ಕೊರೊನಾ ವೈರಸ್ ಮಧ್ಯೆ ಐಪಿಎಲ್ ಸಾಕಷ್ಟು ಸಕಾರಾತ್ಮಕತೆ ಪಸರಿಸಬಲ್ಲದು: ಜಯದೇವ್ ಉನಾದ್ಕಟ್

ಭಾರತದಲ್ಲಿ ಕೊರೊನಾ ವೈರಸ್‌ನ ಎರಡನೇ ಅಲೆ ಭಾರೀ ಪ್ರಮಾಣದಲ್ಲಿ ವ್ಯಾಪಿಸುತ್ತಿದ್ದು ಆತಂಕ ಮೂಡಿಸಿದೆ. ಭಾರತದಲ್ಲಿ ನಡೆಯುತ್ತಿರುವ ಐಪಿಎಲ್ ಆವೃತ್ತಿಯಿಂದ ಕೆಲ ವಿದೇಶಿ ಆಟಗಾರರು ಹಿಂದಕ್ಕೆ ಸರಿದು ತವರಿಗೆ ಮರಳಿದ್ದಾರೆ. ಈ ಮಧ್ಯೆ ಈ ಐಪಿಎಲ್ ನಡೆಯುತ್ತಿರುವ ಸಮಯ ಹಾಗೂ ಅನಿವಾರ್ಯತೆಯ ಬಗ್ಗೆ ಪ್ರಶ್ನೆಗಳು ಮೂಡುತ್ತಿದೆ.

ಈ ಬಗ್ಗೆ ರಾಜಸ್ಥಾನ್ ರಾಯಲ್ಸ್ ತಂಡದ ವೇಗಿ ಜಯದೇವ್ ಉನಾದ್ಕಟ್ ಪ್ರತಿಕ್ರಿಯಿಸಿದ್ದಾರೆ. ಐಪಿಎಲ್ ಸ್ಟಾರ್ ಕ್ರಿಕೆಟರ್‌ಗಳಿಗಷ್ಟೇ ಸೀಮಿತವಾಗಿಲ್ಲ. ಇಂತಾ ಟೂರ್ನಿಯಿಂದಾಗಿ ಲಕ್ಷಾಂತರ ಜನರು ಸಂತಸವನ್ನು ಅನುಭವಿಸುತ್ತಾರೆ. ಹೀಗಾಗಿ ಈ ಟೂರ್ನಿಯನ್ನು ಗುರಿಯಾಗಿಸುವುದು ಸರಿಯಲ್ಲ ಎಂದಿದ್ದಾರೆ.

ಮುಂಬೈ ಆಟಗಾರರು ಮುಂದಿನ ವಾರ ಲಸಿಕೆ ಪಡೆಯಲಿದ್ದಾರೆ: ಕ್ರಿಸ್ ಲಿನ್

"ಈ ಟೂರ್ನಿಯನ್ನೂ ತೆಗಳುವುದು ಸೂಕ್ತವಲ್ಲ. ಇಂತಾ ಸಂದರ್ಭದಲ್ಲಿ ನಿಜಕ್ಕೂ ಇದಕ್ಕೆ ಬೆಂಬಲವನ್ನು ನೀಡಬೇಕು. ಈ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಐಪಿಎಲ್‌ನಿಂದಾಗಿ ಜನರಲ್ಲಿ ಸಕಾರಾತ್ಮಕ ಭಾವನೆಯನ್ನು ಹರಡುತ್ತದೆ" ಎಂದು ಉನಾದ್ಕಟ್ ಅಭಿಪ್ರಾಯಪಟ್ಟಿದ್ದಾರೆ.

"ಟೂರ್ನಿಗಾಗಿ ವಿಶೇಷವಾದ ಮುಂಜಾಗ್ರತಾಕ್ರಮಗಳನ್ನು ಕೈಗೊಳ್ಳಲಾಗಿದೆ. ಖಮಡಿತಾ ನಾವು ಈ ಹಿಂದೆ ಐಪಿಎಲ್‌ನಲ್ಲಿ ಸಾಮಾನ್ಯವಾಗಿದ್ದಂತೆ ಐಶಾರಾಮಿಯಾಗಿ ಇರುವುದಕ್ಕೆ ಸಾಧ್ಯವಿಲ್ಲ. ಒಂದು ಬಯೋಬಬಲ್‌ನಿಂದ ಇನ್ನೊಂದು ಬಯೋಬಬಲ್‌ಗೆ ಪ್ರಯಾಣ, ಪಿಪಿಇ ಕಿಟ್‌, ಎಂಟು ದಿನಗಳ ಕ್ವಾರಂಟೈನ್, ಕೇವಲ ಮೈದಾನ ಮತ್ತು ರೂಮ್‌ಗೆ ಮಾತ್ರ ಪ್ರಯಾಣ ಇವೆಲ್ಲ ಈ ಐಪಿಎಲ್‌ನ ರೀತಿಯಾಗಿದೆ" ಎಂದ ಉನಾದ್ಕಟ್ ವಿವರಿಸಿದ್ದಾರೆ

For Quick Alerts
ALLOW NOTIFICATIONS
For Daily Alerts
Story first published: Tuesday, April 27, 2021, 20:25 [IST]
Other articles published on Apr 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X