ಐಪಿಎಲ್‌ಗೆ 2 ಹೊಸ ತಂಡಗಳು: ಬಿಡ್ಡಿಂಗ್‌ಗೆ ₹ 2000 ಕೋಟಿ ಮೂಲಬೆಲೆ ನಿಗದಿಪಡಿಸಿದ ಬಿಸಿಸಿಐ

IPL ತಂಡ ಖರಂದಿಸೋದಕ್ಕೆ ಎಷ್ಟು ಹಣ ಗೊತ್ತಾ | Oneindia Kannada

ಮುಂಬೈ, ಆಗಸ್ಟ್ 31: ಐಪಿಎಲ್ 14ನೇ ಆವೃತ್ತಿಯ ಉಳಿದ ಪಂದ್ಯಗಳ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಮಧ್ಯೆ ಬಿಸಿಸಿಐ 2022ರ ಐಪಿಎಲ್‌ಗೆ 2 ಹೊಸ ತಂಡಗಳನ್ನು ಸೇರ್ಪಡೆಗೊಳಿಸಲು ಅಂತಿಮ ಹಂತದ ಸಿದ್ಧತೆಯನ್ನು ನಡೆಸುತ್ತಿದೆ. ಎರಡು ಹೊಸ ತಂಡಗಳ ಹರಾಜಿಗೆ ವೇದಿಕೆಯನ್ನು ಸಿದ್ಧಪಡಿಸಲಾಗುತ್ತಿದ್ದು ಮೂಲಬೆಲೆಯನ್ನು ಕೂಡ ನಿಗದಿಪಡಿಸಲಾಗಿದೆ.

ಈಗಾಗಲೇ 8 ತಂಗಳನ್ನು ಹೊಂದಿರುವ ಐಪಿಎಲ್‌ನಲ್ಲಿ ಮುಂದಿನ ಆವೃತ್ತಿಗಾಗಿ ಮತ್ತೆರಡು ತಂಡಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ. ಈ ಹೊಸ ತಂಡಗಳಿಗೆ ಬಿಸಿಸಿಐ 2000 ಕೋಟಿ ರೂಪಾಯಿ ಮೂಲ ಬೆಲೆಯನ್ನು ನಿಗದಿಪಡಿಸಿದೆ. ಈ ಬಿಡ್ಡಿಂಗ್‌ನ ಅಂತ್ಯದಲ್ಲಿ ಎರಡು ತಂಡಗಳ ಮಾರಾಟದಿಂದ ಕನಿಷ್ಠ 5000 ಕೋಟಿ ರೂಪಾಯಿ ಲಾಭಗಳಿಸುವ ನಿರೀಕ್ಷೆಯನ್ನು ಹೊಂದಿದೆ ಬಿಸಿಸಿಐ.

ಆರಂಭದಲ್ಲಿ ಈ ಮೂಲಬೆಲೆಯನ್ನು 1700 ಕೋಟಿ ರೂಪಾಯಿಗೆ ನಿಗದಿಗೊಳಿಸಲಾಗಿತ್ತು. ಆದರೆ ಅಂತಿಮ ಹಂತದಲ್ಲಿ ಇದನ್ನು ಏರಿಕೆ ಮಾಡಲಾಗುದ್ದು 2000 ಕೋಟಿ ಮೂಲ ಬೆಲೆಯನ್ನು ನಿಗದಿಪಡಿಸಲಾಗಿದೆ. ಇನ್ನು ಈ ಬಿಡ್ಡಿಂಗ್‌ನಲ್ಲಿ ಪಾಲ್ಗೊಳ್ಳಲು ಬಯಸುವ ತಂಡಗಳು ಆರಂಭದಲ್ಲಿ 75 ಕೋಟಿ ರೂಪಾಯಿ ನೀಡಿ ಬಿಡ್ಡಿಂಗ್ ದಾಖಲಾತಿಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ಇನ್ನು ಈ ಬಿಡ್ಡಿಂಗ್ ಡಾಕ್ಯುಮೆಂಟ್ ಪಡೆಯಲು ಹಾಗೂ ಲೀಗ್‌ನ ಫ್ರಾಂಚೈಸಿಯನ್ನು ಪಡೆದುಕೊಳ್ಳಲು ಕನಿಷ್ಠ 3000 ಕೋಟಿ ರೂಪಾಯಿಯ ವಾರ್ಷಿಕ ವಹಿವಾಟು ಹೊಂದಿರಬೇಕು. ಹಾಗಿದ್ದಾಗ ಮಾತ್ರವೇ ಈ ಬಿಡ್ಡಿಂಗ್‌ನಲ್ಲಿ ಭಾಗಿಯಾಗಲು ಸಮರ್ಥರಾಗಿರುತ್ತಾರೆ.

ಜಾವಗಲ್ ಶ್ರೀನಾಥ್ ಹುಟ್ಟುಹಬ್ಬ: ಕನ್ನಡದ ಹೆಮ್ಮೆಯ ವೇಗಿಯ ಬಗ್ಗೆ ನಿಮಗೆಷ್ಟು ಗೊತ್ತು?ಜಾವಗಲ್ ಶ್ರೀನಾಥ್ ಹುಟ್ಟುಹಬ್ಬ: ಕನ್ನಡದ ಹೆಮ್ಮೆಯ ವೇಗಿಯ ಬಗ್ಗೆ ನಿಮಗೆಷ್ಟು ಗೊತ್ತು?

ಇನ್ನು ಬಿಸಿಸಿಐ ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ಮೂರು ಪ್ರತ್ಯೇಕ ಉದ್ಯಮ ಸಂಸ್ಥೆಗಳು ಜೊತೆಯಾಗಿ ಪಾಲ್ಗೊಳ್ಳಲು ಬಯಸಿದರೆ ಅದಕ್ಕೆ ಅವಕಾಶವಿದೆ. "ಮೂರು ಸಂಸ್ಥೆಗಳು ಜೊತೆಯಾಗಿ ಬಿಡ್ಡಿಂಗ್ ಮಾಡಲು ಅವಕಾಶವಿದೆ. ಆದರೆ ನನಗೆ ತಿಳಿದಿರುವ ಪ್ರಕಾರ ಮೂರಕ್ಕಿಂತ ಹೆಚ್ಚಿನ ಸಂಸ್ಥೆಗಳಿಗೆ ಜೊತೆಯಾಗಿ ಬಿಡ್ಡಿಂಗ್‌ನಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ" ಎಂದು ಮೂಲಗಳು ಮಾಹಿತಿ ನೀಡಿದೆ.

ಐಪಿಎಲ್‌ನ ಫ್ರ್ಯಾಂಚೈಸಿಯನ್ನು ಕೊಂಡುಕೊಳ್ಳಲು ಹಲವಾರು ಉದ್ಯಮ ಸಂಸ್ಥೆಗಳು ತುದಿಗಾಲಲ್ಲಿ ನಿಂತಿವೆ. ಅದಾನಿ ಗ್ರೂಪ್, ಆರ್‌ಪಿಜಿ ಸಂಜೀವ್ ಗೊಯೆಂಕಾ ಗ್ರೂಪ್, ಔಷಧೀಯ ಕಂಪನಿ ಟೊರೆಂಟ್ ಮತ್ತು ಪ್ರಮುಖ ಬ್ಯಾಕ್‌ವೊಂದು ಸೇರಿದಂತೆ ಹೆಚ್ಚಿನ ಸಂಸ್ಥೆಗಳು ಐಪಿಎಲ್‌ನಲ್ಲಿ ತಮ್ಮ ಫ್ರಾಂಚೈಸಿಯನ್ನು ಹೊಂದಲು ತುದಿಗಾಲಲ್ಲಿ ನಿಂತಿವೆ. ಹೀಗಾಗಿ ಫ್ರಾಂಚೈಸಿಕೊಂಡುಕೊಳ್ಳಲು ಸಾಕಷ್ಟು ಪೈಪೋಟಿ ನಡೆಯಲಿದೆ.

ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಯಾವ ಎರಡು ನಗರಗಳನ್ನು ಐಪಿಎಲ್ ಫ್ರಾಂಚೈಸಿಗಳು ಪ್ರತಿನಿಧಿಸಲಿದೆ ಎಂಬುದು ಕೂಡ ಕುತೂಹಲಕಾರಿಯಾಗಿದೆ. ಸಾಮರ್ಥ್ಯದಲ್ಲಿ ಅತಿ ಹೆಚ್ಚಿನ ಪ್ರೇಕ್ಷಕರನ್ನು ಹೊಂದಿರುವ ಕ್ರೀಡಾಂಗಣವಾದ ನರೇಂದ್ರ ಮೋದಿ ಕ್ರೀಡಾಂಗಣವಿರುವ ಅಹ್ಮದಾಬಾದ್ ಹಾಗೂ ಏಕನಾ ಸ್ಟೇಡಿಯಂ ಹೊಂದಿರುವ ಲಕ್ನೋ ನಗರಗಳು ಈ ಸ್ಪರ್ಧೆಯಲ್ಲಿ ಸದ್ಯ ಮುನ್ನಡೆಯಲ್ಲಿದೆ.

ಆರಂಭದಲ್ಲಿ ಎಂಟು ತಂಡಗಳಿಂದಲೇ ಪ್ರಾರಂಭವಾಗಿದ್ದ ಐಪಿಎಲ್ ಸರಿಯಾಗಿ ದಶಕಗಳ ಹಿಂದೆ 10 ತಂಡಗಳ ಮೂಲಕ ಆಡಿಸಲಾಗಿತ್ತು. ಐಪಿಎಲ್‌ನ ನಾಲ್ಕನೇ ಆವೃತ್ತಿಯಲ್ಲಿ ಕೊಚ್ಚಿ ಟಸ್ಕರ್ಸ್ ಹಾಗೂ ಪುಣೆ ವಾರಿಯರ್ಸ್ ಇಂಡಿಯಾ ತಂಡಗಳು ಐಪಿಎಲ್‌ಗೆ ಸೇರ್ಪಡೆಯಾಗಿದ್ದವು. ಅದಾದ ನಂತರ 9 ತಂಡಗಳೊಂದಿಗೆ ಟೂರ್ನಿಯನ್ನು ಆಡಿಸಲಾಗುತ್ತು. ಅದಾದ ನಂತರ ಮತ್ತೆ ಐಪಿಎಲ್ 8 ತಂಡಗಳ ಟೂರ್ನಿಯಾಗಿ ಆಡಿಸಲಾಗುತ್ತಿತ್ತು. ಈಗ ಮತ್ತೊಮ್ಮೆ 10 ತಂಡಗಳ ಟೂರ್ನಿಯನ್ನು ಮಾಡಲು ಬಿಸಿಸಿಐ ಸಿದ್ಧತೆ ನಡೆಸಿದ್ದು ಮುಂದಿನ ಆವೃತ್ತಿಯಲ್ಲಿ 10 ತಂಡಗಳು ಮುಖಾಮುಖಿಯಾಗಲಿದೆ.

ನಾಲ್ಕನೇ ಟೆಸ್ಟ್‌ಗೂ ಮುನ್ನ ಭಾರತಕ್ಕೆ ಸಿಹಿ ಸುದ್ದಿ; ಇಂಗ್ಲೆಂಡ್‌ನ ಈ ಬಲಿಷ್ಠ ಆಟಗಾರ ಹೊರಬೀಳುವ ಸಾಧ್ಯತೆ!ನಾಲ್ಕನೇ ಟೆಸ್ಟ್‌ಗೂ ಮುನ್ನ ಭಾರತಕ್ಕೆ ಸಿಹಿ ಸುದ್ದಿ; ಇಂಗ್ಲೆಂಡ್‌ನ ಈ ಬಲಿಷ್ಠ ಆಟಗಾರ ಹೊರಬೀಳುವ ಸಾಧ್ಯತೆ!

ಈ ಬಾರಿಯ ಐಪಿಎಲ್ ಆವೃತ್ತಿಯ ಉಳಿದ ಪಂದ್ಯಗಳು ಸೆಪ್ಟೆಂಬರ್ 19ರಿಂದ ಆರಂಭವಾಗಲಿದೆ. ಮೊದಲಾರ್ಧದ ಐಪಿಎಲ್‌ನ ಬಳಿಕ ಟೂರ್ನಿಗೆ ಕೊರೊನಾವೈರಸ್ ಆಘಾತ ನೀಡಿದ ನಂತರ ಅನಿರ್ದಿಷ್ಟಾವಧಿಗೆ ಟೂರ್ನಿಯನ್ನು ಮುಂದೂಡಲಾಗಿತ್ತು. ಬಳಿಕ ಬಿಸಿಸಿಐ ಉಳಿದ ಪಂದ್ಯಗಳನ್ನು ಯುಎಇನಲ್ಲಿ ನಡೆಸಲು ನಿರ್ಧರಿಸಿದ್ದು ಎಲ್ಲಾ ಸಿದ್ಧತೆಗಳನ್ನು ನಡೆಸಿದೆ. ಈಗ ಈ ಟೂರ್ನಿಯಲ್ಲಿ ಭಾಗಿಯಾಗಲು ಹೆಚ್ಚಿನ ತಂಡಗಳು ಯುಎಇಯನ್ನು ತಲುಪಿದ್ದು ಅಭ್ಯಾಸವನ್ನು ನಡೆಸಲಾಗುತ್ತಿದೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 15 - October 24 2021, 03:30 PM
ಶ್ರೀಲಂಕಾ
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, August 31, 2021, 13:14 [IST]
Other articles published on Aug 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X