿದ್ದದ್ದು ಮಾತ್ರವಲ್ಲದೇ ಪ್ರಸ್ತುತ ತಂಡದಲ್ಲಿನ ಆಟಗಾರರು ತಮ್ಮ ಸಹ ಆಟಗಾರರ ಜೊತೆ ಆಡಿದ ಅಂತಿಮ ಐಪಿಎಲ್ ಟೂರ್ನಿ ಕೂಡ ಇದಾಗಿತ್ತು. ಹೌದು, ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕಣಕ್ಕಿಳಿದಿದ್ದ ತಂಡಗಳಲ್ಲಿದ್ದ ಆಟಗಾರರು ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಅದೇ ತಂಡದಲ್ಲಿ ಮುಂದುವರಿಯುವುದಿಲ್ಲ. ಇದಕ್ಕೆ ಕಾರಣ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 2 ಹೊಸ ತಂಡಗಳಾದ ಲಕ್ನೋ ಮತ್ತು ಅಹಮದಾಬಾದ್ ಕಣಕ್ಕಿಳಿಯುವುದು.

 ಭಾರತ vs ನ್ಯೂಜಿಲೆಂಡ್‌: ಮತ್ತೊಮ್ಮೆ ವಿಫಲರಾದ ಪೂಜಾರ, ರಹಾನೆ; ಇವರ ಕಥೆ ಇಷ್ಟೇ ಎಂದ ನೆಟ್ಟಿಗರು ಭಾರತ vs ನ್ಯೂಜಿಲೆಂಡ್‌: ಮತ್ತೊಮ್ಮೆ ವಿಫಲರಾದ ಪೂಜಾರ, ರಹಾನೆ; ಇವರ ಕಥೆ ಇಷ್ಟೇ ಎಂದ ನೆಟ್ಟಿಗರು

ಹೌದು, ಇತ್ತೀಚೆಗಷ್ಟೇ ನಡೆದ ಫ್ರಾಂಚೈಸಿ ಹರಾಜು ಪ್ರಕ್ರಿಯೆಯಲ್ಲಿ ಲಕ್ನೋ ಮತ್ತು ಅಹಮದಬಾದ್ ತಂಡಗಳು ಹರಾಜಾಗಿದ್ದು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸೇರ್ಪಡೆಗೊಳ್ಳಲಿವೆ. ಹೀಗಾಗಿ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಸೆಣಸಾಟ ನಡೆಸಲಿದ್ದು ಇದಕ್ಕೂ ಮುನ್ನ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಹೀಗಾಗಿ ಈ ಮೆಗಾ ಹರಾಜು ಪ್ರಕ್ರಿಯೆಗೂ ಮುನ್ನ ನವೆಂಬರ್‌ 30ರೊಳಗೆ ಅಸ್ತಿತ್ವದಲ್ಲಿರುವ ಫ್ರಾಂಚೈಸಿಗಳು ಮುಂಬರುವ ಐಪಿಎಲ್ ಟೂರ್ನಿಗೆ ಯಾವ ಆಟಗಾರರನ್ನು ತಂಡದಲ್ಲಿಯೇ ಉಳಿಸಿಕೊಳ್ಳಲಿದ್ದೇವೆ ಎಂಬ ಮಾಹಿತಿಯನ್ನು ಪ್ರಕಟಿಸಬೇಕಿದೆ. ಹೀಗೆ ಯಾವ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಬೇಕು ಮತ್ತು ಯಾವ ಆಟಗಾರರನ್ನು ತಂಡದಿಂದ ಹೊರ ಹಾಕಬೇಕು ಎಂಬ ತಲೆನೋವಿನಲ್ಲಿ ಫ್ರಾಂಚೈಸಿಗಳಿದ್ದು, ಫ್ರಾಂಚೈಸಿ ಮಾಲೀಕರು ಆಟಗಾರರನ್ನು ರಿಟೈನ್ ಮಾಡಿಕೊಳ್ಳಬೇಕಾದರೆ ಪಾಲಿಸಲೇಬೇಕಾದ ನಿಯಮಗಳು, ಆಟಗಾರರ ಮೆಗಾ ಹರಾಜಿನ ಕಾರ್ಯಕ್ರಮದ ನೇರಪ್ರಸಾರದ ಮಾಹಿತಿ ಮತ್ತು ಯಾವ ತಂಡಗಳು ಯಾವ ಆಟಗಾರರನ್ನು ಉಳಿಸಿಕೊಳ್ಳಬಹುದು ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ..

ಈ 4 ಆಟಗಾರರು ಮಾತ್ರ RCBಯಲ್ಲಿ ಸೇಫ್ | Oneindia Kannada
ಫ್ರಾಂಚೈಸಿಯೊಂದು ಉಳಿಸಿಕೊಳ್ಳಬಹುದಾದ ಗರಿಷ್ಠ ಆಟಗಾರರ ಮಿತಿ

ಫ್ರಾಂಚೈಸಿಯೊಂದು ಉಳಿಸಿಕೊಳ್ಳಬಹುದಾದ ಗರಿಷ್ಠ ಆಟಗಾರರ ಮಿತಿ

ಬಿಸಿಸಿಐನ ರಿಟೆನ್ಷನ್ ಪಾಲಿಸಿ ಪ್ರಕಾರ ಅಸ್ತಿತ್ವದಲ್ಲಿರುವ ಐಪಿಎಲ್ ಫ್ರಾಂಚೈಸಿಯೊಂದು ಒಟ್ಟು 4 ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ. ಹೀಗೆ ಉಳಿಸಿಕೊಳ್ಳಬಹುದಾದ 4 ಆಟಗಾರರ ಪೈಕಿ ಗರಿಷ್ಠ ಇಬ್ಬರು ವಿದೇಶಿ ಆಟಗಾರರನ್ನು ಮಾತ್ರ ತಂಡವೊಂದು ಉಳಿಸಿಕೊಳ್ಳಬಹುದಾಗಿದೆ. ಈ ಮೂಲಕ ಇಬ್ಬರು ಸ್ವದೇಶಿ ಆಟಗಾರರು ಮತ್ತು ಇಬ್ಬರು ವಿದೇಶಿ ಆಟಗಾರರು ಅಥವಾ ಮೂವರು ಸ್ವದೇಶಿ ಆಟಗಾರರು ಮತ್ತು ಒಬ್ಬ ವಿದೇಶಿ ಆಟಗಾರನನ್ನು ಫ್ರಾಂಚೈಸಿಯೊಂದು ಉಳಿಸಿಕೊಳ್ಳಬಹುದಾಗಿದೆ.

ಉಳಿಸಿಕೊಳ್ಳುವ ಆಟಗಾರರಿಗೆ ಫ್ರಾಂಚೈಸಿ ನೀಡಬೇಕಾದ ಮೊತ್ತ

ಉಳಿಸಿಕೊಳ್ಳುವ ಆಟಗಾರರಿಗೆ ಫ್ರಾಂಚೈಸಿ ನೀಡಬೇಕಾದ ಮೊತ್ತ

ಒಂದುವೇಳೆ ಫ್ರಾಂಚೈಸಿಯೊಂದು 4 ಆಟಗಾರರನ್ನು ಉಳಿಸಿಕೊಂಡರೆ 42 ಕೋಟಿ ಖರ್ಚು ಮಾಡಬಹುದಾಗಿದೆ. ಈ ಮೂಲಕ ಫ್ರಾಂಚೈಸಿಯೊಂದು ಉಳಿಸಿಕೊಳ್ಳಲಿರುವ ಪ್ರಥಮ ಆಟಗಾರನಿಗೆ 16 ಕೋಟಿ, ದ್ವಿತೀಯ ಆಟಗಾರನಿಗೆ 12 ಕೋಟಿ, ಮೂರನೇ ಆಟಗಾರನಿಗೆ 8 ಕೋಟಿ ಮತ್ತು ನಾಲ್ಕನೇ ಆಟಗಾರನಿಗೆ 6 ಕೋಟಿ ನೀಡಬೇಕಾಗುತ್ತದೆ.

ಒಂದುವೇಳೆ ಫ್ರಾಂಚೈಸಿಯೊಂದು 3 ಆಟಗಾರರನ್ನು ಉಳಿಸಿಕೊಂಡರೆ 33 ಕೋಟಿ ಖರ್ಚು ಮಾಡಬಹುದಾಗಿದೆ. ಈ ಮೂಲಕ ಫ್ರಾಂಚೈಸಿಯೊಂದು ಉಳಿಸಿಕೊಳ್ಳಲಿರುವ ಪ್ರಥಮ ಆಟಗಾರನಿಗೆ 15 ಕೋಟಿ, ದ್ವಿತೀಯ ಆಟಗಾರನಿಗೆ 11 ಕೋಟಿ ಮತ್ತು ಮೂರನೇ ಆಟಗಾರನಿಗೆ 7 ಕೋಟಿ ನೀಡಬೇಕಾಗುತ್ತದೆ.

ಒಂದುವೇಳೆ ಫ್ರಾಂಚೈಸಿಯೊಂದು ಇಬ್ಬರು ಆಟಗಾರರನ್ನು ಉಳಿಸಿಕೊಂಡರೆ 24 ಕೋಟಿ ಖರ್ಚು ಮಾಡಬಹುದಾಗಿದೆ. ಈ ಮೂಲಕ ಫ್ರಾಂಚೈಸಿಯೊಂದು ಉಳಿಸಿಕೊಳ್ಳಲಿರುವ ಪ್ರಥಮ ಆಟಗಾರನಿಗೆ 14 ಕೋಟಿ ಮತ್ತು ದ್ವಿತೀಯ ಆಟಗಾರನಿಗೆ 10 ಕೋಟಿ ನೀಡಬೇಕಾಗುತ್ತದೆ.

ಫ್ರಾಂಚೈಸಿಗಳು ಉಳಿಸಿಕೊಳ್ಳಲಿರುವ ಆಟಗಾರರ ಸಂಭಾವ್ಯ ಪಟ್ಟಿ

ಫ್ರಾಂಚೈಸಿಗಳು ಉಳಿಸಿಕೊಳ್ಳಲಿರುವ ಆಟಗಾರರ ಸಂಭಾವ್ಯ ಪಟ್ಟಿ

ಚೆನ್ನೈ ಸೂಪರ್ ಕಿಂಗ್ಸ್: ಮಹೇಂದ್ರ ಸಿಂಗ್ ಧೋನಿ, ರವೀಂದ್ರ ಜಡೇಜಾ, ರುತುರಾಜ್ ಗಾಯಕ್ವಾಡ್, ಮೊಯಿನ್ ಅಲಿ / ಸ್ಯಾಮ್ ಕರನ್

ದೆಹಲಿ ಕ್ಯಾಪಿಟಲ್ಸ್: ರಿಷಭ್ ಪಂತ್, ಪೃಥ್ವಿ ಶಾ, ಅಕ್ಸರ್ ಪಟೇಲ್, ಅನ್ರಿಚ್ ನಾರ್ಕಿಯಾ

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಕೀರಾನ್ ಪೊಲಾರ್ಡ್, ಇಶಾನ್ ಕಿಶನ್

ಕೋಲ್ಕತ್ತಾ ನೈಟ್ ರೈಡರ್ಸ್: ಸುನಿಲ್ ನರೈನ್, ಆಂಡ್ರೆ ರಸೆಲ್

ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಯುಜ್ವೇಂದ್ರ ಚಹಾಲ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್

ಸನ್‌ರೈಸರ್ಸ್ ಹೈದರಾಬಾದ್: ರಶೀದ್ ಖಾನ್ ಮತ್ತು ಕೇನ್ ವಿಲಿಯಮ್ಸನ್

ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್, ಬೆನ್ ಸ್ಟೋಕ್ಸ್ ಮತ್ತು ಜೋಸ್ ಬಟ್ಲರ್

ಪಂಜಾಬ್ ಕಿಂಗ್ಸ್: ಕೆಎಲ್ ರಾಹುಲ್ ( ಹೊರಹೋಗಲು ಬಯಸದಿದ್ದರೆ) ಮತ್ತು ಮಯಾಂಕ್ ಅಗರ್ವಾಲ್

ನೇರಪ್ರಸಾರ

ನೇರಪ್ರಸಾರ

ಐಪಿಎಲ್ 2022ರ ಮೆಗಾ ಹರಾಜು ಡಿಸೆಂಬರ್ ತಿಂಗಳಿನಲ್ಲಿ ಅಥವಾ ಜನವರಿ ಮೊದಲನೇ ವಾರದಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ. ಈ ಕಾರ್ಯಕ್ರಮದ ನೇರ ಪ್ರಸಾರವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ಪ್ರಸಾರವಾಗಲಿದೆ.

For Quick Alerts
ALLOW NOTIFICATIONS
For Daily Alerts
Story first published: Thursday, November 25, 2021, 19:03 [IST]
Other articles published on Nov 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X