ಐಪಿಎಲ್ ಹರಾಜು 2018: 8 ತಂಡಗಳ ಸಂಕ್ಷಿಪ್ತ ಪರಿಚಯ

Posted By:
IPL auction 2018: Know all teams

ಬೆಂಗಳೂರು, ಜನವರಿ 24: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ 11 ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಜ. 27 ರಿಂದ ಬೆಂಗಳೂರಿನಲ್ಲಿ ಆರಂಭವಾಗಲಿದೆ.

ಜ.27 ಮತ್ತು 28 ರಂದು ಹರಾಜು ಪ್ರಕ್ರಿಯೆ ನಡೆಯಲಿದ್ದು, ಈ ಬಾರಿ ತಂಡದ ಬಜೆಟ್ ಅನ್ನು 66 ಕೋಟಿ ರೂ.ಯಿಂದ 80 ಕೋಟಿ ರೂ.ಗಳಿಗೆ ಏರಿಸಲಾಗಿದೆ.

ಐಪಿಎಲ್ 2018ರ ಹರಾಜಿಗೂ ನಿಮಗೆ ಗೊತ್ತಿರಬೇಕಾದ ಸಂಗತಿಗಳು

8 ಫ್ರಾಚೈಸಿಗಳು ಈಗಾಗಲೇ 18 ಆಟಗಾರರನ್ನು ಉಳಿಸಿಕೊಂಡಿದ್ದು, ಉಳಿದಂತೆ ಸುಮಾರು 182 ಜನರನ್ನು ಹರಾಜಿನ ಮೂಲಕ ಖರೀದಿಸಲಾಗುತ್ತದೆ. ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಎರಡು ವರ್ಷಗಳ ನಿಷೇಧದ ನಂತರ ಐಪಿಎಲ್ ಆವೃತ್ತಿಯನ್ನು ಸೇರಿಕೊಳ್ಳುತ್ತಿರುವುದು ವಿಶೇಷ.

ಐಪಿಎಲ್ 11ನೇ ಆವೃತ್ತಿಯು ಏಪ್ರಿಲ್ 7 ರಿಂದ ಆರಂಭವಾಗಲಿದ್ದು, ಫೈನಲ್ ಪಂದ್ಯ ಮೇ.27 ರಂದು ನಡೆಯಲಿದೆ. ಹರಾಜು ಪ್ರಕ್ರಿಯೆ ಇದೇ ಶನಿವಾರ ನಡಯಲಿದ್ದು, ಈ ಹಿನ್ನೆಲೆಯಲ್ಲಿ ಈ ಬಾರಿಯ ಐಪಿಎಲ್ ನಲ್ಲಿ ಯಾವ್ಯಾವ ತಂಡಗಳಿವೆ ಎಂಬ ಮಾಹಿತಿ ಇಲ್ಲಿದೆ.

ಚೆನ್ನೈ ಸೂಪರ್ ಕಿಂಗ್ಸ್

ಚೆನ್ನೈ ಸೂಪರ್ ಕಿಂಗ್ಸ್

ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಯಶಸ್ವೀ ತಂಡ ಎನ್ನಿಸಿಕೊಂಡಿತ್ತು. ಫಿಕ್ಸಿಂಗ್ ಆರೋಪದಿಂದ ಎರಡು ವರ್ಷಗಳ ನಿಷೇಧದ ಬಳಿಕ ಈ ತಂಡ ಮತ್ತೆ ಐಪಿಎಲ್ ಗೆ ವಾಪಸಾಗಿದೆ. ಒಂದು ಕಾಲದಲ್ಲಿ ಗೆಲ್ಲುವ ಫೆವರೀಟ್ ತಂಡವಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮತ್ತೆ ಮೋಡಿ ಮಾಡುತ್ತದೆಯೇ ನೋಡಬೇಕು.

ರಾಜಸ್ಥಾನ್ ರಾಯಲ್ಸ್

ರಾಜಸ್ಥಾನ್ ರಾಯಲ್ಸ್

ರಾಯಲ್ ಚಾಲೆಂಜರ್ಸ್ ತಂಡ ಸಹ ಫಿಕ್ಸಿಂಗ್ ಆರೋಪದಿಂದ ಎರಡು ವರ್ಷ ನಿಷೇಧ ಅನುಭವಿಸಿ ಈ ಬಾರಿ ವಾಪಸಾಗಿದೆ. ಆಸ್ಟ್ರೇಲಿಯ ತಂಡದ ನಾಯಕ ಸ್ಟೀವ್ ಸ್ಮಿತ್ ಅವರ ಯಶಸ್ವೀ ನಾಯಕತ್ವದ ಬಗ್ಗೆ ವಿಶ್ವಾಸ ಇರುವುದರಿಂದ ಅವರನ್ನೇ ಈ ತಂಡದ ನಾಯಕರನ್ನಾಗಿ ಮುಂದುವರಿಸಲಾಗುತ್ತಿದೆ. ಐಪಿಎಲ್ ನ 2008 ರ ಆವೃತ್ತಿ ಅಂದರೆ ಮೊದಲ ಆವೃತ್ತಿಯಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಕೀರ್ತಿ ರಾಜಸ್ಥಾನ ರಾಯಲ್ಸ್ ಹೆಸರಲ್ಲಿದೆ.

ಮುಂಬೈ ಇಂಡಿಯನ್ಸ್

ಮುಂಬೈ ಇಂಡಿಯನ್ಸ್

10 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ತಂಡ ಅತ್ಯಂತ ಯಶಸ್ವೀ ತಂಡ ಎಂಬ ಹೆಗ್ಗಳಿಕೆ ಗಳಿಸಿದೆ. ಮೂರು ಬಾರಿ ಐಪಿಎಲ್ ಕಿರೀಟ ಧರಿಸಿದ ಕೀರ್ತಿಯೂ ಮುಂಬೈ ಇಂಡಿಯನ್ಸ್ ದು. ರೋಹಿತ್ ಶರ್ಮಾ ನಾಯಕತ್ವದಲ್ಲಿ ತಂಡ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಆರಂಭದಲ್ಲಿ ಘಟಾನುಘಟಿ ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್, ಲಸಿತ ಮಲಿಂಗ್, ಸನತ್ ಜಯಸೂರ್ಯ, ಹರ್ಭಜನ್ ಸಿಂಗ್ ಮುಂತಾದವರು ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರು. 2011 ರಲ್ಲಿ ರೋಹಿತ್ ಶರ್ಮಾ ಈ ತಂಡಕ್ಕೆ ಸೇರುತ್ತಿದ್ದಂತೆಯೇ ತಂಡದ ಅದೃಷ್ಟ ಬದಲಾಯಿತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು

ರಾಯಲ್ ಚಾಲೆಂಜರ್ಸ್ ಬೆಂಗಳೂರು

ಐಪಿಎಲ್ ನಲ್ಲಿ ಅತ್ಯಂತ ಹೆಚ್ಚು ಸುದ್ದಿಯಲ್ಲಿದ್ದ ತಂಡ ಅಂದರೆ ಪ್ರಸ್ತುತ ಭಾರತ ತಂಡದ ನಾಯಕರಾಗಿರುವ ವಿರಾಟ್ ಕೋಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು. ವೆಸ್ಟ್ ಇಂಡೀಸ್ ಆಟಗಾರ ಕ್ರಿಸ್ ಗೇಯ್ಲ್ ಈ ತಂಡದ ಮೂಲಕ ಕೆಲವು ಆವೃತ್ತಿಯಲ್ಲಿ ತೋರಿಸಿದ ಅಭೂತಪೂರ್ವ ಪ್ರದರ್ಶನ ಐಪಿಎಲ್ ನ ಮಿಕ್ಕೆಲ್ಲ ದಾಖಲೆಗಳನ್ನೂ ಧೂಳಿಪಟಗೊಳಿಸಿತ್ತು. ತಂಡವೊಂದರ ಗರಿಷ್ಠ ಮೊತ್ತ, ಆಟಗಾರನ ಗರಿಷ್ಠ ರನ್, ಪಾರ್ಟ್ನರ್ ಶಿಪ್ ಹೀಗೆ ಹತ್ತು ಹಲವು ದಾಖಲೆಗಳು ರಾಯಲ್ ಚಾಲೆಂಜರ್ಸ್ ಹೆಸರಲ್ಲಿವೆ. ಆದರೆ ಕಳೆದ ಆವೃತ್ತಿಯಲ್ಲಿ ತೋರಿದ ಕಳಪೆ ಪ್ರದರ್ಶನ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಈ ಬಾರಿಯೂ ತಂಡದ ಕ್ಯಾಪ್ಟನ್ ವಿರಾಟ್ ಕೋಹ್ಲಿ.

ಕೋಲ್ಕತ್ತಾ ನೈಟ್ ರೈಡರ್ಸ್

ಕೋಲ್ಕತ್ತಾ ನೈಟ್ ರೈಡರ್ಸ್

ಮೊದ ಮೊದಲು ಕಳಪೆ ಪ್ರದರ್ಶನದಿಂದ ನಗೆಪಾಟಲಿಗೀಡಾದರೂ, ಕೊನೆ ಕೊನೆಯಲ್ಲಿ ಸುಧಾರಿಸಿಕೊಂಡ ಕೋಲ್ಕತ್ತಾ ನೈಟ್ ರೈಡರ್ಸ್, ಎರಡು ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿತ್ತು. ಕೋಲ್ಕತ್ತಾ ತಂಡಕ್ಕೆ ಹೊಸ ಭರವಸೆ ನೀದಿದ್ದು ಗೌತಮ್ ಗಂಭೀರ್. ಆದರೆ ಈ ಬಾರಿ ಅವರು ತಂಡದ ನಾಯಕರಾಗುವುದು ಅನುಮಾನ. ಈ ತಂಡಕ್ಕೆ ಯಾರು ನಾಯಕರಾಗುತ್ತಾರೆ ಎಂಬುದನ್ನು ಕಾದು ನೋಡಬೇಕು.

ಸನ್ ರೈಸರ್ಸ್ ಹೈದರಾಬಾದ್

ಸನ್ ರೈಸರ್ಸ್ ಹೈದರಾಬಾದ್

ಡೆಕ್ಕನ್ ಚಾರ್ಜರ್ಸ್ ಐಪಿಎಲ್ ನಿಂದ ಹೊರಕ್ಕೆ ಹೋದ ಮೇಲೆ ಅಂದರೆ 2013 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ರೂಪುಗೊಂಡಿತು. 2016 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿ ಐಪಿಎಲ್ ಪ್ರಶಸ್ತಿ ಮುಡಿಗೇರಿಸಿಕೊಂಡ ಕೀರ್ತಿ ಸನ್ ರೈಸರ್ಸ್ ಹೈದರಾಬಾದ್ ದು. ಈ ಬಾರಿ ಡೇವಿಡ್ ವಾರ್ನರ್ ಈ ತಂಡದ ನಾಯಕರಾಗುವುದ ಬಹುತೇಕ ಖಚಿತ.

ಕಿಂಗ್ಸ್ ಇಲೆವನ್ ಪಂಜಾಪ್

ಕಿಂಗ್ಸ್ ಇಲೆವನ್ ಪಂಜಾಪ್

ಯುವರಾಜ್ ಸಿಂಗ್, ಬ್ರೇಟ್ ಲೀ, ಶ್ರೀಶ್ರಾಂತ್ ಮುಂತಾದ ಘಟಾನುಘಟಿಗಳಿಂದಾಗಿ ಮೊದಲ ಆವೃತ್ತಿಯ ಐಪಿಎಲ್ ನಲ್ಲಿ ಗೆಲ್ಲುವ ಫೆವರೀಟ್ ತಂಡ ಅನ್ನಿಸಿದ್ದ ಕಿಂಗ್ಸ್ ಇಲೆವನ್ ಪಂಜಾಬ್ ನಂತರದ ಕೆಲವು ಆವೃತ್ತಿಗಳಲ್ಲಿ ಕಳಪೆ ಪ್ರದರ್ಶನ ತೋರಿತ್ತು. ಆದರೆ 2014 ರಲ್ಲಿ ಆಸ್ಟ್ರೇಲಿಯದ ಜಾರ್ಜ್ ಬೈಲಿ ಈ ತಂಡದ ನಾಯಕರಾದಾಗಿನಿಂದ ಈ ತಂಡದ ಹಣೆಬರಹ ಬದಲಾಯಿತು. 2014 ರಲ್ಲಿ ಫೈನಲ್ ವರೆಗೂ ತಲುಪಿದ್ದು ಈ ತಂಡದ ಹೆಗ್ಗಳಿಕೆ.

ಡೆಲ್ಲಿ ಡೇರ್ ಡೆವಿಲ್ಸ್

ಡೆಲ್ಲಿ ಡೇರ್ ಡೆವಿಲ್ಸ್

ಆರಂಭದಲ್ಲಿ ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಡೇವಿಡ್ ವಾರ್ನರ್ ರಂಥ ಮಹಾನ್ ಆಟಗಾರರಿಂದಾಗಿ ಸಾಕಷ್ಟು ಪ್ರಸಿದ್ಧಿ ಗಳಿಸಿದ್ದ, ಗೆಲ್ಲುವ ಫೆವರೀಟ್ ತಂಡವಾಗಿದ್ದ ಡೆಲ್ಲಿ ಡೇರ್ ಡೆವಿಲ್ಸ್ ನಂತರ ಉತ್ತಮ ಪ್ರದರ್ಶನ ನೀಡಲು ಸಫಲವಾಗಲಿಲ್ಲ. 2012 ರಲ್ಲಿ ಫೈನಲ್ ಪ್ರವೇಶಿಸಿದ್ದೇ ದೆಹಲಿ ತಂಡದ ಹೆಗ್ಗಳಿಕೆ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, January 24, 2018, 16:41 [IST]
Other articles published on Jan 24, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ