ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಕ್ಷಿಣ ಆಫ್ರಿಕಾ ಹಾಗೂ ಅಫ್ಘಾನಿಸ್ತಾನ ವಿರುದ್ಧದ ಸರಣಿಗೆ ತಂಡ ಘೋಷಣೆ ಮಾಡಿದ ಐರ್ಲೆಂಡ್

Ireland announced t20 squad for South Africa and Afghanistan series

ಐರ್ಲೆಂಡ್ ಕ್ರಿಕೆಟ್ ತಂಡ ತವರಿನಲ್ಲಿ ಎರಡು ಟಿ20 ಸರಣಿಗೆ ಸಜ್ಜಾಗಿದೆ. ದಕ್ಷಿಣ ಆಪ್ರಿಕಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ತವರಿನಲ್ಲಿ ಆಡಲಿರುವ ಐರ್ಲೆಂಡ್ ಬಳಿಕ ಅಫ್ಘಾನಿಸ್ತಾನದ ವಿರುದ್ಧವೂ ಸೆಣೆಸಲಿದೆ. ಅಫ್ಘಾನಿಸ್ತಾನದ ವಿರುದ್ಧ ಐದು ಪಂದ್ಯಗಳ ಸರಣಿಯಲ್ಲಿ ಮುಖಾಮುಖಿಯಾಗಲಿದ್ದು ಈ ಸರಣಿ ಕೂಡ ಐರ್ಲೆಂಡ್‌ನ ತವರಿನಲ್ಲಿಯೇ ಆಯೋಜನೆಯಾಗಲಿದೆ.

ಈ ಎರಡು ಸರಣಿಗೂ ಐರ್ಲೆಂಡ್ 14 ಆಟಗಾರರ ತಂಡವನ್ನು ಘೋಷಣೆ ಮಾಡಿದೆ. ಈ ಸರಣಿಗೆ ಕಳೆದ ವಾರ ನ್ಯೂಜಿಲೆಂಡ್ ವಿರುದ್ಧ ಕಣಕ್ಕಿಳಿದಿದ್ದ ಆಟಗಾರರ ಮೇಲೆಯೇ ನಂಬಿಕೆಯನ್ನಿಟ್ಟಿದ್ದು ಅದೇ ಆಟಗಾರರು ಮುಂದಿನ ಸರಣಿಯಲ್ಲಿಯೂ ಅವಕಾಶವನ್ನು ಪಡೆದುಕೊಂಡಿದ್ದಾರೆ.

ಭಾರತ vs ವಿಂಡೀಸ್ 3rd ODI: ಈ ಮೈಲಿಗಲ್ಲುಗಳ ಮೇಲೆ ಧವನ್ ಮತ್ತು ಸೂರ್ಯಕುಮಾರ್ ಯಾದವ್ ಕಣ್ಣುಭಾರತ vs ವಿಂಡೀಸ್ 3rd ODI: ಈ ಮೈಲಿಗಲ್ಲುಗಳ ಮೇಲೆ ಧವನ್ ಮತ್ತು ಸೂರ್ಯಕುಮಾರ್ ಯಾದವ್ ಕಣ್ಣು

ಎರಡು ಸರಣಿಗೆ ಸಜ್ಜಾದ ಐರ್ಲೆಂಡ್

ಎರಡು ಸರಣಿಗೆ ಸಜ್ಜಾದ ಐರ್ಲೆಂಡ್

ದಕ್ಷಿಣ ಆಪ್ರಿಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ ಆಗಸ್ಟ್ 3ರಂದು ಆರಂಭವಾಗಲಿದ್ದು ಆಗಸ್ಟ್ 5ರಂದು ಅಂತ್ಯವಾಗಲಿದೆ. ಈ ಸರಣಿಯ ಎಲ್ಲಾ ಪಂದ್ಯಗಳು ಬ್ರಿಸ್ಟೊಲ್‌ನಲ್ಲಿ ಆಯೋಜನೆಯಾಗಲಿದೆ. ಬಳಿಕ ಆಗಸ್ಟ್ 9ರಿಂದ ಅಫ್ಘಾನಿಸ್ತಾನದ ವಿರುದ್ಧ ಪಂದ್ಯ ಆಯೋಜನೆಯಾಗಲಿದ್ದು ಸ್ಟೋರ್ಮೊಂಟ್‌ನಲ್ಲಿ ಈ ಎಲ್ಲಾ ಪಂದ್ಯಗಳು ಆಯೋಜನೆಯಾಗಲಿದೆ.

ಐರ್ಲೆಂಡ್ ಸ್ಕ್ವಾಡ್ ಹೀಗಿದೆ

ಐರ್ಲೆಂಡ್ ಸ್ಕ್ವಾಡ್ ಹೀಗಿದೆ

ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಮಾರ್ಕ್ ಅಡೇರ್, ಕರ್ಟಿಸ್ ಕ್ಯಾಂಫರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಸ್ಟೀಫನ್ ಡೊಹೆನಿ, ಫಿಯಾನ್ ಹ್ಯಾಂಡ್, ಜೋಶ್ ಲಿಟಲ್, ಆಂಡ್ರ್ಯೂ ಮೆಕ್‌ಬ್ರೈನ್, ಬ್ಯಾರಿ ಮೆಕಾರ್ಥಿ, ಪಾಲ್ ಸ್ಟಿರ್ಲಿಂಗ್, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ಕ್ರೇಗ್ ಯಂಗ್.

ಟಿ20 ವಿಶ್ವಕಪ್‌ಗೆ ಸಿದ್ಧತೆ ಬಗ್ಗೆ ಆಯ್ಕೆ ಸಮಿತಿ ಮುಖ್ಯಸ್ಥ ಪ್ರತಿಕ್ರಿಯೆ

ಟಿ20 ವಿಶ್ವಕಪ್‌ಗೆ ಸಿದ್ಧತೆ ಬಗ್ಗೆ ಆಯ್ಕೆ ಸಮಿತಿ ಮುಖ್ಯಸ್ಥ ಪ್ರತಿಕ್ರಿಯೆ

"ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ನಾವು ಈಗ ನಮ್ಮ ಸಿದ್ಧತೆಗಳ ಅಂತಿಮ ಹಂತಕ್ಕೆ ಬಂದಿದ್ದೇವೆ. ತಂಡವು ಇತ್ತೀಚೆಗೆ ಗುಣಮಟ್ಟದ ಎದುರಾಳಿಗಳಾದ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳನ್ನು ಎದುರಿಸಿದೆ. ಈಗ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನದ ವಿರುದ್ಧ ಕಠಿಣ ಪರೀಕ್ಷೆಗಳನ್ನು ಎದುರಿಸಲಿದೆ. ಇತ್ತೀಚಿನ ಪಂದ್ಯಗಳಲ್ಲಿ ಫಲಿತಾಂಶ ನಮ್ಮ ಪರವಾಗಿ ಬಾರದಿದ್ದರೂ ಕೆಲ ಆಟಗಾರರಿಂದ ಬಂದ ಪ್ರದರ್ಶನ ನಮಗೆ ತೃಪ್ತಿ ನೀಡಿದೆ" ಎಂದು ಐರ್ಲೆಂಡ್ ಕ್ರಿಕೆಟ್‌ನ ಆಯ್ಕೆ ಸಮಿತಿಯ ಮುಖ್ಯಸ್ಥರು ಪ್ರತಿಕ್ರಿಯೆ ನೀಡಿದ್ದಾರೆ.

ಐರ್ಲೆಂಡ್ vs ದಕ್ಷಿಣ ಆಫ್ರಿಕಾ ವೇಳಾಪಟ್ಟಿ

ಐರ್ಲೆಂಡ್ vs ದಕ್ಷಿಣ ಆಫ್ರಿಕಾ ವೇಳಾಪಟ್ಟಿ

ಆಗಸ್ಟ್ 3: ಐರ್ಲೆಂಡ್ vs ದಕ್ಷಿಣ ಆಫ್ರಿಕಾ, 1ನೇ ಟಿ20 ಸ್ಥಳ- ಬ್ರಿಸ್ಟೊಲ್
ಆಗಸ್ಟ್ 5: ಐರ್ಲೆಂಡ್ vs ದಕ್ಷಿಣ ಆಫ್ರಿಕಾ, 2 ನೇ ಟಿ20I- ಬ್ರಿಸ್ಟೊಲ್

ಐರ್ಲೆಂಡ್ vs ಫ್ಘಾನಿಸ್ತಾನ ಟಿ20 ಸರಣಿ
ಆಗಸ್ಟ್ 9: ಮೊದಲ ಟಿ20 ಪಂದ್ಯ ಸ್ಥಳ: ಸ್ಟೋರ್ಮಾಂಟ್
ಆಗಸ್ಟ್ 11: 2ನೇ ಟಿ20 ಪಂದ್ಯ ಸ್ಥಳ: ಸ್ಟೋರ್ಮಾಂಟ್
ಆಗಸ್ಟ್ 12: 3ನೇ ಟಿ20 ಪಂದ್ಯ ಸ್ಥಳ: ಸ್ಟೋರ್ಮಾಂಟ್
ಆಗಸ್ಟ್ 15: 4ನೇ ಟಿ20 ಪಂದ್ಯ ಸ್ಥಳ: ಸ್ಟೋರ್ಮಾಂಟ್
ಆಗಸ್ಟ್ 17: 5ನೇ ಟಿ20 ಪಂದ್ಯ ಸ್ಥಳ: ಸ್ಟೋರ್ಮಾಂಟ್

Story first published: Wednesday, July 27, 2022, 17:32 [IST]
Other articles published on Jul 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X