ಐಪಿಎಲ್ : ಧೋನಿ, ರೋಹಿತ್, ಕೊಹ್ಲಿ ತಮ್ಮ ತಂಡದಲ್ಲೇ ಉಳಿದುಕೊಂಡ್ರು

Posted By:
IPL Players Retention 2018 Updates: Dhoni, Kohli, Rohit Retained

ಬೆಂಗಳೂರು, ಜನವರಿ 04: ಟೀಂ ಇಂಡಿಯಾದ ಮಾಜಿ ನಾಯಕ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಮಹೇಂದ್ರ ಸಿಂಗ್ ಧೋನಿ ಅವರು ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ ಬೀಸುವುದು ಖಚಿತವಾಗಿದೆ. ಯಾವ ಆಟಗಾರರನ್ನು ಯಾವ ತಂಡ ಉಳಿಸಿಕೊಳ್ಳಲಿದೆ ಎಂಬ ಕುತೂಹಲಕ್ಕೆ ಗುರುವಾರ ಸಂಜೆ ತೆರೆಬಿದ್ದಿದೆ.

ಸ್ಟಾರ್ ಆಟಗಾರರಾದ ಎಂಎಸ್ ಧೋನಿ, ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಅವರು ಮತ್ತೊಮ್ಮೆ ತಮ್ಮ ತಮ್ಮ ತಂಡಗಳಲ್ಲೇ ಉಳಿಸಿಕೊಂಡಿದ್ದಾರೆ. ಆದರೆ, ಗೌತಮ್ ಗಂಭೀರ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಕೈಬಿಡಲಾಗಿದೆ. ಅವರು ಮತ್ತೊಮ್ಮೆ ಹರಾಜಿನಲ್ಲಿ ಭಾಗವಹಿಸಿ ಆಯ್ಕೆಯಾಗಬಹುದಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನ ಹೊಸ ನಿಯಮಾವಳಿಗಳ ಪ್ರಕಾರ ಆಟಗಾರರನ್ನು ಉಳಿಸಿಕೊಳ್ಳುವ ಪ್ರಕ್ರಿಯೆ ನಡೆಸಲಾಗಿದೆ.

IPL Players Retention 2018 Updates: Dhoni, Kohli, Rohit Retained

ತಂಡದ ಬಳಿ ಇರಿಸಿಕೊಳ್ಳಬಹುದಾದ ಮೊತ್ತ, ಅಮಾನತುಗೊಂಡಿದ್ದ ತಂಡಗಳ ಮರು ಸೇರ್ಪಡೆ, ಆಟಗಾರರ ಸಂಬಳ ಇನ್ನಿತರ ವಿಷಯಗಳಲ್ಲಿ ಭಾರಿ ಬದಲಾವಣೆಯಾಗಿದೆ.

ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ತುತ್ತಾಗಿ ಎರಡು ವರ್ಷಗಳ ಕಾಲ ಐಪಿಎಲ್ ನಿಂದ ಹೊರಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ತಾನ್ ರಾಯಲ್ಸ್ ತಂಡಗಳು ಮತ್ತೊಮ್ಮೆ ಐಪಿಎಲ್ ಕಣಕ್ಕಿಳಿಯಲಿವೆ.

2018ರ ಐಪಿಎಲ್ ಯಲ್ಲಿ ಎರಡು ತಂಡಗಳು ಆಡಲಿದ್ದು, ಹಳೆ ತಂಡದಲ್ಲಿದ್ದ 5 ಆಟಗಾರರನ್ನು ಖರೀದಿ ಮಾಡಬಹುದು ಹಾಗೂ ಕೆಲ ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ.

ಬಿಸಿಸಿಐ ಹೊಸ ನಿಯಮಗಳು, ಐಪಿಎಲ್ 2018

ಬಿಸಿಸಿಐ ಹೊಸ ನಿಯಮಗಳು, ಐಪಿಎಲ್ 2018

* ಮೂರು ಭಾರತೀಯ ಹಾಗೂ ಇಬ್ಬರು ವಿದೇಶಿ ಆಟಗಾರರನ್ನು ಖರೀದಿ ಮಾಡಬಹುದಾಗಿದೆ.
* ಹರಾಜಿಗೂ ಮೊದಲು 3 ಆಟಗಾರರು ಹಾಗೂ ನಂತರ ಹರಾಜಿನ ಸಮಯದಲ್ಲಿ ಉಳಿಸಿಕೊಳ್ಳಬಹುದಾಗಿದೆ.

* ಐಪಿಎಲ್ ನಲ್ಲಿ ಪ್ರತಿಯೊಂದು ತಂಡ 25 ಆಟಗಾರರನ್ನು ಖರೀದಿ ಮಾಡಬಹುದಾಗಿದೆ.
* ಈ ಪೈಕಿ 17 ಭಾರತೀಯರಾದರೆ 8 ವಿದೇಶಿ ಆಟಗಾರರಿಗೆ ಅವಕಾಶವಿರುತ್ತದೆ.
ತಂಡದಲ್ಲಿ ಆಟಗಾರರ ಸಂಖ್ಯೆ: 25 ಆಟಗಾರರು (8 ಗರಿಷ್ಠ ವಿದೇಶಿ ಆಟಗಾರರು), ಕನಿಷ್ಟ 18 ಆಟಗಾರರು.

ಚೆನ್ನೈ ಸೂಪರ್ ಕಿಂಗ್ಸ್ (47 ಕೋಟಿ ರು ಸಂಬಳ ಮಿತಿ)

ಚೆನ್ನೈ ಸೂಪರ್ ಕಿಂಗ್ಸ್ (47 ಕೋಟಿ ರು ಸಂಬಳ ಮಿತಿ)

* ಎಂಎಸ್ ಧೋನಿ (15 ಕೋಟಿ ರು)
* ಸುರೇಶ್ ರೈನಾ (11 ಕೋಟಿ ರು)
* ರವೀಂದ್ರ ಜಡೇಜ (7 ಕೋಟಿ ರು)
* ಕಳೆದ ಬಾರಿಗೆ ಹೋಲಿಸಿದರೆ ಮೂವರು ಆಟಗಾರರ ಲೀಗ್ ಶುಲ್ಕದಲ್ಲಿ ಯಾವುದೇ ಕಡಿತವಿಲ್ಲ.
RTM : 2 ಆಟಗಾರರು

ಡೆಲ್ಲಿ ಡೇರ್ ಡೇವಿಲ್ಸ್ (47 ಕೋಟಿ ರು ಸಂಬಳ ಮಿತಿ)

ಡೆಲ್ಲಿ ಡೇರ್ ಡೇವಿಲ್ಸ್ (47 ಕೋಟಿ ರು ಸಂಬಳ ಮಿತಿ)

* RTM : 2 ಆಟಗಾರರು
* ರಿಷಬ್ ಪಂತ್ : ಲೀಗ್ ಶುಲ್ಕ -8 ಕೋಟಿ ರು (15 ಕೋಟಿ ರು ಕಡಿತ)
* ಕ್ರಿಸ್ ಮೊರಿಸ್ : ಲೀಗ್ ಶುಲ್ಕ -7.1 ಕೋಟಿ ರು (11 ಕೋಟಿ ರು ಕಡಿತ)
* ಶ್ರೇಯಸ್ ಅಯ್ಯರ್ : ಲೀಗ್ ಶುಲ್ಕ -7 ಕೋಟಿ ರು (7 ಕೋಟಿ ರು ಕಡಿತ)

ರಾಯಲ್ ಚಾಲೆಂಜರ್ಸ್ ಬೆಂಗಳೂರು

ರಾಯಲ್ ಚಾಲೆಂಜರ್ಸ್ ಬೆಂಗಳೂರು

ರಾಯಲ್ ಚಾಲೆಂಜರ್ಸ್ ಬೆಂಗಳೂರು (49 ಕೋಟಿ ರು ಸಂಬಳ ಮಿತಿ)
* RTM : 2 ಆಟಗಾರರು
* ವಿರಾಟ್ ಕೊಹ್ಲಿ : ಲೀಗ್ ಶುಲ್ಕ17 ಕೋಟಿ ರು
* ಎಬಿ ಡಿವಿಲಿಯರ್ಸ್ : ಲೀಗ್ ಶುಲ್ಕ 11 ಕೋಟಿ ರು
* ಸರ್ಫರಾಜ್ ಖಾನ್ : ಲೀಗ್ ಶುಲ್ಕ 1.75 ಕೋಟಿ ರು (3 ಕೋಟಿ ರು ಕಡಿತ)

ಕೋಲ್ಕತ್ತಾ ನೈಟ್ ರೈಡರ್ಸ್

ಕೋಲ್ಕತ್ತಾ ನೈಟ್ ರೈಡರ್ಸ್

ಕೋಲ್ಕತ್ತಾ ನೈಟ್ ರೈಡರ್ಸ್ (59 ಕೋಟಿ ರು ಸಂಬಳ ಮಿತಿ)
* RTM : 3 ಆಟಗಾರರು
* ಸುನೀಲ್ ನರೇನ್ : ಲೀಗ್ ಶುಲ್ಕ 8.5 ಕೋಟಿ ರು(12.5 ಕೋಟಿ ರು ಕಡಿತ)
* ಆಂಡ್ರೆ ರಸೆಲ್ : ಲೀಗ್ ಶುಲ್ಕ 7 ಕೋಟಿ ರು (8.5 ಕೋಟಿ ರು ಕಡಿತ)

ಮುಂಬೈ ಇಂಡಿಯನ್ಸ್

ಮುಂಬೈ ಇಂಡಿಯನ್ಸ್

ಮುಂಬೈ ಇಂಡಿಯನ್ಸ್ (47 ಕೋಟಿ ರು ಸಂಬಳ ಮಿತಿ)
* RTM : 2 ಆಟಗಾರರು
* ರೋಹಿತ್ ಶರ್ಮ : ಲೀಗ್ ಶುಲ್ಕ 15 ಕೋಟಿ ರು
* ಹಾರ್ದಿಕ್ ಪಾಂಡ್ಯ : ಲೀಗ್ ಶುಲ್ಕ 11 ಕೋಟಿ ರು
* ಜಸ್ ಪ್ರೀತ್ ಬೂಮ್ರಾ : ಲೀಗ್ ಶುಲ್ಕ 7 ಕೋಟಿ ರು

ಸನ್ ರೈಸರ್ಸ್ ಹೈದರಾಬಾದ್

ಸನ್ ರೈಸರ್ಸ್ ಹೈದರಾಬಾದ್

ಸನ್ ರೈಸರ್ಸ್ ಹೈದರಾಬಾದ್ (59 ಕೋಟಿ ರು ಸಂಬಳ ಮಿತಿ)
* RTM : 3 ಆಟಗಾರರು
* ಡೇವಿಡ್ ವಾರ್ನರ್ : ಲೀಗ್ ಶುಲ್ಕ 12 ಕೋಟಿ ರು (12.5 ಕೋಟಿ ರು)
* ಭುವನೇಶ್ವರ್ ಕುಮಾರ್ : ಲೀಗ್ ಶುಲ್ಕ 8.5 ಕೋಟಿ ರು

ಇನ್ನುಳಿದ ತಂಡಗಳು : ರಾಜಸ್ಥಾನ್, ಪಂಜಾಬ್

ಇನ್ನುಳಿದ ತಂಡಗಳು : ರಾಜಸ್ಥಾನ್, ಪಂಜಾಬ್

ರಾಜಸ್ಥಾನ್ ರಾಯಲ್ಸ್ (67.5 ಕೋಟಿ ರು ಸಂಬಳ ಮಿತಿ)
* RTM : 3 ಆಟಗಾರರು
* ಸ್ಟೀವ್ ಸ್ಮಿತ್: ಲೀಗ್ ಶುಲ್ಕ 12 ಕೋಟಿ ರು (12.5 ಕೋಟಿ ರು)
****
ಕಿಂಗ್ಸ್ XI ಪಂಜಾಬ್ (67.5 ಕೋಟಿ ರು ಸಂಬಳ ಮಿತಿ)
* RTM : 3 ಆಟಗಾರರು
* ಅಕ್ಷರ್ ಪಟೇಲ್: ಲೀಗ್ ಶುಲ್ಕ 6.75 ಕೋಟಿ ರು (12.5 ಕೋಟಿ ರು)

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, January 4, 2018, 19:18 [IST]
Other articles published on Jan 4, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ