ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ವಿರುದ್ಧದ ಟೆಸ್ಟ್‌ನಲ್ಲಿ ನಡೆದ ಘಟನೆ ತನ್ನ ನಾಯಕತ್ವದ ನಿಕೃಷ್ಟ ಸಂದರ್ಭ ಎಂದ ಪಾಂಟಿಂಗ್

Monkeygate Was Lowest Point Of My Captaincy: Ricky Ponting

ಆಸ್ಟ್ರೇಲಿಯಾದ ನಾಯಕ ರಿಕಿ ಪಾಂಟಿಂಗ್ ತಮ್ಮ ನಾಯಕತ್ವದ ದಿನಗಳ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ. ಎರಡು ಬಾರಿ ವಿಶ್ವಕಪ್ ಗೆದ್ದಿರುವ ತಂಡದ ನಾಯಕನಾಗಿರುವ ರಿಕಿ ಪಾಂಟಿಂಗ್ ತಮ್ಮ ನಾಯಕತ್ವದ ಸಂದರ್ಭದ ಸವಾಲಿನ ದಿನಗಳ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ.

ಈ ಸಂದರ್ಭದಲ್ಲಿ ಒಂದು ಘಟನೆಯನ್ನು ರಿಕಿ ಪಾಂಟಿಂಗ್ ತನ್ನ ನಾಯಕತ್ವದ ಅತ್ಯಂತ ನಿಕೃಷ್ಟ ಸಂದರ್ಭ ಎಂದು ಹೇಳಿಕೊಂಡಿದ್ದಾರೆ. ಅದು ಟೀಮ್ ಇಂಡಿಯಾ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ನಡೆದ ಘಟನೆಯಾಗಿದ್ದು ಆ ಸಂದರ್ಭದಲ್ಲಿ ಉಂಟಾಗಿದ್ದ ಪರಿಸ್ಥಿತಿಯ ಬಗ್ಗೆಯೂ ಪಾಂಟಿಂಗ್ ಮಾತನಾಡಿದ್ದಾರೆ.

'ಮಂಕಿ' ಎಂದು ಹರ್ಭಜನ್ ಹೀಯಾಳಿಸಿದ್ದಕ್ಕೆ ಮಹಾ ಕುಡುಕರಾದರಂತೆ ಸೈಮಂಡ್ಸ್'ಮಂಕಿ' ಎಂದು ಹರ್ಭಜನ್ ಹೀಯಾಳಿಸಿದ್ದಕ್ಕೆ ಮಹಾ ಕುಡುಕರಾದರಂತೆ ಸೈಮಂಡ್ಸ್

ಟೀಮ್ ಇಂಡಿಯಾ ವಿರುದ್ದದ ಟೆಸ್ಟ್ ಸರಣಿಯಲ್ಲಿ ಯಾವ ಘಟನೆಯ ಬಗ್ಗೆ ಪಾಂಟಿಂಗ್ ಮಾತನಾಡಿದ್ದಾರೆ ಮುಂದೆ ಓದಿ

2008ರ ಟೆಸ್ಟ್ ಸರಣಿ

2008ರ ಟೆಸ್ಟ್ ಸರಣಿ

ಅದು ಟೀಮ್ ಇಂಡಿಯಾ ಆಸ್ಟ್ರೇಲಿಯಾಗೆ ಪ್ರವಾಸ ಮಾಡಿತ್ತು. ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ತಂಡ ಮುಖಾಮುಖಿಯಾಗಿತ್ತು. ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಈ ಪಂದ್ಯದ ಸಂದರ್ಭದಲ್ಲಿ ಸ್ಲಡ್ಜಿಂಗ್ ಮಾಡುವ ಸಂದರ್ಭದಲ್ಲಿ ಬಹುದೊಡ್ಡ ವಿವಾದವೊಂದು ಎದ್ದಿತ್ತು

ಜನಾಂಗೀಯ ನಿಂದನೆ ಆರೋಪ

ಜನಾಂಗೀಯ ನಿಂದನೆ ಆರೋಪ

ಆಸ್ಟ್ರೇಲಿಯಾದ ಆಲ್‌ರೌಂಡರ್ ಆ್ಯಂಡ್ರೋ ಸೈಮಂಡ್ಸ್ ಪಂದ್ಯದ ಸಂದರ್ಭದಲ್ಲಿ ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ತನ್ನನ್ನು 'ಮಂಗ' ಎಂದು ಕರೆದಿದ್ದಾಗಿ ಆರೋಪವನ್ನು ಮಾಡಿದ್ದರು. ಇದು ಜನಾಂಗೀಯ ನಿಂದನೆ ಪ್ರಕರಣವಾಗಿ ತಿರುವು ಪಡೆದು ಸಾಕಷ್ಟು ವಿವಾದವನ್ನು ಎಬ್ಬಿಸಿತು.

ಜನಾಂಗೀಯ ನಿಂದನೆ ಆರೋಪ

ಜನಾಂಗೀಯ ನಿಂದನೆ ಆರೋಪ

ಆಸ್ಟ್ರೇಲಿಯಾದ ಆಲ್‌ರೌಂಡರ್ ಆ್ಯಂಡ್ರೋ ಸೈಮಂಡ್ಸ್ ಪಂದ್ಯದ ಸಂದರ್ಭದಲ್ಲಿ ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ತನ್ನನ್ನು 'ಮಂಗ' ಎಂದು ಕರೆದಿದ್ದಾಗಿ ಆರೋಪವನ್ನು ಮಾಡಿದ್ದರು. ಇದು ಜನಾಂಗೀಯ ನಿಂದನೆ ಪ್ರಕರಣವಾಗಿ ತಿರುವು ಪಡೆದು ಸಾಕಷ್ಟು ವಿವಾದವನ್ನು ಎಬ್ಬಿಸಿತು.

ಆರೋಪವನ್ನು ನಿರಾಕರಿಸಿದ್ದರು ಭಜ್ಜಿ

ಆರೋಪವನ್ನು ನಿರಾಕರಿಸಿದ್ದರು ಭಜ್ಜಿ

ಸೈಮಂಡ್ಸ್ ಮಾಡಿದ ಈ ಆರೋಪವನ್ನು ಹರ್ಭಜನ್ ಸಿಂಗ್ ನಿರಾಕರಿಸಿದ್ದರು. ಸೈಮಂಡ್ಸ್ ಅವರನ್ನು ತಾನು ಜನಾಂಗೀಯವಾಗಿ ನಿಂದಿಸಿಲ್ಲ ಎಂದು ಭಜ್ಜಿ ಪ್ರತಿಪಾದಿಸಿದರು. ಮತ್ತು ಕೊನೆಗೆ ಈ ಆರೋಪದಿಂದಲೂ ಮುಕ್ತರಾದರು. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ ನಾಯಕನಾಗಿ ಪಾಂಟಿಂಗ್ ಇದ್ದರೆ ಟೀಮ್ ಇಂಡಿಯಾದ ನಾಯಕನಾಗಿ ಅನಿಲ್ ಕುಂಬ್ಳೆ ಇದ್ದರು.

ಖಾಸಗಿ ವಾಹಿನಿ ಜೊತೆ ಮಾತಾಡಿದ ಪಾಂಟಿಂಗ್

ಖಾಸಗಿ ವಾಹಿನಿ ಜೊತೆ ಮಾತಾಡಿದ ಪಾಂಟಿಂಗ್

ಮಂಕಿಗೇಟ್ ಪ್ರಕರಣದ ಬಗ್ಗೆ ರಿಕಿ ಪಾಂಟಿಂಗ್ ಮತ್ತೊಮ್ಮೆ ಮಾತನಾಡಿದ್ದಾರೆ. 2008ರಲ್ಲಿ ಟೀಮ್ ಇಂಡಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಡೆದ 'ಮಂಕಿಗೇಟ್' ಘಟನೆಯ ಬಗ್ಗೆ ಮಾತನಾಡಿದ್ದಾರೆ. ತನ್ನ ನಾಯಕತ್ವದಲ್ಲಿ ನಡೆದ ಅತಿ ನಿಕೃಷ್ಟ ಘಟನೆ ಅಂದರೆ ಅದು ಮಂಕಿ ಗೇಟ್ ಪ್ರಕರಣ ಎಂದು ರಿಕಿ ಪಾಂಟಿಂಗ್ ಹೇಳಿಕೊಂಡಿದ್ದಾರೆ.

ಯಾವುದೂ ನನ್ನ ನಿಯಂತ್ರಣದಲ್ಲಿರಲಿಲ್ಲ

ಯಾವುದೂ ನನ್ನ ನಿಯಂತ್ರಣದಲ್ಲಿರಲಿಲ್ಲ

ಮಂಕಿಗೇಟ್ ಘಟನೆ ನಡೆದ ಸಂದರ್ಭದಲ್ಲಿ ನಡೆದ ಪರಿಸ್ಥಿತಿಗಳು ಯಾವುದೂ ಕೂಡ ನನ್ನ ನಿಯಂತ್ರಣದಲ್ಲಿರಲಿಲ್ಲ ಈ ಘಟನೆ ಸಾಕಷ್ಟು ಸಮಯ ಎಳೆಯಲ್ಪಟ್ಟಿತು ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ. ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ ಸಂದರ್ಭದಲ್ಲಿ ಈ ವಿಚಾರವನ್ನು ರಿಕಿ ಪಾಂಟಿಂಗ್ ತಿಳಿಸಿದ್ದಾರೆ.

2005ರ ಆ್ಯಶಸ್ ಸೋಲು ಕಠಿಣ

2005ರ ಆ್ಯಶಸ್ ಸೋಲು ಕಠಿಣ

ಆಸ್ಟ್ರೇಲಿಯಾ 2005ರಲ್ಲಿ ಆ್ಯಶಸ್ಸನ್ನು ಕಳೆದುಕೊಂಡಿತ್ತು. ಆ ಸಂದರ್ಭವನ್ನು ರಿಕಿ ಪಾಂಟಿಂಗ್ 'ಅದೊಂದು ಕಠಿಣ ಸಂದರ್ಭವಾಗಿತ್ತು, ಆದರೆ ಆ ಸಂದರ್ಭದಲ್ಲಿ ಎಲ್ಲವೂ ನನ್ನ ನಿಯಂತ್ರಣದಲ್ಲೇ ಇತ್ತು. ಆದರೆ ಮಂಕಿ ಗೇಟ್ ಘಟನೆಯಲ್ಲಿ ಯಾವುದೂ ನನ್ನ ನಿಯಂತ್ರಣದಲ್ಲಿರಲಿಲ್ಲ' ಎಂದಿದ್ದಾರೆ ರಿಕಿ ಪಾಂಟಿಂಗ್

Story first published: Sunday, May 3, 2020, 11:03 [IST]
Other articles published on May 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X