ಡಬ್ಬಲ್ ಹ್ಯಾಟ್ರಿಕ್ ಗಳಿಸಿ ಇತಿಹಾಸ ನಿರ್ಮಿಸಿದ ಸ್ಟಾರ್ಕ್!

Posted By:

ಸಿಡ್ನಿ, ನವೆಂಬರ್ 7 : ಅಸ್ಟ್ರೇಲಿಯಾದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಅವರು ಪ್ರಥಮ ದರ್ಜೆ ಪಂದ್ಯದಲ್ಲಿ ಡಬ್ಬಲ್ ಹ್ಯಾಟ್ರಿಕ್ ಸಾಧಿಸಿದ್ದಾರೆ.

ನ್ಯೂ ಸೌತ್ ವೇಲ್ಸ್ ಮತ್ತು ವೆಸ್ಟರ್ನ್ ಆಸ್ಟ್ರೇಲಿಯಾ ತಂಡಗಳ ನಡುವಿನ ಶೀಫಿಲ್ಡ್ ಶೀಲ್ಡ್ ಪ್ರಥಮ ದರ್ಜೆ ಪಂದ್ಯದಲ್ಲಿ ನ್ಯೂ ಸೌತ್ ವೇಲ್ಸ್ ಪರ ಆಡುತ್ತಾ ಎರಡೂ ಇನಿಂಗ್ಸ್‌ಗಳಲ್ಲೂ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.

ಮಿಚೆಲ್ ಸ್ಟಾರ್ಕ್ ಅವರ ಡಬ್ಬಲ್ ಹ್ಯಾಟ್ರಿಕ್ ನೆರವಿನಿಂದ ವೆಸ್ಟರ್ನ್ ಆಸ್ಟ್ರೇಲಿಯ ವಿರುದ್ಧ ನ್ಯೂ ಸೌತ್ ವೇಲ್ಸ್ ತಂಡ 171 ರನ್‌ಗಳ ಜಯ ಗಳಿಸಿತು.

Mitchell Starc picks Second Hat Trick Match NSW win

ಪಂದ್ಯದ ನಾಲ್ಕನೆ ಹಾಗೂ ಅಂತಿಮ ದಿನವಾಗಿರುವ ಮಂಗಳವಾರ ಎರಡನೆ ಇನಿಂಗ್ಸ್‌ನಲ್ಲಿ ವೆಸ್ಟರ್ನ್ ಆಸ್ಟ್ರೇಲಿಯ ತಂಡ 77.1 ಓವರ್‌ಗಳಲ್ಲಿ 223 ರನ್‌ಗಳಿಗೆ ಆಲೌಟಾಗಿದೆ. ಅಂತಿಮ ಮೂರು ವಿಕೆಟ್‌ಗಳನ್ನು ಉರುಳಿಸಿದ ಸ್ಟಾರ್ಕ್ ಎರಡನೆ ಬಾರಿ ಹ್ಯಾಟ್ರಿಕ್ ಪಡೆದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ವೆಸ್ಟರ್ನ್ ಆಸ್ಟ್ರೇಲಿಯ ಎರಡನೆ ಇನಿಂಗ್ಸ್‌ನಲ್ಲಿ 77.1 ಓವರ್‌ಗಳಲ್ಲಿ 223 ರನ್‌ಗಳಿಗೆ ಆಲೌಟಾಗಿತ್ತು. ಸ್ಟಾರ್ಕ್ 15.1 ಓವರ್‌ಗಳಲ್ಲಿ 41ಕ್ಕೆ 3 ವಿಕೆಟ್ ಪಡೆದಿದ್ದರು.

ಮೊದಲ ಇನಿಂಗ್ಸ್‌ನಲ್ಲಿ 67ನೆ ಓವರ್‌ನಲ್ಲಿ ವೆಸ್ಟರ್ನ್ ಅಸ್ಟ್ರೇಲಿಯದ ಅಂತಿಮ ಮೂರು ವಿಕೆಟ್‌ಗಳನ್ನು ಉರುಳಿಸಿ ಹ್ಯಾಟ್ರಿಕ್ ಗಳಿಸಿದ್ದರು. 20 ಓವರ್‌ಗಳಲ್ಲಿ 64ಕ್ಕೆ 4 ವಿಕೆಟ್ ಪಡೆದು ವೆಸ್ಟರ್ನ್ ಆಸ್ಟ್ರೇಲಿಯವನ್ನು 67 ಓವರ್‌ಗಳಲ್ಲಿ 176ಕ್ಕೆ ನಿಯಂತ್ರಿಸಿದ್ದರು. ನ್ಯೂ ಸೌತ್ ವೇಲ್ಸ್ ಮೊದಲ ಇನಿಂಗ್ಸ್‌ನಲ್ಲಿ 270 ಮತ್ತು ಎರಡನೆ ಇನಿಂಗ್ಸ್‌ನಲ್ಲಿ 6 ವಿಕೆಟ್ ನಷ್ಟದಲ್ಲಿ 300 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.

Story first published: Tuesday, November 7, 2017, 22:44 [IST]
Other articles published on Nov 7, 2017
Please Wait while comments are loading...