ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆತ ಆರಂಭಿಕನಾಗಿ ಎರಡು ದ್ವಿಶತಕ ಬಾರಿಸಿದ್ದಾನೆ: ಆರಂಭಿಕ ಸ್ಥಾನಕ್ಕೆ ಕನ್ನಡಿಗನ ಪರವಾಗಿ ಗವಾಸ್ಕರ್ ಬ್ಯಾಟಿಂಗ್

Mayank scored 2 double tons while opening, Gavaskar suggests to change opening combination

ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್‌ಗೆ ಶರಣಾಗಿದೆ. ಸದ್ಯ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಸಜ್ಜಾಗುತ್ತಿದೆ. ಆದರೆ ಈ ಸರಣಿಗೆ ಮುನ್ನ ಸುದೀರ್ಘ ವಿರಾಟ್ ಟೀಮ್ ಇಂಡಿಯಾಗೆ ದೊರೆತಿದೆ. WTC ಫೈನಲ್‌ನಲ್ಲಿ ಮಾಡಿದ ತಪ್ಪನ್ನು ಸರಿಪಡಿಸಿಕೊಳ್ಳಲು ಈ ಸಮಯ ಟೀಮ್ ಇಂಡಿಯಾಗೆ ದೊರೆತ ಉತ್ತಮ ಅವಕಾಶ ಎನ್ನಲಾಗುತ್ತಿದೆ.

ನ್ಯೂಜಿಲೆಂಡ್ ವಿರುದ್ಧದ WTC ಫೈನಲ್ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡ ಸಾಕಷ್ಟು ತಪ್ಪುಗಳನ್ನು ಮಾಡಿತ್ತು. ಆಡುವ ಬಳಗದಲ್ಲಿದ ಆಯ್ಕೆಯಲ್ಲಿನ ಗೊಂದಲ ಕೂಡ ತಂಡಕ್ಕೆ ಹಿನ್ನಡೆಯಾಗಿತ್ತು. ಆರಂಭಿಕನಾಗಿ ಅನುಭವಿ ರೋಹಿತ್ ಶರ್ಮಾಗೆ ಸಾಥ್ ನೀಡಿದ್ದ ಶುಬ್ಮನ್ ಗಿಲ್ ಮಹತ್ವದ ಪಂದ್ಯದಲ್ಲಿ ಕೈಕೊಟ್ಟರು.

'ಅವರು ನಮ್ಮ ಪಾಸ್‌ಪೋರ್ಟ್ ಕಿತ್ತುಕೊಂಡು ಗದೆ ಎಲ್ಲಿದೆ ಎಂದರು': ವ್ಯಾಗ್ನರ್'ಅವರು ನಮ್ಮ ಪಾಸ್‌ಪೋರ್ಟ್ ಕಿತ್ತುಕೊಂಡು ಗದೆ ಎಲ್ಲಿದೆ ಎಂದರು': ವ್ಯಾಗ್ನರ್

ಈ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ತಂಡದ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ಟೀಮ್ ಇಂಡಿಯಾಗೆ ಸಲಹೆಯನ್ನು ನೀಡಿದ್ದಾರೆ. ಆರಂಭಿಕನಾಗಿ ಕನ್ನಡಿಗ ಆಟಗಾರರನ್ನು ಮುಂದುವರಿಸುವಂತೆ ಕೇಳಿಕೊಂಡಿದ್ದಾರೆ.

ಮಯಾಂಕ್ ಬೆಂಬಲಕ್ಕೆ ನಿಂತ ದಿಗ್ಗಜ

ಮಯಾಂಕ್ ಬೆಂಬಲಕ್ಕೆ ನಿಂತ ದಿಗ್ಗಜ

ಟೀಮ್ ಇಂಡಿಯಾದ ಆರಂಭಿಕನಾಗಿ ಮಿಂಚುಹರಿಸಿದ ಮಯಾಂಕ್ ಅಗರ್ವಾಲ್ ಅವರನ್ನು ಆರಂಭಿಕನಾಗಿ ಮುಂದುವರಿಸಬೇಕೆಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಆರಂಭಿಕನಾಗಿ ತಂಡಕ್ಕೆ ಮಯಾಂಕ್ ನೀಡಿದ ಕೊಡುಗೆಯನ್ನು ಮರೆಯಬಾರದೆಂದು ಅವರು ಎಚ್ಚರಿಸಿದ್ದಾರೆ. ಮಯಾಂಕ್ ಸಾಧನೆಯನ್ನು ಈ ಸಂದರ್ಭದಲ್ಲಿ ಗವಾಸ್ಕರ್ ಸ್ಮರಿಸಿದ್ದಾರೆ.

ಮಯಾಂಕ್ ಆಟವನ್ನು ಪ್ರಶಂಸಿಸಿದ ಗವಾಸ್ಕರ್

ಮಯಾಂಕ್ ಆಟವನ್ನು ಪ್ರಶಂಸಿಸಿದ ಗವಾಸ್ಕರ್

"ಮಯಾಂಕ್ ಅಗರ್ವಾಲ್ ತಂಡಕ್ಕೆ ನಿಜಕ್ಕೂ ಅದ್ಭುತವಾದ ಕೊಡುಗೆಯನ್ನು ಭಾರತ ತಂಡಕ್ಕೆ ನೀಡಿದ್ದಾರೆ. ಇನ್ನಿಂಗ್ಸ್ ಆರಂಭಿಸಿದ ವೇಳೆ ಎರಡು ಬಾರಿ ಆತ ದ್ವಿಶತಕವನ್ನು ಬಾರಿಸಿದ್ದಾರೆ. ಈಗ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಮುನ್ನ ಅಭ್ಯಾಸ ಪಂದ್ಯ ನಡೆಸಲು ಬಿಸಿಸಿಐ ತೆಗೆದುಕೊಂಡಿರುವ ನಿರ್ಧಾರ ನಿಜಕ್ಕೂ ಉತ್ತಮವಾಗಿದ್ದು ಈ ಸಂದರ್ಭದಲ್ಲಿ ಗಿಲ್ ಹಾಗೂ ಮಯಾಂಕ್ ಮಧ್ಯೆ ಆರಂಭಿಕರಾಗಿ ಯಾರು ಸೂಕ್ತ ಎಂದು ನಿರ್ಣಯಿಸಲು ಅವಕಾಶವಿದೆ" ಎಂದು ಗವಾಸ್ಕರ್ ಸಲಹೆಯನ್ನು ನೀಡಿದ್ದಾರೆ.

ಪರೀಕ್ಷಿಸಿ ಆಯ್ಕೆ ಮಾಡಿಕೊಳ್ಳಲು ಗವಾಸ್ಕರ್ ಸಲಹೆ

ಪರೀಕ್ಷಿಸಿ ಆಯ್ಕೆ ಮಾಡಿಕೊಳ್ಳಲು ಗವಾಸ್ಕರ್ ಸಲಹೆ

ರೋಹಿತ್ ಶರ್ಮಾ ಖಂಡಿತವಾಗಿಯೂ ಆರಂಭಿಕನಾಗಿ ಇರಲಿದ್ದಾರೆ ಹೀಗಾಗಿ ಅಭ್ಯಾಸ ಪಂದ್ಯದಲ್ಲಿ ಅವರಿಗೆ ವಿಶ್ರಾಂತಿಯನ್ನು ನೀಡಿ ಆರಂಭಿಕರಾಗಿ ಮಯಾಂಕ್ ಹಾಗೂ ಗಿಲ್ ಅವರನ್ನು ಕಣಕ್ಕಿಳಿಸಬೇಕು. ಆಗ ಇಂಗ್ಲೀಷ್ ಕಂಡೀಶನ್‌ಗೆ ಉತ್ತಮವಾಗಿ ಒಗ್ಗಿಕೊಳ್ಳುವ ಆಟಗಾರ ಯಾರು? ಯಾರು ಉತ್ತಮ ತಾಂತ್ರಿಕ ಕೌಶಲ್ಯವನ್ನು ಹೊಂದಿದ್ದಾರೆ ಎಂಬುದನ್ನು ಕಂಡುಕೊಳ್ಳಬಹುದು. ಅದರ ಆಧಾರದಲ್ಲಿ ಮಯಾಂಕ್ ಅಗರ್ವಾಲ್ ಅವರನ್ನು ಕಣಕ್ಕಿಳಿಸಬೇಕೋ ಅಥವಾ ಶುಬ್ಮನ್ ಗಿಲ್‌ಗೆ ಅವಕಾಶವನ್ನು ನೀಡಬೇಕೋ ಎಂಬುದನ್ನು ಮುಂದುವರಿಸಬಹುದು" ಎಂದು ಸುನಿಲ್ ಗವಾಸ್ಕರ್ ಸಲಹೆ ನೀಡಿದ್ದಾರೆ.

ಟೆಸ್ಟ್ ಸೋಲೋಕೆ Jasprit Bumrah ಮೂಲ ಕಾರಣ - ಸಬಾ ಕರೀಂ | Oneindia Kannada
ಆಸಿಸ್ ಪ್ರವಾಸದಲ್ಲಿ ಎಡವಿದ್ದ ಮಯಾಂಕ್

ಆಸಿಸ್ ಪ್ರವಾಸದಲ್ಲಿ ಎಡವಿದ್ದ ಮಯಾಂಕ್

ಟೀಮ್ ಇಂಡಿಯಾದ ಟೆಸ್ಟ್ ತಂಡದ ಮೊದಲ ಆಯ್ಕೆಯ ಆರಂಭಿನಾಗಿದ್ದ ಮಯಾಂಕ್ ಅಗರ್ವಾಲ್ ಕಳೆದ ಆಸ್ಟ್ರೇಲಿಯಾ ಪ್ರವಾಸದ ಮೊದಲ ಪಂದ್ಯದಲ್ಲಿ ವಿಫಲವಾಗಿದ್ದರೂ ಎರಡು ಇನ್ನಿಂಗ್ಸ್‌ಗಳಲ್ಲಿಯೂ ವೈಫಲ್ಯವನ್ನು ಅನುಭವಿಸಿದ್ದರು. ಬಳಿಕ ಆ ಸ್ಥಾನವನ್ನು ತುಂಬಿದ ಶುಬ್ಮನ್ ಗಿಲ್ ಅದ್ಭುತ ಪ್ರದರ್ಶನ ನೀಡಿ ಮಿಂಚಿದರು. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಎಲ್ಲಾ ಪಂದ್ಯಗಳಿಂದಲೂ ಹೊರಗುಳಿದ ಮಯಾಂಕ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿಯೂ ಆಡುವ ಬಳಗದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ವಿಫಲರಾಗಿದ್ದರು.

Story first published: Sunday, June 27, 2021, 16:09 [IST]
Other articles published on Jun 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X