ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022: ಯಶಸ್ಸಿಗೆ ಕಾರಣವಾದ 2 ಅಂಶಗಳನ್ನು ಉಲ್ಲೇಖಿಸಿದ ಆರ್‌ಆರ್ ನಾಯಕ ಸಂಜು ಸ್ಯಾಮ್ಸನ್

IPL 2022: Sanju Samson said Having belief and composure in our skills helped win against RCB

ಐಪಿಎಲ್ 2022ರ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ 7 ವಿಕೆಟ್‌ಗಳ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಈ ಮಹತ್ವದ ಪಂದ್ಯದಲ್ಲಿ ತಂಡ ಅದ್ಭುತ ಗೆಲುವು ಸಾಧಿಸಲು ಆಟಗಾರರಲ್ಲಿನ ಕೌಶಲ್ಯದ ನಂಬಿಕೆ ಹಾಗೂ ಆತ್ಮಸ್ಥೈರ್ಯ ಕಾರಣ ಎಂದಿದ್ದಾರೆ ಸಂಜು ಸ್ಯಾಮ್ಸನ್.

ರಾಜಸ್ಥಾನ್ ರಾಯಲ್ಸ್ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಏಳು ವಿಕೆಟ್‌ಗಳ ಗೆಲುವು ಸಾಧಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟ್ರೋಫಿಯ ಕನಸನ್ನು ಭಗ್ನಗೊಳಿಸಿತು. ಟಾಸ್ ಗೆದ್ದ ಆರ್‌ಆರ್ ತಂಡ ಆರ್‌ಸಿಬಿಯನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಟ್ರೆಂಟ್ ಬೌಲ್ಟ್ ಮತ್ತು ಪ್ರಸಿದ್ಧ್ ಕೃಷ್ಣ ಆರ್‌ಆರ್ ಪರವಾಗಿ ಅದ್ಭುತ ಆರಂಭವನ್ನು ಒದಗಿಸಿದರು. ಆರ್‌ಸಿಬಿ ಪರವಾಗಿ ರಜತ್ ಪಾಟಿದಾರ್ ಅರ್ಧಶತಕ ಗಳಿಸಿದ್ದು ಅಂತಿಮವಾಗಿ ಆರ್‌ಸಿಬಿ 157/8 ರನ್‌ಗಳನ್ನು ಗಳಿಸಿತ್ತು.

ಆರ್‌ಸಿಬಿ ಟ್ರೋಫಿ ಆಸೆಗೆ ಕಲ್ಲು ಹಾಕಿದ ಬಟ್ಲರ್‌ಗೆ ಪ್ರಶಸ್ತಿಗಳ ಸುರಿಮಳೆ; ಒಂದೇ ಪಂದ್ಯದಲ್ಲಿ ಸಿಕ್ಕ ಹಣವೆಷ್ಟು?ಆರ್‌ಸಿಬಿ ಟ್ರೋಫಿ ಆಸೆಗೆ ಕಲ್ಲು ಹಾಕಿದ ಬಟ್ಲರ್‌ಗೆ ಪ್ರಶಸ್ತಿಗಳ ಸುರಿಮಳೆ; ಒಂದೇ ಪಂದ್ಯದಲ್ಲಿ ಸಿಕ್ಕ ಹಣವೆಷ್ಟು?

ಈ ಸಂದರ್ಭದಲ್ಲಿ ಆರ್‌ಆರ್ ವೇಗಿ ಪ್ರಸಿದ್ಧ್ ಕೃಷ್ಣ 5.50 ರ ಅದ್ಭುತ ಎಕಾನಮಿಯೊಂದಿಗೆ ಮೂರು ವಿಕೆಟ್‌ಗಳನ್ನು ಪಡೆದರು. ಒಬೆಡ್ ಮೆಕಾಯ್ ಕೂಡ 5.80 ರ ಎಕಾನಮಿಯಲ್ಲಿ 3 ವಿಕೆಟ್ ಸಂಪಾದಿಸಿದರು. ಈ ಇಬ್ಬರು ಬೌಲರ್‌ಗಳು ಅದ್ಭುತ ಪ್ರದರ್ಶನದಿಂದಾಗಿ ಆರ್‌ಸಿಬಿ 160 ರನ್‌ಗಳ ಗಡಿ ದಾಟದಂತೆ ಮಾಡಲು ಆರ್‌ಆರ್ ಯಶಸ್ವಿಯಾಗಿತ್ತು.

"ಪಿಚ್ ಸ್ವಲ್ಪ ಗಡುಸಾಗಿದ್ದು ವೇಗಿಗಳಿಗೆ ಹೆಚ್ಚಿನ ಸಹಾಯ ಮಾಡುತ್ತಿತ್ತು. ಉತ್ತಮವಾಗಿ ಬೌನ್ಸರ್‌ಗಳನ್ನು ಹೊಂದಿದ್ದು ಸ್ಪಿನ್ನರ್‌ಗಳಿಗೆ ಬ್ಯಾಟಿಂಗ್ ನಡೆಸುವುದು ಸುಲಭವಾಗಿತ್ತು. ನಾವು ಇನ್ನಿಂಗ್ಸ್‌ಅನ್ನು ಚೆನ್ನಾಗಿ ಅಂತ್ಯಗೊಳಿಸಿದೆವು. ಅಂತಿಮ ಹಂತದಲ್ಲಿ ಡಿಕೆ ಮತ್ತು ಮ್ಯಾಕ್ಸಿ ಇದ್ದಲ್ಲಿ ಅವರಿಂದ ಎಂಥಾ ಪ್ರದರ್ಶನ ಬರಬಹುದು ಎಂಬುದು ನಮಗೆ ತಿಳಿದಿತ್ತು. ಆದರೆ ನಮ್ಮ ಕೌಶಲ್ಯಗಳಲ್ಲಿ ನಂಬಿಕೆ ಮತ್ತು ಹಿಡಿತವು ನಮಗೆ ಸಿಕ್ಕಿತ್ತು" ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.

ಇನ್ನು ಈ ಆವೃತ್ತಿಯ ಫೈನಲ್ ಪಂದ್ಯ ಭಾನುವಾರ ನಡೆಯಲಿದ್ದು ಪ್ರಶಸ್ತಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಕಾದಾಡಲಿದೆ. ಬಲಿಷ್ಠ ಆಟಗಾರರನ್ನು ಹೊಂದಿರುವ ಈ ಎರಡು ತಂಡಗಳ ನಡುವಿನ ಕಾದಾಟ ರೋಚಕವಾಗಿರುವುದರಲ್ಲಿ ಅನುಮಾನವಿಲ್ಲ.

RCB vs RR: ಕ್ವಾಲಿಫೈಯರ್ ಪಂದ್ಯದಲ್ಲಿ ಆರ್‌ಸಿಬಿ ಹೀನಾಯ ಸೋಲಿಗೆ ಈ 6 ಆಟಗಾರರೇ ಕಾರಣ!RCB vs RR: ಕ್ವಾಲಿಫೈಯರ್ ಪಂದ್ಯದಲ್ಲಿ ಆರ್‌ಸಿಬಿ ಹೀನಾಯ ಸೋಲಿಗೆ ಈ 6 ಆಟಗಾರರೇ ಕಾರಣ!

ಸ್ಕ್ವಾಡ್ ಹೀಗಿದೆ: ಗುಜರಾತ್ ಟೈಟನ್ಸ್: ಹಾರ್ದಿಕ್ ಪಾಂಡ್ಯ (ನಾಯಕ), ಶುಬ್ಮನ್ ಗಿಲ್, ರಶೀದ್ ಖಾನ್, ಮೊಹಮ್ಮದ್ ಶಮಿ, ಲಾಕಿ ಫರ್ಗುಸನ್, ಅಭಿನವ್ ಸದಾರಂಗನಿ, ರಾಹುಲ್ ತೆವಾಟಿಯಾ, ನೂರ್ ಅಹ್ಮದ್, ಆರ್ ಸಾಯಿ ಕಿಶೋರ್, ಡೊಮಿನಿಕ್ ಡ್ರೇಕ್ಸ್, ಜಯಂತ್ ಯಾದವ್, ವಿಜಯ್ ಶಂಕರ್, ದರ್ಶನ್ ನಲ್ಕಂಡೆ, ಯಶ್ ದಯಾಳ್, ಅಲ್ಜಾರಿ ಜೋಸೆಫ್, ಪ್ರದೀಪ್ ಸಾಂಗ್ವಾನ್, ಡೇವಿಡ್ ಮಿಲ್ಲರ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಗುರುಕೀರತ್ ಸಿಂಗ್, ವರುಣ್ ಆರೋನ್, ಬಿ ಸಾಯಿ ಸುದರ್ಶನ್, ರಹಮಾನುಲ್ಲಾ ಗುರ್ಬಾಜ್

IPL ಫೈನಲ್ ಪಂದ್ಯದಲ್ಲಿ Hardik Pandya ಗೆ ಶರಣಾದ Sanju Samson ಪಡೆ |#cricket | Oneindia Kannada

ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್ (ನಾಯಕ), ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಶಿಮ್ರಾನ್ ಹೆಟ್ಮೆಯರ್, ದೇವದತ್ ಪಡಿಕ್ಕಲ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಹಾಲ್, ರಿಯಾನ್ ಪರಾಗ್, ಕೆಸಿ ಕಾರಿಯಪ್ಪ, ನವದೀಪ್ ಸೈನಿ, ಓಬೇದ್ ಮೆಕಾಯ್, ಅನುನಯ್ ಸಿಂಗ್, ಕುಲದೀಪ್ ಸೇನ್, ಕರುಣ್ ನಾಯರ್, ಧ್ರುವ್ ಜುರೆಲ್, ತೇಜಸ್ ಬರೋಕಾ, ಕುಲದೀಪ್ ಯಾದವ್, ಶುಭಂ ಗರ್ವಾಲ್, ಜೇಮ್ಸ್ ನೀಶಮ್, ನಾಥನ್ ಕೌಲ್ಟರ್-ನೈಲ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಡೇರಿಲ್ ಮಿಚೆಲ್

Story first published: Saturday, May 28, 2022, 21:49 [IST]
Other articles published on May 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X