ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಗೆ ಹೊಸ ತಂಡಗಳು ಡಿಸೆಂಬರ್ 8ರಂದು ಸೇರ್ಪಡೆ

By Mahesh

ಮುಂಬೈ, ನ. 10: ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ನಿಂದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ ಬದಲಿಗೆ ಎರಡು ಹೊಸ ತಂಡಗಳು ನವೆಂಬರ್ 9ರ ಬದಲಿಗೆ ಡಿಸೆಂಬರ್ 8 ರ ನಂತರ ಸೇರಲಿವೆ. ಹೊಸ ತಂಡಗಳ ಆಯ್ಕೆಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಹರಾಜು ಪ್ರಕ್ರಿಯೆಯನ್ನು ನಡೆಸಲಿದೆ.

ಹೊಸ ತಂಡಗಳ ಆಯ್ಕೆ ಪ್ರಕ್ರಿಯೆ ನವೆಂಬರ್ 15ರಿಂದ ಆರಂಭಗೊಳ್ಳಲಿದ್ದು, ಆಸಕ್ತ ಹೂಡಿಕೆದಾರರು ಡಿಸೆಂಬರ್ 04ರ ತನಕ ಈ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ಐಪಿಎಲ್ ಚೇರ್ಮನ್ ರಾಜೀವ್ ಶುಕ್ಲಾ ಹೇಳಿದ್ದಾರೆ. [ವಿವೋ ಐಪಿಎಲ್: ಬಿಸಿಸಿಐ ನಿರ್ಣಯಗಳ ಡೀಟೈಲ್ಸ್]

IPL to get 2 new teams on December 8 : BCCI

ಮುಂಬರುವ ಐಪಿಎಲ್ ನಿಂದ ಜೈಪುರ ಹಾಗೂ ಕೊಚ್ಚಿ ತಂಡಗಳ ತವರು ಮೈದಾನಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಉಳಿದಂತೆ 9 ಮೈದಾನಗಳಲ್ಲಿ ಪಂದ್ಯಗಳು ನಡೆಯಲಿವೆ.

ಚೆನ್ನೈ ಹಾಗೂ ರಾಜಸ್ಥಾನ್ ತಂಡಗಳು 2016 ಹಾಗೂ 2017ರ ಆವೃತ್ತಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲದ ಕಾರಣ ಹೊಸ ತಂಡಗಳನ್ನು ಆಯ್ಕೆ ಮಾಡಬೇಕಿದೆ. ನವೆಂಬರ್ 9ರಂದು ನಡೆಯುವ ಬಿಸಿಸಿಐ ಕಾರ್ಯಕಾರಿ ಸದಸ್ಯರ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದೆ. ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಹೇಳಿದ್ದಾರೆ.

ಈಗ ಇರುವ ಫ್ರಾಂಚೈಸಿಗಳು: ಡೆಲ್ಲಿ ಡೇರ್ ಡೇವಿಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್ ರೈಸರ್ಸ್ ಹೈದರಾಬಾದ್, ಕಿಂಗ್ಸ್ XI ಪಂಜಾಬ್.

ಚೆನ್ನೈ ಹಾಗೂ ರಾಜಸ್ಥಾನ್ ತಂಡಗಳು ಎರಡು ವರ್ಷ ಕಳೆದು ಮತ್ತೊಮ್ಮೆ ಐಪಿಎಲ್ ಸೇರಬಹುದಾಗಿದೆ. ಈ ಎರಡು ವರ್ಷ ಅವಧಿಗೆ ಹೂಡಿಕೆ ಮಾಡಲು ಸಂಸ್ಥೆಗಳು ಹಿಂದೇಟು ಹಾಕುತ್ತಿವೆ. ಕಡಿಮೆ ಅವಧಿಗೆ ಅತಿ ಹೆಚ್ಚು ಹೂಡಿಕೆ ಮಾಡಲು ಯಾರು ಮುಂದಾಗುತ್ತಿಲ್ಲ. 40 ಕೋಟಿ ರು ಕನಿಷ್ಠ ಬಿಡ್ಡಿಂಗ್ ದರ ಇಡುವ ಸಾಧ್ಯತೆಯಿದೆ. ಹೀಗಾಗಿ ರಿವರ್ಸ್ ಬಿಡ್ಡಿಂಗ್ ನಡೆಸಲು ಬಿಸಿಸಿಐ ಹಿರಿಯ ಅಧಿಕಾರಿಗಳು ಮುಂದಾಗಿದ್ದಾರೆ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X