ನಿವೃತ್ತಿ ಘೋಷಿಸಿದ ಲಂಕಾ ವೇಗಿ ಮಾಲಿಂಗಗೆ ಗೌರವ ಸಲ್ಲಿಸಿದ ಮುಂಬೈ ಇಂಡಿಯನ್ಸ್

ಶ್ರೀಲಂಕಾದ ದಿಗ್ಗಜ ಬೌಲರ್ ಲಸಿತ್ ಮಾಲಿಂಗ ಇಂದು ಟಿ20 ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದ್ದಾರೆ. ಈ ಮೂಲಕ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದಲೂ ಶ್ರೀಲಂಕಾದ ಈ ಬೌಲರ್ ನಿವೃತ್ತಿಯನ್ನು ಪಡೆದುಕೊಂಡಂತಾಗಿದೆ. ಮಾಲಿಂಗ ತಮ್ಮ ನಿರ್ಧಾರವನ್ನು ಟ್ವಿಟ್ಟರ್‌ನಲ್ಲಿ ಪ್ರಕಟಿಸಿದ ಬಳಿಕ ಐಪಿಎಲ್‌ನ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ತನ್ನ ಮಾಜಿ ಬೌಲರ್‌ಗೆ ಗೌರವವನ್ನು ಸಲ್ಲಿಸಿದೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಸುದೀರ್ಘ ಕಾಲದಿಂದ ಭಾಗವಾಗಿದ್ದ ಮಾಲಿಂಗ 2020ರ ಐಪಿಎಲ್ ಬಳಿಕ ಟೂರ್ನಿಯಿಂದ ಹೊರಗುಳಿದಿದ್ದರು.

17 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಕ್ರಿಯವಾಗಿದ್ದ ಲಸಿತ್ ಮಾಲಿಂಗಗೆ 38 ವರ್ಷ ವಯಸ್ಸಾಗಿದೆ. 2011ರಲ್ಲಿಯೇ ಮಾಲಿಂಗ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿಯನ್ನು ಪಡೆದುಕೊಂಡಿದ್ದರು. ನಂತರ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಮಾತ್ರವೇ ಆಡುತ್ತಿದ್ದ ಅವರು ಬಳಿಕ 2019ರಲ್ಲಿ ಏಕದಿನ ಕ್ರಿಕೆಟ್‌ಗೂ ವಿದಾಯವನ್ನು ಘೋಷಿಸಿದ್ದರು. ಈ ಮೂಲಕ ಸಂಪೂರ್ಣವಾಗಿ ಟ20 ಕ್ರಿಕೆಟ್‌ನಲ್ಲಿ ಮಾತ್ರವೇ ತೊಡಗಿಸಿಕೊಂಡಿದ್ದರು. ಆದರೆ 2020ರ ಆರಂಭದಲ್ಲಿ ಕೊರೊನಾವೈರಸ್ ವಿಶ್ವಾದ್ಯಂತ ಪಸರಿಸಲು ಆರಂಭಿಸಿದ ಬಳಿಕ ಮಾಲಿಂಗ ಕ್ರಿಕೆಟ್‌ನಿಂದ ದೂರವುಳಿದರು. ಇದೀಗ ಚುಟುಕು ಕ್ರಿಕೆಟ್‌ಗೂ ಮಾಲಿಂಗ ವಿದಾಯ ಘೋಷಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನ ಸೀಮಿತ ಓವರ್‌ಗಳಲ್ಲಿ ಮಾಲಿಂಗ ಅವರ ಅಮೋಘ ಸಾಧನೆ ಹೊರತುಪಡಿಸಿದರೆ ಐಪಿಎಲ್‌ನಲ್ಲಿಯೂ ಮಾಲಿಂಗ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಐಪಿಎಲ್‌ನಲ್ಲಿ 2008ರಿಂದಲೂ ಮುಂಬೈ ಇಂಡಿಯನ್ಸ್ ಪರವಾಗಿ ಆಡುತ್ತಿರುವ ಮಾಲಿಂಗ ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವೀ ಬೌಲರ್ ಎನಿಸಿದ್ದಾರೆ. ಐಪಿಎಲ್‌ನಲ್ಲಿ 170 ವಿಕೆಟ್ ಪಡೆದಿರುವ ಇವರು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದಾರೆ.

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಲಸಿತ್ ಮಾಲಿಂಗಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಲಸಿತ್ ಮಾಲಿಂಗ

ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಲಸಿತ್ ಮಾಲಿಂಗ 4 ಬಾರಿ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿದಿದ್ದಾರೆ. 2013, 2015, 2017 ಹಾಗೂ 2019ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಪಟ್ಟಕ್ಕೇರಿದ್ದಾಗ ಲಸಿತ್ ಮಲಿಂಗ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಅಲ್ಲದೆ 2011 ಹಾಗೂ 2013ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಎರಡು ಬಾರಿ ಚಾಂಪಿಯನ್ಸ್ ಲೀಗ್ ನಡೆದಾಗಲೂ ಮುಂಬೈ ತಂಡದ ಪ್ರಮುಖ ಸದಸ್ಯರಾಗಿದ್ದರು ಲಸಿತ್ ಮಾಲಿಂಗ.

ಮಾಲಿಂಗ ನಿವೃತ್ತಿ ಘೋಷಣೆ ಮಾಡಿದ ಬಳಿಕ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಮುಂಬೈ ಇಂಡಿಯನ್ಸ್ "ಬ್ಯಾಟ್ಸ್‌ಮನ್‌ಗಳ ಕಾಲ್ಬೆರಳನ್ನು ಪುಡಿ ಮಾಡುವುದರಿಂದ ಹಿಡಿದು ಭುಜದ ಮೇಲೆ ಕುಳ್ಳಿರಿಸಿಕೊಳ್ಳುವವರೆಗೆ ಲಸಿತ್ ಮಾಲಿಂಗ ಟಿ20 ಕ್ರಿಕೆಟ್‌ನಲ್ಲಿ ಎಲ್ಲವನ್ನೂ ಸಾಧಿಸಿದ್ದಾರೆ. ಅವರೀಗ ಟಿ20 ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ನಾವು ಕೇವಲ ಮೂರು ಶಬ್ಧಗಳನ್ನು ಮಾತ್ರವೇ ಹೇಳುತ್ತೇವೆ. ಧನ್ಯವಾದಗಳು ನಿಮಗೆ ಮಾಲಿಂಗ" ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದೆ.

IPL ನಲ್ಲಿ ಪಾಕ್ ಆಟಗಾರರಿಗೆ ಸಿಕ್ಕ ಸಕ್ಸಸ್ ವಿರಾಟ್ ಮತ್ತು ABD ಗೆ‌ ಇನ್ನೂ ಸಿಕ್ಕಿಲ್ಲ | Oneindia Kannada

ಲಸಿತ್ ಮಾಲಿಂಗ ಆವರ ಅಂತಾರಾಷ್ಟ್ರೀಯ ವೃತ್ತಿ ಬದುಕು ಆರಂಭವಾಗಿದ್ದು ಟೆಸ್ಟ್ ಕ್ರಿಕೆಟ್ ಮೂಲಕ. 2004ರ ಜುಲೈನಲ್ಲಿ ಮರ್ರಾರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದ ಮೂಲಕ ಮಾಲಿಂಗ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. 2010ರಲ್ಲಿ ಭಾರತ ವಿರುದ್ಧ ಪಿ ಸಾರ ಓವಲ್ ಸ್ಟೇಡಿಯಂನಲ್ಲಿ ಕಡೇಯ ಟೆಸ್ಟ್ ಆಡಿದ್ದರು. 2004ರಲ್ಲೇ ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧದ ಏಕದಿನ ಪಂದ್ಯದ ಮೂಲಕ ಚೊಚ್ಚಲ ಏಕದಿನ ಪಂದ್ಯ ಆಡಿದ್ದರು. 2019ರಲ್ಲಿ ಬಾಂಗ್ಲಾ ವಿರುದ್ಧದ ಏಕದಿನದೊಂದಿಗೆ ಮಾಲಿಂಗ ಕೊನೇ ಒಡಿಐ ಆಡಿದ್ದರು. ಲಸಿತ್ ಚೊಚ್ಚಲ ಟಿ20ಐ ಆಡಿದ್ದು 2006ರಲ್ಲಿ ಇಂಗ್ಲೆಂಡ್ ವಿರುದ್ಧ. ಕೊನೇ ಟಿ20ಐ ಆಡಿದ್ದು 2020ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ

For Quick Alerts
ALLOW NOTIFICATIONS
For Daily Alerts
Story first published: Tuesday, September 14, 2021, 21:06 [IST]
Other articles published on Sep 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X